ವಿದ್ಯುತ್ ಕಂಬದಿಂದ ಬಿದ್ದು ಕಾರ್ಮಿಕ ಮೃತ್ಯು !

ಕಡಬ: ವಿದ್ಯುತ್ ಲೈನ್ ಕಾರ್ಮಿಕನೊಬ್ಬ ಕಂಬದಿಂದ ಬಿದ್ದು ಮೃತಪಟ್ಟ ಘಟನೆ ಪಂಜ ಮೆಸ್ಕಾಂ ಶಾಖಾ ವ್ಯಾಪ್ತಿಯಲ್ಲಿ ಇದೀಗ ನಡೆದಿದೆ. ಅಲೆಕ್ಕಾಡಿ ಸಮೀಪ ಪಿಜಾವು ಎಂಬಲ್ಲಿ ಕಡಬದ ಕೃಷ್ಣ ಎಲೆಕ್ಟ್ರಿಕಲ್ ನ ಕಾರ್ಮಿಕರು ವಿದ್ಯುತ್ ಲೈನ್ ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ. ಈ ವೇಳೆ ಕಂಬದಿಂದ ಬಿದ್ದು ಕಾರ್ಮಿಕನೊಬ್ಬ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ವಿದ್ಯುತ್ ಆಫ್ ಮಾಡಿ ಕೆಲಸ ನಿರ್ವಹಿಸಲಾಗುತ್ತಿದ್ದು ವಿದ್ಯುತ್ ಶಾಕ್ ನಿಂದ ಬಿದ್ದಿರುವುದೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪಂಜ ಶಾಖಾ ಜೆಇ ತಿಳಿಸಿದ್ದಾರೆ.

ವಿದ್ಯುತ್ ಕಂಬದಿಂದ ಬಿದ್ದು ಕಾರ್ಮಿಕ ಮೃತ್ಯು ! Read More »

ಪುಣ್ಚತ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಭಾವಿ ಸಭೆ

ಕಾಣಿಯೂರು: ಪುಣ್ಚತ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸೆ. 7ರಂದು ನಡೆಯಲಿರುವ 7ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಭಾವಿ ಸಭೆ ಭಾನುವಾರ ಪುಣ್ಣತ್ತಾರಿನ ಶ್ರೀ ಹರಿಕೃಪಾ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಗಣೇಶೋತ್ಸವ ಕಾರ್ಯಕ್ರಮವನ್ನು ಯಶಸ್ವಿಯನ್ನಾಗಿ ನಡೆಸುವ ಬಗ್ಗೆ ನಿರ್ಣಾಯಿಸಲಾಯಿತು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ನಾರಾಯಣ ಗೌಡ ಪುಣ್ಚತ್ತಾರು, ಅಧ್ಯಕ್ಷ ವಿಶ್ವನಾಥ ರೈ ಮಾಳ, ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಉಪಾಧ್ಯಕ್ಷ ಕೋಶಾಧಿಕಾರಿ ನೇಮಿರಾಜ್ ಕಡಿರ, ಜತೆ ಕಾರ್ಯದರ್ಶಿ ದಿನೇಶ್ ಪೈಕ, ಪುಣ್ಣತ್ತಾರು

ಪುಣ್ಚತ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಭಾವಿ ಸಭೆ Read More »

ಪ್ರತಿಭಟನೆ ವೇಳೆ ಕುಸಿದುಬಿದ್ದು ಎಂ.ಎಲ್.ಸಿ ಭಾನುಪ್ರಕಾಶ್ ನಿಧನ| ಇಂದು ನಡೆಯಬೇಕಾಗಿದ್ದ ವಾಹನ ಜಾಥಾ ಮತ್ತು ಅಭಿನಂದನಾ ಕಾರ್ಯಕ್ರಮ ಮುಂದೂಡಿಕೆ

ಮಂಗಳೂರು : ಬಿಜೆಪಿಯ ಹಿರಿಯ ನಾಯಕ, ವಿಧಾನ ಪರಿಷತ್ ನ ಮಾಜಿ ಸದಸ್ಯ ಭಾನುಪ್ರಕಾಶ್‌ರವರು ಇಂದು ನಿಧನರಾದರು. ಕಾಂಗ್ರೆಸ್‌ ವಿರುದ್ಧ ಬೆಲೆ ಏರಿಕೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಹಿರಿಯ ಮುಖಂಡ ಭಾನುಪ್ರಕಾಶ್ ರವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಭಾನುಪ್ರಕಾಶ್‌ ಬಿಜೆಪಿಯ ಹಿರಿಯ ಮುಖಂಡ. ಸರಳ, ಸಜ್ಜನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು ಹಾಗೂ ಸತ್ಯ, ನ್ಯಾಯ, ನಿಷ್ಠೆಯ ಪರವಾಗಿ ಮಾತನಾಡುವ ಉತ್ತಮ ವಾಗ್ನಿಯಾಗಿದ್ದರು. ಗಾಜನೂರು ಜಿ.ಪಂ. ಕ್ಷೇತ್ರದಿಂದ ಆಯ್ಕೆಯಾಗಿದ್ದ ಭಾನುಪ್ರಕಾಶ್ 2001ರಿಂದ 2005ರ ಅವಧಿಯಲ್ಲಿ ಜಿಲ್ಲಾ ಪಂಚಾಯತ್

ಪ್ರತಿಭಟನೆ ವೇಳೆ ಕುಸಿದುಬಿದ್ದು ಎಂ.ಎಲ್.ಸಿ ಭಾನುಪ್ರಕಾಶ್ ನಿಧನ| ಇಂದು ನಡೆಯಬೇಕಾಗಿದ್ದ ವಾಹನ ಜಾಥಾ ಮತ್ತು ಅಭಿನಂದನಾ ಕಾರ್ಯಕ್ರಮ ಮುಂದೂಡಿಕೆ Read More »

ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟ ಮಹಿಳೆ | ಪೊಲೀಸರಿಂದ ತನಿಖೆ

ಉಪ್ಪಿನಂಗಡಿ: ಮಹಿಳೆಯೊಬ್ಬರು ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿ ಘಟನೆ ಪೆರ್ನೆ ಬಳಿಯ ಬಿಳಿಯೂರು ದರ್ಖಾಸ್‍ ನಿಂದ ವರದಿಯಾಗಿದೆ. ದರ್ಖಾಸ್ ನಿವಾಸಿ ಹೇಮಾವತಿ (37 ) ಮೃತ ಮಹಿಳೆ. ಈ ಕುರಿತು ಕೊಲೆ ಶಂಕೆ ವ್ಯಕ್ತವಾಗಿದ್ದು,  ಹೇಮಾವತಿ ತಾಯಿ, ಅಕ್ಕನ ಮಗನೊಂದಿಗೆ ಈ ಮನೆಯಲ್ಲಿದ್ದ ವೇಳೆ ನಿನ್ನೆ ರಾತ್ರಿ ಕೃತ್ಯ ನಡೆದಿದೆ. ಮೊದಲಿಗೆ ಪರಿಸರದಲ್ಲಿ ಹೃದಯಾಘಾತವೆಂಬ ಸುದ್ದಿ ಹರಡಿತ್ತು. ಆದರೆ ಬಳಿಕ ಈ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ವಿಚಾರಣೆಗಾಗಿ ಮೃತರ ಅಕ್ಕನ ಮಗ ಎಸೆಸ್ಸೆಲ್ಸಿ

ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟ ಮಹಿಳೆ | ಪೊಲೀಸರಿಂದ ತನಿಖೆ Read More »

ರಾಜ್ಯ ಸರಕಾರದಿಂದ ಪೆಟ್ರೋಲ್ ಬೆಲೆ ಏರಿಕೆ | ಗ್ಯಾರಂಟಿ ಯೋಜನೆಗಳನ್ನು ಸರಿದೂಗಿಸಿ ಜನಸಾಮಾನ್ಯರ ಬದುಕಿಗೆ ಬರೆ ಎಳೆಯುತ್ತಿರುವ ಸರಕಾರ : ಸಂಸದ ಕ್ಯಾ.ಬ್ರಿಜೇಶ್ ಚೌಟ

ಮಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡುವ ಮೂಲಕ ಕಾಂಗ್ರೆಸ್ ಸರಕಾರ ಅವೈಜ್ಞಾನಿಕ ಗ್ಯಾರೆಂಟಿ ಯೋಜನೆಗಳಿಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹಣ ಸರಿದೂಗಿಸಲು ಯತ್ನಿಸುತ್ತಿರುವುದು ಖಂಡನೀಯ ಎಂದು ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಇಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ರಾಜ್ಯ ಸರಕಾರದ ವಿರುದ್ಧ ಖಂಡನೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಸಾಮಾನ್ಯ ಜನರ ಬದುಕಿಗೆ

ರಾಜ್ಯ ಸರಕಾರದಿಂದ ಪೆಟ್ರೋಲ್ ಬೆಲೆ ಏರಿಕೆ | ಗ್ಯಾರಂಟಿ ಯೋಜನೆಗಳನ್ನು ಸರಿದೂಗಿಸಿ ಜನಸಾಮಾನ್ಯರ ಬದುಕಿಗೆ ಬರೆ ಎಳೆಯುತ್ತಿರುವ ಸರಕಾರ : ಸಂಸದ ಕ್ಯಾ.ಬ್ರಿಜೇಶ್ ಚೌಟ Read More »

ಇವಿಎಂ ಹ್ಯಾಕ್ ಮಾಡಲು ಅಸಾಧ್ಯ   l ಮಸ್ಕ್‌ ಹೇಳಿಕೆಗೆ ಕೇಂದ್ರ ಮಾಜಿ ಸಚಿವ ತಿರುಗೇಟು

ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳು ಹೀನಾಯವಾಗಿ ಸೋತಿದ್ದರೆ ಖಂಡಿತ ಮತಯಂತ್ರಗಳನ್ನು ದೂಷಿಸುವ ಕಾರ್ಯ ನಡೆಯುತ್ತಿತ್ತು. ಆದರೆ ಫಲಿತಾಂಶ ಪ್ರಕಟವಾದಾಗ ಪ್ರತಿಪಕ್ಷಗಳೂ ಕೂಡ ಸಾಧನೆ ಮಾಡಿದ ಕಾರಣ ಮತಯಂತ್ರಗಳು ಬಚಾವಾಗಿದ್ದವು. ಆದರೆ ಫಲಿತಾಂಶ ಪ್ರಕಟವಾಗಿ, ಸರಕಾರವೂ ರಚನೆಯಾದ ಬಳಿಕ ಈಗ ಮತಯಂತ್ರಗಳ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ಈ ಚರ್ಚೆಗೆ ಕಾರಣರಾಗಿರುವವರು ಟೆಸ್ಲಾ ಕಂಪನಿಯ ಎಲಾನ್ ಮಸ್ಕ್ ಚುನಾವಣೆಗಳಲ್ಲಿ ಬಳಸುವ ಇವಿಎಂ ಯಂತ್ರಗಳ ಬಗ್ಗೆ ಎಲಾನ್ ಮಸ್ಕ್ ಅನುಮಾನ ವ್ಯಕ್ತಪಡಿಸಿದ್ದು, ಹ್ಯಾಕರ್‌ಗಳು ಕೃತಕ ಬುದ್ಧಿಮತ್ತೆ ಬಳಸಿಕೊಂಡು ಇವಿಎಂ ಗಳನ್ನು

ಇವಿಎಂ ಹ್ಯಾಕ್ ಮಾಡಲು ಅಸಾಧ್ಯ   l ಮಸ್ಕ್‌ ಹೇಳಿಕೆಗೆ ಕೇಂದ್ರ ಮಾಜಿ ಸಚಿವ ತಿರುಗೇಟು Read More »

ಸರಣಿ ರಜೆ ಹಿನ್ನಲೆ l ತಿರುಪತಿಯಲ್ಲಿ ಭಕ್ತಾದಿಗಳ ಭಾರೀ ಸರತಿ ಸಾಲು

ತಿರುಮಲ: ಸರಣಿ ರಜೆ ಬಂದ ಹಿನ್ನೆಲೆಯಲ್ಲಿ ಪುಣ್ಯಕ್ಷೇತ್ರಗಳಲ್ಲಿ ವಿಪರೀತ ಭಕ್ತಸಂದಣಿಯಿದ್ದು, ತಿರುಪತಿ ಕ್ಷೇತ್ರದಲ್ಲಿ ಭಾನುವಾರ ಸರತಿ ಸಾಲು 3 ಕಿ. ಮೀ. ದಾಟಿ ಹೋಗಿತ್ತು. ಶನಿವಾರ, ಭಾನುವಾರ ಹಾಗೂ ಸೋಮವಾರ ಬಕ್ರೀದ್ ರಜೆ ಹಿನ್ನೆಲೆಯಲ್ಲಿ ತಿರುಮಲದ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಭಾರೀ ಜನದಟ್ಟಣೆ ಕಂಡುಬಂದಿದ್ದು, ಭಕ್ತಾದಿಗಳು ದೇವರ ದರ್ಶನಕ್ಕಾಗಿ ಸುಮಾರು 3 ಕಿ.ಮೀ.ವರೆಗೂ ಸರತಿ ಸಾಲಿನಲ್ಲಿ ನಿಂತಿದ್ದರು. ಚುನಾವಣೆ ಮುಕ್ತಾಯ, ವಾರಾಂತ್ಯ ರಜೆ, ಪರೀಕ್ಷೆಗಳು ಮುಗಿದಿರುವುದು ಜೊತೆಗೆ

ಸರಣಿ ರಜೆ ಹಿನ್ನಲೆ l ತಿರುಪತಿಯಲ್ಲಿ ಭಕ್ತಾದಿಗಳ ಭಾರೀ ಸರತಿ ಸಾಲು Read More »

ವಿದ್ಯಾರಶ್ಮಿ ಶಾಲಾ ವಿಭಾಗದ ಪ್ರಾಂಶುಪಾಲೆಯಾಗಿ  ಶಶಿಕಲಾ ಆಳ್ವ

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದ ಎಲ್.ಕೆ.ಜಿ.ಯಿಂದ ಹತ್ತನೇ ತರಗತಿವರೆಗಿನ ವಿಭಾಗಕ್ಕೆ ನೂತನ ಪ್ರಾಂಶುಪಾಲೆಯಾಗಿ ಶ್ರೀಮತಿ ಶಶಿಕಲಾ ಆಳ್ವ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಬಿ. ಎ., ಬಿ. ಎಡ್. ಪದವಿಗಳೊಂದಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಕನ್ನಡ ಭಾಷಾ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಇವರು ಉತ್ತಮ ಚದುರಂಗ ಆಟಗಾರ್ತಿಯೂ ಆಗಿದ್ದಾರೆ. ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಅವರು ನೂತನ ಪ್ರಾಂಶುಪಾಲೆಯವರಿಗೆ ಅಧಿಕಾರ ವಹಿಸಿಕೊಡುವ ಸಂದರ್ಭದಲ್ಲಿ ಹಿರಿಯ ಟ್ರಸ್ಟಿ ಎನ್ . ಸುಂದರ ರೈ, ಟ್ರಸ್ಟಿ ಶ್ರೀಮತಿ ರಶ್ಮಿ ಅಶ್ವಿನ್,

ವಿದ್ಯಾರಶ್ಮಿ ಶಾಲಾ ವಿಭಾಗದ ಪ್ರಾಂಶುಪಾಲೆಯಾಗಿ  ಶಶಿಕಲಾ ಆಳ್ವ Read More »

ಕಲ್ಲು ಎತ್ತಿ ಹಾಕಿ ಕೊಲೆಗೈದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ !

ಸುಳ್ಯ: ಯುವಕನೊಬ್ಬನ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಕಾಂತಮಂಗಲದಿಂದ ವರದಿಯಾಗಿದೆ. ಅಜ್ಜಾವರ ಗ್ರಾಮದ ಕಾಂತಮಂಗಲದ ಶಾಲೆಯೊಂದರ ಜಗಲಿಯಲ್ಲಿ ತಲೆಗೆ ಕಲ್ಲು ಎತ್ತಿ ಕೊಲೆ ಮಾಡಿರುವ ಯುವಕನ ಶವ ಪತ್ತೆಯಾಗಿದೆ. ಸುಮಾರು 25 – 30 ವರ್ಷದ ಅಪರಿಚಿತ ಯುವಕನ ಶವ ಎಂದು ಅಂದಾಜಿಸಲಾಗಿದೆ. ಪೋಲೀಸರು ಸ್ಥಳಕ್ಕೆ ಬಂದಿದ್ದು ಮಹಜರು ನಡೆಸುತಿದ್ದಾರೆ ಎಂದು ತಿಳಿದು ಬಂದಿದೆ.

ಕಲ್ಲು ಎತ್ತಿ ಹಾಕಿ ಕೊಲೆಗೈದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ ! Read More »

ಎನ್ ಆರ್ ಸಿ ಸಿ- ಅಮ್ಮುಂಜ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಪುತ್ತೂರು: ಕಳೆದ ಲೋಕಸಭಾ ಚುನಾವಣೆಯ ಮೊದಲು ಶಿಲಾನ್ಯಾಸಗೈದ ಕಾಮಗಾರಿಗಳು ಆರಂಭಗೊಂಡಿದ್ದು, ಶೀಘ್ರದಲ್ಲೇ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಭಾನುವಾರ 10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ಕುರಿಯ ಗ್ರಾಮದ ಎನ್ ಆರ್ ಸಿ ಸಿ – ಅಮ್ಮುಂಜ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಆದ್ಯತೆ ಮೇರೆಗೆ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಅಗತ್ಯ ಬೇಡಿಕೆ ಇರುವ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಮಾಡಲಾಗುವುದು ಎಂದು ಹೇಳಿದ ಅವರು, ಪಾಲಿಂಜೆ ಶ್ರೀ

ಎನ್ ಆರ್ ಸಿ ಸಿ- ಅಮ್ಮುಂಜ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ Read More »

error: Content is protected !!
Scroll to Top