ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ 25 ಮಂದಿ ಮರಳಿ ಮಾತೃ ಧರ್ಮಕ್ಕೆ,

ಸುಳ್ಯ: ಕಡಬ ತಾಲೂಕಿನ ಪಂಜ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ವತಿಯಿಂದ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧರ್ಮ ರಕ್ಷಾ ಯಜ್ಞ ನಡೆಸಲಾಯಿತು. ಈ ಸಂದರ್ಭದಲ್ಲಿ 20 ವರುಷಗಳಿಂದ ಕ್ರೈಸ್ತ ಮತಕ್ಕೆ ಮತಾಂತರಗೊಂಡ ಹಿಂದೂ ಸಮುದಾಯದ, ಏಳು ಕುಟುಂಬದ 15 ಪುರುಷರು, 10 ಮಹಿಳೆಯರು ಸೇರಿದಂತೆ ಒಟ್ಟು 25 ಜನರನ್ನು ಮರಳಿ ಮಾತೃ ಧರ್ಮಕ್ಕೆ ಕರೆ ತರಲಾಯಿತು. ಮರಳಿ ಬಂದ ಕುಟುಂಬಗಳಿಗೆ, ಬಟ್ಟೆಗಳು, ದಿನಸಿ ಸಾಮಗ್ರಿಗಳು, ವಿವಿಧ ದೇವರುಗಳ ಫೋಟೋಗಳು, ಮತ್ತು ಇತರ ಗೃಹ ಉಪಯೋಗಿ […]

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ 25 ಮಂದಿ ಮರಳಿ ಮಾತೃ ಧರ್ಮಕ್ಕೆ, Read More »

ನಟಿ ರಮ್ಯಾ ವಾಗ್ದಾಳಿ ಮುಂದುವರಿಕೆ | ದರ್ಶನ್ ಬಳಿಕ ಪ್ರಜ್ವಲ್ ರೇವಣ್ಣ, ಯಡಿಯೂರಪ್ಪ ವಿರುದ್ಧ ಕಿಡಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಬಯಲಾದಗಿನಿಂದಲೂ ಘಟನೆಯನ್ನು ಖಂಡಿಸುತ್ತಲೇ ಬಂದಿರುವ ನಟಿ ರಮ್ಯಾ ಇದೀಗ ಮತ್ತೆ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದು, ಈಗ ಅವರು ನಟ ದರ್ಶನ್, ಪ್ರಜ್ವಲ್ ರೇವಣ್ಣ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸೂರಜ್ ರೇವಣ್ಣ ವಿರುದ್ಧ ಕಿಡಿಕಾರಿದ್ದಾರೆ. ಕಾನೂನನ್ನು ಉಲ್ಲಂಘಿಸಿ ಸುದ್ದಿಯಲ್ಲಿರುವವರು ಶ್ರೀಮಂತ ಮತ್ತು ಶಕ್ತಿಶಾಲಿಗಳು. ಅವರ ಹಿಂಸಾತ್ಮಕ ಕ್ರಿಯೆಗಳಿಗೆ ಬಡವ ಮಹಿಳೆಯರು ಮತ್ತು ಮಕ್ಕಳು ಬದುಕು ನಾಶವಾಗಿದೆ. ಈ ಅಪರಾಧಗಳನ್ನು ಹೊರತಂದ ಪೊಲೀಸರು ಮತ್ತು ಮಾಧ್ಯಮಗಳಿಗೆ ಹ್ಯಾಟ್ಸ್ ಆಫ್. ವಿಚಾರಣೆಯನ್ನು

ನಟಿ ರಮ್ಯಾ ವಾಗ್ದಾಳಿ ಮುಂದುವರಿಕೆ | ದರ್ಶನ್ ಬಳಿಕ ಪ್ರಜ್ವಲ್ ರೇವಣ್ಣ, ಯಡಿಯೂರಪ್ಪ ವಿರುದ್ಧ ಕಿಡಿ Read More »

ಪಂಜಳ- ಪರ್ಪುಂಜ ರಸ್ತೆ ದುರಸ್ತಿಗೆ ಶಾಸಕರ ಸೂಚನೆ

ಪುತ್ತೂರು; ಪಂಜಳದಿಂದ- ಪರ್ಪುಂಜಕ್ಕೆ ತೆರಳುವ ಜಿಪಂ ರಸ್ತೆಯು ಸಂಪೂರ್ಣ ಹೊಂಡಮಯವಾಗಿದ್ದು ರಸ್ತೆಯನ್ನು ದುರಸ್ತಿ ಮಾಡುವಂತೆ ಶಾಸಕ ಅಶೋಕ್ ರೈಯವರು ಜಿಪಂ ಇಂಜಿನಿಯರ್‌ಗೆ ಸೂಚನೆಯನ್ನು ನೀಡಿದ್ದಾರೆ. ಈ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ವಾಹನ ಸಂಚಾರಕ್ಕೆ ಅಸಾಧ್ಯವಾಗಿದೆ ಎಂದು ಕುರಿಯ ಆಟೋ ಚಾಲಕರ ಸಂಘದ ವತಿಯಿಂದ ಶಾಸಕರಿಗೆ ಮನವಿ ಮಾಡಿದ್ದರು. ರಸ್ತೆಯ ವಿಚಾರದ ಬಗ್ಗೆ ಜಿಪಂ ಇಂಜಿನಿಯರ್ ಜಿತೆ ಮಾತನಾಡಿದ ಶಾಸಕರು ಪಂಜಳ ಕುರಿಯ ರಸ್ತೆಯ ಅಲ್ಲಲ್ಲಿ ಡಾಮಾರು ಎದ್ದು ಹೊಂಡವಾಗಿದೆ. ಸಂಚಾರಕ್ಕೆ ಅಡಚಣೆಯಾಗಿದೆ ಎಂದು ನಾಗರಿಕರು ತಿಳಿಸಿದ್ದು

ಪಂಜಳ- ಪರ್ಪುಂಜ ರಸ್ತೆ ದುರಸ್ತಿಗೆ ಶಾಸಕರ ಸೂಚನೆ Read More »

ಅಪಾಯವನ್ನು ಆಹ್ವಾನಿಸುತ್ತಿರುವ ಗುಂಡಿ

ಕಾವು : ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ತಾಲೂಕಿನ ಕಾವು ಸಮೀಪದ ಮದ್ಲ ಎಂಬಲ್ಲಿ ತಡೆಗೋಡೆಯಿಲ್ಲದ ಪೊದೆಗಳಿಂದ ತುಂಬಿದ ತೋಡು.  ಈ ತೋಡಿಗೆ ಸೇತುವೆಯೂ ಇದ್ದು, ಡಾಮಾರು ರಸ್ತೆಯ ಸಮೀಪದಲ್ಲೇ ಇರುವುದರಿಂದ ಮತ್ತು ಯಾವುದೇ ತಡೆಗೋಡೆ ಇಲ್ಲದಿರುವುದು ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟಬುತ್ತಿ. ಇತ್ತೀಚೆಗೆ ಒಂದು ತಾಯಿ ಮತ್ತು ಮಗು ಇದೇ ಸೇತುವೆಯ ಬಳಿ ದೊಡ್ಡ ವಾಹನವೊಂದನ್ನು ತಪ್ಪಿಸಲು ಹೋಗಿ ಅದೃಷ್ಟವಶಾತ್ ಕೂದಲೆಲೆಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಇನ್ಯಾವುದೇ ಅಪಘಾತ ಸಂಭವಿಸುವ ಮೊದಲೇ ಸಂಬಂಧಿಸಿದ ಇಲಾಖೆ ಈ ಸೇತುವೆಗೆ

ಅಪಾಯವನ್ನು ಆಹ್ವಾನಿಸುತ್ತಿರುವ ಗುಂಡಿ Read More »

ಸಮುದ್ರ ಪಾಲಾದ ಯುವಕ : ಮೂರು ದಿನ ಕಳೆದರೂ ಪತ್ತೆಯಾಗದ ಸುಳಿವು

ಉಡುಪಿ : ಕುಂದಾಪುರ ತಾಲೂಕಿನ ಬೀಜಾಡಿ ಬಳಿ ಸಮುದ್ರದಲೆಯ ಅಬ್ಬರಕ್ಕೆ ಕೊಚ್ಚಿಹೋಗಿ ನಾಪತ್ತೆಯಾದ ಯುವಕನಿಗಾಗಿ ಮೂರು ದಿನಗಳಿಂದ  ಶೋಧ ಕಾರ್ಯ ಮುಂದುವರಿದಿದ್ದು, ಈವರೆಗೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ತುಮಕೂರು ಜಿಲ್ಲೆಯ ತಿಪಟೂರು ಮೂಲದ ಯೋಗೀಶ್ (22) ಎಂಬಾತ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ನೀರು ಪಾಲಾಗಿದ್ದನು. ಮಳೆಗಾಲದ ಸಮುದ್ರದ ಅಬ್ಬರದ ಕುರಿತು ಮಾಹಿತಿ ಇಲ್ಲದೆ ನೀರಿಗೆ ಇಳಿದಿದ್ದ ಆತ, ಸಮುದ್ರದಲ್ಲಿ ಗಾಳಿಯ ಒತ್ತಡ ಮತ್ತು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದನು. ಗಂಗೊಳ್ಳಿಯ ಮುಳುಗು ತಜ್ಞ ದಿನೇಶ್ ಖಾರ್ವಿ ನೇತೃತ್ವದಲ್ಲಿ ಸ್ಥಳೀಯರ ತಂಡ

ಸಮುದ್ರ ಪಾಲಾದ ಯುವಕ : ಮೂರು ದಿನ ಕಳೆದರೂ ಪತ್ತೆಯಾಗದ ಸುಳಿವು Read More »

ಮುಳ್ಳಯ್ಯನಗಿರಿ ಚಾರಣ  : ಮಳೆಯ ಹಿನ್ನೆಲೆ ನಿಷೇಧ

ಚಿಕ್ಕಮಗಳೂರು:  ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರಾಕೃತಿಕ ತಾಣ ಮುಳ್ಳಯ್ಯನಗಿರಿ  ಹಾಗೂ ಎತ್ತಿನಭುಜದಲ್ಲಿ  ಚಾರಣಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಮುಂಗಾರು ಸಮಯದಲ್ಲಿ ಚಿಕ್ಕಮಗಳೂರು ಸೌಂದರ್ಯ ದುಪ್ಪಟ್ಟಾಗಿರುತ್ತದೆ. ನೆರೆ ಜಿಲ್ಲೆ ರಾಜ್ಯದ  ಮೂಲೆಯಿಂದ ಪ್ರವಾಸಿಗರು ಚಿಕ್ಕಮಗಳೂರಿಗೆ ಆಗಮಿಸುತ್ತಾರೆ. ಪ್ರಾಕೃತಿಕ ಸೌಂದರ್ಯದಿಂದ ಸಮೃದ್ಧಿಯಾಗಿರುವ ಕಾಫಿನಾಡಿನ ಸೊಬಗಿಗೆ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸದ್ಯ ಚಿಕ್ಕಮಗಳೂರಿನಲ್ಲಿ ಜೋರು ಮಳೆ, ಗಾಳಿ ಪ್ರಾರಂಭವಾಗಿದೆ. ಈ ಸಮಯದಲ್ಲಿ ಚಾರಣಕ್ಕೆ ಹೋಗುವುದು ಅಪಾಯ. ಆದರೂ ಕೂಡ ಜನರು ಈ ಪ್ರದೇಶದಲ್ಲಿ ಚಾರಣಕ್ಕೆ ತೆರಳುತ್ತಿದ್ದು, ಅನಾಹುತಗಳು

ಮುಳ್ಳಯ್ಯನಗಿರಿ ಚಾರಣ  : ಮಳೆಯ ಹಿನ್ನೆಲೆ ನಿಷೇಧ Read More »

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಮಾಣಿಲ: ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಯೋಗ ಗುರು ವಿಶ್ವೇಶ್ವರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ವಿವರಿಸಿ, ಹಲವು ಯೋಗಾಸನ ಹಾಗೂ ಪ್ರಾಣಾಯಾಮಗಳ ಅಭ್ಯಾಸ ಮಾಡಿಸಿದರು.    ಮಾಣಿಲ ಗ್ರಾಪಂ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ಸದಸ್ಯ ರಾಜೇಶ್ ಬಾಳೆಕಲ್ಲು ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕಿ ಲತಾ ಯು. ವಹಿಸಿದ್ದರು. ಯೋಗ ಗುರು ವಿಶ್ವೇಶ್ವರ ಭಟ್ , ಎಸ್ ಡಿ ಎಂ ಸಿ ಸದಸ್ಯ

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ Read More »

ಅಕ್ಷಯ ಕಾಲೇಜ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಜ್  ಪುತ್ತೂರು : ಅಕ್ಷಯ ಕಾಲೇಜು  ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಅಂತರಾಷ್ಟ್ರೀಯ ಯೋಗ ಶಿಕ್ಷಕಿ ಹೇಮಚಂದ್ರಹಾಸ   ಉದ್ಘಾಟಿಸಿ, ಯೋಗದ ಮಹತ್ವವನ್ನು ಸ್ವಯಂಸೇವಕರಿಗೆ ತಿಳಿಸಿದರು.  ಸ್ವಯಂ ಸೇವಕಿ ಪ್ರಕೃತಿ ಪ್ರಾರ್ಥಿಸಿ. ವೇನುಶ್ರೀ ಸ್ವಾಗತಿಸಿ, ದೀಕ್ಷಾ ವಂದಿಸಿದರು. ವರ್ಷಿಣಿ ನಿರೂಪಿಸಿದರು. ಸಮಾರಂಭದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕಿಶೋರ್ ರೈ, ಘಟಕ ನಾಯಕ ಜೀವನ್, ನಾಯಕಿ ನವಮಿ ಉಪಸ್ಥಿತರಿದ್ದರು.

ಅಕ್ಷಯ ಕಾಲೇಜ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »

ರಾಮ್ ಲಲ್ಲಾ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ಇನ್ನಿಲ್ಲ

ಅಯೋಧ್ಯೆ : ರಾಮಮಂದಿರದಲ್ಲಿ ರಾಮ್ ಲಲ್ಲಾ ಪ್ರತಿಮೆ ಪ್ರತಿಷ್ಠಾಪನೆ ನೆರವೇರಿಸಿದ್ದ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ (86) ದೀರ್ಘಕಾಲದಿಂದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಲಕ್ಷ್ಮೀಕಾಂತ್ ದೀಕ್ಷಿತ್ ಅವರು ವಾರಣಾಸಿಯ ಮೀರ್ ಘಾಟ್ ನ ಸಾಂಗೋದ್ ಕಾಲೇಜಿನಲ್ಲಿ ಹಿರಿಯ ಪ್ರಾಧ್ಯಾಪಕರಾಗಿದ್ದರು. ಆಚಾರ್ಯ ಲಕ್ಷ್ಮೀಕಾಂತ್ ಅವರು ಕಾಶಿಯ ಯಜುರ್ವೇದದ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರಾಗಿದ್ದು, ಆರಾಧನೆಯಲ್ಲೂ ಪರಿಣಿತರಾಗಿದ್ದರು. ಅವರು ತಮ್ಮ ಚಿಕ್ಕಪ್ಪ ಗಣೇಶ್ ದೀಕ್ಷಿತ್ ಭಟ್ ಅವರಿಂದ ವೇದಗಳು ಮತ್ತು ಆಚರಣೆಗಳಲ್ಲಿ ದೀಕ್ಷೆ ಪಡೆದು ಬಳಿಕ ಅವರ ಕುಟುಂಬವು ಹಲವಾರು ತಲೆಮಾರುಗಳ ಹಿಂದೆ ಕಾಶಿಯಲ್ಲಿ

ರಾಮ್ ಲಲ್ಲಾ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ಇನ್ನಿಲ್ಲ Read More »

ವೀರಮಂಗಲ ಶಾಲೆಗೆ ಯೋಗ ಟೀ ಶರ್ಟ್ ಕೊಡುಗೆ

ವೀರಮಂಗಲ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವೀರಮಂಗಲ ಇದರ ವತಿಯಿಂದ ಪಿಎಂಶ್ರೀ ವೀರಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ   ಯೋಗ ಟೀ ಶರ್ಟ್ ಕೊಡುಗೆಯಾಗಿ ನೀಡಲಾಯಿತು. ಪುತ್ತಿಲ ಪರಿವಾರದ ಮುಖ್ಯಸ್ಥರಾದ ಅರುಣ್ ಕುಮಾರ್ ಪುತ್ತಿಲ ಮಕ್ಕಳಿಗೆ ಟೀ ಶರ್ಟ್ ವಿತರಿಸಿ ಶುಭಹಾರೈಸಿದರು. ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರವಿಣ್ ಮಾರ್ತ, ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಮಹಾವಿಷ್ಣು ಸೇವಾ ಟ್ರಸ್ಟ್ ಆನಾಜೆ ಇದರ ಅಧ್ಯಕ್ಷ ಗೋಪಾಲಕೃಷ್ಣ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್  ನ ಟ್ರಸ್ಟಿಗಳು ಉಪಸ್ಥಿತರಿದ್ದರು. ಶಾಲಾ ವತಿಯಿಂದ

ವೀರಮಂಗಲ ಶಾಲೆಗೆ ಯೋಗ ಟೀ ಶರ್ಟ್ ಕೊಡುಗೆ Read More »

error: Content is protected !!
Scroll to Top