ಡ್ರಗ್ಸ್ ನಶೆಯಲ್ಲಿ ತನ್ನ ಮನೆಯವರಿಗೇ ಚಿತ್ರಹಿಂಸೆ| ಆಸೀಫ್ ಆಪತ್ಭಾಂಧವನ ಕರಾಳ ಮುಖ ಬಯಲು

ಮಂಗಳೂರು: ಆಸೀಫ್‌ ಆಪತ್ಭಾಂಧವನ ಕರಾಳ ಮುಖ ಬಯಲಾಗಿದೆ. ನಶೆಯಲ್ಲಿ ಹೆಂಡತಿಗೆ ಚಿತ್ರಹಿಂಸೆ, ಮನೆಯಲ್ಲಿ ರಂಪಾಟ ಮಾಡುವುದು ಜೊತೆಗೆ ತನ್ನ ಸ್ವಂತ ಮಗಳದ್ದೇ ಖಾಸಗಿ ವಿಡಿಯೋ ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವಿಕೃತಿ ಮೇರೆದಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಿವಿಧ ವಾಟ್ಸಾಪ್‌ ಗುಂಪುಗಳಲ್ಲಿ ತನ್ನ ಮಗಳ ಖಾಸಗಿ ವೀಡಿಯೋಗಳನ್ನು ಹರಿಬಿಟ್ಟ ಆರೋಪದಲ್ಲಿ ತಂದೆ ಆಸೀಫ್‌ ವಿರುದ್ಧ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಡುವೆ ಆರೋಪಿಯ ಪುತ್ರಿಯು ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಅಜ್ಜರಕಾಡು ಆಸ್ಪತ್ರೆಗೆ […]

ಡ್ರಗ್ಸ್ ನಶೆಯಲ್ಲಿ ತನ್ನ ಮನೆಯವರಿಗೇ ಚಿತ್ರಹಿಂಸೆ| ಆಸೀಫ್ ಆಪತ್ಭಾಂಧವನ ಕರಾಳ ಮುಖ ಬಯಲು Read More »

ಜೂನ್ 25 ನ್ನು  ‘ಸಂವಿಧಾನ ಹತ್ಯಾ ದಿವಸ’ ಎಂದು ಘೋಷಿಸಿದ ಸರಕಾರ

1975ರ ಜೂ. 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಕಾರಣದಿಂದಾಗಿ ಜೂ. 25 ರಂದು ಸಂವಿಧಾನ ಹತ್ಯಾ ದಿವಸ ಎಂಬುದಾಗಿ ಕೇಂದ್ರ ಸರಕಾರ ಘೋಷಿಸಿದೆ. ಪ್ರತೀ ವರ್ಷ ಜೂ. 25ರಂದು ದೇಶಾದ್ಯಂತ ಸಂವಿಧಾನ ಹತ್ಯಾ ದಿವಸ ಎಂಬುದಾಗಿ ಆಚರಿಸಲು ಕೇಂದ್ರ ಸರ್ಕಾರವು ತೀರ್ಮಾನಿಸಿದೆ. ಕೇಂದ್ರ ಸರ್ಕಾರದ ತೀರ್ಮಾನದ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. “ಪ್ರತಿವರ್ಷ ಜೂ. 25ರಂದು ಸಂವಿಧಾನ ಹತ್ಯಾ

ಜೂನ್ 25 ನ್ನು  ‘ಸಂವಿಧಾನ ಹತ್ಯಾ ದಿವಸ’ ಎಂದು ಘೋಷಿಸಿದ ಸರಕಾರ Read More »

ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

ಪುತ್ತೂರು: ಸಮಾಜವನ್ನು ಪರಿವರ್ತನೆ ಮಾಡಲು ಯುವ ಜನತೆ ಮಹತ್ವಾಕಾಂಕ್ಷೆ, ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಪ್ರತಿಯೊಬ್ಬ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅಗತ್ಯತೆ ಪ್ರಸ್ತುತ ಸಂದರ್ಭದಲ್ಲಿ ಅವಶ್ಯವಿದೆ, ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದೆ, ಎಲ್ಲ ಕಾನೂನುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗದೇ ಇರಬಹುದು, ಆದರೂ ನಮ್ಮ ದೈನಂದಿನ ಜೀವನ ಯಾವುದೇ ಅಡೆತಡೆಯಿಲ್ಲದೇ ನೆಮ್ಮದಿಯಿಂದ ಸಾಗಲು ಅಲ್ಪ ಪ್ರಮಾಣದಲ್ಲಾದರೂ ಕಾನೂನು ಜಾಗೃತಿ ಪಡೆಯಬೇಕು. ಎಂದು ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕಿ ಶ್ರೀರಕ್ಷಾ ಹೇಳಿದರು. ನರೇಂದ್ರ ಪದವಿ

ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ Read More »

ಮನೆ ಮೇಲೆ ಶೀಟ್ ಅಳವಡಿಸುತ್ತಿದ್ದ ವೇಳೆ ಯುವಕ ಮೃತ್ಯು !

ಪುತ್ತೂರು : ಆರ್ ಸಿಸಿ ಮನೆಯೊಂದರ ಮೇಲೆ ಶೀಟ್ ಅಳವಡಿಸುವ ಸಂದರ್ಭ ಯುವಕನೋರ್ವ ಮೃತಪಟ್ಟ ಘಟನೆ ಬೆದ್ರಾಳದಲ್ಲಿ ನಡೆದಿದೆ. ವೆಲ್ಡಿಂಗ್ ಕೆಲಸದ ಸಹಾಯಕನಾಗಿದ್ದ, ಕಾಸರಗೋಡು ಮೂಲದ ವೆಳ್ಳರಿಕುಂಡು ಕಲ್ಲಹಳ್ಳಿ ನಿವಾಸಿ ಸೋಮಯ್ಯ ಎಂಬವರ ಪುತ್ರ ದೀಕ್ಷಿತ್ ಎಸ್.ಎಂ.(26) ಮೃತಪಟ್ಟ ಯುವಕ. ದೀಕ್ಷಿತ್, ಸೋಮಯ್ಯ ಗೌಡ ಅವರ ಹೆಂಡತಿಯ ಅಣ್ಣನ ಮಗ ಪ್ರಜ್ವಲ್‌ರೊಂದಿಗೆ ವೆಲ್ಡಿಂಗ್ ಕೆಲಸಕ್ಕೆ ಸಹಾಯಕನಾಗಿ ಹೋಗುತ್ತಿದ್ದು, ಜು.11ರಂದು ಕೆಮ್ಮಿಂಜೆ ಗ್ರಾಮದ ಬೆದ್ರಾಳದ ಆರ್‌ಸಿಸಿ ಮನೆಯೊಂದರಲ್ಲಿ ಶೀಟ್ ಹಾಕುವ ಕೆಲಸ ಮಾಡುತ್ತಿದ್ದ ಸಂದರ್ಭ ದೀಕ್ಷಿತ್ ಬೊಬ್ಬೆ ಹೊಡೆದು

ಮನೆ ಮೇಲೆ ಶೀಟ್ ಅಳವಡಿಸುತ್ತಿದ್ದ ವೇಳೆ ಯುವಕ ಮೃತ್ಯು ! Read More »

ತುಂಬಿ ಹರಿಯುತ್ತಿರುವ ಬಂಟ್ವಾಳ ನೇತ್ರಾವತಿ ನದಿ | ನೀರಿನ ಮಟ್ಟ ಹೆಚ್ಚಳ

ಬಂಟ್ವಾಳ: ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಶನಿವಾರ ಬೆಳಗಿನ ಜಾವ ಹೆಚ್ಚಳವಾಗಿದೆ. ಈ ನದಿಯ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು, ಸುಮಾರು 8 ಮೀಟರ್ ಎತ್ತರಕ್ಕೆ ಬರುವ ಹೊತ್ತಿಗೆ ನೀರು ಸಮೀಪದ ತಗ್ಗು ಪ್ರದೇಶಗಳಿಗೆ ಹರಿಯಲಾರಂಭಿಸುತ್ತದೆ. ಈಗಾಗಲೇ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದ್ದು, ನದಿ ಸಮೀಪದ ಭಾಗಗಳಲ್ಲಿ ವಾಸಿಸುವವರು ಹಾಗೂ ಪ್ರತಿ ಬಾರಿಯೂ ನೀರಿನ ಮಟ್ಟ ಏರುವ ಸಂದರ್ಭ ತೊಂದರೆಗೊಳಗಾಗುವವರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಆಡಳಿತ ತಿಳಿಸಿದೆ.

ತುಂಬಿ ಹರಿಯುತ್ತಿರುವ ಬಂಟ್ವಾಳ ನೇತ್ರಾವತಿ ನದಿ | ನೀರಿನ ಮಟ್ಟ ಹೆಚ್ಚಳ Read More »

ರಸ್ತೆಗೆ ಅಡ್ಡಲಾಗಿ ಬಿದ್ದ ಮರ : ಸಂಚಾರದಲ್ಲಿ ವ್ಯತ್ಯಯ

ಪುತ್ತೂರು: ನಗರದ ಬೈಪಾಸ್ ರಸ್ತೆಯ ತೆಂಕಿಲ ಬೈಪಾಸ್ ರಸ್ತೆಯಲ್ಲಿ ಇಂದು ಬೆಳಿಗ್ಗೆ ಬೃಹತ್ ಗಾತ್ರದ ಮರವೊಂದು ರಸ್ತೆಗಡ್ಡವಾಗಿ ಬಿದ್ದಿದೆ. ಮರ ಬಿದ್ದ ಪರಿಣಾಮ ರಸ್ತೆ ಸಂಚಾರ ಬಂದ್‍ ಆಗಿತ್ತು. ಬೈಪಾಸ್ ರಸ್ತೆಯ ವಿವೇಕಾನಂದ ಶಾಲೆ ಬಳಿ ಇರುವ ಕಿರು ಸೇತುವೆಗೆ ಮರ ಬಿದ್ದಿದೆ. ವಾಹನ ಸವಾರರು ಪುತ್ತೂರು ನಗರಕ್ಕೆ ಬಂದು ಸುಳ್ಯ, ಮಂಗಳೂರು ಕಡೆಗೆ ಚಲಿಸಬೇಕಾಯಿತು. ತೆರವು ಕಾರ್ಯ ಇನ್ನಷ್ಟೇ ನಡೆಯಬೇಕಿದೆ.

ರಸ್ತೆಗೆ ಅಡ್ಡಲಾಗಿ ಬಿದ್ದ ಮರ : ಸಂಚಾರದಲ್ಲಿ ವ್ಯತ್ಯಯ Read More »

ಬಲ್ನಾಡಿನಲ್ಲಿ ಶಾಂತಿಧಾಮ ಹಿಂದೂ ರುದ್ರಭೂಮಿಗೆ ಭೂಮಿ ಪೂಜೆ

ಪುತ್ತೂರು: ಬಲ್ನಾಡು ಗ್ರಾಮದ ನಾರಾಜಿಲಮೂಲೆ ಎಂಬಲ್ಲಿ ಶಾಂತಿಧಾಮ ಹಿಂದೂ ರುದ್ರಭೂಮಿಗೆ ಭೂಮಿ ಪೂಜೆ ಇಂದು ನಡೆಯಿತು. ಬಲ್ನಾಡು ಶಾಂತಿಧಾಮ ರುದ್ರಭೂಮಿ ಅಭಿವೃದ್ಧಿ ಸಮಿತಿ ಹಾಗೂ ಬಲ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣಗೊಳ್ಳಲಿರುವ ಹಿಂದೂ ರುದ್ರ ಭೂಮಿಗೆ ಭೂಮಿ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ತಾಲೂಕು ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ,  ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ ಭಟ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ಬಲ್ನಾಡಿನಲ್ಲಿ ಶಾಂತಿಧಾಮ ಹಿಂದೂ ರುದ್ರಭೂಮಿಗೆ ಭೂಮಿ ಪೂಜೆ Read More »

ನೆಲ್ಯಾಡಿಯಲ್ಲಿ ಬೈಕ್-ಪಿಕಪ್ ಡಿಕ್ಕಿ : ಬೈಕ್ ಸವಾರ ಮೃತ್ಯು

ನೆಲ್ಯಾಡಿ : ಬೈಕ್ ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿಯ ಕೊಣಾಲು ಸಮೀಪ ಇಂದು ನಡೆದಿದೆ. ಮಂಗಳೂರು ಕೋಡಿಕ್ಕಲ್ ನಿವಾಸಿ, ಬೈಕ್ ಸವಾರ ಪ್ರಣಮ್ ಕೋಟ್ಯಾನ್ ಮೃತಪಟ್ಟ ಬೈಕ್ ಸವಾರ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಪ್ರಣಮ್‍ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರಣಮ್ ಮೆಡಿಕಲ್ ರೆಪ್ರೆಸೆಂಟಿವ್ ಆಗಿ ಕೆಲಸ ಮಾಡುತ್ತಿದ್ದು, ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ಹೋಗುತ್ತಿದ್ದ ವೇಳೆ ನೆಲ್ಯಾಡಿಯಿಂದ

ನೆಲ್ಯಾಡಿಯಲ್ಲಿ ಬೈಕ್-ಪಿಕಪ್ ಡಿಕ್ಕಿ : ಬೈಕ್ ಸವಾರ ಮೃತ್ಯು Read More »

ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ನೂತನ ಕಚೇರಿ ಶುಭಾರಂಭ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟರವರ ನೂತನ ಕಚೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಉದ್ಘಾಟನೆಗೊಂಡಿತು. ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಶುಭಾರಂಭದಲ್ಲಿ ಭಾಗವಹಿಸಿ ಸಂಸದರಿಗೆ ಶುಭಹಾರೈಸಿದರು. ಈ ಸಂದರ್ಭ ಪ್ರಸನ್ನ ಮಾರ್ತ, ಉಮೇಶ್ ಕೊಡಿಬೈಲು, ಅನಿಲ್ ತೆಂಕಿಲ, ಪ್ರವೀಣ್ ಶೆಟ್ಟಿ ತಿಂಗಳಾಡಿ ಮೊದಲಾದವರು ಉಪಸ್ಥಿತರಿದ್ದರು.

ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ನೂತನ ಕಚೇರಿ ಶುಭಾರಂಭ Read More »

ಅಪರ್ಣಾ ಅಂತ್ಯಕ್ರಿಯೆ| ನಡೆಯಿತು ಪೊಲೀಸ್ ಗೌರವದೊಂದಿಗೆ

ಬೆಂಗಳೂರು : ನಿನ್ನೆ ರಾತ್ರಿ ನಿಧನರಾದ ಕನ್ನಡದ ನಿರೂಪಕಿ, ನಟಿ ಅಪರ್ಣಾ ಅಂತ್ಯಕ್ರಿಯೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಪೊಲೀಸ್ ಗೌರವದೊಂದಿಗೆ ನೆರವೇರಿತು. 2 ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾ ನಿನ್ನೆ ರಾತ್ರಿ ಬನಶಂಕರಿಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ 3 ದಶಕಗಳಿಂದ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ ನಟಿಗೆ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸುವ ಮೂಲಕ ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿದೆ. ಸೃಜನ್ ಲೋಕೇಶ್ ಸೇರಿದಂತೆ ಅನೇಕರು ಅಪರ್ಣಾ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು

ಅಪರ್ಣಾ ಅಂತ್ಯಕ್ರಿಯೆ| ನಡೆಯಿತು ಪೊಲೀಸ್ ಗೌರವದೊಂದಿಗೆ Read More »

error: Content is protected !!
Scroll to Top