ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ಹೋರಿಗಳ ಸಾಗಾಟ: ಆರೋಪಿ ಬಂಧನ

ನೆಲ್ಯಾಡಿ: ಹಿಂಸಾತ್ಮಕ ರೀತಿಯಲ್ಲಿ ಹೋರಿಗಳನ್ನು ‌ಸಾಗಾಟ ಮಾಡುತ್ತಿದ್ದ ಗೂಡ್ಸ್ ಟೆಂಪೋ ಒಂದನ್ನು ಗುಂಡ್ಯದಲ್ಲಿ ‌ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಹಾಸನದ ಅರಸೀಕೆರೆಯ ಕುಮಾರ್ (48) ಎಂದು ಗುರುತಿಸಲಾಗಿದೆ. ಗುಂಡ್ಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ಸಮಯದಲ್ಲಿ ಟೆಂಪೋದಲ್ಲಿ ಹೋರಿಗಳ ಸಾಗಾಟ ನಡೆಯುತ್ತಿರುವುದು ಪತ್ತೆಯಾಗಿದೆ. ಆರೋಪಿಯನ್ನು ಪ್ರಶ್ನೆ ಮಾಡಲಾಗಿ ಹೋರಿಗಳನ್ನು ಮಾಂಸ ಮಾಡುವ ಉದ್ದೇಶದಿಂದ ಕಾಸರಗೋಡಿಗೆ ಸಾಗಾಟ‌ ಮಾಡುತ್ತಿರುವುದಾಗಿ ಹೇಳಿದ್ದಾನೆ. ಹಾಗೆಯೇ ಇದನ್ನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಸಲಾಗುತ್ತಿದೆ ಎನ್ನುವ ವಿಷಯವೂ […]

ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ಹೋರಿಗಳ ಸಾಗಾಟ: ಆರೋಪಿ ಬಂಧನ Read More »

ಸುಳ್ಯ : ಕಳ್ಳತನ ಆರೋಪಿಗೆ ಜೈಲು ಶಿಕ್ಷೆ

ಸುಳ್ಯ: ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ನೆರಿಯ ನಿವಾಸಿ ಶರತ್ ಎಸ್. (24) ಎಂಬಾತನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಳವು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಕಲಂ 457 ಐಪಿಸಿ ರಲ್ಲಿ ಆರೋಪಿಗೆ ಆರು ತಿಂಗಳ ಸಾದ ಸಜೆ ಹಾಗೂ 500 ದಂಡ, ಕಲಂ 380 ಐಪಿಸಿಯಲ್ಲಿ 10 ತಿಂಗಳ ಸಾದಾ ಸಜೆ ಹಾಗೂ 500 ರೂ.ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದಲ್ಲಿ 10 ದಿನಗಳ ಹೆಚ್ಚುವರಿ ಸಜೆ

ಸುಳ್ಯ : ಕಳ್ಳತನ ಆರೋಪಿಗೆ ಜೈಲು ಶಿಕ್ಷೆ Read More »

ಜೈಲಿಗೆ ವಾರ್ಡನ್‌ನಿಂದಲೇ ಡ್ರಗ್ಸ್‌ ಪೂರೈಕೆ

ಮತ್ತೊಮ್ಮೆ ಪರಪ್ಪನ ಅಗ್ರಹಾರ ಕರ್ಮಕಾಂಡ ಬಯಲು ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಗಾಂಜಾ ಸರಬರಾಜು ಮಾಡುತ್ತಿದ್ದ ಜೈಲು ವಾರ್ಡನ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರಕಾಶ್ ಗಾವಡೆ ಎಂದು ಗುರುತಿಸಲಾಗಿದೆ. ಮಾರ್ಚ್ 9ರಂದು ರಾತ್ರಿ ಸುಮಾರು 8.15ರ ಸುಮಾರಿಗೆ ಈ ಘಟನೆ ನಡೆದಿದೆ. ಆ ದಿನ ನಿಯೋಜನೆಗೊಂಡಿದ್ದ ವಾರ್ಡನ್ ಪ್ರಕಾಶ್ ಗಾವಡೆ ಜೈಲಿನೊಳಗೆ ಪ್ರವೇಶಿಸುವ ವೇಳೆ ತಪಾಸಣೆ ವಿಭಾಗ–2ರಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಅವನನ್ನು ಪರಿಶೀಲನೆಗೆ ಒಳಪಡಿಸಿದರು. ಈ ವೇಳೆ ಅವನ ಒಳ ಉಡುಪಿನಲ್ಲಿ ಹಣ

ಜೈಲಿಗೆ ವಾರ್ಡನ್‌ನಿಂದಲೇ ಡ್ರಗ್ಸ್‌ ಪೂರೈಕೆ Read More »

ಯುದ್ಧ ನಿಲ್ಲಿಸಲು ಇರಾನ್‌ ಮೂರು ಷರತ್ತು

ಹೀಗಾದರೆ ಮಾತ್ರ ಯುದ್ಧ ನಿಲ್ಲುತ್ತದೆ ಟೆಹ್ರಾನ್‌: ಅಮೆರಿಕ, ಇಸ್ರೇಲ್‌-ಇರಾನ್‌ ಮಧ್ಯೆ ನಡುವೆ ನಡೆಯುತ್ತಿರುವ ಯುದ್ಧ ಇನ್ನಷ್ಟು ತೀವ್ರಗೊಂಡು ಜಗತ್ತಿನಲ್ಲಿ ತೈಲ ಮತ್ತು ಇಂಧನಕ್ಕಾಗಿ ಹಾಹಾಕಾರ ಉಂಟಾಗಿದೆ. ಈ ನಡುವೆ ಇರಾನ್‌ ಯುದ್ಧ ನಿಲ್ಲಿಸಲು ಜಗತ್ತಿನೆದುರು ಮೂರು ಷರತ್ತುಗಳನ್ನಿಟ್ಟಿದೆ. ಅಮೆರಿಕದ ನೆಲೆಗಳು ಮತ್ತು ಮಧ್ಯಪ್ರಾಚ್ಯ ದೇಶಗಳ ಮೇಲೆ ನಡೆಯುತ್ತಿರುವ ದಾಳಿ ಕೊನೆಯಾಗಬೇಕಾದರೆ ನಮ್ಮ ಮೂರು ಷರತ್ತನ್ನುಗಳನ್ನು ಒಪ್ಪಿಕೊಳ್ಳಬೇಕೆಂದು ಇರಾನ್‌ ಹೇಳಿದೆ ಇರಾನ್‌ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಬೇಕು, ಸಂಘರ್ಷದ ಸಮಯದಲ್ಲಿ ಉಂಟಾದ ಹಾನಿಗಳಿಗೆ ಪರಿಹಾರ

ಯುದ್ಧ ನಿಲ್ಲಿಸಲು ಇರಾನ್‌ ಮೂರು ಷರತ್ತು Read More »

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹತ್ಯೆಗೆ ಯತ್ನ

ಮದುವೆ ಸಮಾರಂಭದಲ್ಲಿ ಗುಂಡಿನೇಟಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಫಾರೂಕ್‌ ಅಬ್ದುಲ್ಲಾ ಶ್ರೀನಗರ : ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ತಂದೆ, ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಗುಂಡಿಕ್ಕಿ ಸಾಯಿಸಲು ಯತ್ನಿಸಿರುವ ಘಟನೆ ನಡೆದಿದೆ. ಬುಧವಾರರಂದು ಸಂಜೆ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ದುಷ್ಕರ್ಮಿಯೊಬ್ಬ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ದಾಳಿಕೋರ ಅಬ್ದುಲ್ಲಾ ಅವರಿಂದ ಕೆಲವೇ ಕೆಲವು

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹತ್ಯೆಗೆ ಯತ್ನ Read More »

ಮುಸ್ಲಿಂ ಹುಡುಗನನ್ನು ವರಿಸಿದ ಕುಂಭಮೇಳದ ಮೊನಾಲಿಸಾ

ಕೇರಳದ ದೇವಸ್ಥಾನದಲ್ಲಿ ರಾಜಕೀಯದವರ ಸಮ್ಮುಖದಲ್ಲಿ ಮದುವೆ ತಿರುವನಂತಪುರಂ: ಕಳೆದ ವರ್ಷ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿರುವಾಗ ಕ್ಯಾಮರಾ ಕಣ್ಣಿಗೆ ಬಿದ್ದು ಸಖತ್‌ ಜನಪ್ರಿಯಳಾಗಿದ್ದ ಮಧ್ಯ ಪ್ರದೇಶದ ಇಂದೋರ್‌ನ ಮೊನಾಲಿಸಾ ನಿನ್ನೆ ಕೇರಳದಲ್ಲಿ ಮುಸ್ಲಿಂ ಯುವಕನನ್ನು ಮನೆಯವರ ವಿರೋಧ ಲೆಕ್ಕಿಸದೆ ಮದುವೆಯಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ. ಪ್ರಿಯಕರ ಮೊಹಮ್ಮದ್‌ ಫರ್ಮಾನ್‌ ಖಾನ್‌ ಎಂಬಾತನ ಜೊತೆ ಕುಂಭಮೇಳದ ಮೊನಾಲಿಸಾ ಬೋಂಸ್ಲೆಯ ಮದುವೆ ಕೇರಳದ ದೇವಸ್ಥಾನವೊಂದರಲ್ಲಿ ನೆರವೇರಿದೆ. ಮದುವೆಗೆ ಪೋಷಕರ ವಿರೋಧ ಇದ್ದ ಕಾರಣ ಕೇರಳದ ಪೂವಾರ್‌ನ ಅರುಮಾನೂರ್ ನೈನಾರ್

ಮುಸ್ಲಿಂ ಹುಡುಗನನ್ನು ವರಿಸಿದ ಕುಂಭಮೇಳದ ಮೊನಾಲಿಸಾ Read More »

ಪ್ಲಾಸ್ಟಿಕ್‌ ಚೀಲ, ಕವರ್‌ಗಳಲ್ಲಿ ಬಿಸಿ ಆಹಾರ ಪಾರ್ಸೆಲ್‌ ನಿಷೇಧ

ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಎಡಿಸಿ ಸೂಚನೆ ಮಂಗಳೂರು: ಹೋಟೆಲ್, ಕ್ಯಾಂಟೀನ್, ಕೆಫೆಗಳಲ್ಲಿ ಪ್ಲಾಸ್ಟಿಕ್ ಕವರ್, ಪತ್ರಿಕೆಗಳಲ್ಲಿ ಬಿಸಿ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಮಾಡುವುದನ್ನು ನಿಷೇಧಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ರಾಜು ಕೆ ಸೂಚಿಸಿದ್ದಾರೆ. ಪ್ಲಾಸ್ಟಿಕ್‍ನಲ್ಲಿರುವ ಹಾನಿಕಾರಕ ರಾಸಾಯನಿಕಗಳು ಬಿಸಿ ಆಹಾರಕ್ಕೆ ಸೇರಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿವೆ. ಹೋಟೆಲ್, ಕ್ಯಾಂಟೀನ್‍ಗಳಿಂದ ಹೆಚ್ಚಾಗಿ ಕಾರ್ಮಿಕರು ಅಥವಾ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಬಿಸಿ ಆಹಾರ ಪದಾರ್ಥಗಳನ್ನು ಕೊಂಡೊಯ್ಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕವರ್, ನ್ಯೂಸ್ ಪೇಪರ್‌ಗಳಲ್ಲಿ

ಪ್ಲಾಸ್ಟಿಕ್‌ ಚೀಲ, ಕವರ್‌ಗಳಲ್ಲಿ ಬಿಸಿ ಆಹಾರ ಪಾರ್ಸೆಲ್‌ ನಿಷೇಧ Read More »

ವಿಟ್ಲ: ಬಾಡಿಗೆ ಮನೆಯಲ್ಲಿ ಡ್ರಗ್ಸ್‌ ದಂಧೆ, ನಾಲ್ವರು ಸೆರೆ

ವಿಟ್ಲ: ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ಇದ್ದುಕೊಂಡು ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿ, ಸುಮಾರು ರೂ.1,79,700 ಮೌಲ್ಯದ 17.97 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಇಂದಿರಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಶ್ರಫ್ ಜಿ ಎಂಬಾತ ತನ್ನ ಮನೆಯಲ್ಲಿ ಎಂಡಿಎಂಎ ಸಂಗ್ರಹಿಸಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ

ವಿಟ್ಲ: ಬಾಡಿಗೆ ಮನೆಯಲ್ಲಿ ಡ್ರಗ್ಸ್‌ ದಂಧೆ, ನಾಲ್ವರು ಸೆರೆ Read More »

ಎರಡು ದಿನದಲ್ಲಿ ಗ್ಯಾಸ್‌ ಸಮಸ್ಯೆ ಪರಿಹಾರ : ಕೇಂದ್ರ ಭರವಸೆ

ಅನ್ಯಮಾರ್ಗಗಳ ಮೂಲಕ ಕಚ್ಚಾತೈಲ ಆಮದು; ಸಿಲಿಂಡರ್‌ಗಾಗಿ ಮುಗಿಬೀಳುವ ಅಗತ್ಯವಿಲ್ಲ ನವದೆಹಲಿ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ದೇಶಾದ್ಯಂತ ಗ್ಯಾಸ್‌ ಕೊರತೆಯಿಂದ ಹಾಹಾಕಾರ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಎಲ್‌ಪಿಜಿ ದಾಸ್ತಾನು ಸಾಕಷ್ಟಿದೆ, ಎರಡೂವರೆ ದಿನಗಳಲ್ಲಿ ಪೂರೈಕೆಯಾಗಲಿದೆ ಎಂದು ಭರವಸೆ ನೀಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವಾಲಯ, ಹೊರ್ಮುಜ್ ಜಲಸಂಧಿಯ ಬದಲಿಗೆ ಅನ್ಯ ಮಾರ್ಗಗಳ ಮೂಲಕ ಕಚ್ಚಾತೈಲ ಆಮದು ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಅನಿಲ ಪೂರೈಕೆ ಮತ್ತಷ್ಟು ಸುಧಾರಿಸಲಿದೆ. ಹೀಗಾಗಿ ಜನರು ಭಯ ಬೀಳುವ ಅಗತ್ಯವಿಲ್ಲ, ಸಿಲಿಂಡರ್‌ಗಾಗಿ

ಎರಡು ದಿನದಲ್ಲಿ ಗ್ಯಾಸ್‌ ಸಮಸ್ಯೆ ಪರಿಹಾರ : ಕೇಂದ್ರ ಭರವಸೆ Read More »

ಬೀದಿ ನಾಯಿಗಳ ನಿಯಂತ್ರಣಕ್ಕೂ ಶಿಕ್ಷಕ ನೇಮಕ: ರಾಜ್ಯ ಸರ್ಕಾರದ ಕ್ರಮಕ್ಕೆ ಹೊರಟ್ಟಿ ಆಕ್ರೋಶ

ಬೆಂಗಳೂರು: ಶಿಕ್ಷಕರನ್ನು ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ನೊಡೆಲ್ ಅಧಿಕಾರಿಗಳನ್ನಾಗಿ ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಶಿಕ್ಷಕರಿಗೆ ಈಗಾಗಲೇ ಅನೇಕ ಬೋಧಕೇತರ ಜವಾಬ್ದಾರಿಗಳು ನೀಡಲಾಗಿರುವ ಸಂದರ್ಭದಲ್ಲಿ ಇಂತಹ ಕೆಲಸಗಳನ್ನು ನೀಡುವುದು ಹಾಸ್ಯಾಸ್ಪದ ಹಾಗೂ ಶಿಕ್ಷಕ ಸಮುದಾಯಕ್ಕೆ ಮಾಡುವ ಅವಮಾನ ಎಂದಿದ್ದಾರೆ. ರಾಜ್ಯದ ಶಿಕ್ಷಕರು ಈಗಾಗಲೇ ಮತದಾನ ಕಾರ್ಯಗಳು, ಜನಗಣತಿ, ಜಾತಿಗಣತಿ, ಮತದಾರರ ಪಟ್ಟಿ ಪರಿಷ್ಕರಣೆ

ಬೀದಿ ನಾಯಿಗಳ ನಿಯಂತ್ರಣಕ್ಕೂ ಶಿಕ್ಷಕ ನೇಮಕ: ರಾಜ್ಯ ಸರ್ಕಾರದ ಕ್ರಮಕ್ಕೆ ಹೊರಟ್ಟಿ ಆಕ್ರೋಶ Read More »

error: Content is protected !!
Scroll to Top