ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರ ಅಧಿಕಾರವಧಿ ಮುಕ್ತಾಯ | ನೂತನ ಅಧ್ಯಕ್ಷರ ಆಯ್ಕೆಗೆ ನಡೆಯಿತು ಪ್ರಮುಖರ ಸಭೆ

ಮಂಗಳೂರು : ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರ ಅಧಿಕಾರ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಿಟ್ಟಿನಲ್ಲಿ ಬಿಜೆಪಿ ಪ್ರಮುಖರ ಸಭೆ ಮಂಗಳೂರಿನಲ್ಲಿ ಇಂದು ನಡೆಯಿತು. ಪಕ್ಷದ ರಾಜ್ಯಾಧ್ಯಕ್ಷರ ಸೂಚನೆಯಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಪಕ್ಷದ ಕಚೇರಿಯಲ್ಲಿ ಪಕ್ಷ ಪ್ರಮುಖರ ಸಭೆ ಕರೆದಿದ್ದು, ಸಭೆಯಲ್ಲಿ ನಗರ ಮಂಡಲ ಅಧ್ಯಕ್ಷ, ಕಾರ್ಯದರ್ಶಿ ಸ್ಥಾನಕ್ಕೆ ಮತ್ತು ಗ್ರಾಮಾಂತರ ಮಂಡಲದ ಅಧ್ಯಕ್ಷ ಕಾರ್ಯದರ್ಶಿ ಸ್ಥಾನಕ್ಕೆ ಅಭ್ಯರ್ಥಿಗಳ ಹೆಸರು ಸೂಚಿಸಲು ಪದಾಧಿಕಾರಿಗಳ ಬಳಿ ತಿಳಿಸಲಾಯಿತು ಈ ಸಂದರ್ಭ ಹಲವರು […]

ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರ ಅಧಿಕಾರವಧಿ ಮುಕ್ತಾಯ | ನೂತನ ಅಧ್ಯಕ್ಷರ ಆಯ್ಕೆಗೆ ನಡೆಯಿತು ಪ್ರಮುಖರ ಸಭೆ Read More »

ಇಂಡಿಯನ್ ನೇವಿ ನೇರ ಸಂದರ್ಶನಕ್ಕೆ ರಕ್ಷಿತಾ ಐ. ಆಯ್ಕೆ | ಒಕ್ಕಲಿಗ ಗೌಡ ಸೇವಾ ಸಂಘದಿಂದ ಧನ ಸಹಾಯ

ಪುತ್ತೂರು: ಜು.29 ರಂದು ಕೊಲ್ಕತ್ತಾದಲ್ಲಿ ನಡೆಯಲಿರುವ ಇಂಡಿಯನ್ ನೇವಿಯ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಲಿರುವ ಪಡ್ನೂರು ಗ್ರಾಮದ ರಾಮನಗರ ನಿವಾಸಿ ಈಶ್ವರ ಗೌಡರ ಪುತ್ರಿ ರಕ್ಷಿತಾ ಐ ಅವರಿಗೆ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದಿಂದ ಸಹಾಯಧನ ವಿತರಿಸಲಾಯಿತು. ಈ ಕುರಿತು ರಕ್ಷಿತಾ ಐ ಅವರು ಕೊಲ್ಕತ್ತಾಕ್ಕೆ ವಿಮಾನದಲ್ಲಿ ಪ್ರಯಾಣ ಮಾಡಬೇಕಾಗಿರುವುದರಿಂದ ಅಂದಾಜು 20 ರಿಂದ 25 ಸಾವಿರ ಖರ್ಚು ಬೇಕಾಗಲಿದ್ದು, ಧನ ಸಹಾಯ ನೀಡುವಂತೆ ಒಕ್ಕಲಿಗ ಗೌಡ ಸೇವಾ ಸಂಘಕ್ಕೆ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಸಂಘದ

ಇಂಡಿಯನ್ ನೇವಿ ನೇರ ಸಂದರ್ಶನಕ್ಕೆ ರಕ್ಷಿತಾ ಐ. ಆಯ್ಕೆ | ಒಕ್ಕಲಿಗ ಗೌಡ ಸೇವಾ ಸಂಘದಿಂದ ಧನ ಸಹಾಯ Read More »

ಅಪಾಯದ ಮಟ್ಟ ತಲುಪಿದ ಕುಮಾರಧಾರ, ನೇತ್ರಾವತಿ ನದಿಗಳು

ಉಪ್ಪಿನಂಗಡಿ: ಪುತ್ತೂರು ತಾಲೂಕಿನಾದ್ಯಂತ ಮಳೆಯಬ್ಬರ ಮುಂದುವರಿದಿದ್ದು, ಜಿಲ್ಲೆಯ ಜೀವನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ಇದೀಗ ಮೈದುಂಬಿ ಹರಿಯುತ್ತಿದ್ದು ಅಪಾಯದ ಮಟ್ಟದತ್ತ ತಲುಪುತ್ತಿದೆ. ಕಳೆದ ಎರಡು ದಿನಗಳಿಂದ ನೀರಿನ ಮಟ್ಟ 20 ಮೀಟರ್ ದಾಖಲಾಗಿದ್ದು, ಬುಧವಾರ ಸಂಜೆಗೆ ಜೀವನದಿಗಳ ಸಂಗಮ ಸ್ಥಾನವಾದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದ ಬಳಿ ನದಿ ನೀರಿನ ಮಟ್ಟ 28.5ಕ್ಕೆ ಏರಿದೆ. ದೇವಳದ ಅಂಗಣ ಪ್ರವೇಶಕ್ಕೆ ಕೇವಲ 10 ಮೆಟ್ಟಲುಗಳಷ್ಟೇ ಉಳಿದಿದೆ. ನೀರಿನ ಮಟ್ಟ 31.5 ಮೀಟರ್ ಗೆ ಏರಿದರೆ ಎರಡೂ ನದಿಗಳ ನೀರು ದೇವಳದ

ಅಪಾಯದ ಮಟ್ಟ ತಲುಪಿದ ಕುಮಾರಧಾರ, ನೇತ್ರಾವತಿ ನದಿಗಳು Read More »

ಜು.18-19 : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೊಷಣೆ

ಮಂಗಳೂರು: ಜು.18 ಹಾಗೂ 19 ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜು.18 ಮತ್ತು 19 ರಂದು ರೆಡ್ ಅಲರ್ಟ್ ಘೋಷಿಸಿದೆ. ಬುಧವಾರವೂ ಜಿಲ್ಲೆಯಾದ್ಯಂತ ದಿನವಿಡೀ ಉತ್ತಮ ಮಳೆ ಮುಂದುವರೆದಿದೆ. ಮುಂದಿನ ಎರಡು ದಿನಗಳು ಕೂಡ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜು.18-19 : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೊಷಣೆ Read More »

ಸಮಾಜಕ್ಕೆ ಕೊಡುಗೆ ನೀಡುವ ಕೆಲಸವನ್ನು ಮುಳಿಯ ಮಾಡುತ್ತಿದೆ | ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಕೃಷ್ಣನಾರಾಯಣ ಮುಳಿಯ

ಪುತ್ತೂರು: ಸ್ವರಕ್ಷಣೆಯ ವಿಚಾರದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಅಗತ್ಯವಾಗಿದ್ದು, ಮುಂದಿನ ದಿನದಲ್ಲಿ ಕಾರ್ಯಾಗಾರಗಳನ್ನು ನಡೆಸಲಾಗುವುದು. ಸರ್ಕಾರದಿಂದ ಎಲ್ಲಾ ಸಿಗುತ್ತದೆ ಎಂದು ಕಾಯದೆ ನಮ್ಮಿಂದಾಗುವುದನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಮುಳಿಯ ಮಾಡುತ್ತಿದೆ. ಸಂಸ್ಥೆಯ ಸಿಬ್ಬಂದಿಗಳಿಗೆ ಸೇರಿ ಆಸುಪಾಸಿನ ಜನರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಹೇಳಿದರು. ಬುಧವಾರ ಜೆಸಿಐ ಮುಳಿಯ ಟ್ರೈನಿಂಗ್ ಹಾಲ್ ನಲ್ಲಿ ಪುತ್ತೂರು ಮುಳಿಯ ಜ್ಯುವೆಲ್ಸ್,  ಪುತ್ತೂರು ಮಹಿಳಾ ಪೊಲೀಸ್ ಠಾಣೆ, ರೋಟರಿ

ಸಮಾಜಕ್ಕೆ ಕೊಡುಗೆ ನೀಡುವ ಕೆಲಸವನ್ನು ಮುಳಿಯ ಮಾಡುತ್ತಿದೆ | ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಕೃಷ್ಣನಾರಾಯಣ ಮುಳಿಯ Read More »

‘Pixel ‘ CREATIVES PUTTUR ಸಂಸ್ಥೆ 7 ನೇ ವರ್ಷಕ್ಕೆ ಪಾದಾರ್ಪಣೆ

ಪುತ್ತೂರು: ನೆಹರು ನಗರದಲ್ಲಿ ಕಾರ್ಯಾಚರಿಸುತ್ತಿರುವ ‘ಪಿಕ್ಸೆಲ್’ ಕ್ರಿಯೆಟಿವ್ಸ್ ಇಂದು 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿತು. ‘ಪಿಕ್ಸೆಲ್’ ಎಲ್‍ಇಡಿ ವೀಡಿಯೋ ವಾಲ್, ಟಿವಿ, ಪ್ರೊಜೆಕ್ಟರ್, ವೀಡಿಯೋಗ್ರಫಿ, ಲೈವ್ ವೀಡಿಯೋ ಮಿಕ್ಸಿಂಗ್‍ ಮುಂತಾದ ಸೇವೆಯನ್ನು ಒದಗಿಸುವ ಸಂಸ್ಥೆಯಾಗಿದೆ. 2017 ರಲ್ಲಿ ಆರಂಭಗೊಂಡ ಸಂಸ್ಥೆ ಗ್ರಾಹಕರ ವರ್ಗದಲ್ಲಿ ವಿಶ್ವಾಸಾರ್ಹ ಸೇವೆ ಸಲ್ಲಿಸುವಲ್ಲಿ ಯಶಸ್ವಿಯಾಗಿದೆ.

‘Pixel ‘ CREATIVES PUTTUR ಸಂಸ್ಥೆ 7 ನೇ ವರ್ಷಕ್ಕೆ ಪಾದಾರ್ಪಣೆ Read More »

ಕಾಲು ಜಾರಿ ಬಿದ್ದು ಮಾಜಿ ಸಚಿವ ಹೆಚ್‍.ಡಿ.ರೇವಣ್ಣ ಆಸ್ಪತ್ರೆಗೆ ದಾಖಲು

ಹಾಸನ: ಕಾಲು ಜಾರಿ ಬಿದ್ದು ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸನದ ಹೊಳೆನರಸೀಪುರದಲ್ಲಿ ದೇವಸ್ಥಾನಕ್ಕೆ ತೆರಳಿದ್ದಾಗ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ಹೆಚ್.ಡಿ ರೇವಣ್ಣ ಅವರ ಪಕ್ಕೆಲುಬಿಗೆ ಪೆಟ್ಟಾಗಿದೆ ಎನ್ನಲಾಗಿದೆ. ಮಾಜಿ ಸಚಿವ ಹೆಚ್.ಡಿ ರೇವಣ್ಣ ಇದೀಗ ಹೊಳೆನರಸೀಪುರದಲ್ಲಿನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ರೇವಣ್ಣ ಆಷಾಡ ಏಕಾದಶಿ ಪ್ರಯುಕ್ತ ಅವರು ಉಪವಾಸವಿದ್ದರು ಎನ್ನಲಾಗುತ್ತಿದೆ.

ಕಾಲು ಜಾರಿ ಬಿದ್ದು ಮಾಜಿ ಸಚಿವ ಹೆಚ್‍.ಡಿ.ರೇವಣ್ಣ ಆಸ್ಪತ್ರೆಗೆ ದಾಖಲು Read More »

‘ಪಿಕ್ಸೆಲ್’ ಲೈವ್ ವೀಡಿಯೋ ಮಿಕ್ಸಿಂಗ್ ಸೇವಾ ಸಂಸ್ಥೆ 7ನೇ ವರ್ಷಕ್ಕೆ ಪಾದಾರ್ಪಣೆ

ಪುತ್ತೂರು: ನೆಹರು ನಗರದಲ್ಲಿ ಕಾರ್ಯಾಚರಿಸುತ್ತಿರುವ ‘ಪಿಕ್ಸೆಲ್’ ಇಂದು 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿತು. ಪಿಕ್ಸೆಲ್ ಎಲ್ಇಡಿ ವೀಡಿಯೋ ವಾಲ್, ಟಿವಿ, ಪ್ರೊಜೆಕ್ಟರ್, ವೀಡಿಯೋಗ್ರಫಿ, ಲೈವ್ ವೀಡಿಯೋ ಮಿಕ್ಸಿಂಗ್ ಮುಂತಾದ ಸೇವೆಯನ್ನು ಒದಗಿಸುವ ಸಂಸ್ಥೆಯಾಗಿದೆ. 2017 ರಲ್ಲಿ ಆರಂಭಗೊಂಡ ಸಂಸ್ಥೆ ಗ್ರಾಹಕರ ವರ್ಗದಲ್ಲಿ ವಿಶ್ವಾಸಾರ್ಹ ಸೇವೆ ಸಲ್ಲಿಸುವಲ್ಲಿ ಯಶಸ್ವಿಯಾಗಿದೆ.

‘ಪಿಕ್ಸೆಲ್’ ಲೈವ್ ವೀಡಿಯೋ ಮಿಕ್ಸಿಂಗ್ ಸೇವಾ ಸಂಸ್ಥೆ 7ನೇ ವರ್ಷಕ್ಕೆ ಪಾದಾರ್ಪಣೆ Read More »

ಕೇಂದ್ರ ರೈಲ್ವೇ ಸಚಿವ ವಿ.ಸೋಮಣ್ಣ ನಳಿನ್ ಕುಮಾರ್ ಕಟೀಲ್ ನಿವಾಸಕ್ಕೆ ಭೇಟಿ

ಮಂಗಳೂರಿಗೆ ಆಗಮಿಸಿದ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರ ನಿವಾಸಕ್ಕೆ ಇಂದು ಬೆಳಿಗ್ಗೆ ಆಗಮಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಮತ್ತು ಜಲಶಕ್ತಿ ಯೋಜನೆಗಳಿಗೆ ಅವರಿಂದ ಇನ್ನಷ್ಟು ವೇಗ ಮತ್ತು ಆಗಬೇಕಿರುವ ಹೊಸ ಯೋಜನೆಗಳಿಗೆ ತುಂಬು ಹೃದಯದ ಸಹಕಾರ ದೊರಕುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ

ಕೇಂದ್ರ ರೈಲ್ವೇ ಸಚಿವ ವಿ.ಸೋಮಣ್ಣ ನಳಿನ್ ಕುಮಾರ್ ಕಟೀಲ್ ನಿವಾಸಕ್ಕೆ ಭೇಟಿ Read More »

ಕರಾವಳಿಯಲ್ಲಿ ಹಡಗು ಮುಳುಗಿ 13 ಭಾರತೀಯರು ನಾಪತ್ತೆ

ಒಮನ್ ಕರಾವಳಿಯಲ್ಲಿ 117 ಮೀಟರ್ ಉದ್ದದ ತೈಲ ಟ್ಯಾಂಕರ್ ಹಡಗು ಮುಳುಗಿದ್ದು, ಅದರಲ್ಲಿದ್ದ 13 ಮಂದಿ ಭಾರತೀಯರು ಸೇರಿ 16 ಮಂದಿ ಸಿಬ್ಬಂದಿ ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. ನಾಪತ್ತೆಯಾಗಿರುವವರಲ್ಲಿ 13 ಭಾರತೀಯ ಪ್ರಜೆಗಳು ಹಾಗೂ ಮೂವರು ಶ್ರೀಲಂಕಾ ನಾಗರೀಕರು ಎಂದು ಕಡಲ ಭದ್ರತಾ ಕೇಂದ್ರ ಮಾಹಿತಿ ನೀಡಿದೆ. ಕಾಣೆಯಾದವರ ಪತ್ತೆಹಚ್ಚಲು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿವೆ. ಆದರೆ ಇಲ್ಲಿಯವರೆಗೆ ಅವರಲ್ಲಿ ಯಾರೊಬ್ಬರ ಕುರುಹು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಕೊಮೊರೊಸ್ ಧ್ವಜದ ತೈಲ ಟ್ಯಾಂಕರ್ ‘ಪ್ರೆಸ್ಟೀಜ್ ಫಾಲ್ಕನ್’ ನಲ್ಲಿ

ಕರಾವಳಿಯಲ್ಲಿ ಹಡಗು ಮುಳುಗಿ 13 ಭಾರತೀಯರು ನಾಪತ್ತೆ Read More »

error: Content is protected !!
Scroll to Top