ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆ

ಮೈಸೂರಿನ ವಾಣಿವಿಲಾಸದ ಕುಟುಂಬ ಮಂಗಳೂರು : ನಗರದ ಕೆ.ಎಸ್‌. ರಾವ್‌ ರಸ್ತೆಯ ಲಾಡ್ಜ್‌ವೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರು ಮೈಸೂರಿನ ವಾಣಿವಿಲಾಸದವರೆಂದು ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿಯೇ ಡೆತ್‌ನೋಟ್‌ ಪತ್ತೆಯಾಗಿದೆ. ನಾಲ್ವರಲ್ಲಿ ಓರ್ವ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಉಳಿದ ಮೂವರು ಮಲಗಿದ ಸ್ಥಿತಿಯಲ್ಲಿದ್ದರು. ಬಂದರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.ಒಂದೇ ಕುಟುಂಬದ ನಾಲ್ಕು ಜನ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ಮಂಗಳೂರಿನ […]

ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆ Read More »

ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ

ನಾಲ್ಕು ಹಂತಗಳ ಪರಿಶೀಲನೆ ಬಳಿಕ ಅಭ್ಯರ್ಥಿ ಹೆಸರು ಘೋಷಣೆ ಬೆಂಗಳೂರು : ಬಿಜೆಪಿ ಈ ಸಲ ಟಿಕೆಟ್‌ ಹಂಚಿಕೆಗೆ ಮತದಾನದ ಪದ್ಧತಿ ಅಳವಡಿಸಿಕೊಂಡಿದೆ. ಜಿಲ್ಲಾವಾರು ಪದಾಧಿಕಾರಿಗಳು ಮತದಾನ ಮಾಡಲಿದ್ದು, ಬಳಿಕ ಎರಡು ದಿನ ಬೆಂಗಳೂರಿನಲ್ಲಿ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆ ನಡೆಯಲಿದೆ. ಆ ಬಳಿಕ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಲಿದೆ. ಬಿಜೆಪಿಯಲ್ಲಿ ಪ್ರತಿ ಕ್ಷೇತ್ರಕ್ಕೆ ಅನೇಕ ಮಂದಿ ಅಕಾಂಕ್ಷಿಗಳು ಇರುವುದು ಮತ್ತು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎನ್ನುವ ಕಾರಣಕ್ಕೆ ಈ ಸಲ ಕರ್ನಾಟಕದಲ್ಲಿ ಕೇಸರಿ ಪಕ್ಷ

ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ Read More »

ಮೊಸರಿನ ಪ್ಯಾಕೆಟ್‌ ಮೇಲಿರುವ ದಹಿ ಆದೇಶ ಹಿಂಪಡೆದ ಎಫ್‌ಎಸ್‌ಎಸ್‌ಎಐ

ಕರ್ನಾಟಕ, ತಮಿಳುನಾಡಿನ ವಿರೋಧದ ಬಳಿಕ ಕ್ರಮ ದೆಹಲಿ : ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮೊಸರಿನ ಪ್ಯಾಕೆಟ್‌ಗಳ ಮೇಲೆ ಹಿಂದಿಯಲ್ಲಿ ದಹಿ ಎಂದು ಮುದ್ರಿಸುವಂತೆ ಹೊರಡಿಸಿದ್ದ ಆದೇಶವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹಿಂಪಡೆದಿದೆ.ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕಟುವಾಗಿ ಟೀಕೆ ಮಾಡಿದ ಬೆನ್ನಲ್ಲೇ ಎಫ್‌ಎಸ್‌ಎಸ್‌ಎಐಯ ಈ ನಿರ್ಧಾರ ಹೊರಬಿದ್ದಿದೆ. ಹಿಂದಿ ಹೇರಿಕೆಯ ನಾಚಿಕೆಯಿಲ್ಲದ ಒತ್ತಾಯಗಳು ಎಷ್ಟರ ಮಟ್ಟಿಗೆ ಅಂದರೆ, ಮೊಸರು ಪ್ಯಾಕೆಟ್‌

ಮೊಸರಿನ ಪ್ಯಾಕೆಟ್‌ ಮೇಲಿರುವ ದಹಿ ಆದೇಶ ಹಿಂಪಡೆದ ಎಫ್‌ಎಸ್‌ಎಸ್‌ಎಐ Read More »

ಮೋದಿ ಕುಲನಾಮ ನಿಂದನೆ ಮಾಡಿದ ರಾಹುಲ್‌ಗೆ ಇನ್ನೊಂದು ಸಮನ್ಸ್‌

ಪಾಟ್ನ : ಮೋದಿ ಕುಲನಾಮ ಕುರಿತು ರಾಹುಲ್‌ ಗಾಂಧಿ ನೀಡಿರುವ ಅವಹೇಳನಕಾರಿ ಹೇಳಿಕೆಯಿಂದ ಅವರಿಗೆ ಉಂಟಾಗಿರುವ ಸಂಕಷ್ಟಗಳ ಸರಮಾಲೆ ಮುಂದುವರಿದಿದೆ. ಈ ಪ್ರಕರಣದಲ್ಲಿ ಈಗಾಗಲೇ ದೋಷಿ ಎಂದು ಸೂರತ್​​ ನ್ಯಾಯಾಲಯ ತೀರ್ಪು ಪ್ರಕಟಿಸಿ ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇದೀಗ ಇದೇ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಬಿಹಾರದ ಪಾಟ್ನ ನ್ಯಾಯಾಲಯ ರಾಹುಲ್​ ಗಾಂಧಿಗೆ ಸಮನ್ಸ್ ನೀಡಿದೆ. 2019ರ ಲೋಕಸಭಾ ಚುನಾವಣೆಗೆ ಮುನ್ನ ರಾಹುಲ್ ಗಾಂಧಿ ಅವರು ಮೋದಿ ಸರ್​ನೇಮ್​ ಕುರಿತು ನೀಡಿದ್ದ ಹೇಳಿಕೆ ವಿರುದ್ಧ ಗುಜರಾತ್‌ನಲ್ಲಿ ಮಾಜಿ

ಮೋದಿ ಕುಲನಾಮ ನಿಂದನೆ ಮಾಡಿದ ರಾಹುಲ್‌ಗೆ ಇನ್ನೊಂದು ಸಮನ್ಸ್‌ Read More »

ರಾಹುಲ್‌ ಗಾಂಧಿ ದುರ್ಬಲಗೊಳಿಸಲು ಮತ್ತು ರಾಜಕೀಯ ಜೀವನ ಮುಗಿಸಲು ಕಾಂಗ್ರೆಸ್‌ನಲ್ಲೇ ಷಡ್ಯಂತ್ರ

ಆಪ್ತ ಸಲಹೆಗಾರರೆ ರಾಹುಲ್‌ ಗಾಂಧಿ ಅವರ ದಾರಿ ತಪ್ಪಿಸುತ್ತಿದ್ದಾರೆ ಎಂದ ಬಿಜೆಪಿ ನಾಯಕ ಬೆಂಗಳೂರು : ರಾಹುಲ್‌ ಗಾಂಧಿಯ ರಾಜಕೀಯ ಜೀವನ ಮುಗಿಸಲು ಕಾಂಗ್ರೆಸ್‌ನಲ್ಲೇ ಷಡ್ಯಂತ್ರ ನಡೆಯುತ್ತಿದೆ ಎಂದು ಬಿಜೆಪಿ ನಾಯಕರೊಬ್ಬರು ಮಾಡಿದ ಆರೋಪ ಸಂಚಲನವುಂಟು ಮಾಡಿದೆ. ಕರ್ನಾಟಕದಿಂದ ರಾಜ್ಯಸಭಾ ಸಂಸದರಾಗಿರುವ ಲೆಹರ್‌ ಸಿಂಗ್‌ ಸಿರೋಯಾ ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ ರಾಹುಲ್‌ ಗಾಂಧಿಯನ್ನು ಹರಕೆಯ ಕುರಿಯಂತೆ ಬಲಿಕೊಡಲು ಮುಂದಾಗಿದೆ ಎಂಬುದು ಸಿರೋಯ ಹೇಳಿದ್ದಾರೆ. ರಾಹುಲ್‌ ಗಾಂಧಿ ಶುದ್ಧ ಹ್ರದಯದ ವ್ಯಕ್ತಿ, ಆದರೆ ಅವರನ್ನು ದುರ್ಬಲಗೊಳಿಸುವ

ರಾಹುಲ್‌ ಗಾಂಧಿ ದುರ್ಬಲಗೊಳಿಸಲು ಮತ್ತು ರಾಜಕೀಯ ಜೀವನ ಮುಗಿಸಲು ಕಾಂಗ್ರೆಸ್‌ನಲ್ಲೇ ಷಡ್ಯಂತ್ರ Read More »

ಆರೋಗ್ಯಕರ ತಂಪು ಪಾನೀಯಗಳು

ಎಂಥಾ ಸೆಕೆ, ಬೆವರು, ದುರ್ಬಲವೆನಿಸುತ್ತಿರುವ ದೇಹ, ಕೆಲಸ ಮಾಡಲು ನಿರುತ್ಸಾಹ. ಈ ಸುಡು ಬಿಸಿಲಿಗೆ ಇಡೀ ದಿನ ಐಸ್ ಕ್ರೀಮ್ ಕೂಲ್ ಡ್ರಿಂಕ್ಸ್ ಕುಡಿಯುವ ಬಯಕೆ. ಆದರೆ ಇದೆಲ್ಲ ನಮ್ಮ ದೇಹಕ್ಕೆ ಹಿತವಲ್ಲ. ಅಪರುಪಕ್ಕೊಮ್ಮೆ ಕುಡಿದರೆ ತೊಂದರೆ ಆಗದು. ಆದರೆ ದಿನನಿತ್ಯ ಕುಡಿದರೆ ಆರೋಗ್ಯ ಹದಗೆಡುವುದು ಖಂಡಿತ. ಹಾಗಾದರೆ ಬೇರೆ ಉಪಾಯವೇನು. ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡುವ ಪಾನೀಯ ಮನೆಯಲ್ಲಿ ಮಾಡುವುದು ಹಿತಕರ. ಇದನ್ನು ಕುಡಿದರೆ ದೇಹವನ್ನು ತಂಪು ಮಾಡುವ ಜೊತೆಗೆ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ. ಇಂತಹ

ಆರೋಗ್ಯಕರ ತಂಪು ಪಾನೀಯಗಳು Read More »

ಸ್ಫೂರ್ತಿ ನೀಡುವ ಮೂರು ಘಟನೆಗಳು

ಅವರ ಸಾಧನೆ ಎಲ್ಲರಿಗೂ ಪ್ರೇರಣೆ (ಭಾಗ 7)ಮೊದಲಾಗಿ ಎಸೆಸೆಲ್ಸಿ ಪರೀಕ್ಷೆಗೆ ಆಲ್ ದ ಬೆಸ್ಟ್. ಇಡೀ ವರ್ಷ ಒಂದು ಪರೀಕ್ಷೆಗಾಗಿ ಕಷ್ಟಪಟ್ಟು ಓದಿರುವ ನಿಮಗೆ ಅಭಿನಂದನೆಗಳು. ಹಾಗೆಯೇ ನಿಮ್ಮನ್ನು ಪರೀಕ್ಷೆಗಾಗಿ ಪ್ರಿಪೇರ್ ಮಾಡಿದ ನಿಮ್ಮ ಅಧ್ಯಾಪಕರಿಗೂ ಅಭಿನಂದನೆಗಳು.ಇವತ್ತು ನಾನು ನಿಮಗೆ ಪರೀಕ್ಷೆಗಳ ಬಗ್ಗೆ ಏನೂ ಹೇಳುವುದಿಲ್ಲ. ಇಡೀ ವರ್ಷ ನಿಮಗೆ ಅದನ್ನು ಹಲವು ಬಾರಿ ಹೇಳಿ ಆಗಿದೆ. ಇವತ್ತು ನಾನು ನಿಮಗೆ ತುಂಬಾ ಸ್ಫೂರ್ತಿ ತುಂಬುವ ಮೂರು ವ್ಯಕ್ತಿತ್ವಗಳು ಮತ್ತು ಅದಕ್ಕೆ ಪೂರಕವಾದ ಮೂರು ಘಟನೆಗಳನ್ನು ವಿವರಿಸಬೇಕು.

ಸ್ಫೂರ್ತಿ ನೀಡುವ ಮೂರು ಘಟನೆಗಳು Read More »

ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ

ಪುತ್ತೂರು: ಶೃಂಗೇರಿಯಲ್ಲಿ ನಿರ್ಮಾಣವಾದ 3 ಅಡಿ ಎತ್ತರ, 100 ಕೆ.ಜಿ ತೂಕದ ಪಂಚಲೋಹದ ಶಾರದಾ ಮಾತೆಯ ವಿಗ್ರಹವನ್ನು ಪಾಕ್ ಗಡಿ ಬಳಿಯ ತೀತ್ವಾಲ್ ಬಳಿ ಇತ್ತೀಚೆಗೆ ಯಶಸ್ವಿಯಾಗಿ ಪ್ರತಿಷ್ಠಾಪನೆ ಮಾಡಲಾಗಿದೆ. ತನ್ಮೂಲಕ ಒಂದನೇ ಶತಮಾನದಿಂದಲೂ ಹಿಂದೂಗಳ ಧಾರ್ಮಿಕ ಶ್ರದ್ಧಾಕೇಂದ್ರವಾಗಿದ್ದು, ತದನಂತರ ದುಷ್ಟ ಅರಸರು ಹಾಗೂ ಪಾಕ್  ದಾಳಿಯಿಂದ ಶಿಥಿಲವಾಗಿದ್ದ ಈ ಶಾರದಾದೇವಿಯ ಆರಾಧನಾ ಸ್ಥಳ ಮತ್ತೆ ಪುನರುಜ್ಜೀವಗೊಂಡಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು. ಅವರು ಅಂಬಿಕಾ ಮಹಾವಿದ್ಯಾಲಯದಲ್ಲಿ ಕಾಶ್ಮೀರದ ಶಾರದಾ

ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಯಕ್ಷ ಕಲಾಕೇಂದ್ರ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸ್ಪಂದನ ಸಭಾಂಗಣದಲ್ಲಿ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು.  ಕಾಲೇಜಿನ ಉಪಪ್ರಾಂಶುಪಾಲ ಡಾ| ಎ ಪಿ ರಾಧಾಕೃಷ್ಣ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಹಾಗೂ ರಂಗಭೂಮಿಯ ಮಹತ್ವವನ್ನು ತಿಳಿಸಿ ತಮ್ಮ ಜೀವನದಲ್ಲಿ ಅವು ಬೀರಿದ ಪ್ರಭಾವವನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾ ವಂ| ಡಾ ಆಂಟನಿ ಪ್ರಕಾಶ್‌ ಮೊಂತೆರೋ ಅಧ್ಯಕ್ಷತೆ ವಹಿಸಿ ನಾಟಕ ಹಾಗೂ ರಂಗಭೂಮಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ.

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ Read More »

ಇಂದು (ಮಾ.31) : ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ

ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾ.31 ಶುಕ್ರವಾರ ಜಾತ್ರೋತ್ಸವದ ಅಂಗವಾಗಿ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಲಿದೆ. ಉತ್ಸವದ ಅಂಗವಾಗಿ ಬೆಳಿಗ್ಗೆ 8 ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ಪಲ್ಲಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿ ಅನ್ನಸಂತರ್ಪಣೆ ಜರಗಲಿದೆ. ಸಂಜೆ 5 ಗಂಟೆಗೆ ಭಂಡಾರ ತೆಗೆದು ವಾರಹಿ, ರಕ್ತೇಶ್ವರಿ, ಗುಳಿಗ ದೈವಗಳಿಗೆ ನೇಮೋತ್ಸವ ಜರಗಲಿದೆ

ಇಂದು (ಮಾ.31) : ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ Read More »

error: Content is protected !!
Scroll to Top