ಸುದ್ದಿ

ಶಿರೂರು ಗುಡ್ಡ ಕುಸಿತ : ಕಾಮಗಾರಿ ಮಾಡಿದ ಕಂಪನಿಯ 8 ನಿರ್ದೇಶಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಜು.16ರಂದು 11 ಜನರ ಸಾವಿಗೆ ಕಾರಣವಾಗಿದ್ದ ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪನಿಯ 8 ನಿರ್ದೇಶಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.ಶಿರೂರು ದುರಂತಕ್ಕೆ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದ ಕಂಪನಿಯೇ ಹೊಣೆ, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ದೂರು ದಾಖಲಿಸಿದ್ದರು.ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ಕೊರೆದಿದ್ದರಿಂದ ಅವಘಡ ಸಂಭವಿಸಿದೆ. ಅವಘಡ […]

ಶಿರೂರು ಗುಡ್ಡ ಕುಸಿತ : ಕಾಮಗಾರಿ ಮಾಡಿದ ಕಂಪನಿಯ 8 ನಿರ್ದೇಶಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶ Read More »

ಚಾಂಪಿಯನ್ಸ್‌ ಟ್ರೋಫಿ ಕೂಟಕ್ಕೆ ಉಗ್ರರ ಕರಿನೆರಳು : ಒಬ್ಬೊಬ್ಬ ಆಟಗಾರನಿಗೆ 100 ಪೊಲೀಸರ ಭದ್ರತೆ

13 ಸಾವಿರ ಸೈನಿಕರಿಂದ ಕಟ್ಟೆಚ್ಚರದ ಕಾವಲು ಇಸ್ಲಾಮಾಬಾದ್‌ : ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಕೂಟದ ಮೇಲೆ ಭಯೋತ್ಪಾದಕರ ಕರಿನೆರಳು ಆವರಿಸಿದೆ. ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ಐಎಸ್‌ಕೆಪಿ) ಎಂಬ ಭಯೋತ್ಪಾದಕ ಸಂಘಟನೆ ವಿದೇಶಿ ಪ್ರವಾಸಿಗರನ್ನು ಅಪಹರಿಸಿ ಒತ್ತೆ ಹಣಕ್ಕೆ ಬೇಡಿಕೆ ಇಡಬಹುದು ಎಂಬ ಗುಪ್ತಚರ ಮಾಹಿತಿ ಬಂದ ಬಳಿಕ ಪಾಕಿಸ್ಥಾನದಲ್ಲಿ ಕ್ರಿಕೆಟ್‌ ಆಡುತ್ತಿರುವ ವಿದೇಶಿ ಆಟಗಾರರಿಗೆ ಜೀವ ಬೆದರಿಕೆ ಶುರುವಾಗಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಕೂಟಕ್ಕೆ ಪಾಕ್‌ ಸರಕಾರ ಭಾರಿ ಭದ್ರತೆಯ ಏರ್ಪಾಡು ಮಾಡಿದೆ.

ಚಾಂಪಿಯನ್ಸ್‌ ಟ್ರೋಫಿ ಕೂಟಕ್ಕೆ ಉಗ್ರರ ಕರಿನೆರಳು : ಒಬ್ಬೊಬ್ಬ ಆಟಗಾರನಿಗೆ 100 ಪೊಲೀಸರ ಭದ್ರತೆ Read More »

ಆ್ಯಕ್ಟಿವಾ-ಕಾರು ಅಪಘಾತ | ಆ್ಯಕ್ಟಿವಾ ಸವಾರ ಜನಾರ್ದನ ಪೂಜಾರಿ ಮೃತ್ಯು

ಪುತ್ತೂರು: ಕಾರು ಹಾಗೂ ಆ್ಯಕ್ಟಿವಾ ಡಿಕ್ಕಿ ಹೊಡೆದುಕೊಂಡ ಪರಿಣಾಮ ಆ್ಯಕ್ಟಿವಾ ಸವಾರ ಮೃತಪಟ್ಟ ಘಟನೆ ಇಂದು ಕಬಕದಲ್ಲಿ ನಡೆದಿದೆ. ಕುಂಡಡ್ಕ ಕಂಪ ನಿವಾಸಿ ಜನಾರ್ದನ ಪೂಜಾರಿ (40) ಮೃತಪಟ್ಟ ಆ್ಯಕ್ಟಿವಾ ಸವಾರ. ಕಬಕದಿಂದ ವಿದ್ಯಾಪುರಕ್ಕೆ ಹೋಗುತ್ತಿರುವ ಆಕ್ಟಿವಾ ಮತ್ತು ಪುತ್ತೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ತೀವ್ರ ಗಂಭೀರ ಗಾಯಗೊಂಡಿದ್ದ ಆಕ್ಟಿವಾ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜನಾರ್ದನ ಪೂಜಾರಿಯವರು ಇಡ್ತಿದು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದರು. ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣೆ

ಆ್ಯಕ್ಟಿವಾ-ಕಾರು ಅಪಘಾತ | ಆ್ಯಕ್ಟಿವಾ ಸವಾರ ಜನಾರ್ದನ ಪೂಜಾರಿ ಮೃತ್ಯು Read More »

ಜೈಲಿಗೆ ಗಾಂಜಾ ಎಸೆದ ಯುವಕರು |  ವೀಡಿಯೋ ವೈರಲ್

ಮಂಗಳೂರು : ಮಂಗಳೂರಿನ ಜೈಲಿನೊಳಗೆ ಮಾದಕ ವಸ್ತು ಪೂರೈಕೆಯಾಗೋ ದೃಶ್ಯ ಸೆರೆಯಾದಿದಲ್ಲದೆ, ಮಾಜಿ ಮೇಯರ್ ಕಣ್ಣೆದುರಲ್ಲೇ ಜೈಲಿಗೆ ನಿಷೇಧಿತ ವಸ್ತು  ರವಾಣೆಯಾಗಿದೆ. ದ.ಕ. ಜಿಲ್ಲಾ ಕಾರಾಗೃಹಕ್ಕೆ ಯುವಕರು ಬೈಕ್ ನಲ್ಲಿ ಬಂದು ಗಾಂಜಾ ಎಸೆಯುತ್ತಿರುವ ವೀಡಿಯೋ ಜಾಲತಾಣದಲ್ಲಿ ವೈರಲ್‍ ಆಗಿದೆ. ಗಾಂಜಾ ಎಸೆಯುವ ದೃಶ್ಯ ಕಾರೊಂದರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂತಹದ್ದೆ ಘಟನೆಗಳು ಹಿಂದಿನ ದಿನಗಳಿಂದ ಸಾಕಷ್ಟು ನಡೆಯುತ್ತಿತ್ತು ಎಂಬ ವಿಷಯ ತಿಳಿಸು ಬಂದಿದೆ. ಗಾಂಜಾ ಎಸೆದು ಓಡಿದ ಯುವಕರಿಗೆ ಜೈಲಿನಲ್ಲಿ ಅಕ್ರಮ ತಡೆಗಟ್ಟಲು ಹಾಗೂ  ಭದ್ರತೆ ಹೆಚ್ಚಿಸಲು

ಜೈಲಿಗೆ ಗಾಂಜಾ ಎಸೆದ ಯುವಕರು |  ವೀಡಿಯೋ ವೈರಲ್ Read More »

ಸಹಾಯಕ ಪ್ರಾಧ್ಯಾಪಕಿ ರಾಜೇಶ್ವರಿ ಎಂ. ಅವರಿಗೆ ಡಾಕ್ಟರೇಟ್ ಪದವಿ

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಾಜೇಶ್ವರಿ ಎಂ. ಅವರಿಗೆ ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ. ಪಯನೀಯರಿಂಗ್ ಫೇಶಿಯಲ್ ಇಮೋಶನ್ ಅನಾಲಿಟಿಕ್ಸ್; ಏನ್ ಇನೋವೇಟಿವ್ ಫ್ಯೂಷನ್ ಆಫ್ ಡೀಪ್ ಲರ್ನಿಂಗ್ ಎಂಡ್ ವೈಟ್ ನಾರ್ಮಲೈಸ್ಡ್ ಗ್ರೇಡಿಯೆಂಟ್ ಬೂಸ್ಟಿಂಗ್ ಟೆಕ್ನಿಕ್ ಎನ್ನುವ ವಿಷಯದ ಬಗ್ಗೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್ ಡಾ.ಸುರೇಶ.ಡಿ ಹಾಗೂ ಎ.ಜೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗದ

ಸಹಾಯಕ ಪ್ರಾಧ್ಯಾಪಕಿ ರಾಜೇಶ್ವರಿ ಎಂ. ಅವರಿಗೆ ಡಾಕ್ಟರೇಟ್ ಪದವಿ Read More »

ಮನ್ನಡ್ಕಪಾದೆ ಗುಡ್ಡಕ್ಕೆ ತಗುಲಿದ ಬೆಂಕಿ

ಕಕ್ಕಿಂಜೆ : ಮನ್ನಡ್ಕಪಾದೆ ಗುಡ್ಡಕ್ಕೆ ಬೆಂಕಿ ಬಿದ್ದ ಘಟನೆ ಇಂದು ಕಕ್ಕಿಂಜೆಯಲ್ಲಿ ನಡೆದಿದೆ. ಸುಮಾರು 2 ಎಕರೆ ಪ್ರದೇಶದಲ್ಲಿ ಬೆಂಕಿ  ಆವರಿಸಿದೆ ಎನ್ನಲಾಗಿದೆ. ಯಾವುದೇ ರೀತಿ ಹೆಚ್ಚಿನ ಹಾನಿಯಾಗಿಲ್ಲವೆಂದು ತಿಳಿದುಬಂದಿದೆ.  

ಮನ್ನಡ್ಕಪಾದೆ ಗುಡ್ಡಕ್ಕೆ ತಗುಲಿದ ಬೆಂಕಿ Read More »

ಎಂಟು ದಿನಗಳಲ್ಲಿ ಗೃಹಲಕ್ಷ್ಮಿ ಹಣ ಜಮೆ : ಲಕ್ಷ್ಮಿ ಹೆಬ್ಬಾಳ್ಕರ್‌

ಬೆಂಗಳೂರು: ಎಂಟು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಮಾಡುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅಪಪ್ರಚಾರ ಮಾಡಲಿ. ನಾವು ಈಗಾಗಲೇ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದೇವೆ. ತಾಲೂಕು ಪಂಚಾಯಿತಿ ಮುಖಾಂತರ ಬಿಡುಗಡೆಯಾಗಬೇಕಿರುವುದರಿಂದ ಸ್ವಲ್ಪ ತಡವಾಗಿದೆ. ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ನಿಲ್ಲೋದಿಲ್ಲ. 8-10 ದಿನಗಳಲ್ಲಿ ಬರುತ್ತೆ ಅಂತ ಹೇಳಿದ್ದೆ. 2 ದಿನ ಕಳೆದಿದೆ. ಇನ್ನು 8 ದಿನಗಳಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ

ಎಂಟು ದಿನಗಳಲ್ಲಿ ಗೃಹಲಕ್ಷ್ಮಿ ಹಣ ಜಮೆ : ಲಕ್ಷ್ಮಿ ಹೆಬ್ಬಾಳ್ಕರ್‌ Read More »

ಜನರ ನಿರೀಕ್ಷೆ, ಅಪೇಕ್ಷೆಗಳೆಲ್ಲ ಮಣ್ಣುಪಾಲು : ಬಹಿರಂಗ ಪತ್ರದಲ್ಲಿ ವಿಜಯೇಂದ್ರ ಟೀಕೆ

ಈ ಬಾರಿ ಎಷ್ಟು ಸಾಲ ಮಾಡಲಿದ್ದೀರಿ ಎಂದು ಜನ ಆತಂಕದಿಂದ ನೋಡುತ್ತಿದ್ದಾರೆ ಎಂದು ಲೇವಡಿ ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 7ರಂದು ದಾಖಲೆಯ 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನಾಲ್ಕು ಪುಟಗಳ ಬಹಿರಂಗ ಪತ್ರ ಬರೆದಿದ್ದಾರೆ. ಈ ಬಾರಿಯ ಬಜೆಟ್​ನಲ್ಲಿ ಎಷ್ಟು ಸಾಲ ಮಾಡಲಿದ್ದೀರಿ ಎಂದು ಜನ ಆತಂಕದಿಂದ ನೋಡುತ್ತಿದ್ದಾರೆ. ನೌಕರರಿಗೆ ಸಂಬಳ ಕೊಡಲಾಗದ, ವಿದ್ಯುತ್ ಬಿಲ್ ಭರಿಸಲಾಗದ, ಗುತ್ತಿಗೆದಾರರ ಬಾಕಿ ಪಾವತಿಸಲಾಗದ ದಾರುಣ

ಜನರ ನಿರೀಕ್ಷೆ, ಅಪೇಕ್ಷೆಗಳೆಲ್ಲ ಮಣ್ಣುಪಾಲು : ಬಹಿರಂಗ ಪತ್ರದಲ್ಲಿ ವಿಜಯೇಂದ್ರ ಟೀಕೆ Read More »

ಎಪಿಎಂಸಿ ರಸ್ತೆಯಲ್ಲಿ ಸರಣಿ ಕಳ್ಳತನ

ಪುತ್ತೂರು : ಆದರ್ಶ ಆಸ್ಪತ್ರೆಯ ಬಳಿ ಇರುವ ಮೆಡಿಕಲ್, ಸೆಲೂನ್ ಮತ್ತು ಪಕ್ಕದ ಕಟ್ಟಡದಲ್ಲಿರುವ ಕ್ಲಿನಿಕ್ ಹಾಗೂ ಅಂಗಡಿಗಳಿಗೆ ಕಳ್ಳರು ನುಗ್ಗಿ ನಗದು ಕಳವು ಮಾಡಿರುವುದಾಗಿ ಇಂದು ಬೆಳಗ್ಗೆ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಎಪಿಎಂಸಿ ರಸ್ತೆಯಲ್ಲಿ ಸರಣಿ ಕಳ್ಳತನ Read More »

ತಂಪು ಪಾನೀಯ ಸಾಗಾಟದ ಲಾರಿ ಪಲ್ಟಿ | ಪಲ್ಟಿಯಾದ ಹಿನ್ನಲೆ ಹೊತ್ತಿ ಉರಿದ ಲಾರಿ ಚಕ್ರ

ಬಂಟ್ವಾಳ: ತಂಪು ಪಾನೀಯ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದ ಪರಿಣಾಮ ಬೆಂಕಿ ಕಾಣಿಸಿಕೊಂಡ ಘಟನೆ ಬಂಟ್ವಾಳದ ರಾ.ಹೆ.75ರ ಮಾಣಿ ಸಮೀಪದ ಸತ್ತಿಕಲ್ಲಿನಲ್ಲಿ ನಡೆದಿದೆ. ಪರಿಣಾಮ ಲಾರಿಯ ಚಕ್ರಗಳು ಸೇರಿದಂತೆ ಕೆಲವು ಭಾಗ ಹೊತ್ತಿ ಉರಿದಿದೆ ಎನ್ನಲಾಗಿದೆ. ಘಟನಾ ದುರಂತದಲ್ಲಿದ್ದ  ಲಾರಿ ಚಾಲಕ 37 ವರ್ಷದ ಇರ್ಫಾನ್ ಎಂಬವರಿಗೆ ಗಾಯಗಳಾಗಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾ ಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗೂಡಿನ ಬಳಿಯ ಅಥಾವುಲ್ಲ ಅವರಿಗೆ ಸೇರಿದ ಸಂಸ್ಥೆಯಿಂದ ತಂಪು ಪಾನೀಯಗಳನ್ನು ಲಾರಿಯ ಮೂಲಕ ಸಾಗಾಟ

ತಂಪು ಪಾನೀಯ ಸಾಗಾಟದ ಲಾರಿ ಪಲ್ಟಿ | ಪಲ್ಟಿಯಾದ ಹಿನ್ನಲೆ ಹೊತ್ತಿ ಉರಿದ ಲಾರಿ ಚಕ್ರ Read More »

error: Content is protected !!
Scroll to Top