ರೈಲಿನಲ್ಲಿ ಭೀಕರ ಅಗ್ನಿ ಅವಘಡ : ಓರ್ವ ಪ್ರಯಾಣಿಕ ಸಾವು

ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಅವಘಡ ವಿಶಾಖಪಟ್ಟಣಂ : ವಿಶಾಖಪಟ್ಟಣಂನಿಂದ 66 ಕಿ.ಮೀ ದೂರದಲ್ಲಿರುವ ಅನಕಪಳ್ಳಿ ಜಿಲ್ಲೆಯ ಯಲಮಂಚಿಲಿಯಲ್ಲಿ ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಒಬ್ಬ ಪ್ರಯಾಣಿಕ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಗ್ನಿ ಅವಘಡ ಮಧ್ಯರಾತ್ರಿ 12.45ಕ್ಕೆ ನಡೆದಿದೆ. ರೈಲು ಬೆಂಕಿ ಹೊತ್ತಿಕೊಂಡಾಗ ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಮತ್ತು ಇನ್ನೊಂದು ಬೋಗಿಯಲ್ಲಿ 76 ಪ್ರಯಾಣಿಕರು ಇದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಮೃತರನ್ನು ಚಂದ್ರಶೇಖರ್ ಸುಂದರಂ ಎಂದು ಗುರುತಿಸಲಾಗಿದೆ. ಹಾನಿಗೊಳಗಾದ ಎರಡು […]

ರೈಲಿನಲ್ಲಿ ಭೀಕರ ಅಗ್ನಿ ಅವಘಡ : ಓರ್ವ ಪ್ರಯಾಣಿಕ ಸಾವು Read More »

ಮಹಿಳೆಯ ಕತ್ತಿನಿಂದ ಸರ ಕಿತ್ತ ಕಳ್ಳನ ಬಂಧನ

ಮಂಗಳೂರು: ನಗರದ ಕೊಂಚಾಡಿ ಕೊಪ್ಪಳಕಾಡು ಎಂಬಲ್ಲಿ ಮಹಿಳೆಯ ಕುತ್ತಿಗೆಯಿಂದ 32 ಗ್ರಾಂ ತೂಕದ ಕರಿಮಣಿ ಸರ ಕಸಿದು ಪರಾರಿಯಾಗಿದ್ದ ಆರೋಪಿಯನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ರೋಹಿತ್ (25) ಬಂಧಿತ ಆರೋಪಿಯಾಗಿದ್ದಾನೆ. ಡಿ.25ರಂದು ಸಂಜೆ 6.30ಕ್ಕೆ ಕೊಂಚಾಡಿ ಗುರುನಗರದ ನಿವಾಸಿಗಳಾದ ರತ್ನಾವತಿ ಮತ್ತವರ ಮಗಳು ರಶ್ಮಿ ಯೆಯ್ಯಾಡಿಯಲ್ಲಿರುವ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಕೊಪ್ಪಳಕಾಡು ರಸ್ತೆಯಲ್ಲಿ ಅಪರಿಚಿತ ವ್ಯಕ್ತಿ ರತ್ನಾವತಿಯ ಕುತ್ತಿಗೆಗೆ ಕೈ ಹಾಕಿ ಕರಿಮಣಿ ಸರ ಕಸಿದು ಪರಾರಿಯಾಗಿದ್ದ. ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು

ಮಹಿಳೆಯ ಕತ್ತಿನಿಂದ ಸರ ಕಿತ್ತ ಕಳ್ಳನ ಬಂಧನ Read More »

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 46 ಲ.ರೂ. ಚಿನ್ನಾಭರಣ ಕಳವು

ತಲೆಯ ಬಳಿ ಇಟ್ಟಿದ್ದ ಬ್ಯಾಗಿನಲ್ಲಿದ್ದ ಆಭರಣಗಳನ್ನು ಎಗರಿಸಿರುವ ಕಳ್ಳರು ಉಡುಪಿ: ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಆದ ಘಟನೆ ಮತ್ಸ್ಯಗಂಧ ರೈಲಿನಲ್ಲಿ ಸಂಭವಿಸಿದೆ. ಮುಂಬೈ ಚೆಂಬೂರಿನ ಹೆಲ್ಮೀನಾ ಸಾಲಿನ್ಸ್ ಎಂಬವರು ಮಗಳು, ಪತಿ ಮತ್ತು ಮೊಮ್ಮಗಳೊಂದಿಗೆ ಡಿ.26ರಂದು ಮಧ್ಯಾಹ್ನ ಮತ್ಸ್ಯಗಂಧ ರೈಲಿನಲ್ಲಿ ಒಡವೆಗಳಿದ್ದ ಒಂದು ವ್ಯಾನಿಟಿ ಬ್ಯಾಗ್, ಬಟ್ಟೆಗಳಿದ್ದ ಹ್ಯಾಂಡ್ ಬ್ಯಾಗ್ ಮತ್ತು ಸೂಟ್‌ಕೇಸ್‌ಗಳೊಂದಿಗೆ ಉಡುಪಿಗೆ ಪ್ರಯಾಣಿಸುತಿದ್ದರು. ಹೆಲ್ಮೀನಾ ಸಾಲಿನ್ಸ್ ಒಡವೆಗಳಿದ್ದ ವ್ಯಾನಿಟಿ ಬ್ಯಾಗನ್ನು ತನ್ನ ತಲೆಯ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 46 ಲ.ರೂ. ಚಿನ್ನಾಭರಣ ಕಳವು Read More »

ಸುಬ್ರಹ್ಮಣ್ಯ-ಸಕಲೇಶಪುರ ರೈಲ್ವೆ ಮಾರ್ಗ ವಿದ್ಯುದೀಕರಣ ಪೂರ್ಣ

ವಂದೇ ಭಾರತ್‌ ರೈಲು ಪ್ರಾರಂಭಿಸಲು ಅನುಕೂಲ ಮಂಗಳೂರು: ತಾಂತ್ರಿಕವಾಗಿ ಅತ್ಯಂತ ಸವಾಲಿನ ವಿಭಾಗಗಳಲ್ಲಿ ಒಂದಾಗಿದ್ದ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ ಘಾಟ್ ಪ್ರದೇಶದ ವಿದ್ಯುದ್ದೀಕರಣ ಕಾರ್ಯಗಳು ಪೂರ್ಣಗೊಂಡಿವೆ. ಭಾನುವಾರ ನೈಋತ್ಯ ರೈಲ್ವೆ ಈ ಮಾರ್ಗದಲ್ಲಿ ಇಲೆಕ್ಟ್ರಿಕ್ ಲೋಕೋಮೋಟಿವ್ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು. ವಿದ್ಯುದ್ದೀಕರಣ ಕಾರ್ಯ ಡಿಸೆಂಬರ್, 2023ರಲ್ಲಿ ಪ್ರಾರಂಭವಾಗಿ 93.55 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. ವಂದೇ ಭಾರತ್‌ನಂಥ ಅಧಿಕ ವೇಗದ ರೈಲುಗಳನ್ನು ಓಡಿಸಲು ಈ ಮಾರ್ಗ ಈಗ ಸಿದ್ಧವಾಗಿದೆ. ಮಂಗಳೂರು-ಬೆಂಗಳೂರು ನಡುವೆ

ಸುಬ್ರಹ್ಮಣ್ಯ-ಸಕಲೇಶಪುರ ರೈಲ್ವೆ ಮಾರ್ಗ ವಿದ್ಯುದೀಕರಣ ಪೂರ್ಣ Read More »

ಬೆಂಗಳೂರಿಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ : 55.88 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ

ಮಹಾರಾಷ್ಟ್ರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹಲವೆಡೆ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ ಬೆಂಗಳೂರು: ಮಹಾರಾಷ್ಟ್ರದ ಕೊಂಕಣ ವಿಭಾಗದ ಪೊಲೀಸರು ಬೆಂಗಳೂರಲ್ಲಿ ವಿವಿಧೆಡೆ ದಾಳಿ ನಡೆಸಿ 55.88 ಕೋಟಿ ರೂ. ಮೌಲ್ಯದ ಡ್ರಗ್ಸ್​ ವಶಪಡಿಸಿಕೊಂಡಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಆರ್‌ಜೆ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿದ್ದು, ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ. ಮುಂಬೈನಲ್ಲಿ ಇತ್ತೀಚೆಗೆ 1.5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಈ ವೇಳೆ ಅರೆಸ್ಟ್​​ ಆಗಿದ್ದ ಅಬ್ದುಲ್ಲ ಖಾದರ್ ಶೇಕ್ ಎಂಬಾತ ವಿಚಾರಣೆ ವೇಳೆ

ಬೆಂಗಳೂರಿಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ : 55.88 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ Read More »

ಶಬರಿಮಲೆ : ಮಂಡಲ ಪೂಜೆ ಯಶಸ್ವಿ ಸಂಪನ್ನ

ಹರಿದು ಬರುತ್ತಿರುವ ಭಕ್ತ ಸಾಗರ ; 332.77 ಕೋ. ರೂ. ಆದಾಯ ಸಂಗ್ರಹ ಶಬರಿಮಲೆ : ಶಬರಿಮಲೆಯ ಈ ಯಾತ್ರಾ ಋತುವಿನ ಮಂಡಲ ಪೂಜೆ ಶನಿವಾರ ಸಂಪನ್ನಗೊಂಡಿತು. ಶನಿವಾರ ಬೆಳಗ್ಗೆ 10.10ರಿಂದ 11.30ರ ತನಕ ಮಂಡಲ ಪೂಜೆ ವಿಧಿಪೂರ್ವಕ ನೆರವೇರಿತು. ಸಂಪ್ರದಾಯದಂತೆ ರಾತ್ರಿ 10ಕ್ಕೆ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ಕೆಲವು ದಿನಗಳ ಮಟ್ಟಿಗೆ ಮುಚ್ಚಲಾಗಿದೆ. ಮುಂದಿನ ಹಂತವಾದ ಮಕರ ವಿಳಕ್ಕು ದರ್ಶನ ಯಾತ್ರೆಗಾಗಿ ಜ.30ರಂದು ಗರ್ಭಗುಡಿಯ ಬಾಗಿಲು ಮತ್ತೆ ತೆರೆಯಲಿದೆ. ನಂತರ ಮಕರ ಸಂಕ್ರಮಣದ ತನಕ ಅಯ್ಯಪ್ಪ

ಶಬರಿಮಲೆ : ಮಂಡಲ ಪೂಜೆ ಯಶಸ್ವಿ ಸಂಪನ್ನ Read More »

ಬಜಪೆ : ನೈತಿಕ ಪೊಲೀಸ್‌ಗಿರಿ ಆರೋಪದಲ್ಲಿ ಇಬ್ಬರ ಬಂಧನ

ಗೋಮಾಂಸ ಸಾಗಿಸುತ್ತಿದ್ದ ಬೈಕ್‌ ಅಡ್ಡಗಟ್ಟಿ ಹಲ್ಲೆಗೈದ ಪ್ರಕರಣ ಮಂಗಳೂರು: ಬಜಪೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಭವಿಸಿದ ಘಟನೆಯೊಂದಕ್ಕೆ ಸಂಬಂಧಿಸಿ ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದಡಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಎಡಪದವು ನಿವಾಸಿಗಳಾದ ಸುಮಿತ್ ಭಂಡಾರಿ (21) ಹಾಗೂ ರಜತ್ ನಾಯ್ಕ್ (30) ಎಂದು ಗುರುತಿಸಲಾಗಿದೆ. ಗೋಮಾಂಸ ಸಾಗಿಸುತ್ತಿದ್ದ ಅಬ್ದುಲ್ ಸತ್ತಾರ್ ಹಾಗೂ ಅವರ 11 ವರ್ಷದ ಪುತ್ರಿಯ ಮೇಲೆ ಹಲ್ಲೆ ನಡೆಸಿದ ಆರೋಪ ಅವರ ಮೇಲೆ ಇದೆ. ಅಬ್ದುಲ್ ಸತ್ತಾರ್ ಎಂಬವರು ತಮ್ಮ ಪುತ್ರಿಯೊಂದಿಗೆ

ಬಜಪೆ : ನೈತಿಕ ಪೊಲೀಸ್‌ಗಿರಿ ಆರೋಪದಲ್ಲಿ ಇಬ್ಬರ ಬಂಧನ Read More »

ಬೈಕ್‌ ಮೇಲೆ ಕಾಡುಕೋಣ ದಾಳಿ : ಸವಾರನಿಗೆ ಗಂಭೀರ ಗಾಯ

ಬೆಳ್ತಂಗಡಿ : ಸಂಚರಿಸುತ್ತಿದ್ದ ಬೈಕ್ ಮೇಲೆ ಕಾಡುಕೋಣ ದಾಳಿ ಮಾಡಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ತಂಗಡಿಯ ಲಾಯಿಲದಲ್ಲಿ ಸಂಭವಿಸಿದೆ. ಬೈಕ್‌ ಸವಾರನನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕೂಡೇಲು ನಿವಾಸಿ ವೆಂಕಪ್ಪ ಪೂಜಾರಿಯವರ ಮಗ ಸುಕೇಶ್(31) ಎಂಬವರು ಬೈಕ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಬೆಳ್ತಂಗಡಿಯಿಂದ ಕೆಲಸ ಮುಗಿಸಿ ಡಿ.26ರಂದು ರಾತ್ರಿ ಸುಮಾರು 8.45ಕ್ಕೆ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದಾಗ ಲಾಯಿಲ ಗ್ರಾಮದ ಅಲೆಕ್ಕಿ ರಸ್ತೆಯಲ್ಲಿ ಏಕಾಏಕಿ ಕಾಡುಕೋಣ

ಬೈಕ್‌ ಮೇಲೆ ಕಾಡುಕೋಣ ದಾಳಿ : ಸವಾರನಿಗೆ ಗಂಭೀರ ಗಾಯ Read More »

ಮುಸ್ಲಿಮರ ಮನೆ ನೆಲಸಮ ಪ್ರಕರಣ : ಮೂಗು ತೂರಿಸಿ ವಿವಾದ ಮಾಡಿದ ಕೇರಳ

ಕೇರಳದ ಕಾಂಗ್ರೆಸ್‌ ಲಾಬಿಯಿಂದ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಬೆಂಗಳೂರು : ಬೆಂಗಳೂರಿನ ಯಲಹಂಕದ ಕೋಗಿಲು ಲೇಔಟ್‌ನಲ್ಲಿ ಮುಸ್ಲಿಂ ಸಮುದಾಯದವರು ಅನಧಿಕೃತವಾಗಿ ನಿರ್ಮಿಸಿದ್ದ ಸುಮಾರು 200 ಮನೆಗಳು ಮತ್ತು ಶೆಡ್‌ಗಳನ್ನು ನೆಲಸಮ ಮಾಡಿದ ಪ್ರಕರಣ ಈಗ ಕಾಂಗ್ರೆಸ್‌ ಪಾಲಿಗೆ ಬಿಸಿ ತುಪ್ಪದಂತಾಗಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಈ ಘಟನೆಯಲ್ಲಿ ಅನಗತ್ಯವಾಗಿ ಮೂಗು ತೂರಿಸಿ ಖಂಡಿಸಿದ ಬಳಿಕ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಈ ವಿಚಾರದಲ್ಲೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಎಂಟ್ರಿಯಾಗಿದ್ದು, ಕರ್ನಾಟಕದಲ್ಲಿ ಕೇರಳದವರ ಲಾಬಿ

ಮುಸ್ಲಿಮರ ಮನೆ ನೆಲಸಮ ಪ್ರಕರಣ : ಮೂಗು ತೂರಿಸಿ ವಿವಾದ ಮಾಡಿದ ಕೇರಳ Read More »

ಪುತ್ತೂರು: ಸರ ಕಳ್ಳಿಯರ ಬಂಧನ

ಪುತ್ತೂರು: ದೇಗುಲದಲ್ಲಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಳ್ಳತನ ಮಾಡಿದ ಮೂವರು ಕಳ್ಳಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ತಮಿಳುನಾಡು ಮೂಲದ ಮಾರಿ, ಕಾಳಿಯಮ್ಮ ಯಾನೆ ಭಗವತಿ, ಶೀತಲ್ ಯಾನೆ ಪ್ರಿಯಾ ಎಂದು ಗುರುತಿಸಲಾಗಿದೆ. ಕೆಮ್ಮಿಂಜೆಯ ಯಮುನಾ ಎಂಬವರ ‌ಸರವನ್ನು ಕೆಮ್ಮಿಂಜೆ ಗ್ರಾಮದ ದೇವಸ್ಥಾನದಲ್ಲಿ ಕಳ್ಳತನ ಮಾಡಲಾಗಿತ್ತು. ಸುಮಾರು 14 ಗ್ರಾಂ ತೂಕದ ಸರವನ್ನು ಅವರು ಊಟ ಮಾಡಿ ಕೈ ತೊಳೆಯುವ ಸಮಯದಲ್ಲಿ ಕದಿಯಲಾಗಿತ್ತು. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದರು. 60 ಸಾವಿರ ಮೌಲ್ಯದ

ಪುತ್ತೂರು: ಸರ ಕಳ್ಳಿಯರ ಬಂಧನ Read More »

error: Content is protected !!
Scroll to Top