ನಾಳೆ ರೋಟರಿ ಸೆಂಟ್ರಲ್ ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಗೆ ರೋಟರಿ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಶಾಂತ್ ಕಾರಂತ್ ಫೆ. 14ರಂದು ಅಧಿಕೃತ ಭೇಟಿ ನೀಡಲಿದ್ದಾರೆ. ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ರವರು ರೋಟರಿ ಸೆಂಟ್ರಲ್ ಹಮ್ಮಿಕೊಳ್ಳಲಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಇದೇ ಸಂದರ್ಭ ಉದ್ಘಾಟಿಸಲಿದ್ದಾರೆ. ಸಂಜೆ ಬಪ್ಪಳಿಗೆ ಬೈಪಾಸ್ ರಸ್ತೆಯ ಆಶ್ಮಿ ಕಂಫರ್ಟ್ ಸಭಾಂಗಣದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಎ. ಜಗಜ್ಜೀವನ್ ದಾಸ್ ರೈ, ವಲಯ ಸೇನಾನಿ ಹರ್ಷಕುಮಾರ್ […]

ನಾಳೆ ರೋಟರಿ ಸೆಂಟ್ರಲ್ ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ Read More »

ಮಾಹಿತಿ ಪಡೆದುಕೊಳ್ಳಲು ಸವಣೂರು ಶಾಲಾ ವಿದ್ಯಾರ್ಥಿಗಳು ಸವಣೂರು ಗ್ರಾಪಂಗೆ ಭೇಟಿ

ಸವಣೂರು : ಸವಣೂರು ಉ ಹಿ ಪ್ರಾ ಶಾಲೆಯ ಆರನೇ ಮತ್ತು ಎ೦ಟನೇ ತರಗತಿಯ ವಿದ್ಯಾರ್ಥಿಗಳು ,ಸಾಮಾಜಿಕ ಅಧ್ಯಯನ ಪಾಠ, ಸ್ಥಳೀಯ ಸರಕಾರದ ಮಾಹಿತಿ. ಎಂಬುದರ ಬಗ್ಗೆ ಪ್ರಶ್ನಾವಳಿಯ ಕುರಿತ ಉತ್ತರ ಪಡೆಯಲು ಸವಣೂರು ಗ್ರಾಮ ಪಂಚಾಯಿತಿಗೆ ಸೋಮವಾರ ಭೇಟಿ ನೀಡಿದರು. ವಿದ್ಯಾರ್ಥಿಗಳು ಗ್ರಾಪಂ ಅಧ್ಯಕ್ಷೆ ರಾಜೀವಿ ಶೆಟ್ಟಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ  ಉತ್ತರ ಪಡೆದುಕೊಂಡರು.. ಗ್ರಾಮ ಸಭೆ, ವಾರ್ಡ್ ಸಭೆ,ಅಧ್ಯಕ್ಷರ  ಅಧಿಕಾರಗಳು, ಬೇಡಿಕೆಗಳು ಮತ್ತು ಅನುದಾನ ಮತ್ತು ವ್ಯಾಪ್ತಿಯ ಬಗ್ಗೆ ತಿಳಿಕೊಳ್ಳಲಾಯಿತು. ಸಭೆಯಲ್ಲಿ ಗ್ರಾಪಂ

ಮಾಹಿತಿ ಪಡೆದುಕೊಳ್ಳಲು ಸವಣೂರು ಶಾಲಾ ವಿದ್ಯಾರ್ಥಿಗಳು ಸವಣೂರು ಗ್ರಾಪಂಗೆ ಭೇಟಿ Read More »

ಬಸ್ – ಕಾರು ಮುಖಾಮುಖಿ ಡಿಕ್ಕಿ | ಮಗು ಸ್ಥಳದಲ್ಲೇ ಮೃತ್ಯು | ನಾಲ್ವರಿಗೆ ಗಂಭೀರ ಗಾಯ

ಪುತ್ತೂರು : ಕಾರು ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮಗುವೊಂದು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ದಾಳದಲ್ಲಿ ಸೋಮವಾರ ನಡೆದಿದೆ. ಮರ್ದಾಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕಾರು ಹಾಗೂ ಕೆಎಸ್ಆರ್ ಟಿಸಿ ಬಸ್ ಮರ್ದಾಳ ಸಮೀಪದ ಐತ್ತೂರು ಗ್ರಾಪಂ ಎದುರು ಡಿಕ್ಕಿ ಹೊಡೆದುಕೊಂಡಿದೆ. ಪರಿಣಾಮ  ಮಗು ಸ್ಥಳದಲ್ಲೇ  ಮೃತಪಟ್ಟಿದ್ದು, ಗಾಯಗೊಂಡ ನಾಲ್ವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಪುತ್ತೂರಿಗೆ ಕರೆದೊಯ್ಯಲಾಗಿದೆ. ಕಾರಿನಲ್ಲಿದ್ದವರು  ಬೆಂಗಳೂರು

ಬಸ್ – ಕಾರು ಮುಖಾಮುಖಿ ಡಿಕ್ಕಿ | ಮಗು ಸ್ಥಳದಲ್ಲೇ ಮೃತ್ಯು | ನಾಲ್ವರಿಗೆ ಗಂಭೀರ ಗಾಯ Read More »

ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ : ಆಸ್ಪತ್ರೆಗೆ ದಾಖಲು

ಪುತ್ತೂರು : ರಸ್ತೆ ಬದಿ ನಿಂತಿದ್ದ ಲಿಂಗಪ್ಪ ನಾಯ್ಕ ಅವರಿಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಭಾನುವಾರ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿಯಲ್ಲಿ ನಡೆದಿದೆ. ಬೈಕ್ ಸವಾರ ಲೋಕೇಶ್ ಎಂಬವರು ತನ್ನ ಬೈಕ್ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆ. ಲಿಂಗಪ್ಪ ನಾಯ್ಕರಿಗೆ ಮುಖ, ಭುಜ, ಕಾಲುಗಳಿಗೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಿಂಗಪ್ಪ ನಾಯ್ಕರು ನೀಡಿದ ದೂರಿನದಂತೆ ಪುತ್ತೂರು  ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ : ಆಸ್ಪತ್ರೆಗೆ ದಾಖಲು Read More »

ಅಮಿತ್ ಶಾ ಕಾರ್ಯಕ್ರಮ ಬಿಜೆಪಿ ಸಮಾವೇಶ : ಕಾಂಗ್ರೆಸ್ ಆರೋಪ

ಪುತ್ತೂರು : ಮುಂದಿನ ಚುನಾವಣೆ ವ್ಯವಸ್ಥೆಯ ಹಿನ್ನಲೆಯಲ್ಲಿ ಶನಿವಾರ ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿ ಮಾಡಿದ್ದು, ಹೊರತು ಪುತ್ತೂರಿನ ಜನತೆಗೆ ಬೇರೆ ಯಾವುದೇ ವಿಚಾರದಲ್ಲಿ ಪರಿಣಾಮ ಬೀರಿಲ್ಲ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಹೇಳಿದರು. ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಓರ್ವ ಪ್ರಮುಖ ವ್ಯಕ್ತಿ ಪುತ್ತೂರಿಗೆ ಬರುತ್ತಾರೆ ಎಂದ ಮೇಲೆ ರಸ್ತೆಗಳು ಶೀಘ್ರ ರಿಪೇರಿ, ಡಾಮರೀಕರಣ ಆಗುತ್ತದೆ. ಆದರೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಎಷ್ಟೋ

ಅಮಿತ್ ಶಾ ಕಾರ್ಯಕ್ರಮ ಬಿಜೆಪಿ ಸಮಾವೇಶ : ಕಾಂಗ್ರೆಸ್ ಆರೋಪ Read More »

ಆಂಧ್ರಪ್ರದೇಶದ ರಾಜ್ಯಪಾಲರಾಗಿ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ನೇಮಕ

ಪುತ್ತೂರು : ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಅವರನ್ನು ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಮೂಡಬಿದಿರೆ ಬೆಳುವಾಯಿ ನಿವಾಸಿಯಾದ ಎಸ್.ಅಬ್ದುಲ್ ನಝೀರ್ ಮೂದಬಿದ್ರೆ ಮಹಾವೀರ ಕಾಲೇಜಿನಲ್ಲಿ ಪದವಿ ಪೂರೈಸಿ, ಮಂಗಳೂರು ಎಸ್ ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. 2019 ರಲ್ಲಿ ಈಶ್ವರಮಂಗಲದ ಹನುಮಗಿರಿ ಕ್ಷೇತ್ರಕ್ಕೆ ತನ್ನ ಪತ್ನಿ ಸಮೇತ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಗಜಾನನ ವಿದ್ಯಾಸಂಸ್ಥೆಯ ಮಕ್ಕಳೊಂದಿಗೆ ಸಂವಿಧಾನದ ಆಶಯಗಳು ವಿಚಾರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆಂಧ್ರಪ್ರದೇಶದ ರಾಜ್ಯಪಾಲರಾಗಿ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ನೇಮಕ Read More »

ವಿವೇಕ ವೈಭವ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಕೃಷಿಯಂತ್ರ ಮೇಳ ಸಂಪನ್ನ

ಪುತ್ತೂರು : ಪ್ರತಿಷ್ಠಿತ ಕ್ಯಾಂಪ್ಕೋ ಲಿ., ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ( ಎಆರ್ ಡಿಎಫ್) ಹಾಗೂ ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸಂಯುಕ್ತ ಆಶ್ರಯದಲ್ಲಿ  ಮೂರು ದಿನಗಳಿಂದ ನೆಹರೂನಗರದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಬೃಹತ್ ಕೃಷಿಯಂತ್ರ ಮೇಳ ಹಾಗೂ ಕನಸಿನ ಮನೆ ವಿವೇಕ ವೈಭವ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಭಾನುವಾರ ಸಂಜೆ ಸಂಪನ್ನಗೊಂಡಿತು. ಈ ನಡುವೆ ವಿವಿಧ ಗೋಷ್ಠಿಗಳು ನಡೆದವು. ಕಳೆದ ಮೂರು ದಿನಗಳಿಂದ ಕೃಷಿಯಂತ್ರ ಮೇಳಕ್ಕೆ

ವಿವೇಕ ವೈಭವ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಕೃಷಿಯಂತ್ರ ಮೇಳ ಸಂಪನ್ನ Read More »

ಬನ್ನೂರು ಸ್ಪೂರ್ತಿ ಮೈದಾನದಲ್ಲಿ 18ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ | ಸ್ಪೂರ್ತಿ  ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭ

ಪುತ್ತೂರು : ಬನ್ನೂರು ಸ್ಪೂರ್ತಿ ಮೈದಾನದಲ್ಲಿರುವ ಶ್ರೀ ಶನಿದೇವರ ಸನ್ನಿಧಿಯಲ್ಲಿ 18ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಹಾಗೂ ಸ್ಪೂರ್ತಿ ಯುವಕ, ಯುವತಿ ಮಂಡಲ, ಮಹಿಳಾ ಮಂಡಲ ಹಾಗೂ ಬಾಲಸಭಾದ 33ನೇ ವಾರ್ಷಿಕೋತ್ಸವ ಶನಿವಾರ ನಡೆಯಿತು. ಕೆಮ್ಮಿಂಜೆ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಶನೀಶ್ವರ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಶ್ರೀ ಮಹಿಷಮರ್ದಿನಿ ಮಹಿಳಾ ಕುಣಿತ ಭಜನಾ ಮಂಡಳಿಯವರಿಂದ ಕುಣಿತ ಭಜನೆ, ಸಂಜೆ ಅಂಗನವಾಡಿ

ಬನ್ನೂರು ಸ್ಪೂರ್ತಿ ಮೈದಾನದಲ್ಲಿ 18ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ | ಸ್ಪೂರ್ತಿ  ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭ Read More »

ಚಹಾಪುಡಿ 1,600 ರೂ.; ಗೋದಿಹಿಟ್ಟು 1,000 ರೂ. | ದಿವಾಳಿಯಾಗಿರುವ ಪಾಕಿಸ್ಥಾನದಲ್ಲಿ ಆಹಾರಕ್ಕೂ ಅಭಾವ

ಕರಾಚಿ: ಪಾಕಿಸ್ಥಾನದಲ್ಲಿ 1 ಕೆಜಿ ಚಹಾಪುಡಿ ಬೆಲೆ 1600 ರೂ! ಆರ್ಥಿಕವಾಗಿ ದಿವಾಳಿಯಾಗಿ ತತ್ತರಿಸುತ್ತಿರುವ ಪಾಕ್‌ನಲ್ಲೀಗ ಜನರಿಗೆ ನಿತ್ಯ ಬಳಕೆಯ ಆಹಾರ ವಸ್ತುಗಳು ಕೂಡ ಬೆಲೆ ಏರಿಕೆಯಿಂದಾಗಿ ಐಷರಾಮಿ ವಸ್ತುಗಳಾಗಿವೆ. 15 ದಿನಗಳ ಹಿಂದೆ ಕೆಜಿಗೆ 1,100 ರೂ. ಇದ್ದ ಚಹಾಪುಡಿ ಬೆಲೆ ಇದೀಗ 1600 ರೂ. ದಾಟಿದೆ. ಕಳೆದ ಡಿಸೆಂಬರ್‌ನಿಂದಲೂ ಬಂದರಿನಲ್ಲೇ ಉಳಿದುಕೊಂಡಿರುವ ಆಮದಾದ ಚಹಾಪುಡಿ ಶೀಘ್ರವೇ ಮಾರುಕಟ್ಟೆಗೆ ಬರದೇ ಇದ್ದರೆ ರಮ್ಜಾನ್‌ ವೇಳೆಗೆ ಬೆಲೆ 2,500 ರೂ. ದಾಟಬಹುದು ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಚಹಾಪುಡಿ 1,600 ರೂ.; ಗೋದಿಹಿಟ್ಟು 1,000 ರೂ. | ದಿವಾಳಿಯಾಗಿರುವ ಪಾಕಿಸ್ಥಾನದಲ್ಲಿ ಆಹಾರಕ್ಕೂ ಅಭಾವ Read More »

ನಮ್ಮ ಮೇಲೆ ನಂಬಿಕೆಯಿದ್ದರೆ ಬಿಜೆಪಿಗೆ ಓಟು ಹಾಕಿ! | ಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಮತ್ತೆ ಯಡವಟ್ಟು

ಬೆಂಗಳೂರು : ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಿಜೆಪಿಗೆ ಮತ ಕೇಳಿರುವ ಘಟನೆ ವಿಜಯಪುರದ ಪ್ರಜಾಧ್ವನಿ ಯಾತ್ರೆಯಲ್ಲಿ ನಡೆದಿದೆ. ವಿಜಯಪುರದ ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ನಮ್ಮ ಮೇಲೆ ನಂಬಿಕೆಯಿದ್ದರೆ ಬಿಜೆಪಿಗೆ ಮತ ಹಾಕಿ, ಬಿಜೆಪಿಗೆ ಮತ ಹಾಕಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ವೀಡಿಯೊ ತುಣುಕು ನಿನ್ನೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್‌ ಆಗಿದ್ದು, ವಿರೋಧಿಗಳ ಬಾಯಿಯಿಂದ ಕೆಲವೊಮ್ಮೆ ತಪ್ಪಿಯಾದರೂ ಸತ್ಯ ಹೊರಬರುತ್ತದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ನಾವು

ನಮ್ಮ ಮೇಲೆ ನಂಬಿಕೆಯಿದ್ದರೆ ಬಿಜೆಪಿಗೆ ಓಟು ಹಾಕಿ! | ಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಮತ್ತೆ ಯಡವಟ್ಟು Read More »

error: Content is protected !!
Scroll to Top