ಅನಾರೋಗ್ಯದಿಂದ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಕೌಡಿಚ್ಚಾರಿನ ವಿನೋದ್ ಅಕಾಯಿ | ಮನೆಯ ಆಧಾರಸ್ತಂಭವಾಗಿದ್ದ ಮನೆ ಮಗನ ಚಿಕಿತ್ಸೆಗೆ ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಕುಟುಂಬ
ಪುತ್ತೂರು : ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ಸಮೀಪದ ಅಕಾಯಿಯ ವಿನೋದ್ ಎಂಬವರು ಮೆದುಳಿನ ರಕ್ತಸ್ರಾವ ತೊಂದರೆಯಿಂದಾಗಿ ಅನಾರೋಗ್ಯಕ್ಕೆ ಒಳಗಾಗಿ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಕೆ. ಎಂ. ಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರ ಚಿಕಿತ್ಸೆಗಾಗಿ ಸುಮಾರು 12 ಲಕ್ಷ ಖರ್ಚಾಗಬಹುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ. ಅವರ ಕುಟುಂಬವು ಆರ್ಥಿಕ ಬಡ ಕುಟುಂಬವಾಗಿದ್ದು, ತಾಯಿ, ಚಿಕ್ಕಮ್ಮ, ಪತ್ನಿ ಹಾಗೂ ಒಂದು ವರುಷದ ಮಗುವಿನೊಂದಿಗೆ ಇರುವ ಇವರು ಕುಟುಂಬದ ಆಧಾರಸ್ತಂಭವಾಗಿದ್ದಾರೆ. ಇವರ ಈ ಅನಾರೋಗ್ಯದಿ೦ದ ಕುಟುಂಬಕ್ಕೆ ದಿಕ್ಕುತೋಚದಂತಾಗಿದ್ದಾರೆ. […]










