ಭೂಕುಸಿತದಿಂದ ನೇಪಾಳದಲ್ಲಿ 7 ಭಾರತೀಯರು ನಾಪತ್ತೆ | ಜೀವ ಉಳಿಸಿಕೊಳ್ಳಲು ಬಸ್ಸಿನಿಂದ ಹಾರಿದ ಮೂವರು

ನೇಪಾಳ: ಭಾರೀ ಭೂಕುಸಿತದ ಸಂದರ್ಭದಲ್ಲಿ ಎರಡು ಬಸ್ಸುಗಳು ತ್ರಿಶೂಲಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿ, ಏಳು ಮಂದಿ ಭಾರತೀಯರು ಸೇರಿದಂತೆ 65 ಮಂದಿ ನಾಪತ್ತೆಯಾದ ಘಟನೆ ನೇಪಾಳದ ಚಿತ್ವಾನ್‌ ಎಂಬ ಪ್ರದೇಶದಲ್ಲಿ ನಡೆದಿದೆ. ಏಂಜೆಲ್ ಬಸ್ ಮತ್ತು ಗಣಪತಿ ಡಿಲಕ್ಸ್ ಬಸ್‌ಗಳು ಗೌರ್ ಮಾರ್ಗವಾಗಿ ಕಲ್ಮಂಡುವಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬೆಳಿಗ್ಗೆ 3.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ನಾರಾಯಣಘಾಟ್- ಮುಗ್ಗಿಂಗ್ ರಸ್ತೆಯ ಸಿಮಾಲ್‌ಲಾಲ್ ಪ್ರದೇಶದಲ್ಲಿ ತುಂಬಿ ಹರಿಯುತ್ತಿದ್ದ ನದಿಗೆ ಭೂಕುಸಿತದಿಂದಾಗಿ ಪ್ರಯಾಣಿಕರು ತಳ್ಳಲ್ಪಟ್ಟರು ಎನ್ನಲಾಗಿದೆ. ಈ ಪೈಕಿ ಏಳು […]

ಭೂಕುಸಿತದಿಂದ ನೇಪಾಳದಲ್ಲಿ 7 ಭಾರತೀಯರು ನಾಪತ್ತೆ | ಜೀವ ಉಳಿಸಿಕೊಳ್ಳಲು ಬಸ್ಸಿನಿಂದ ಹಾರಿದ ಮೂವರು Read More »

ಪುತ್ತೂರಿನಿಂದ ಕಾಟುಕುಕ್ಕೆಗೆ ಬಸ್ ಸೇವೆ | ಸಾರಿಗೆ ಇಲಾಖೆ ಕಮಿಷನರ್ ಜೊತೆ ಅಶೋಕ್ ರೈ ಮಾತುಕತೆ

ಪುತ್ತೂರು: ಪುತ್ತೂರಿನಿಂದ ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಪ್ರಾರಂಭ ಮಾಡುವಲ್ಲಿ ಇಲಾಖೆಯ ಅನುಮತಿಯ ಕುರಿತು ಸಾರಿಗೆ ಇಲಾಖೆಯ‌ ಕಮಿಷನರ್ ಯೋಗಿಶ್ ರವರ ಜೊತೆ ಶಾಸಕ ಅಶೋಕ್ ರೈ ಮಾತುಕತೆ ನಡೆಸಿದ್ದಾರೆ. ಕಾಟುಕುಕ್ಕೆಗೆ ಅಂತರಾಜ್ಯ ಬಸ್ ಸೇವೆಗೆ ಪರವಾನಿಗೆ ಅಗತ್ಯವಾಗಿದೆ. ಈ ಹಿಂದೆ ಕಾಟುಕುಕ್ಕೆಗೆ ಇದ್ದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕಾಸರಗೋಡು ಜಿಲ್ಲೆಯಿಂದ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿಗೆ ಅನೇಕ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರುತ್ತಿದ್ದು ಬಸ್ ಸಂಚಾರವಿಲ್ಲದ ಕಾರಣ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ. ಶೀಘ್ರವೇ ಅಂತರಾಜ್ಯ ಪರವಾನಿಗೆಯನ್ನು

ಪುತ್ತೂರಿನಿಂದ ಕಾಟುಕುಕ್ಕೆಗೆ ಬಸ್ ಸೇವೆ | ಸಾರಿಗೆ ಇಲಾಖೆ ಕಮಿಷನರ್ ಜೊತೆ ಅಶೋಕ್ ರೈ ಮಾತುಕತೆ Read More »

ಸಿ.ಎ ಗ್ರೂಪ್ 1 ಹಾಗೂ 2 ಪರೀಕ್ಷೆ ತೇರ್ಗಡೆಯಾದ ಅಂಬಿಕಾ ಮಹಾವಿದ್ಯಾಲಯದ ಸಿಂಚನಾ

ಪುತ್ತೂರು: ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಸಿಂಚನಾ ಎಂ. ಭಾರತೀಯ ಲೆಕ್ಕ ಪರಿಶೋಧನಾ ಮಂಡಳಿಯು (ಐಸಿಎಐ) ಮೇ 2024ರಲ್ಲಿ ನಡೆಸಿದ ಸಿ.ಎ. ಇಂಟರ್ ಗ್ರೂಪ್ ಪರೀಕ್ಷೆಯ ಗ್ರೂಪ್ 1 ಹಾಗೂ ಗ್ರೂಪ್ 2 ವಿಭಾಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾರೆ. ಸಿಂಚನಾ ಅವರು ಸುಳ್ಯದ ಐವತ್ತೊಕ್ಲು ಗ್ರಾಮದ ದಿ.ಸೀತಾರಾಮ ಎಂ. ಹಾಗೂ ಸರೋಜಾ ದಂಪತಿ ಪುತ್ರಿ. ಕಳೆದ ಕೆಲವು ವರ್ಷಗಳಿಂದ ಅಂಬಿಕಾ ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯಗಳಲ್ಲಿ ಸಿಎ ಪರೀಕ್ಷೆಗಳಿಗೆ ತರಬೇತಿ

ಸಿ.ಎ ಗ್ರೂಪ್ 1 ಹಾಗೂ 2 ಪರೀಕ್ಷೆ ತೇರ್ಗಡೆಯಾದ ಅಂಬಿಕಾ ಮಹಾವಿದ್ಯಾಲಯದ ಸಿಂಚನಾ Read More »

ಗರುಡ ಗ್ಯಾಂಗ್‍ ಸದಸ್ಯರಿಗೆ ಆರ್ಥಿಕ ನೆರವು | ಉಪ್ಪಿನಂಗಡಿ ಮೂಲದ ಯುವತಿ ಬಂಧನ

ಉಡುಪಿ : ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ನೀಡಿದ್ದ ದಕ್ಷಿಣ ಕನ್ನಡ ಮೂಲದ ಉಪ್ಪಿನಂಗಡಿಯ ಯುವತಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಉಪ್ಪಿನಂಗಡಿ ಮೂಲದ ಶಫೀರಾ (21) ಬಂಧಿತ ಯುವತಿ. ಬಂಧಿತೆಯು ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ಮತ್ತು ಆಶ್ರಯ ವ್ಯವಸ್ಥೆ ಮಾಡಿದ್ದಳು. ಗ್ಯಾಂಗ್ ಸದಸ್ಯರಿಗೆ ಮೊಬೈಲ್ ಫೋನ್ ನೀಡಿ ಹಣ ವರ್ಗಾವಣೆ ಮಾಡಿರುವ ಆರೋಪವೂ ಬಂಧಿತೆ ಶಫೀರಾ ಮೇಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ. ಈ ಗರುಡ ಗ್ಯಾಂಗ್‌ನ

ಗರುಡ ಗ್ಯಾಂಗ್‍ ಸದಸ್ಯರಿಗೆ ಆರ್ಥಿಕ ನೆರವು | ಉಪ್ಪಿನಂಗಡಿ ಮೂಲದ ಯುವತಿ ಬಂಧನ Read More »

ಗಾಂಜಾ ಸಾಗಾಟ ಪ್ರಕರಣ | ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಸುಳ್ಯ ನ್ಯಾಯಾಲಯ

ಸುಳ್ಯ: ಗಾಂಜಾ ಸಾಗಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಇಬ್ಬರಿಗೆ ಸುಳ್ಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 2018ರ ಮಾರ್ಚ್ 28 ರಂದು ಸುಳ್ಯ ಗಾಂಧಿನಗರ ಶಾಲಾ ಕ್ರಾಸ್ ಬಳಿ ಮೋಟಾರು ಸೈಕಲ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿ ಪಿ.ಎಂ. ಮೊಯಿದ್ದೀನ್ ಮತ್ತು ಮುರಳಿ ಸಿ. ಅವರನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯ ಇಬ್ಬರೂ ಆರೋಪಿಗಳು ಮಾಡಿರುವ ಅಪರಾಧ ಸಾಬೀತಾಗಿದ್ದು ಇಬ್ಬರನ್ನೂ ದೋಷಿಯೆಂದು ಘೋಷಿಸಿ ಜು.11 ರಂದು ಇಬ್ಬರೂ ಅಪರಾಧಿಗಳಿಗೆ

ಗಾಂಜಾ ಸಾಗಾಟ ಪ್ರಕರಣ | ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಸುಳ್ಯ ನ್ಯಾಯಾಲಯ Read More »

ಬಸ್ – ಲಾರಿ ಭೀಕರ ಅಪಘಾತ l 9 ಮಂದಿ ಮೃತ್ಯು

ಕೋಲಾರ: ಬೆಂಗಳೂರಿನಿಂದ ತಿರುಪತಿಗೆ ಹೊರಟಿದ್ದ ಬಸ್‌ಗೆ ಕೋಲಾರದ ಬಳಿ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಮೃತಪಟ್ಟಿದ್ದು, 15ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಸದ್ಯ ಪೊಲೀಸ್‌ ತಂಡ ಸ್ಥಳಕ್ಕೆ ಭೇಟಿ ಕೊಟ್ಟು, ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಬಸ್ – ಲಾರಿ ಭೀಕರ ಅಪಘಾತ l 9 ಮಂದಿ ಮೃತ್ಯು Read More »

ಬಿಎಮ್ಎಸ್ ಅಖಿಲ ಭಾರತೀಯ ಅಧ್ಯಕ್ಷ ಹಿರಣ್ಮಯಿ ಪಾಂಡ್ಯ ಪುತ್ತೂರಿಗೆ ಭೇಟಿ

ಪುತ್ತೂರು: ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತೀಯ ಅಧ್ಯಕ್ಷರಾದ ಹಿರಣ್ಮಯಿ ಪಾಂಡ್ಯ ಅವರು ದಕ್ಷಿಣ ಕನ್ನಡ ಜಿಲ್ಲಾ ಬಿಎಮ್ಎಸ್ ಕಚೇರಿಗೆ ಭೇಟಿ ನೀಡಿದರು. ಸಂಘದ ಸದಸ್ಯರನ್ನು ಉದ್ದೇಶಿಸಿ ಮಾರ್ಗದರ್ಶನವನ್ನು ಮಾಡಿದರು. ಈ ಸಂದರ್ಭದಲ್ಲಿ ಹೆಚ್ ಎಲ್ ವಿಶ್ವನಾಥ್ ಅವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಎಮ್ಎಸ್ ನ ಅಧ್ಯಕ್ಷರಾದ ವಕೀಲರಾದ ಅನಿಲ್ ಕುಮಾರ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಕಾಸರಗೋಡು ಜಿಲ್ಲಾ ಬಿಎಮ್ಎಸ್ ನ ಅಧ್ಯಕ್ಷರಾದ ಉಪೇಂದ್ರ ಅವರು ಉಪಸ್ಥಿತರಿದ್ದರು. ಜಿಲ್ ಬಿ ಎಂ ಎಸ್ ನ

ಬಿಎಮ್ಎಸ್ ಅಖಿಲ ಭಾರತೀಯ ಅಧ್ಯಕ್ಷ ಹಿರಣ್ಮಯಿ ಪಾಂಡ್ಯ ಪುತ್ತೂರಿಗೆ ಭೇಟಿ Read More »

ಹಳಿ ದಾಟುತ್ತಿದ್ದ ಆನೆಗೆ ರೈಲು ಡಿಕ್ಕಿ | ಕಾಲು ಕಳೆದುಕೊಂಡು ತೆವಳುತ್ತಾ ಸಾಗಿ ಪ್ರಾಣಬಿಟ್ಟ ಆನೆ

ಅಸ್ಸಾಂ: ಹಳಿ ದಾಟುತ್ತಿದ್ದ ಆನೆಯೊಂದಕ್ಕೆ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಜಾಗಿರೋಡ್ ರೈಲು ನಿಲ್ದಾಣದ ಸಮೀಪದಲ್ಲಿ ನಡೆದಿದೆ. ಆನೆಗೆ ರೈಲು ಡಿಕ್ಕಿಯಾದ ಪರಿಣಾಮ 2 ಕಾಲು ಕಳೆದುಕೊಂಡ ಆನೆ ತೆವಳುತ್ತಾ ಸಾಗಿ ಪ್ರಾಣಬಿಟ್ಟಿದೆ. ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ವೇಗವಾಗಿ ತೆರಳುತ್ತಿದ್ದ ವೇಳೆ ಎರಡು ಆನೆಗಳು ಹಳಿ ದಾಟುತ್ತಿತ್ತು. ಒಂದು ಆನೆ ಕೂದಲೆಳೆಯುವ ಅಂತರದಲ್ಲಿ ಹಳಿ ದಾಟಿದರೆ ಅದರ ಹಿಂದಿದ್ದ ಈ ಆನೆಗೆ ರೈಲು ಡಿಕ್ಕಿಯಾಗಿದೆ. ರೈಲು ಡಿಕ್ಕಿಯಾದ ಪರಿಣಾಮ ಆನೆ ಗಂಭೀರವಾಗಿ ಗಾಯಗೊಂಡಿದೆ.

ಹಳಿ ದಾಟುತ್ತಿದ್ದ ಆನೆಗೆ ರೈಲು ಡಿಕ್ಕಿ | ಕಾಲು ಕಳೆದುಕೊಂಡು ತೆವಳುತ್ತಾ ಸಾಗಿ ಪ್ರಾಣಬಿಟ್ಟ ಆನೆ Read More »

ರಸ್ತೆ ಬದಿ ಕಸ ಬಿಸಾಡಿದ ವ್ಯಕ್ತಿ | ದಂಡ ವಿಧಿಸಿದ ಗ್ರಾಮ ಪಂಚಾಯಿತಿ

ಉಪ್ಪಿನಂಗಡಿ: ಪುತ್ತೂರು ತಾಲೂಕಿನ 34ನೆಕ್ಕಿಲಾಡಿ ಪಂಚಾಯತ್ ವ್ಯಾಪ್ತಿಯ ಕರ್ವೆಲ್ -ಶಾಂತಿ ನಗರ ರಸ್ತೆಯಲ್ಲಿ ರಸ್ತೆ ಬದಿ ಎಸೆದ ವ್ಯಕ್ತಿಯೊಬ್ಬರಿಗೆ ಪಂಚಾಯಿತಿ ದಂಡ ವಿಧಿಸಿದೆ. ಪೆರ್ನೆ ಪಂಚಾಯತ್ ವ್ಯಾಪ್ತಿಯ  ಕರ್ವೆಲ್ ನಿವಾಸಿ ಬದ್ರುದ್ದಿನ್, ಅಬ್ದುಲ್ ರಹಿಮಾನ್ ರಸ್ತೆ ಬದಿ ಕಸ ಬಿಸಾಡಿ ಹೋಗಿದ್ದು ಅದನ್ನ 34ನೆಕ್ಕಿಲಾಡಿ ಗ್ರಾಮ ಪಂಚಾಯತ್  ಸದಸ್ಯರು ಹಾಗೂ ಅಧಿಕಾರಿಗಳು ಪರಿಶೀಲನೆ ಮಾಡಿ ದಂಡ ವಿಧಿಸಿದ್ದಾರೆ. ಮೂರು ಸಾವಿರ ರೂ. ದಂಡ ವಿಧಿಸಲಾಗಿದೆ.

ರಸ್ತೆ ಬದಿ ಕಸ ಬಿಸಾಡಿದ ವ್ಯಕ್ತಿ | ದಂಡ ವಿಧಿಸಿದ ಗ್ರಾಮ ಪಂಚಾಯಿತಿ Read More »

ಖ್ಯಾತ ನಟಿ, ನಿರೂಪಕಿ ಅಪರ್ಣಾ  ಇನ್ನಿಲ್ಲ.

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಮತ್ತು ನಿರೂಪಕಿ ಅಪರ್ಣಾ ಕಿರಿಯ ವಯಸ್ಸಿನಲ್ಲೇ ಇಹಲೋಕ್ಯ ತ್ಯಜಿಸಿದ್ದಾರೆ. ಅಪರ್ಣಾ ಅವರು ಕಳೆದ ಹಲವು ತಿಂಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅಪರ್ಣಾ  ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ. ಬನಶಂಕರಿ 2ನೇ ಹಂತದ ದೇವಗಿರಿ ದೇವಸ್ಥಾನದ ಸಮೀಪದ ನಿವಾಸದಲ್ಲಿ ಅಪರ್ಣಾ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಅವರ್ಣಾ 1989 ರಲ್ಲಿ ನಿರೂಪಕಿಯಾಗಿ ಟೆಲಿವಿಷನ್ ಸೇರಿದ್ರು. 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದಿಂದ ಬೆಳಕಿಗೆ

ಖ್ಯಾತ ನಟಿ, ನಿರೂಪಕಿ ಅಪರ್ಣಾ  ಇನ್ನಿಲ್ಲ. Read More »

error: Content is protected !!
Scroll to Top