ಸುದ್ದಿ

ಮರಳು ಪೂರೈಕೆ ಕೊರತೆ ನೀಗಿಸದಿದ್ದಲ್ಲಿ ಪ್ರತಿಭಟನೆ | ದಕ್ಷಿಣ ಕನ್ನಡ ಜಿಲ್ಲಾ ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಎಚ್ಚರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎದುರಾಗಿರುವ ಮರಳು ಪೂರೈಕೆ ಕೊರತೆಯನ್ನು 10 ದಿನಗಳಲ್ಲಿ ನಿವಾರಿಸದಿದ್ದರೆ ನಿರ್ಮಾಣ ಚಟುವಟಿಕೆ ಸ್ಥಗಿತಗೊಳಿಸಿ ಕಾರ್ಮಿಕರನ್ನೂ ಸೇರಿಸಿಕೊಂಡು ಪ್ರತಿಭಟನೆ ನಡೆಸಲಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ. ಎಸೋಸಿಯೇಷನ್‌ ಅಧ್ಯಕ್ಷ ಮಹಾಬಲ ಕೊಟ್ಟಾರಿಯವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನೈಸರ್ಗಿಕ ಮರಳು ಯಥೇಚ್ಚವಾಗಿದೆ. ಆದರೆ ಅದರ ಪೂರೈಕೆ ಸಮರ್ಪಕವಾಗಿ ಆಗದ ಕಾರಣ ಗುತ್ತಿಗೆದಾರರು ಮತ್ತು ಸಾರ್ವಜನಿಕರು ಕಾಳಸಂತೆಯಲ್ಲಿ ದುಬಾರಿ ದರಕ್ಕೆ ಮರಳನ್ನು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ. ಈ […]

ಮರಳು ಪೂರೈಕೆ ಕೊರತೆ ನೀಗಿಸದಿದ್ದಲ್ಲಿ ಪ್ರತಿಭಟನೆ | ದಕ್ಷಿಣ ಕನ್ನಡ ಜಿಲ್ಲಾ ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಎಚ್ಚರಿಕೆ Read More »

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಸುಳ್ಯದ ಯುವಕ ಆತ್ಮಹತ್ಯೆ

ಸುಳ್ಯ : ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಶುಕ್ರವಾರ ನಡೆದಿದೆ. ಸುಳ್ಯ ಗುತ್ತಿಗಾರಿನ ಆಚಳ್ಳಿಯ ಸಿರಿಯಾಕ್ ಮ್ಯಾಥ್ಯೂ ಎಂಬವರ ಮಗ ಸೈಬಿನ್ ಈ ಕೃತ್ಯ ಎಸಗಿದವರು. ನಿನ್ನೆ ಗುತ್ತಿಗಾರು ಪೇಟೆಗೆ ಸೈಬಿನ್  ಆಗಮಿಸಿದ್ದು, ಎಲ್ಲರ ಜೊತೆ ಸಂತೋಷದಿಂದ ಮಾತನಾಡಿದ್ದ ಎನ್ನಲಾಗಿದೆ. ಸೈಬಿನ್ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಅವರ ಹಳೆ ಮನೆಯ ಪಕ್ಕ ಜಮಾಯಿಸಿದ್ದರು. ಈ ಸಂದರ್ಭ  ಪೊಲೀಸರು ಆಗಮಿಸಿ ಜನರನ್ನು ಚದುರಿಸಿದರು ಎಂದು ತಿಳಿದು ಬಂದಿದೆ.

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಸುಳ್ಯದ ಯುವಕ ಆತ್ಮಹತ್ಯೆ Read More »

ಬೈಕ್ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಅಂಕಿತಾ ಮೃತ್ಯು

ಉಜಿರೆ: ಬೈಕ್ ಡಿಕ್ಕಿ ಹೊಡೆದ ಪರಿಣಾಮ 3ನೇ ತರಗತಿ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಶುಕ್ರವಾರ ಉಜಿರೆಯಲ್ಲಿ ನಡೆದಿದೆ. ದಿ.ಅಶೋಕ್ ಹಾಗೂ ಜಯಶ್ರೀ ದಂಪತಿ ಪುತ್ರಿ ಅಂಕಿತಾ ಮೃತಪಟ್ಟ ವಿದ್ಯಾರ್ಥಿನಿ ಬದನಾಜೆ ಹಿ.ಪ್ರಾ. ಶಾಲೆಯ ಎದುರು ರಸ್ತೆ ದಾಟುತ್ತಿರುವ ಸಂದರ್ಭ ಬೈಕ್‍ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಅಂಕಿತಾ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬೈಕ್ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಅಂಕಿತಾ ಮೃತ್ಯು Read More »

ಸುಳ್ಯದ ವಿವಾಹಿತೆ ಬೆಂಗಳೂರಿನಲ್ಲಿ ಆತ್ಮಹತ್ಯೆ

ಸುಳ್ಯ: ಉದ್ಯಮಿಯೊಬ್ಬರ ಸೊಸೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಡೈರಿ ರಿಚ್ ಐಸ್‍ ಕ್ರೀಂ ಉದ್ಯಮಿ ಕನಕಮಜಲಿನ ಗಿರಿಯಪ್ಪ ಗೌಡರ ಸೊಸೆ, ರಾಜೇಶ್ ಎಂಬವರ ಪತ್ನಿ ಐಶ್ವರ್ಯ (26) ಈ ಕೃತ್ಯ ಎಸಗಿದವರು. ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಸುಬ್ರಹ್ಮಣ್ಯ ಗೌಡ ಹಾಗೂ ಉಷಾ ದಂಪತಿ ಪುತ್ರಿಯಾಗಿರುವ ಐಶ್ವರ್ಯ ನಾಲ್ಕು ವರ್ಷಗಳ ಹಿಂದೆ ರಾಜೇಶ್‍ ಅವರನ್ನು ವಿವಾಹವಾಗಿದ್ದು, ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಪತಿ ರಾಜೇಶ್ ಐಸ್‍ ಕ್ರೀಂ ಪಾರ್ಲರ್ ನಡೆಸಿಕೊಂಡು ಬೆಂಗಳೂರಿನಲ್ಲೇ ವಾಸವಾಗಿದ್ದರು. ಅವರ ತಾಯಿಯೂ

ಸುಳ್ಯದ ವಿವಾಹಿತೆ ಬೆಂಗಳೂರಿನಲ್ಲಿ ಆತ್ಮಹತ್ಯೆ Read More »

ಹುಲಿ ವೇಷದ ತಂಡಗಳ ವಿಚಾರಕ್ಕೆ ಗಲಾಟೆ: ಮೂವರಿಗೆ ಚೂರಿ ಇರಿತ | ಮೆಲ್ಕಾರ್ ನಲ್ಲಿ ಘಟನೆ

ಬಂಟ್ವಾಳ: ಹುಲಿ ವೇಷದ ತಂಡಗಳ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಮೂವರಿಗೆ ಚೂರಿ ಇರಿತವಾದ ಘಟನೆ ಮೆಲ್ಕಾರಿನಲ್ಲಿ ನಡೆದಿದೆ. ಬೋಳಂಗಡಿ ನಿವಾಸಿಗಳಾದ ದೇವದಾಸ್, ಸಂದೀಪ್, ಶಂಕರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು. ಶೋಧನ್, ಯತೀಶ್, ಚೇತನ್, ಪ್ರಸನ್ನ, ಪ್ರದೀಪ್ ಮತ್ತು ಪ್ರಕಾಶ್ ತಂಡದವರು ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಮೆಲ್ಕಾರ್ ನಲ್ಲಿ ಎರಡು ತಂಡಗಳ ನಡುವೆ ಕೆಲ ದಿನಗಳ ಹಿಂದೆ ನಡೆದಿದ್ದ ಜಗಳ ನಡೆದಿತ್ತು. ನಿನ್ನೆ ತಂಡಗಳ ನಡುವೆ ಕಲಹ ಮುಂದುವರಿದು ಮೂವರ ಮೇಲೆ ಮತ್ತೊಂದು

ಹುಲಿ ವೇಷದ ತಂಡಗಳ ವಿಚಾರಕ್ಕೆ ಗಲಾಟೆ: ಮೂವರಿಗೆ ಚೂರಿ ಇರಿತ | ಮೆಲ್ಕಾರ್ ನಲ್ಲಿ ಘಟನೆ Read More »

ರಬ್ಬರ್ ಕಾರ್ಮಿಕರ ಬಾಕಿ ಬೋನಸ್ ಶೀಘ್ರ ಬಿಡುಗಡೆ | ಅರಣ್ಯ ಸಚಿವ ಖಂಡ್ರೆ ಭರವಸೆ

ಪುತ್ತೂರು: ರಬ್ಬರ್ ಕಾರ್ಮಿಕರಿಗೆ ನೀಡಲು ಬಾಕಿ ಇರುವ ಬೋನಸನ್ನು ಶೀಘ್ರ ನೀಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಪುತ್ತೂರು ಶಾಸಕ ಅಶೋಕ್ ರೈಯವರಿಗೆ ಭರವಸೆ ನೀಡಿದರು. ಕಾರ್ಮಿಕರ ಬೋನಸ್ ಬಾಕಿ ಇರುವ ಬಗ್ಗೆ ಕಾರ್ಮಿಕರು ಶಾಸಕರಿಗೆ ಮನವಿ ಮಾಡಿದ್ದರು. ಕಾರ್ಮಿಕರ ಸಮ್ಮುಖದಲ್ಲೇ ಸಚಿವರ ಜೊತೆ ಮಾತುಕತೆ ನಡೆಸಿದ್ದ ಶಾಸಕರು ಕಾರ್ಮಿಕರಿಗೆ ನೀಡಲು ಬಾಕಿ ಇರುವ ಬೋನಸ್ ನ್ನು ಅಗತ್ಯವಾಗಿ ನೀಡಬೇಕಾಗಿದೆ ಎಂದು ಸಚಿವರಲ್ಲಿ ವಿನಂತಿಸಿದ್ದರು. ಬೋನಸ್ ನೀಡಲು ಕೆಎಫ್‌ಡಿಸಿ ಮತ್ತು ಹಣಕಾಸು ಇಲಾಖೆಯ ಒಪ್ಪಿಗೆ ಸಿಗಲು ತಡವಾಗಿರುವ

ರಬ್ಬರ್ ಕಾರ್ಮಿಕರ ಬಾಕಿ ಬೋನಸ್ ಶೀಘ್ರ ಬಿಡುಗಡೆ | ಅರಣ್ಯ ಸಚಿವ ಖಂಡ್ರೆ ಭರವಸೆ Read More »

ಕಾವೇರುತ್ತಿರುವ ಹುಲಿಉಗುರು ಪೆಂಡೆಂಟ್ ಧಾರಣೆ ಪ್ರಕರಣ | ವನ್ಯಜೀವಿ ಅಂಗಗಳ ಸಂಗ್ರಹ ಪ್ರಕರಣ ತನಿಖೆಗೆ ವಿಶೇಷ ತಂಡ ರಚನೆ

ಮಂಗಳೂರು: ಹುಲಿಉಗುರು ಪ್ರಕರಣ ದಿನದಿಂದ ದಿನಕ್ಕೆ ಕಾವೇರುತ್ತಿದ್ದಂತೆ ವನ್ಯಜೀವಿ ಹಾಗೂ ಅದರ ಅಂಗಗಳ ಸಂಗ್ರಹ ಪ್ರಕರಣದ ತನಿಖೆಗೆ ವನ್ಯಜೀವಿ ಸಂರಕ್ಷಣಾಧಿಕಾರಿಗಳನ್ನು ಒಳಗೊಂಡ ಮೂರು ಸದಸ್ಯರ ಸಮಿತಿಯನ್ನು ಅರಣ್ಯ ಇಲಾಖೆ ರಚಿಸಿ ಸೂಕ್ತ ಕ್ರಮಕ್ಕೆ ಇದೀಗ ಮುಂದಾಗಿದೆ. ಈ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಸೆಲೆಬ್ರಿಟಿಗಳು ಸೇರಿದಂತೆ ಮತ್ತಿತರರು ಹುಲಿಉಗುರು ಪೆಂಡೆಂಟ್  ಧರಿಸಿರುವುದು ಕಂಡು ಬಂದಿದ್ದು, ಇದು ಕಾನೂನು ಪ್ರಕಾರ ಅಪರಾಧವಾಗಿರುವುದರಿಂದ ಪ್ರಾಣಿಗಳ ವಧೆ ಮಾಡಿ ಅಂಗಾಂಗ ಸಂಗ್ರಹದಂತಹ ಪ್ರಕರಣವನ್ನು ತನಿಖೆಗೊಳಪಡಿಸಿ ಸೂಕ್ತ

ಕಾವೇರುತ್ತಿರುವ ಹುಲಿಉಗುರು ಪೆಂಡೆಂಟ್ ಧಾರಣೆ ಪ್ರಕರಣ | ವನ್ಯಜೀವಿ ಅಂಗಗಳ ಸಂಗ್ರಹ ಪ್ರಕರಣ ತನಿಖೆಗೆ ವಿಶೇಷ ತಂಡ ರಚನೆ Read More »

ಬೆಂಗಳೂರು ಕಂಬಳ-ನಮ್ಮ ಕಂಬಳ : ದ.ಕ.ಉಸ್ತುವಾರಿ ಸಚಿವರಿಗೆ ಆಹ್ವಾನ

ಬೆಂಗಳೂರು: ಬೆಂಗಳೂರು ಕಂಬಳ ಸಮಿತಿ ವತಿಯಿಂದ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ, ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಮಾಡಿ ಕಂಬಳ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಿ, ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಬೆಂಗಳೂರು ಕಂಬಳ-ನಮ್ಮ ಕಂಬಳ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ಶಾಸಕ, ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಕಾರ್ಯಾಧ್ಯಕ್ಷ ಗುರುಕಿರಣ್, ಉಪಾಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ,

ಬೆಂಗಳೂರು ಕಂಬಳ-ನಮ್ಮ ಕಂಬಳ : ದ.ಕ.ಉಸ್ತುವಾರಿ ಸಚಿವರಿಗೆ ಆಹ್ವಾನ Read More »

ನಾರ್ಯ ಪರಿಸರದಲ್ಲಿ ಚಿರತೆ ಓಡಾಟ : ಸ್ಥಳೀಯರಲ್ಲಿ ಭೀತಿ

ಉಜಿರೆ : ಉಜಿರೆ ಸಮೀಪದ ಕನ್ಯಾಡಿ-2ಗ್ರಾಮದ ನಾರ್ಯ ಮೂರು ಮಾರ್ಗ ಎಂಬಲ್ಲಿ ಬುಧವಾರ ರಾತ್ರಿ ಚಿರತೆ ಕಂಡು ಬಂದಿದ್ದು, ಸ್ಥಳೀಯ ಜನತೆ ಭಯಭೀತರಾಗಿದ್ದಾರೆ. ರಾತ್ರಿ ಸಮಯ ಈ ರಸ್ತೆಯಲ್ಲಿ ಪಾಣೇಲಿನ ವ್ಯಕ್ತಿಗೆ ಚಿರತೆ ಕಂಡು ಬಂದಿದೆ ಎಂದು ಹೇಳಲಾಗಿದ್ದು, ಚಿರತೆಯ ಚಿತ್ರ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾರ್ಯ ಪರಿಸರದಲ್ಲಿ ಹಲವು ಮನೆಗಳು ಇದ್ದು ಇಲ್ಲಿನ ಮಂದಿ ಚಿರತೆ ಓಡಾಟದಿಂದ ಭೀತರಾಗಿದ್ದಾರೆ.  ಈ ಭಾಗದಲ್ಲಿ ಧರ್ಮಸ್ಥಳ ಮೀಸಲು ಅರಣ್ಯ ಹಾಗೂ ಬೆಳಾಲು ವ್ಯಾಪ್ತಿಯ ದಡಂತಮಲೆ ಅರಣ್ಯ ಪ್ರದೇಶ

ನಾರ್ಯ ಪರಿಸರದಲ್ಲಿ ಚಿರತೆ ಓಡಾಟ : ಸ್ಥಳೀಯರಲ್ಲಿ ಭೀತಿ Read More »

ಜ.22: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ : ಪ್ರಧಾನಿ ಮೋದಿಗೆ ಆಹ್ವಾನ

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮಂದಿರದಲ್ಲಿ ಜ.22 ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಲಿದ್ದು, ಪ್ರತಿಷ್ಠಾಪನೆಯಲ್ಲಿ ಭಾಗವಹಿಸಲು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಮಂತ್ರಣ ನೀಡಲಾಯಿತು. ಈ ಬಗ್ಗೆ ಸ್ವತಃ ಪ್ರಧಾನಿಗಳು ಟ್ವಿಟ್ ಮಾಡಿದ್ದು, ತಮ್ಮ ಜೀವಮಾನದಲ್ಲಿ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿರುವುದಕ್ಕೆ ಧನ್ಯನಾಗಿದ್ದೇನೆ ಎಂದು ಹೇಳಿದ್ದಾರೆ. ತಮಗೆ ಆಮಂತ್ರಣ ನೀಡಿದ್ದನ್ನು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ, ಜೈ ಸಿಯಾರಾಮ್! ಇಂದು ಅತ್ಯಂತ ಭಾವನಾತ್ಮಕ ದಿನವಾಗಿದೆ ಎಂದು ಹೇಳಿದ್ದಾರೆ. ಪ್ರಧಾನಿಗೆ ಆಮಂತ್ರಣ ನೀಡಿದ ತೀರ್ಥ ಕ್ಷೇತ್ರ

ಜ.22: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ : ಪ್ರಧಾನಿ ಮೋದಿಗೆ ಆಹ್ವಾನ Read More »

error: Content is protected !!
Scroll to Top