ಕುಡಿತದ ಅಮಲಿನಲ್ಲಿ ವ್ಯಕ್ತಿಗೆ ಹೊಡೆತ : ವ್ಯಕ್ತಿ ಸ್ಥಳದಲ್ಲೇ ಮೃತ್ಯು

ನೆಲ್ಯಾಡಿ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬರಿಗೆ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಕೊಕ್ಕಡದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಪೈಕ ನಿವಾಸಿ ಕೃಷ್ಣ (55) ಹೊಡೆತದಿಂದ ಮೃತಪಟ್ಟವರು. ಅನಾರೋಗ್ಯದ ಹಿನ್ನೆಲೆಯಲ್ಲಿ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಸೋಮವಾರ ಸಂಜೆ ಡಿಸ್ಚಾರ್ಜ್ ಆಗಿ ಕೊಕ್ಕಡಕ್ಕೆ ಬಸ್ಸಿನಲ್ಲಿ ಬಂದಿದ್ದರು. ಕೊಕ್ಕಡದಲ್ಲಿ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ಸಂದರ್ಭ ಪಶು ವೈದ್ಯಾಧಿಕಾರಿಯಾಗಿದ್ದ ಡಾ.ಕುಮಾರ್ ಎಂಬವರು  ಕೃಷ್ಣ ಅವರ ಕೆನ್ನೆಗೆ ಬಲವಾಗಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ […]

ಕುಡಿತದ ಅಮಲಿನಲ್ಲಿ ವ್ಯಕ್ತಿಗೆ ಹೊಡೆತ : ವ್ಯಕ್ತಿ ಸ್ಥಳದಲ್ಲೇ ಮೃತ್ಯು Read More »

ಗ್ರಾಹಕರ ನ್ಯಾಯಾಲಯ : ಸೇವಾ ಕೊರತೆ ಆರೋಪ | ಪರಿಹಾರಕ್ಕೆ ಆದೇಶ 

ಮಂಗಳೂರು : ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿಯ ಸೇವಾ ನ್ಯೂನ್ಯತೆ ಆರೋಪದ ಪ್ರಕರಣವೊಂದರ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ ಪರಿಹಾರಕ್ಕೆ ಆದೇಶ ನೀಡಿದೆ. ಕೃಷಿಕರಾಗಿರುವ  ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ  ನಿವಾಸಿ ಶ್ರೀನಿವಾಸ ಪೂಜಾರಿಯವರು   ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರೆನ್ಸ್  ವಿಮಾ ಕಂಪನಿಯ ಪಾಲಿಸಿ ಸಂಖ್ಯೆ OG-19-3125-6401-00000446 ಜೊತೆಗೆ ಮೆಡಿಕ್ಲೈಮ್ ಪಾಲಿಸಿಯನ್ನು ಹೊಂದಿದ್ದು, ಈ ಪಾಲಿಸಿಯು ದಿನಾಂಕ 19.02.2019 ರಿಂದ ಪ್ರಾರಂಭವಾಗಿ,ನಂತರ ಕಾಲಕಾಲಕ್ಕೆ ಅಗತ್ಯವಾದ ಪ್ರೀಮಿಯಂ ಪಾವತಿಸುವ ಮೂಲಕ ಮುಂದುವರಿಸಲಾಗಿತ್ತು. ಹೀಗಿರುವಾಗ,ಶ್ರೀನಿವಾಸ ಪೂಜಾರಿಯವರ ಕಾಲಿಗೆ ವಿದ್ಯುತ್

ಗ್ರಾಹಕರ ನ್ಯಾಯಾಲಯ : ಸೇವಾ ಕೊರತೆ ಆರೋಪ | ಪರಿಹಾರಕ್ಕೆ ಆದೇಶ  Read More »

ಸಿಬಿಎಸ್‌ಇ ಹತ್ತನೆಯ ತರಗತಿ ಫಲಿತಾಂಶ |100% ಫಲಿತಾಂಶ | ತಾಲೂಕಿನ ಮೊದಲ ಎಂಟು ಸ್ಥಾನಗಳನ್ನು ಬಾಚಿಕೊಂಡ ಅಂಬಿಕಾ ವಿದ್ಯಾರ್ಥಿಗಳು

ಪುತ್ತೂರು: ನಗರದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ ಇ ಸಂಸ್ಥೆಯ ವಿದ್ಯಾರ್ಥಿಗಳು 2023-24ನೇ ಸಾಲಿನ ಹತ್ತನೆಯ ತರಗತಿ ಪರೀಕ್ಷೆಗಳಲ್ಲಿ ದಾಖಲೆಯ ಫಲಿತಾಂಶ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ 36 ವಿದ್ಯಾರ್ಥಿಗಳೂ ತೇರ್ಗಡೆಯಾಗಿ ಸಂಸ್ಥೆ ನೂರು ಶೇಕಡಾ ಫಲಿತಾಂಶ ದಾಖಲಿಸಿದೆ. 17 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದರೆ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ತಾಲೂಕಿನ ಮೊದಲ ಎಂಟು ರ್ಯಾಂಕ್‌ ಗಳನ್ನು ಅಂಬಿಕಾ ವಿದ್ಯಾಲಯ ತನ್ನದಾಗಿಸಿಕೊಂಡಿದೆ. ಶ್ರೀಲಕ್ಷ್ಮೀ ಎಸ್.ಸಿ. 96.2% ಫಲಿತಾಂಶ ಪಡೆದು ತಾಲೂಕಿಗೆ ಪ್ರಥಮ, ಜಸ್ವಿತ್

ಸಿಬಿಎಸ್‌ಇ ಹತ್ತನೆಯ ತರಗತಿ ಫಲಿತಾಂಶ |100% ಫಲಿತಾಂಶ | ತಾಲೂಕಿನ ಮೊದಲ ಎಂಟು ಸ್ಥಾನಗಳನ್ನು ಬಾಚಿಕೊಂಡ ಅಂಬಿಕಾ ವಿದ್ಯಾರ್ಥಿಗಳು Read More »

ಎನ್‍ ಎಸ್‍ ಎಸ್‍ ಶಿಬಿರಗಳು ಬದುಕಿನ ಶಿಕ್ಷಣಕ್ಕೆ ಪೂರಕ | ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟಿಸಿ ಶಿವರಾಮ ಪಿ.

ಪುತ್ತೂರು: ನಮ್ಮ ಜೀವನದಲ್ಲಿ ಶಿಕ್ಷಣ ಮಾತ್ರ ಮುಖ್ಯವಲ್ಲ ಶಿಕ್ಷಣದೊಂದಿಗೆ ಬದುಕಿಗೆ ಪೂರಕವಾದ ಅಂಶಗಳು ಬಹುಮುಖ್ಯ. ಎನ್.ಎಸ್.ಎಸ್  ಶಿಬಿರದಿಂದ ಬದುಕಿಗೆ ಪೂರಕವಾದ ಶಿಕ್ಷಣವನ್ನು ಪಡೆಯಬಹುದು ಎಂದು ಶ್ರೀ ಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ಶಿವರಾಮ ಪಿ. ಹೇಳಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ನೇತೃತ್ವದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಹನುಮಗಿರಿ ಶ್ರೀ ಗಜಾನನ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಗಜಾನನ ವಿದ್ಯಾಸಂಸ್ಥೆಯಲ್ಲಿ ನಡೆದ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಶಿರೋನಾಮೆಯಲ್ಲಿ ಕೌಶಲ್ಯ ಮತ್ತು ಉದ್ಯಮಶೀಲತ್ವದ

ಎನ್‍ ಎಸ್‍ ಎಸ್‍ ಶಿಬಿರಗಳು ಬದುಕಿನ ಶಿಕ್ಷಣಕ್ಕೆ ಪೂರಕ | ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟಿಸಿ ಶಿವರಾಮ ಪಿ. Read More »

ನೂಜಿ ಮರಳುಗಾರಿಕೆ ಪ್ರಕರಣ | ಜಿಲ್ಲಾಧ್ಯಕ್ಷರನ್ನು ತೇಜೋವಧೆ ಮಾಡುತ್ತಿರುವವರ ವಿರುದ್ಧ ಕಾನೂನು ಸಮರಕ್ಕೆ ಮರಳು ವ್ಯಾಪಾರಸ್ಥರ ಸಂಘ ನಿರ್ಧಾರ

ಪುತ್ತೂರು: ಮರಳುಗಾರಿಕೆ ವಿಚಾರದಲ್ಲಿ ಮರಳು ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಮೆದು ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ತೇಜೋವಧೆ ಮಾಡುತ್ತಿರುವುದನ್ನು ಸಂಘ ಖಂಡಿಸಿದ್ದು, ಈ ಕುರಿತು ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಸಮರ ಮಾಡುವ ಕುರಿತು ನಿರ್ಧರಿಸಲಾಗಿದೆ ಎಂದು ಮರಳು ವ್ಯಾಪಾರಸ್ಥರ ಸಂಘ ತಿಳಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಂಘ, ಕುದ್ಮಾರು ಗ್ರಾಮದ ನೂಜಿ ಎಂಬಲ್ಲಿ ಇತ್ತೀಚೆಗೆ ಚೆನ್ನಪ್ಪ ಗೌಡ, ಅಶೋಕ ಹಾಗೂ ಇತರರಿಗೆ ಸಂಬಂಧಿಸಿದಂತೆ ತಮ್ಮ ವರ್ಗ ಜಮೀನಿನಲ್ಲಿ ಪರವಾನಿಗೆ

ನೂಜಿ ಮರಳುಗಾರಿಕೆ ಪ್ರಕರಣ | ಜಿಲ್ಲಾಧ್ಯಕ್ಷರನ್ನು ತೇಜೋವಧೆ ಮಾಡುತ್ತಿರುವವರ ವಿರುದ್ಧ ಕಾನೂನು ಸಮರಕ್ಕೆ ಮರಳು ವ್ಯಾಪಾರಸ್ಥರ ಸಂಘ ನಿರ್ಧಾರ Read More »

ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ.

ಉಪ್ಪಿನಂಗಡಿ: ತೆಂಕು ಮತ್ತು ಬಡಗು ತಿಟ್ಟುಗಳ ಮೇಳಗಳಲ್ಲಿ 47 ವರ್ಷಗಳ ತಿರುಗಾಟ ಮಾಡಿದ ಅಪೂರ್ವ ಸ್ತ್ರೀ ವೇಷದಾರಿ ಅಂಬಾಪ್ರಸಾದ್ ಪಾತಾಳ ಇವರಿಗೆ 60ರ ಅಭಿನಂದನ ಕಾರ್ಯಕ್ರಮವು ಪಾತಾಳ ಪೂರ್ಣ ಶ್ರೀ ನಿಲಯದಲ್ಲಿ ಜರಗಿತು. ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಉಮೇಶ ಶೆಣೈ, ಗುರಿಕಾರ ಸತ್ಯನಾರಾಯಣ ಭಟ್ ಆರ್ಲ, ನಿವೃತ್ತ ಮುಖ್ಯ ಶಿಕ್ಷಕ ಬಿ. ಸುಬ್ರಮಣ್ಯ ರಾವ್ ಪಾತಾಳ ಅಂಬಾಪ್ರಸಾದ್ ಮತ್ತು ಜಯಂತಿ ಪ್ರಸಾದ್ ಪಾತಾಳ ಸನ್ಮಾನಿಸಿದರು. ದಿವಾಕರ

ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ. Read More »

ನೆಟ್ಟಾರು ನಿವಾಸಿ ವಿದ್ಯಾರ್ಥಿ ಆತ್ಮಹತ್ಯೆ

ಬೆಳ್ಳಾರೆ: ಸುಳ್ಯದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಟ್ಟಾರಿನಿಂದ ವರದಿಯಾಗಿದೆ. ನೆಟ್ಟಾರು ನಿವಾಸಿ ಚರಣ್ ಆತ್ಮಹತ್ಯೆ ಮಾಡಿಕೊಂಡವರು. ಚರಣ್ ಸುಳ್ಯದ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿ ಎಂದು ತಿಳಿದು ಬಂದಿದ್ದು,  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ  ಪರಿಶೀಲನೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ನೆಟ್ಟಾರು ನಿವಾಸಿ ವಿದ್ಯಾರ್ಥಿ ಆತ್ಮಹತ್ಯೆ Read More »

ರಸ್ತೆಗೆ ಅಡ್ಡ ಬಂದ ಆನೆ: ಬೊಲೇರೊ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ

ಬೆಳ್ತಂಗಡಿ: ಒಂಟಿ ಸಲಗವೊಂದು  ರಸ್ತೆ ಮಧ್ಯೆ ಬಂದು ಬೊಲೇರೊ ವಾಹನಕ್ಕೆ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ನಡೆದಿದೆ. ಒಂಟಿ ಸಲಗವೊಂದು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ತಿರುಗಾಡುತ್ತಿತ್ತು, ನಿನ್ನೆ ಚಾರ್ಮಾಡಿ ಘಾಟ್ ಒಂದನೇ ತಿರುವಿನಲ್ಲಿ ಒಂಟಿ ಸಲಗ ಮತ್ತೆ ಪ್ರತ್ಯಕ್ಷವಾಗಿದೆ. ಬೊಲೇರೊ ವಾಹನಕ್ಕೆ ಒಂಟಿ ಸಲಗ ಅಡ್ಡ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಚಿಕ್ಕಮಗಳೂರಿನಿಂದ ಮಂಗಳೂರು

ರಸ್ತೆಗೆ ಅಡ್ಡ ಬಂದ ಆನೆ: ಬೊಲೇರೊ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ Read More »

ನೀತಿ ಸಂಹಿತೆ ಜಾರಿಯಲ್ಲಿದ್ದರೂ ಜಲಸಿರಿ ಅಧಿಕಾರಿಗಳ ಸಭೆ | ಸಭೆಗೆ ಕಡಿವಾಣ ಹಾಕಿದ ಅಧಿಕಾರಿಗಳು

ಪುತ್ತೂರು: ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಜಲಸಿರಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುತ್ತಿದ್ದ ವೇಳೆ ಅಧಿಕಾರಿಗಳು ಬಂದು ಸಭೆ ನಿಲ್ಲಿಸಿದ ಘಟನೆ ಇಂದು ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಅವರು ಜಲಸಿರಿ ಅಧಿಕಾರಿಗಳು ಹಾಗೂ ಪಂಪ್ ಆಪರೇಟರ್‍ ಗಳನ್ನು ಕರೆಸಿ ಶಾಸಕರ ಕಚೇರಿಯಲ್ಲಿ ಸಭೆ ಹಮ್ಮಿಕೊಂಡಿದ್ದರು. ಸಭೆ ಆರಂಭಗೊಂಡು ಜಲಸಿರಿ ಅಧಿಕಾರಿಗಳು ಕುಡಿಯುವ ನೀರಿನ ಪೂರೈಕೆಯಲ್ಲಿರುವ ಸಮಸ್ಯೆಗಳನ್ನು ಸಭೆಯಲ್ಲಿ ವಿವರಿಸುತ್ತಿದ್ದಂತೆ ತಹಶೀಲ್ದಾರ್ ಕುಂಞಿ ಅಹಮ್ಮದ್ ಹಾಗೂ ಇಲೆಕ್ಷನ್ ಕಮಿಷನ್ ಗೆ ಸಂಬಂಧಿಸಿದ ಅಧಿಕಾರಿಗಳು

ನೀತಿ ಸಂಹಿತೆ ಜಾರಿಯಲ್ಲಿದ್ದರೂ ಜಲಸಿರಿ ಅಧಿಕಾರಿಗಳ ಸಭೆ | ಸಭೆಗೆ ಕಡಿವಾಣ ಹಾಕಿದ ಅಧಿಕಾರಿಗಳು Read More »

ಅನಾರೋಗ್ಯದಿಂದ ಯುವಕ ನಿಧನ

ಬಂಟ್ವಾಳ : ಯುವಕನೋರ್ವ ಅನಾರೋಗ್ಯದಿಂದ ಆಕಸ್ಮಿಕವಾಗಿ ಮೃತಪಟ್ಟ ಘಟನೆ ಕುತ್ತಾರು ಎಂಬಲ್ಲಿ ನಡೆದಿದೆ. ಬಾಯಾರು ನಿವಾಸಿ ಮೌನೇಶ್ ಜೋಗಿ (24) ಮೃತಪಟ್ಟ ಯುವಕ. ನೇಮಕ್ಕೆ ಹೋಗಿ ಬಂದು ಕುತ್ತಾರು ಬಾಡಿಗೆ ಮನೆಯಲ್ಲಿ ಮಲಗಿದ್ದ ಮೌನೇಶ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಅನಾರೋಗ್ಯದಿಂದ ಯುವಕ ನಿಧನ Read More »

error: Content is protected !!
Scroll to Top