ಚಾಲಕನ ನಿಯಂತ್ರಣ ತಪ್ಪಿದ ಕಾರು : ವಿದ್ಯುತ್‍ ಕಂಬಕ್ಕೆ ಡಿಕ್ಕಿ

ಸುಬ್ರಹ್ಮಣ್ಯ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿಯ ಕುಲ್ಕುಂದ ವಲಯ ಅರಣ್ಯಾಧಿಕಾರಿ ಕಚೇರಿ ಬಳಿ ನಡೆದಿದೆ. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಕಾರು ಎದುರಿನಿಂದ ಬಂದ ವಾಹನಕ್ಕೆ ಡಿಕ್ಕಿ ಆಗುವುದನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಕಾರು ಜಖಂಗೊಂಡಿದೆ. ಘಟನೆಯಲ್ಲಿ ವಿದ್ಯುತ್ ಕಂಬ ಮುರಿದಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು : ವಿದ್ಯುತ್‍ ಕಂಬಕ್ಕೆ ಡಿಕ್ಕಿ Read More »

ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನಾ ವಿಧಿವಿಧಾನಗಳು ಮತ್ತು ಪ್ರಬಂಧ ರಚನೆ ಕಾರ್ಯಗಾರ

ಪುತ್ತೂರು: ಸಂಶೋಧನ ವರದಿ ತಯಾರಿಸುವುದರಲ್ಲಿ ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲಿ ಸಮಸ್ಯೆಗಳನ್ನು ಎದುರಿಸುವುದು ಸಹಜ. ಇದನ್ನು ಮಾರ್ಗದರ್ಶಕರೊಂದಿಗೆ ಸಮಾಲೋಚನೆ ಮಾಡಿ ಪರಿಹರಿಸಿಕೊಳ್ಳಬೇಕು. ತಳಮಟ್ಟದ ಅಧ್ಯಯನ, ವಿಷಯಗಳ ಆಸಕ್ತಿ ನಮ್ಮ ಅಧ್ಯಯನಗಳನ್ನು ಬಲಗೊಳಿಸುತ್ತದೆ ಎಂದು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ನಿರ್ದೇಶಕ ಡಾ. ರಾಬಿನ್ ಮನೋಹರ್ ಶಿಂದೆ ತಿಳಿಸಿದರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ವಿವೇಕಾನಂದ ಸಂಶೋಧನಾ ಕೇಂದ್ರ ಸಹಯೋಗದಲ್ಲಿ ನಡೆದ ಸಂಶೋಧನೆಯ ವಿಧಿ ವಿಧಾನಗಳು ಮತ್ತು

ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನಾ ವಿಧಿವಿಧಾನಗಳು ಮತ್ತು ಪ್ರಬಂಧ ರಚನೆ ಕಾರ್ಯಗಾರ Read More »

ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ | ಇಬ್ಬರು ಮೃತ್ಯು

ಪುತ್ತೂರು: ಕಾರುಗಳೆರಡು ಡಿಕ್ಕಿ ಹೊಡೆದುಕೊಂಡ ಘಟನೆ ಕುಂಬ್ರ ಸಮೀಪದ ಶೇಖಮಲೆಯಲ್ಲಿ ನಡೆದಿದೆ. ಬೊಲೆರೋ ಹಾಗೂ ಆಲ್ಟೋ ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಆಲ್ಟೋ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿರುವ ಕುರಿತು ತಿಳಿದು ಬಂದಿದೆ. ಮೃತಪಟ್ಟವರನ್ನು ಸೋಮವಾರ ಪೇಟೆ ಮೂಲದ ಲೋಕೇಶ್‍ ಹಾಗೂ ರವೀಂದ್ರ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಬೊಲೆರೋ ಕಾರಿನಲ್ಲಿದ್ದವರು ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಪುತ್ತೂರು ನಗರ ಠಾಣಾ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ | ಇಬ್ಬರು ಮೃತ್ಯು Read More »

ಕೆಮ್ಮಿಂಜೆ ವಲಯ ಸರ್ವೆ ಒಕ್ಕೂಟದ ತ್ರೈಮಾಸಿಕ ಸಭೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಪುತ್ತೂರು ತಾಲೂಕು ಕೆಮ್ಮಿಂಜೆ ವಲಯ ಸರ್ವೆ ಒಕ್ಕೂಟದ ತ್ರೈಮಾಸಿಕ ಸಭೆ ಭಾನುವಾರ ಕಲ್ಪನೆ ಸಮುದಾಯ ಭವನದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷ ಸುಂದರ ಬಲ್ಲ್ಯಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಕೃಷಿ ಅಧಿಕಾರಿ ಶಿವರಂಜನೆಯ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸೇವಾ ಪ್ರತಿನಿಧಿ ರೇಖಾ ರೈ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಗತಿ ರಕ್ಷಾ ಕವಚದಲ್ಲಿ ಒಂದು ಸಂಘದ ಸದಸ್ಯರು  ಉಳಿತಾಯ ಮಾಡಿದ

ಕೆಮ್ಮಿಂಜೆ ವಲಯ ಸರ್ವೆ ಒಕ್ಕೂಟದ ತ್ರೈಮಾಸಿಕ ಸಭೆ Read More »

ಬೆಂಗಳೂರಿನಲ್ಲಿ ಮೇಳೈಸಿದ ಭಾವೀ ವಧು-ವರರ ಮುಖಾಮುಖಿ ಕಾರ್ಯಕ್ರಮ “ಸಪ್ತಪದಿ-2024” | ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಸಮಾಜ ಸಾಥ್‍

ಬೆಂಗಳೂರು: ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಸಮಾಜದ ಬೆಂಗಳೂರು ಘಟಕದ ವತಿಯಿಂದ ಭಾವೀ ವಧು ವರರ ಮುಖಾ ಮುಖಿ ಭೇಟಿ ಕಾರ್ಯಕ್ರಮ ಸಪ್ತಪದಿ 2024 ಲಗ್ಗೆರೆ ‘ನಮ್ಮನೆ’ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಜೂ. 16 ಭಾನುವಾರ ನಡೆಯಿತು. ಬೆಂಗಳೂರು ಘಟಕ ಗೌಡ ಸಮಾಜದ ಅಧ್ಯಕ್ಷ ಪಾನತ್ತೆಲ ಪಳಂಗಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ನಾಗೇಶ್ ಕುಮಾರ್ ಕಲ್ಲುಮುಟ್ಟು, ಕಾರ್ಯದರ್ಶಿ ಸೋಮಣ್ಣ ಕುಂಭಗೌಡನ, ಮಹಿಳಾ ಘಟಕದ ಅಧ್ಯಕ್ಷೆ ಶಶಿಪ್ರಭಾ ಮಡ್ತಿಲ, ಉಪಾಧ್ಯಕ್ಷೆ ನರಿಯನ

ಬೆಂಗಳೂರಿನಲ್ಲಿ ಮೇಳೈಸಿದ ಭಾವೀ ವಧು-ವರರ ಮುಖಾಮುಖಿ ಕಾರ್ಯಕ್ರಮ “ಸಪ್ತಪದಿ-2024” | ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಸಮಾಜ ಸಾಥ್‍ Read More »

ಎರಡು ದಿನಗಳ ದಕ್ಷಿಣ ಭಾರತ ಉತ್ಸವ-2024 ಕ್ಕೆ ಚಾಲನೆ | ಉತ್ಸವದಲ್ಲಿ  ಪುತ್ತೂರಿನ ದಿ ಪುತ್ತೂರು ಕ್ಲಬ್‍

ಪುತ್ತೂರು: ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಎಫ್‍ ಕೆಸಿಸಿಐ ಆಯೋಜಿಸಿದ ಎರಡು ದಿನಗಳ ದಕ್ಷಿಣ ಭಾರತ ಉತ್ಸವ-2024 ಕ್ಕೆ ಶನಿವಾರ ನಗರದ ಅರಮನೆ ಮೈದಾನದಲ್ಲಿ ಚಾಲನೆ ನೀಡಲಾಗಿದ್ದು,. ಈ ಉತ್ಸವದಲ್ಲಿ ಪುತ್ತೂರಿನ ದಿ ಪುತ್ತೂರು ಕ್ಲಬ್‍ ನ್ನು ಪ್ರಮೋಟ್ ಮಾಡಲಾಯಿತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಕ್ಷಿಣ ಭಾರತ ಉತ್ಸವಕ್ಕೆ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ಪುತ್ತೂರು ಕ್ಲಬ್‍ ನ ಡಾ.ದೀಪಕ್‍ ರೈ, ವಿಶ್ವಾಸ್ ಶೆಣೈ,, ನಿತಿನ್ ಪಕ್ಕಳ, ಬೂಡಿಯಾರ್ ರಾಧಾಕೃಷ್ಣ ರೈ, ರೂಪೇಶ್‍ ಶೇಟ್, ಜಯಂತ ನಡುಬೈಲು, ಬಾಲಕೃಷ್ಣ ಉಪಸ್ಥಿತರಿದ್ದರು.

ಎರಡು ದಿನಗಳ ದಕ್ಷಿಣ ಭಾರತ ಉತ್ಸವ-2024 ಕ್ಕೆ ಚಾಲನೆ | ಉತ್ಸವದಲ್ಲಿ  ಪುತ್ತೂರಿನ ದಿ ಪುತ್ತೂರು ಕ್ಲಬ್‍ Read More »

ಕೇಂದ್ರ ನೂತನ ಸಚಿವ ಹೆಚ್‍.ಡಿ.ಕುಮಾರಸ್ವಾಮಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ | ಆಶೀರ್ವಾದ ನೀಡಿದ ಶ್ರೀ ಡಾನಿರ್ಮಲಾನಂದನಾಥ ಸ್ವಾಮೀಜಿ

ನೂತನ ಉಕ್ಕು ಮತ್ತು ಬೃಹತ್ ಕೈಗಾರಿಕೆ ಕೇಂದ್ರ ಸಚಿವ ಹೆಚ್‍.ಡಿ.ಕುಮಾರಸ್ವಾಮಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯಕ್ಕೆ ಇಂದು ಭೇಟಿ ನೀಡಿದರು. ಕ್ಷೇತ್ರಾದಿ ದೇವತೆಗಳ ಹಾಗೂ ಯುಗಯೋಗಿ ‘ಪದ್ಮಭೂಷಣ’ ಪುರಸ್ಕೃತ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳವರ ಗದ್ದುಗೆಗೆ ಭೇಟಿ ನೀಡಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠಗಳ

ಕೇಂದ್ರ ನೂತನ ಸಚಿವ ಹೆಚ್‍.ಡಿ.ಕುಮಾರಸ್ವಾಮಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ | ಆಶೀರ್ವಾದ ನೀಡಿದ ಶ್ರೀ ಡಾನಿರ್ಮಲಾನಂದನಾಥ ಸ್ವಾಮೀಜಿ Read More »

ಹಣದ ಬೇಡಿಕೆಯಿಟ್ಟು ಉದ್ಯಮಿಗೆ ಅನಾಮಿಕ ವ್ಯಕ್ತಿಯಿಂದ ಕರೆ : ಪ್ರಕರಣ ದಾಖಲು

ಪುತ್ತೂರು : ಬೊಳುವಾರಿನ ಉದ್ಯಮಿಯೊಬ್ಬರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಾಮಿಕ ವ್ಯಕ್ತಿಯೊಬ್ಬ 4 ದಿನಗಳ ಹಿಂದೆ ಹಿಂದಿ ಭಾಷೆಯಲ್ಲಿ ಸಿಬಿಐ ಕ್ರೈಂ ಬ್ರಾಂಚ್‌ನಿಂದ ಮಾತನಾಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡು ಉದ್ಯಮಿಯ ಪುತ್ರನ ಹೆಸರು ಹೇಳಿ, ನಿಮ್ಮ ಮಗನನ್ನು ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಮಾಡಿದ್ದೇವೆ. ನಿಮ್ಮ ಮಗ ಸೇರಿದಂತೆ ಮೂವರನ್ನು ಈ ಕೇಸ್‌ನಲ್ಲಿ ಬಂಧಿಸಿ ದೆಹಲಿಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾನೆ. ಈ ಸಂದರ್ಭದಲ್ಲಿ ಉದ್ಯಮಿಯು ಪುತ್ರನ ಜತೆ

ಹಣದ ಬೇಡಿಕೆಯಿಟ್ಟು ಉದ್ಯಮಿಗೆ ಅನಾಮಿಕ ವ್ಯಕ್ತಿಯಿಂದ ಕರೆ : ಪ್ರಕರಣ ದಾಖಲು Read More »

ಗ್ಯಾರಂಟಿ ಹಣ ಹೊಂದಿಸಲು ರಾಜ್ಯ ಸರಕಾರ ಪೆಟ್ರೋಲ್, ಡಿಸೇಲ್ ಸೆಸ್‍ ಜಾಸ್ತಿ ಮಾಡಿ ರಾಜ್ಯವನ್ನು ಲೂಟಿ ಮಾಡಲು ಹೊರಟಿದೆ : ಶಾಸಕ ಸುನಿಲ್ ಕುಮಾರ್

ಕಾರ್ಕಳ : ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಗ್ಯಾರಂಟಿಗಳ ಹಣ ಹೊಂದಿಸಲು ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್‍ ನ್ನು ಹೆಚ್ಚಳ ಮಾಡುವ ಆದೇಶಕ್ಕೆ ಸಹಿತ ಹಾಕುವ ಮೂಲಕ ರಾಜ್ಯವನ್ನು ಲೂಟಿ ಹೊಡೆಯಲು ಹೊರಟಿದೆ ಎಂದು ಶಾಸಕ ವಿ.ಸುನಿಲ್ ಕುಮಾರ್ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಲಭ್ಯ ಇರುವ ಎಲ್ಲ ಆದಾಯ ಮೂಲಗಳಿಂದ ಸರಕಾರ ಜನರನ್ನು ಎಷ್ಟು ಸುಲಿಗೆ ಮಾಡಿದರೂ ರಾಜಸ್ವ ಸಂಗ್ರಹ ದಿನೇ ದಿನೇ ಕುಸಿದು ಬೀಳುತ್ತಿದೆ. ಈ ವರ್ಷದ ತೆರಿಗೆ ಸಂಗ್ರಹಣೆಯಲ್ಲಿ 13 ಸಾವಿರ

ಗ್ಯಾರಂಟಿ ಹಣ ಹೊಂದಿಸಲು ರಾಜ್ಯ ಸರಕಾರ ಪೆಟ್ರೋಲ್, ಡಿಸೇಲ್ ಸೆಸ್‍ ಜಾಸ್ತಿ ಮಾಡಿ ರಾಜ್ಯವನ್ನು ಲೂಟಿ ಮಾಡಲು ಹೊರಟಿದೆ : ಶಾಸಕ ಸುನಿಲ್ ಕುಮಾರ್ Read More »

ಇತಿಹಾಸ ಪ್ರಸಿದ್ಧ ಶ್ರೀ ಅನಂತಪುರ ದೇವಸ್ಥಾನದಲ್ಲಿ ಮೊಸಳೆ ಬಬಿಯಾನ ಪ್ರತ್ಯಕ್ಷ | ಪುಳಕಿತರಾದ ಭಕ್ತಾದಿಗಳು

ಕಾಸರಗೋಡು: ಇತಿಹಾಸ ಪ್ರಸಿದ್ದ ಕಾಸರಗೋಡು ಜಿಲ್ಲೆಯ ಪ್ರಸಿದ್ದ ದೇವಾಲಯ ಶ್ರೀ ಅನಂತಪುರ ದೇವಾಲಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಮರಿ ಮೊಸಳೆ ಮೊದಲ ಬಾರಿಗೆ ಜೂ 14 ರಂದು ದೇವಾಲಯದ ಪ್ರಾಂಗಣವೇರಿ ಗರ್ಭಗುಡಿಯ ಹತ್ತಿರವೇ ವಿಶ್ರಾಂತಿ ಪಡೆಯುವ ಮೂಲಕ ಮರಿ ಬಬಿಯಾನ ದರ್ಶನ ನೀಡಿದೆ. ಇದರಿಂದ ಭಕ್ತಾದಿಗಳು ಪುಳಕಿತಗೊಂಡರು. ಮರಿ ಬಬಿಯಾ ವಿಶ್ರಾಂತಿ ಪಡೆಯಲು ಬಂದ ಸಮಯದಲ್ಲಿ ಕ್ಷೇತ್ರದ ನಡೆ (ದಾರಿ) ಮುಚ್ಚಿತ್ತು. ಸಂಜೆ ಬಂದು ಕ್ಷೇತ್ರದ ನಡೆ ತೆರೆದ ದೇವಾಲಯದ ಅರ್ಚಕರಿಗೆ ಈ ಪುಣ್ಯ ದೃಶ್ಯ ಗೋಚರವಾಗಿದ್ದು, ತಮ್ಮ

ಇತಿಹಾಸ ಪ್ರಸಿದ್ಧ ಶ್ರೀ ಅನಂತಪುರ ದೇವಸ್ಥಾನದಲ್ಲಿ ಮೊಸಳೆ ಬಬಿಯಾನ ಪ್ರತ್ಯಕ್ಷ | ಪುಳಕಿತರಾದ ಭಕ್ತಾದಿಗಳು Read More »

error: Content is protected !!
Scroll to Top