ಕಾಂಗ್ರೆಸ್ ಕಾರ್ಯಕರ್ತರಿಂದ ರಸ್ತೆ ತಡೆ | ಹಲವಾರು ಕಾರ್ಯಕರ್ತರು ಪೊಲೀಸ್ ‌ ವಶಕ್ಕೆ

ಮಂಗಳೂರು: ರಾಹುಲ್ ಗಾಂಧಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಶಾಸಕ ಭರತ್ ಶೆಟ್ಟಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು  ಕಾವೂರು ಜಂಕ್ಷನ್ ನಲ್ಲಿ‌ ಪ್ರತಿಭಟನೆ ನಡೆಸಿದ್ದರ ಪರಿಣಾಮ ಹಲವಾರು ಮಂದಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಇಂದು ನಡೆದಿದೆ. ಬಿಜೆಪಿ ಕಚೇರಿಗೆ ನುಗ್ಗಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದಾಗ ರಸ್ತೆ ತಡೆಯಲ್ಲಿ ನಿರತರಾದರು. ತಕ್ಷಣ ನೂರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಮಾತನಾಡಿ, ಬಿಜೆಪಿಯ […]

ಕಾಂಗ್ರೆಸ್ ಕಾರ್ಯಕರ್ತರಿಂದ ರಸ್ತೆ ತಡೆ | ಹಲವಾರು ಕಾರ್ಯಕರ್ತರು ಪೊಲೀಸ್ ‌ ವಶಕ್ಕೆ Read More »

‘ಪ್ರಿಂಟ್ ಹೌಸ್’ ಸ್ಥಳಾಂತರಗೊಂಡು ಶುಭಾರಂಭ

ಪುತ್ತೂರು: ಬೊಳುವಾರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಪ್ರಿಂಟ್ ಹೌಸ್’ ಸಂಸ್ಥೆ ಹೊಸ ತಂತ್ರಜ್ಞಾನದೊಂದಿಗೆ ಸ್ಥಳಾಂತರಗೊಂಡು ಇಂದು ನೆಹರುನಗರದ ಅಶ್ವಿನಿ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಶುಭಾರಂಭಗೊಂಡಿತು. ಮಂಗಳೂರು ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್ ಮಾಲಕ ಅಜಯ್ ನಾಯಕ್ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪುತ್ತೂರು ಮುಳಿಯ ಜ್ಯುವೆಲ್ಲರ್ಸ್ ನ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮಾಣಿ ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಪಿ. ಶೆಟ್ಟಿ, ಪುತ್ತೂರು ಯೂನಿಯನ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ

‘ಪ್ರಿಂಟ್ ಹೌಸ್’ ಸ್ಥಳಾಂತರಗೊಂಡು ಶುಭಾರಂಭ Read More »

ಮಂಗಳೂರಿನಲ್ಲಿ ಉದ್ಯಮಿ ಒಕ್ಕಲಿಗ ಕಚೇರಿ ಶುಭಾರಂಭ

ಮಂಗಳೂರು: ಉದ್ಯಮಿ ಒಕ್ಕಲಿಗ ಕಚೇರಿ ಇಂದು ಮಂಗಳೂರಿನಲ್ಲಿ ಶುಭಾರಂಭಗೊಂಡಿತು. ಉದ್ಯಮಿ ಒಕ್ಕಲಿಗ ಸಂಸ್ಥೆ ಕಳೆದ 2 ವರ್ಷಗಳಿಂದ ಬೆಂಗಳೂರು ಮತ್ತು ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕಳೆದ ವರ್ಷದಲ್ಲಿ ಸಾವಿರ ಕೋಟಿಗೂ ಅಧಿಕ ವಹಿವಾಟು ನಡೆಸಿ ಒಕ್ಕಲಿಗರನ್ನು ಉದ್ಯಮ ಕ್ಷೇತ್ರದಲ್ಲಿ ಬೆಳೆಸಲು ಈ ಸಂಸ್ಥೆ ಶ್ರಮವಹಿಸುತ್ತಿದೆ. ಒಕ್ಕಲಿಗರು ನಡೆಸಿದ ಉದ್ಯಮವನ್ನು ಬೇರೆ ಬೇರೆ ಸ್ಥಳಗಳಿಗೆ ವಿಸ್ತರಿಸಲು ಸಂಸ್ಥೆ ಸಹಕರಿಸುತ್ತಿದೆ. ಶುಭಾರಂಭ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಕೇಶವ ಗೌಡ, ಉಪಾಧ್ಯಕ್ಷ ಆನಂದ ಪಿ. ಹೆಚ್ ನರಿಯ, ಕಾರ್ಯದರ್ಶಿ ಸುಂದರ ಗೌಡ

ಮಂಗಳೂರಿನಲ್ಲಿ ಉದ್ಯಮಿ ಒಕ್ಕಲಿಗ ಕಚೇರಿ ಶುಭಾರಂಭ Read More »

ಟೀಂ ಇಂಡಿಯಾ ತಂಡದ ರಾಘವೇಂದ್ರ ಸುಬ್ರಹ್ಮಣ್ಯಕ್ಕೆ ಭೇಟಿ

ಸುಬ್ರಹ್ಮಣ್ಯ: ಭಾರತ ಕ್ರಿಕೆಟ್ ತಂಡ ಇತ್ತೀಚೆಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಬೆನ್ನಲ್ಲೆ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಜು.09ರಂದು ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದೀಗ ಅದೇ ತಂಡದ ಮತ್ತೊಬ್ಬ ಆಟಗಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಟೀಂ ಇಂಡಿಯಾ ಯಶಸ್ವಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ತಂಡದ ಥ್ರೋಡೌನ್ ಪರಿಣತ ರಾಘವೇಂದ್ರ ಅವರು ಜು.10ರಂದು ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ

ಟೀಂ ಇಂಡಿಯಾ ತಂಡದ ರಾಘವೇಂದ್ರ ಸುಬ್ರಹ್ಮಣ್ಯಕ್ಕೆ ಭೇಟಿ Read More »

ಕಬಕ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ | ನಾಯಿಯೊಂದನ್ನು ಎಳೆದೊಯ್ದ ಚಿರತೆ

ಪುತ್ತೂರು: ಕಬಕ ಪರಿಸರದಲ್ಲಿ ಚಿರತೆ ಪತ್ತೆಯಾಗಿದೆ ಎಂಬ ವದಂತಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸಂದೇಶಗಳು ಹರಿದಾಡುತ್ತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಕಬಕ ಪರಿಸರದ ಗ್ರಾಮಕರಣಿಕರ ಕಚೇರಿ ಕುಳ ಆಫೀಸ್ ನ ಬಳಿ ಬುಧವಾರ ರಾತ್ರಿ ಬಹಳ ದೊಡ್ಡಗಾತ್ರದ ಚಿರತೆ ಪ್ರತ್ಯಕ್ಷ ವಾಗಿದೆ. ಒಂದು ನಾಯಿಯನ್ನು ಕೊಂಡು ಹೋಗಿದ್ದು ಕೆಲದಿನಗಳಿಂದ ಈ ಪರಿಸರದಿಂದ ಕಾಣೆಯಾಗುತ್ತಿದ್ದ ನಾಯಿಗಳ ಬಗ್ಗೆ ಇದ್ದ ಅನುಮಾನಗಳಿಗೆ ಉತ್ತರ ಸಿಕ್ಕಿದೆ. ಕಣ್ಣಾರೇ ನೋಡಿದವರ ಪ್ರಕಾರ ಬಹಳ ದೊಡ್ಡ ಗಾತ್ರದ ಚಿರತೆ ಇದಾಗಿದೆ. ನಿನ್ನೆ ಮಳೆ

ಕಬಕ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ | ನಾಯಿಯೊಂದನ್ನು ಎಳೆದೊಯ್ದ ಚಿರತೆ Read More »

ಬ್ಲ್ಯಾಕ್ ಮೇಲ್ ಮೂಲಕ ಹಣ ಸುಲಿಗೆ | ಕಾಣೆಯಾಗಿದ್ದ ನಿರೂಪಕಿ ದಿವ್ಯಾ ಬಂಧನ

ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಯತ್ನ ಮಾಡಿರುವ ಆರೋಪದ ಬೆನ್ನಲ್ಲೇ ಕಾಣೆಯಾಗಿದ್ದ ನಿರೂಪಕಿ ದಿವ್ಯ ವಸಂತ ಬಂಧನವಾಗಿದೆ. ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ದಿವ್ಯ ವಸಂತ ಮತ್ತು ಗ್ಯಾಂಗ್ ನಿಂದ ಇಂದಿರಾನಗರದಲ್ಲಿರುವ ಸ್ಪಾ ಮಾಲೀಕನಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಯತ್ನ ಪ್ರಕರಣ ಇದಾಗಿದ್ದು, ಈ ಕೇಸ್ ನಲ್ಲಿ ತಮ್ಮನ ಬಂಧನ ನಂತರ ಪರಾರಿಯಾಗಿ ತಲೆಮರೆಸಿಕೊಂಡಿದ್ದ ದಿವ್ಯ ವಸಂತ ಕೇರಳದಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಒಂದು ವಾರದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ದಿವ್ಯ ತಮಿಳುನಾಡಿನಿಂದ

ಬ್ಲ್ಯಾಕ್ ಮೇಲ್ ಮೂಲಕ ಹಣ ಸುಲಿಗೆ | ಕಾಣೆಯಾಗಿದ್ದ ನಿರೂಪಕಿ ದಿವ್ಯಾ ಬಂಧನ Read More »

ಪುತ್ತೂರು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ರಾಮನಗರ ಜಿಲ್ಲೆಗೆ ವರ್ಗಾವಣೆ

ಪುತ್ತೂರು: ಪುತ್ತೂರು ತಾಲೂಕಿನಲ್ಲಿ ಗ್ರೂಪ್ ‘ಬಿ’ ಹುದ್ದೆಯಾದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸುಂದರ ಗೌಡರವರು ಇದೀಗ ಗ್ರೂಪ್ ‘ಎ’ ಹುದ್ದೆಯಾದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಮುಂಭಡ್ತಿಗೊಂಡು ರಾಮನಗರ ಜಿಲ್ಲೆಗೆ ವರ್ಗಾವಣೆಗೊಂಡು ಆದೇಶ ಹೊರಡಿಸಲಾಗಿದೆ. ಸುಂದರ ಗೌಡರವರು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ 10 ವರ್ಷ, ಶಿವರಾಮ ಕಾರಂತ ಪ್ರೌಢಶಾಲೆಯಲ್ಲಿ 11 ವರ್ಷ, ಅಜ್ಜಾವರ ಪ್ರೌಢಶಾಲೆಯಲ್ಲಿ 9 ವರ್ಷ ಸೇವೆ ಸಲ್ಲಿಸಿರುತ್ತಾರೆ. ಇವರು ತಮ್ಮ ಬಿಪಿಎಡ್ ಶಿಕ್ಷಣದಲ್ಲಿ ಮೂರನೇ, ಎಂಪಿಎಡ್ ಶಿಕ್ಷಣದಲ್ಲಿ ಎರಡನೇ ರ್ಯಾಂಕ್ ಗಳಿಸಿರುತ್ತಾರೆ. ಸುಂದರ

ಪುತ್ತೂರು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ರಾಮನಗರ ಜಿಲ್ಲೆಗೆ ವರ್ಗಾವಣೆ Read More »

ಜು.13 : ಡಾ.ಎಲ್‍.ಎಚ್‍.ಮಂಜುನಾಥ್‍ ರಿಗೆ ಅಭಿನಂದನಾ ಕಾರ್ಯಕ್ರಮ

ಪುತ್ತೂರು: ಅಖಿಲ ಕರ್ನಾಟಕ ಜನಜಾಗೃತಿ ಜಿಲ್ಲಾ ವೇದಿಕೆ ಹಾಗೂ ಪುತ್ತೂರು ತಾಲೂಕು ಜನಜಾಗೃತಿ ವೇದಿಕೆ ಜಂಟಿ ಆಶ್ರಯದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕಳೆದ 23 ವರ್ಷಗಳ ಕಾಲ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ.ಎಲ್‍.ಎಚ್‍.ಮಂಜುನಾಥ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಜು.13 ಶನಿವಾರ ಸಾಲ್ಮರ ಕೊಟೇಚಾ ಹಾಲ್‍ ನಲ್ಲಿ ನಡೆಯಲಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದ.ಕ.ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,

ಜು.13 : ಡಾ.ಎಲ್‍.ಎಚ್‍.ಮಂಜುನಾಥ್‍ ರಿಗೆ ಅಭಿನಂದನಾ ಕಾರ್ಯಕ್ರಮ Read More »

ರಾಜ್ಯ ಸರಕಾರ ಸುಳ್ಳನ್ನು ಸತ್ಯ ಎಂದು ಬಿಂಬಿಸಿ ಜನರನ್ನು ತಪ್ಪು ದಾರಿಗೆಳೆಯುತ್ತಿದೆ | ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು | ಡೆಂಗ್ಯೂ ಜ್ವರ ಹರಡದಂತೆ ತಡೆಗಟ್ಟುವಲ್ಲಿ ಸರಕಾರ ವಿಫಲವಾಗಿದೆ

ಪುತ್ತೂರು: ರಾಜ್ಯಸರಕಾರ, ಸಚಿವರು ಸೇರಿದಂತೆ ಶಾಸಕರು ಅಭಿವೃದ್ಧಿಯ ವಿಚಾರದಲ್ಲಿ ಸುಳ್ಳು ಹೇಳಿಕೊಂಡು ಸುಳ್ಳನ್ನು ಸತ್ಯ ಎಂದು ಬಿಂಬಿಸುತ್ತಿದ್ದು, ಜನತೆ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿನ್ನೆ ಪುತ್ತೂರು ತಾಲೂಕಿನ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪುತ್ತೂರು ಶಾಸಕರು, ಕಳೆದ ನಾಲ್ಕು ವರ್ಷಗಳಿಂದ ಒಂದೇ ಒಂದು ಮನೆ ಮಂಜೂರುಗೊಂಡಿಲ್ಲ ಎಂದು ಹೇಳಿಕೆ ನೀಡಿದ್ದು, ಈ ರೀತಿ ತಪ್ಪು ಸಂದೇಶ ನೀಡುವುದನ್ನು ಬಿಟ್ಟು

ರಾಜ್ಯ ಸರಕಾರ ಸುಳ್ಳನ್ನು ಸತ್ಯ ಎಂದು ಬಿಂಬಿಸಿ ಜನರನ್ನು ತಪ್ಪು ದಾರಿಗೆಳೆಯುತ್ತಿದೆ | ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು | ಡೆಂಗ್ಯೂ ಜ್ವರ ಹರಡದಂತೆ ತಡೆಗಟ್ಟುವಲ್ಲಿ ಸರಕಾರ ವಿಫಲವಾಗಿದೆ Read More »

ಗಾಯಕ, ವೈದ್ಯ ಡಾ.ಸತೀಶ್ ಪೂಜಾರಿ ನಿಧನ

ಉಡುಪಿ : ಕೋಟದ ಶ್ರೀ ಮಾತಾ ಆಸ್ಪತ್ರೆಯ ಮಾಲಕ ಡಾ.ಸತೀಶ್ ಪೂಜಾರಿ (54) ಹೃದಯಾಘಾತದಿಂದ ಕೋಟತಟ್ಟು ಮಣೂರಿನ ಸ್ವಗೃಹದಲ್ಲಿ ಗುರುವಾರ ಬೆಳಗ್ಗೆ ನಿಧನರಾದರು. ಕುಂದಾಪುರದ ಶ್ರೀ ಮಾತಾ ಆಸ್ಪತ್ರೆ ಮಾಲೀಕರಾಗಿದ್ದ ಇವರು ಕಲಾವಿದರೂ ಆಗಿದ್ದರು ಹಾಗೂ ಮನಸ್ಮಿತಾ ಫೌಂಡೇಷನ್ ಹಾಗೂ ಇನ್ನಿತರ ಸಂಸ್ಥೆಗಳಲ್ಲೂ ಇದ್ದರು. ಇಎನ್‌ಟಿ ತಜ್ಞರಾಗಿದ್ದ ಡಾ. ಸತೀಶ್ ಅತ್ಯುತ್ತಮ ಗಾಯಕರಾಗಿದ್ದು, ಅನೇಕ ಸಂಗೀತ ವೀಡಿಯೊಗಳನ್ನು, ಆಲ್ಬಂಗಳನ್ನು ಹೊರತಂದಿದ್ದರು. ಸಂಗೀತ ರಸಮಂಜರಿಗಳಲ್ಲಿ ಹಾಡುತ್ತಿದ್ದರು. ಗಾಯಕಿ ಎಸ್‌. ಜಾನಕಿಯವರ ಅಭಿಮಾನಿಯಾಗಿದ್ದ ಡಾ.ಸತೀಶ್ ಪೂಜಾರಿ ವರ್ಷಂಪ್ರತಿ ಕೋಟೇಶ್ವರದಲ್ಲಿ ಡಾ.ಎಸ್‌.ಜಾನಕಿ

ಗಾಯಕ, ವೈದ್ಯ ಡಾ.ಸತೀಶ್ ಪೂಜಾರಿ ನಿಧನ Read More »

error: Content is protected !!
Scroll to Top