ಬೈಕ್- ಬಸ್ ಅಪಘಾತ : ಬೈಕ್ ಸವಾರ ಮೃತ್ಯು !

ಪುತ್ತೂರು: ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯ ಪುರುಷರಕಟ್ಟೆ ಎಂಬಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮೇ. 15ರಂದು ಬೆಳಿಗ್ಗೆ ನಡೆದಿದೆ. ಪುರುಷರಕಟ್ಟೆ ಯಲ್ಲಿರುವ ಬಿಂದು ಪ್ಯಾಕ್ಟರಿಯಲ್ಲಿ ಸಿಪಾನ್ ಮೆಷಿನ್ ಆಪರೇಟರ್ ಆಗಿ ಕೆಲಸ ನಿರ್ವಹಿಸುವ ವಿಟ್ಲ ಕುಂಡಡ್ಕ ನಿವಾಸಿ ಮೋಕ್ಷಿತ್ ಗೌಡ ಎನ್ನುವವರು ಅಪಘಾತಕ್ಕೆ ಬಲಿಯಾದ ಯುವಕ. ಇವರು ಪುರುಷರಕಟ್ಟೆಯಲ್ಲಿ ರೂಮ್ ನಲ್ಲಿ ಉಳಿದುಕೊಂಡಿದ್ದು, ಸರ್ವಿಸ್ ಗೆ ಇಟ್ಟ ಬೈಕ್ ಅನ್ನು ವಾಪಾಸ್ ತರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಬಸ್ ಮತ್ತು […]

ಬೈಕ್- ಬಸ್ ಅಪಘಾತ : ಬೈಕ್ ಸವಾರ ಮೃತ್ಯು ! Read More »

ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಂತೆ ನಗರಸಭಾ ಬಿಜೆಪಿ ಸದಸ್ಯರಿಂದ ಜಿಲ್ಲಾಧಿಕಾರಿಗೆ ಮನವಿ

ಪುತ್ತೂರು : ಪುತ್ತೂರು ನಗರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ತಕ್ಷಣ ಸ್ಪಂದಿಸುವಂತೆ ಬಿಜೆಪಿಯ ಚುನಾಯಿತ 25 ನಗರಸಭಾ ಸದಸ್ಯರು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರ ಮಂಡಲ ಬಿಜೆಪಿ ಅಧ್ಯಕ್ಷ, ನಗರ ಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ನಗರಸಭಾ ನಿಕಟ ಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಗ್ರಾಮಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಪ್ರ.ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್ ಶೆಟ್ಟಿ,

ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಂತೆ ನಗರಸಭಾ ಬಿಜೆಪಿ ಸದಸ್ಯರಿಂದ ಜಿಲ್ಲಾಧಿಕಾರಿಗೆ ಮನವಿ Read More »

ಜೂ. 1ರಂದು ಕೇರಳಕ್ಕೆ  ಮುಂಗಾರು ಮಳೆ ಪ್ರವೇಶ

ಹೊಸದಿಲ್ಲಿ: ಭಾರತೀಯ ಹವಾಮಾನ ಇಲಾಖೆಯೂ ಈ ಬಾರಿಯ ಮುಂಗಾರು ಮಳೆಯ ಕುರಿತು ಮುನ್ಸೂಚನೆ ನೀಡಿದ್ದು, ನಿರೀಕ್ಷೆಗಿಂತ 2 ದಿನ ಮೊದಲೇ ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಹವಮಾನ ಇಲಾಖೆಯ ಪ್ರಕಾರ, ಈ ವರ್ಷದ ಮುಂಗಾರು ಮಳೆ ಜೂ. 1ರಂದು ಕೇರಳ ಪ್ರವೇಶಿಸಲಿದೆ ಎಂದು ಸೋಮವಾರ ತಿಳಿಸಿದೆ. ಮೇ 22ರಂದು ಅಪ್ಪಳಿಸಬೇಕಾಗಿದ್ದ ನೈಋತ್ಯ ಮುಂಗಾರು ಮಾರುತಗಳು ಮೇ 19ರಂದೇ ದಕ್ಷಿಣ ಅಂಡಮಾನ್, ಬಂಗಾಲ ಕೊಲ್ಲಿಯ ಆಗ್ನೆಯ ಭಾಗ ಹಾಗೂ ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಲಿವೆ ಎಂದು ಐಎಂಡಿ ಹೇಳಿದೆ.

ಜೂ. 1ರಂದು ಕೇರಳಕ್ಕೆ  ಮುಂಗಾರು ಮಳೆ ಪ್ರವೇಶ Read More »

ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು : ಸ್ಕಿಲ್ ಎಡ್ಜ್ ಕಾರ್ಯಾಗಾರ ಉದ್ಘಾಟಿಸಿ ಡಾ.ಶ್ರೀಶ ಭಟ್

ಪುತ್ತೂರು : ಕಲೆ, ವಾಣಿಜ್ಯ, ವಿಜ್ಞಾನ ಸಹಿತ ಹಲವು ಕೋರ್ಸ್‌ಗಳಿಗೂ ಅತ್ಯುತ್ತಮ ಉದ್ಯೋಗಾವಕಾಶಗಳಿವೆ. ಆದರೆ ಆ ಅವಕಾಶಗಳು ಎಲ್ಲಿವೆ ಮತ್ತು ಹೇಗಿವೆ ಎಂಬುದನ್ನು ವಿದ್ಯಾರ್ಥಿಗಳು ಸಾಕಷ್ಟು ಪೂರ್ವದಲ್ಲಿಯೇ ತಿಳಿದುಕೊಳ್ಳಬೇಕು. ಮಾತ್ರವಲ್ಲದೆ ಆ ಉದ್ಯೋಗಕ್ಕೆ ಭೇಕಾದ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕ ಡಾ.ಶ್ರೀಶ ಭಟ್ ಹೇಳಿದರು.ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಒಂದು ವಾರದ ಸ್ಕಿಲ್ ಎಡ್ಜ್ ಅನ್ನುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಉದ್ಯೋಗಗಳಿಗೆ ಹೇಗೆ ತಯಾರಾಗಬೇಕು ಎಂಬುದನ್ನು ಮೊದಲೇ

ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು : ಸ್ಕಿಲ್ ಎಡ್ಜ್ ಕಾರ್ಯಾಗಾರ ಉದ್ಘಾಟಿಸಿ ಡಾ.ಶ್ರೀಶ ಭಟ್ Read More »

ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮೋದಿ ನಾಮಪತ್ರ ಸಲ್ಲಿಕೆ

ವಾರಣಾಸಿ: 2024ರ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ, ಮೂರನೇ ಅವಧಿಗೆ ದಾಖಲೆಯ ಅಂತರದಿಂದ ಗೆಲುವಿನ ಉತ್ಸಾಹ ಮತ್ತು ನಿರೀಕ್ಷೆಯಲ್ಲಿದ್ದಾರೆ. ವಾರಣಾಸಿ ಕ್ಷೇತ್ರದಲ್ಲಿ ಜೂನ್ 1 ರಂದು ಸಾರ್ವತ್ರಿಕ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದೆ. ಸತತ ಮೂರನೇ ಬಾರಿಗೆ ತಮ್ಮ ಪಕ್ಷದ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಸಂಸತ್ತಿನ ಚುನಾವಣೆಯ ಫಲಿತಾಂಶ ಘೋಷಣೆ ನಂತರ ಮುಂದಿನ ತಿಂಗಳು ಜಿ

ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮೋದಿ ನಾಮಪತ್ರ ಸಲ್ಲಿಕೆ Read More »

ಪಿಕಪ್-ಕಾರು ಡಿಕ್ಕಿ : ಕಾರಿನಲ್ಲಿದ್ದ ಮಗುವಿಗೆ ಗಾಯ

ಸಂಪಾಜೆ: ಕಾರು ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಇದೀಗ ಸಂಪಾಜೆ ಮಸೀದಿ ಸಮೀಪ ಅರೆಕಲ್ಲು ರೋಡಿಗೆ ತಿರುವಿನಲ್ಲಿ ಸಂಭವಿಸಿದೆ. ಕಾರು ಮಡಿಕೇರಿ ಕಡೆಯಿಂದ ಬರುತ್ತಿದ್ದು ಎನ್ನಲಾಗಿದ್ದು, ಕಾರಿನಲ್ಲಿದ್ದ ಮಗುವಿಗೆ ಅಲ್ಪ ಗಾಯವಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ ಇದೇ ಜಾಗದಲ್ಲಿ ಮೂರು ಹಸುವಿಗೆ ವಾಹನವೊಂದು ಡಿಕ್ಕಿ ಹೊಡೆದು ಒಂದು ಹಸು ಮೃಪಟ್ಟಿತ್ತು. ಈ ಹಿಂದೆಯೂ ಕೂಡ ಹಲವು ಅಪಘಾತ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪಿಕಪ್-ಕಾರು ಡಿಕ್ಕಿ : ಕಾರಿನಲ್ಲಿದ್ದ ಮಗುವಿಗೆ ಗಾಯ Read More »

ಅಬುಧಾಬಿ ‘ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್’ ಅಧ್ಯಕ್ಷರಾಗಿ ಪುತ್ತೂರಿನ ಮಿತ್ರಂಪಾಡಿ ಜಯರಾಮ ರೈ ಆಯ್ಕೆ

ಪುತ್ತೂರು: ಯುಎಇ ನ ಅಬುಧಾಬಿಯಲ್ಲಿರುವ ಪ್ರತಿಷ್ಠಿತ ‘ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್’ (ಐ.ಎಸ್ .ಸಿ.) ಅಧ್ಯಕ್ಷರಾಗಿ ಪುತ್ತೂರಿನ ಮಿತ್ರಂಪಾಡಿ ಜಯರಾಮ ರೈ ಆಯ್ಕೆಯಾಗಿದ್ದಾರೆ. ಜಯರಾಮ ರೈಯವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆಸಲ್ಪಡುವ ಗ್ರಾಮ ಸಾಹಿತ್ಯ ಸಂಭ್ರಮದ ಮಹಾಪೋಷಕರಾಗಿದ್ದಾರೆ. ಜಗತ್ತಿನ ನಂ.1 ಅನಿವಾಸಿ ಭಾರತೀಯ ಸಂಸ್ಥೆಯ ಚುನಾವಾಣೆಯಲ್ಲಿ ಅತೀ ಹೆಚ್ಚು ಮತಗಳ ಅಂತರದ ಗೆಲವು ಸಾಧಿಸಿದ ಹೆಮ್ಮೆ ಅವರದ್ದು. ಅವರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದನೆ ಸಲ್ಲಿಸಿದೆ.

ಅಬುಧಾಬಿ ‘ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್’ ಅಧ್ಯಕ್ಷರಾಗಿ ಪುತ್ತೂರಿನ ಮಿತ್ರಂಪಾಡಿ ಜಯರಾಮ ರೈ ಆಯ್ಕೆ Read More »

ರಾತ್ರಿ ಮಲಗಿದಲ್ಲೇ ಹೋಟೆಲ್ ಕಾರ್ಮಿಕ ಸಾವು

ಸುಳ್ಯ : ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯ ಹೋಟೆಲ್ ವೊಂದರಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೊಬ್ಬ ರಾತ್ರಿ ಮಲಗಿದಲ್ಲೇ ಸಾವಿಗೀಡಾಗಿರುವ ಘಟನೆ ವರದಿಯಾಗಿದೆ. ಶಬರಿಮಲೆಯ ಪಂದಳದಿಂದ ಬಂದು ಕಲ್ಲುಗುಂಡಿಯ ಹೋಟೆಲ್ ನಲ್ಲಿ ಕೆಲಸ ನಿರತನಾಗಿದ್ದ ವಿಶ್ವನಾಥ ಎಂಬ ವ್ಯಕ್ತಿ ಸಾವಿಗೀಡಾಗಿರುವ ನತದೃಷ್ಟ. ಈತ ರಾತ್ರಿ ಹೋಟೆಲ್ ನಲ್ಲಿ ಚೆನ್ನಾಗಿಯೇ ಕೆಲಸ ಮಾಡಿಕೊಂಡು ಇದ್ದ. ಆದರೆ ಊಟ ಮಾಡಿ ಮಲಗಿದವ ಬೆಳಗ್ಗಿನ ಸಮಯದಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ. ಹೃದಯಾಘಾತ ಆಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ

ರಾತ್ರಿ ಮಲಗಿದಲ್ಲೇ ಹೋಟೆಲ್ ಕಾರ್ಮಿಕ ಸಾವು Read More »

ಬಾಲಕನಿಗೆ ಅನ್ಯ ಕೋಮಿನ ವ್ಯಕ್ತಿಯಿಂದ ಲೈಂಗಿಕ ಕಿರುಕುಳ : ಆರೋಪಿ ಬಂಧನ

ಉಪ್ಪಿನಂಗಡಿ: ಅಪ್ರಾಪ್ತ ಬಾಲಕನಿಗೆ ಅನ್ಯ ಕೋಮಿನ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಕ್ಕಳ ಸಹಾಯವಾಣಿಯ ಮೂಲಕ ಸಲ್ಲಿಸಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ದೋರ್ಮೆ ಎಂಬಲ್ಲಿನ ಅಬ್ದುಲ್ಲಾ ಬಿಳಿಯೂರು (36 ) ಬಂಧಿತ ಆರೋಪಿ. ಎರಡು ಮಕ್ಕಳ ತಂದೆಯಾಗಿರುವ ಈತ 13 ವರ್ಷದ ಬಾಲಕನನ್ನು ಮನೆಯಲ್ಲಿ ಕೆಲಸವಿದೆ ಎಂದು ಹಾಗೂ ಸ್ಕೂಟಿ ಸವಾರಿ ಹೇಳಿ ಕೊಡುತ್ತೇನೆಂದು ಕರೆಯಿಸಿ ವಿವಿಧ ದಿನಗಳಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ

ಬಾಲಕನಿಗೆ ಅನ್ಯ ಕೋಮಿನ ವ್ಯಕ್ತಿಯಿಂದ ಲೈಂಗಿಕ ಕಿರುಕುಳ : ಆರೋಪಿ ಬಂಧನ Read More »

ಮೇ.29 ರಿಂದ ರಾಜ್ಯದ ಎಲ್ಲಾ ಶಾಲೆಗಳು  ಪುನರಾರಂಭ

ಬೆಂಗಳೂರು : ಮೇ. 29 ರಿಂದ ಶಾಲೆಗಳು ಪುನರಾರಂಭವಾಗಲಿವೆ. ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ 18 ದಿನ ದಸರಾ ರಜೆ, 48 ದಿನ ಬೇಸಿಗೆ ರಜೆ, 244 ದಿನ ಶಾಲಾ ಕರ್ತವ್ಯದ ದಿನಗಳು ಎಂದು ನಿಗದಿ ಪಡಿಸಲಾಗಿದೆ. ಮಕ್ಕಳು ಮತ್ತು ಶಿಕ್ಷಕರಿಗೆ 121 ದಿನಗಳ ಒಟ್ಟಾರೆ ರಜೆ ಸಿಗಲಿದೆ. ಪ್ರಸಕ್ತ ಸಾಲಿನಲ್ಲಿ ಎಂದಿನಂತೆ ಅಗತ್ಯ ಪೂರ್ವಸಿದ್ಧತೆಗಾಗಿ

ಮೇ.29 ರಿಂದ ರಾಜ್ಯದ ಎಲ್ಲಾ ಶಾಲೆಗಳು  ಪುನರಾರಂಭ Read More »

error: Content is protected !!
Scroll to Top