ಅಡಿಕೆ ಕೃಷಿಯ ರೋಗ ಶಮನಕ್ಕೆ ವಿಶೇಷ ಗಮನ ಅಗತ್ಯ | ರಾಜ್ಯ ಮಟ್ಟದ ಕೃಷಿ ಯಂತ್ರ ಮೇಳದಲ್ಲಿ ನಡೆದ ವಿಚಾರಗೋಷ್ಟಿ
ಪುತ್ತೂರು: ಕ್ಯಾಂಪ್ಕೋ ನಿಯಮಿತ ಮಂಗಳೂರು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು,ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪುತ್ತೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಇದರ ಸಂಯುಕ್ತ ಆಶ್ರಯದಲ್ಲಿ ಬೃಹತ್ 5ನೇ ಕೃಷಿ ಯಂತ್ರ ಮೇಳ 2023 ಮತ್ತು ಕನಸಿನ ಮನೆ ಕಾರ್ಯಕ್ರಮದ 2ನೇಯ ದಿನ “ಅಡಿಕೆ ಬೆಳೆ ನಿರ್ವಹಣೆ ಮತ್ತು ರೋಗಗಳ ಹತೋಟಿ” ಕುರಿತು ವಿಚಾರಗೋಷ್ಟಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಾಸರಗೋಡು ಐಎಪ್‌ಎಆರ್ ಮತ್ತು ಸಿಪಿಸಿಆರ್‌ಐ ಬೆಳೆ ಸಂರಕ್ಷಣಾ ವಿಭಾಗ ಮುಖ್ಯಸ್ಥರಾದ […]