ಸುದ್ದಿ

ಪಂದ್ಯ ಮುಗಿಯುವ ಮೊದಲೇ ಸ್ಟೇಡಿಯಂನಿಂದ ಕಾಲ್ಕಿತ್ತ ಪಾಕ್‌ ಕ್ರಿಕೆಟ್‌ ಮಂಡಳಿ ಅಧ್ಯಕ್ಷ

ಅಧ್ಯಕ್ಷ ಮೊಹ್ಸಿನ್ ನಖ್ವಿ ತರಾತರಿಯಿಂದ ಕಾರಿನತ್ತ ಧಾವಿಸುವ ವಿಡಿಯೋ ವೈರಲ್‌ ಕೊಲಂಬೊ: ಇಲ್ಲಿ ನಡೆದ ಟಿ20 ವಿಶ್ವಕಪ್‌ ಮ್ಯಾಚ್‌ನಲ್ಲಿ ಭಾರತದ ಎದುರು ಸೋತ ಪಾಕಿಸ್ತಾನ ಮಾಮೂಲಿಯಂತೆ ವಿಪರೀತ ಟ್ರೋಲ್‌ಗೆ ಗುರಿಯಾಗಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಭಾರತೀಯರು ಮಾತ್ರವಲ್ಲದೆ ಪಾಕಿಸ್ತಾನಿಯರು ಕೂಡ ಪಾಕಿಸ್ತಾನ ತಂಡವನ್ನು ನಾನಾ ರೀತಿಯಲ್ಲಿ ಲೇವಡಿ ಮಾಡುತ್ತಿದ್ದಾರೆ. ಗ್ರೇಟೆಸ್ಟ್ ರೈವಲ್ರಿ ಎಂದು ಹೇಳಿಕೊಂಡರೂ ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ತಂಡದ ಕಡೆಯಿಂದ ಯಾವುದೇ ರೀತಿಯ ಪೈಪೋಟಿ ಕಂಡು ಬರುತ್ತಿಲ್ಲ. ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ 61 ರನ್‌ಗಳ […]

ಪಂದ್ಯ ಮುಗಿಯುವ ಮೊದಲೇ ಸ್ಟೇಡಿಯಂನಿಂದ ಕಾಲ್ಕಿತ್ತ ಪಾಕ್‌ ಕ್ರಿಕೆಟ್‌ ಮಂಡಳಿ ಅಧ್ಯಕ್ಷ Read More »

ನಾಳೆ ಶಾಸಕರ ಫಾರಿನ್‌ ಟೂರ್‌ ಫಿಕ್ಸ್‌?

ಕುರ್ಚಿ ಕಿತ್ತಾಟದ ಮಧ್ಯೆ ಕೈಗೊಂಡ ವಿದೇಶ ಪ್ರವಾಸದಿಂದ ಸಂಚಲನ ಬೆಂಗಳೂರು: ಒಂದೆಡೆ ಮುಖ್ಯಮಂತ್ರಿ ಕುರ್ಚಿಗಾಗಿ ತೀವ್ರ ಕಚ್ಚಾಟ ನಡೆಯುತ್ತಿರುವಂತೆಯೇ ಕೆಲವು ಕಾಂಗ್ರೆಸ್‌ ಶಾಸಕರ ಫಾರಿನ್‌ ಟೂರ್‌ ಫಿಕ್ಸ್‌ ಆಗಿದೆ. ಕಿತ್ತಾಟ ತಾರಕಕ್ಕೇರಿರುವಾಗಲೇ ಶಾಸಕರು ಔಿದೇಶ ಪ್ರವಾಸಕ್ಕೆ ಮುಂದಾಗಿರುವುದು ಸಂಚಲನ ಸೃಷ್ಟಿಸಿದೆ. ಹೈಕಮಾಂಡ್‌ ಹೇಳಿಕೆಗೂ ಡೋಂಟ್‌ ಕೇರ್‌ ಎಂದಿರುವ ಕಾಂಗ್ರೆಸ್‌ ಶಾಸಕರು ಸರ್ಕಾರದ ಖರ್ಚಿನಲ್ಲೇ ವಿದೇಶ ಪ್ರವಾಸಕ್ಕೆ ಮುಂದಾಗಿದ್ದಾರೆ. ಸುಮಾರು 27 ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು ವಿದೇಶ ಪ್ರವಾಸಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾ ಹಾಗೂ

ನಾಳೆ ಶಾಸಕರ ಫಾರಿನ್‌ ಟೂರ್‌ ಫಿಕ್ಸ್‌? Read More »

ವೃದ್ಧನ ಕೊಲೆ : ಮಗ ಸಹಿತ ಮೂವರ ಬಂಧನ

ನೆಲ್ಯಾಡಿಯ ಕೊಪ್ಪಮಾದೇರಿಯಲ್ಲಿ ಸಂಭವಿಸಿದ ಪ್ರಕರಣ ಉಪ್ಪಿನಂಗಡಿ: ಏಳು ದಿನದ ಹಿಂದೆ ಸಂಭವಿಸಿದ ನೆಲ್ಯಾಡಿ ಗ್ರಾಮದ ಕೊಪ್ಪಮಾದೇರಿ ನಿವಾಸಿ ವೃದ್ಧ ಕೆ.ಸಿ ವರ್ಗೀಸ್ (73) ಅವರ ಅಸಹಜ ಸಾವು ಪ್ರಕರಣ ಕೊಲೆ ಪ್ರಕರಣ‌ ಎಂದು ಖಚಿತ ಪಡಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತರ ಮಗ ಹಾಗೂ ಸಂಬಂಧಿಕರಾದ ಕೆ.ವಿ. ತೋಮಸ್ (39), ಸಿ.ಟಿ ರಾಜು (59), ಚಾಕೊಚ್ಚ (51) ಬಂಧಿತರು. ಫೆ.9ರಂದು ಉಪ್ಪಿನಂಗಡಿ ಠಾಣೆಯಲ್ಲಿ ಕೆ.ಸಿ.ವರ್ಗೀಸ್ ಸಾವಿಗೆ ಸಂಬಂಧಪಟ್ಟಂತೆ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.

ವೃದ್ಧನ ಕೊಲೆ : ಮಗ ಸಹಿತ ಮೂವರ ಬಂಧನ Read More »

ನದಿಯಿಂದ ಆಮೆಗಳನ್ನು ಹಿಡಿದು ಸುಟ್ಟ ನಾಲ್ಕು ಮಂದಿ ಸೆರೆ

ಅಜ್ಜಿಯ ತಿಥಿ ಕಾರ್ಯಕ್ಕೆ ಆಮೆ ಮಾಂಸ ಮಾಡಲು ಮುಂದಾಗಿದ್ದ ಆರೋಪಿಗಳು ಬೆಳ್ತಂಗಡಿ : ನದಿಯಲ್ಲಿ ಆಮೆಗಳನ್ನು ಹಿಡಿದು ಸುಟ್ಟು ಬೇಯಿಸುತ್ತಿದ್ದ ನಾಲ್ಕು ಮಂದಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ತಿಥಿ ಕಾರ್ಯಕ್ರಮಕ್ಕೆ ಪದಾರ್ಥ ಮಾಡಿ ಬಡಿಸಲು ಅಜ್ಜಿಗೆ ಇಷ್ಟವಾದ ಆಮೆಯನ್ನು ಸಂಬಂಧಿಕರು ನದಿಯಲ್ಲಿ ಅಕ್ರಮವಾಗಿ ಹಿಡಿದು ನದಿ ದಡದಲ್ಲೇ ಮಾಂಸ ಮಾಡಿ ಸುಡಲು ಯತ್ನಿಸುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದಾರೆ. ಬೆಳ್ತಂಗಡಿ ನಗರದ ಸೋಮವತಿ ನದಿಯಲ್ಲಿ ನಾಲ್ಕು ಆಮೆಯನ್ನು ಹಿಡಿದು ನದಿ ಬದಿಯಲ್ಲಿ ಮಾಂಸ ಮಾಡಲು ಪ್ರಯತ್ನಿಸುತ್ತಿರುವಾಗ ಫೆ.14ರಂದು

ನದಿಯಿಂದ ಆಮೆಗಳನ್ನು ಹಿಡಿದು ಸುಟ್ಟ ನಾಲ್ಕು ಮಂದಿ ಸೆರೆ Read More »

ಕೆಎಸ್‌ಆರ್‌ಟಿಸಿ ಲಗೇಜ್‌ ಶುಲ್ಕ ಹೆಚ್ಚಳ

ಇಂದಿನಿಂದಲೇ ಶೇ.15ರಷ್ಟು ಹೆಚ್ಚಿಸಿ ಆದೇಶ ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಾಗಿಸುವ ಲಗೇಜ್‌ ಶುಲ್ಕವನ್ನು ಹೆಚ್ಚಿಸಿದೆ. ನೂತನ ದರ ಇಂದಿನಿಂದಲೇ ಜಾರಿಗೆ ಬರುತ್ತಿದೆ. ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಸಂಸ್ಥೆ, ಪ್ರತಿಯೊಂದು ದರ ಪರಿಷ್ಕರಣೆಯ ನಂತರ ಲಗೇಜ್ ಶುಲ್ಕವನ್ನೂ ಮರುಪರಿಶೀಲನೆ ಮಾಡಲಾಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ ಎಂದು ತಿಳಿಸಿದೆ. 2025ರ ಜನವರಿಯಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಆದರೆ ಲಗೇಜ್ ಶುಲ್ಕವನ್ನು ಆಗ ಪರಿಷ್ಕರಿಸಲಾಗಿರಲಿಲ್ಲ. ಈ ಹಿನ್ನೆಲೆ ಇದೀಗ

ಕೆಎಸ್‌ಆರ್‌ಟಿಸಿ ಲಗೇಜ್‌ ಶುಲ್ಕ ಹೆಚ್ಚಳ Read More »

ಟಿ20 ವಿಶ್ವಕಪ್‌ : ಭಾರತದ ಬೌಲಿಂಗ್‌ಗೆ ಪಾಕಿಸ್ತಾನ ಧೂಳೀಪಟ

61 ರನ್‌ಗಳ ಗೆಲುವಿನೊಂದಿಗೆ ಸೂಪರ್‌ 8ಕ್ಕೆ ಟೀಮ್‌ ಇಂಡಿಯಾ ಎಂಟ್ರಿ ಕೊಲಂಬೊ: ಇಲ್ಲಿನ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನದ ವಿರುದ್ಧ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ವಿಭಾಗದಲ್ಲಿ ಪಾರಮ್ಯ ಮೆರೆದ ಭಾರತ 61 ರನ್‌ಗಳ ಭರ್ಜರಿ ಜಯ ಸಾಧಿಸಿ ಭಾರತ ಇತಿಹಾಸ ನಿರ್ಮಿಸಿದೆ. ದಾಖಲೆಯ ಜಯದೊಂದಿಗೆ ಗ್ರೂಪ್‌ ಎ ವಿಭಾಗದಲ್ಲಿ 6 ಅಂಕ ಸಂಪಾದಿಸಿ ಟೀಂ ಇಂಡಿಯಾ ಸೂಪರ್‌ 8 ಹಂತವನ್ನು ಪ್ರವೇಶಿಸಿದೆ. ಗೆಲ್ಲಲು 176 ರನ್‌ಗಳ ಕಠಿಣ ಗುರಿ ಪಡೆದ ಪಾಕಿಸ್ತಾನ 18

ಟಿ20 ವಿಶ್ವಕಪ್‌ : ಭಾರತದ ಬೌಲಿಂಗ್‌ಗೆ ಪಾಕಿಸ್ತಾನ ಧೂಳೀಪಟ Read More »

ಮೆಟ್ರೋ ಸ್ಲ್ಯಾಬ್‌ ಕುಸಿತ ಪ್ರಕರಣ : ಗುತ್ತಿಗೆದಾರನಿಗೆ 6 ಕೋ. ರೂ. ದಂಡ

ಮುಂಬೈಯಲ್ಲಿ ಮೆಟ್ರೋ ಸ್ಲ್ಯಾಬ್‌ ಆಟೋ, ಕಾರಿನ ಮೇಲೆ ಬಿದ್ದು ಓರ್ವ ಸಾವಿಗೀಡಾದ ಘಟನೆ ಮುಂಬೈ: ಉಪನಗರ ಮುಲುಂಡ್‌ ಪ್ರದೇಶದಲ್ಲಿ ಮೆಟ್ರೋ ಸ್ಲ್ಯಾಬ್‌ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಪ್ರಕರಣ ಸಂಬಂಧ ಯೋಜನಾ ನಿರ್ದೇಶಕರು, ಗುತ್ತಿಗೆದಾರರು ಸೇರಿ ಐವರನ್ನ ಬಂಧಿಸಲಾಗಿದೆ. ಅಲ್ಲದೇ ಕಾರ್ಯನಿರ್ವಾಹಕ ಇಂಜಿನಿಯರ್‌ನನ್ನು ಅಮಾನತುಗೊಳಿಸಿದ್ದು, ಯೋಜನೆಯಲ್ಲಿ ಭಾಗಿಯಾಗಿರುವ ಗುತ್ತಿಗೆದಾರರು ಮತ್ತು ಸಲಹೆಗಾರರಿಗೆ 6 ಕೋಟಿ ದಂಡ ವಿಧಿಸಿದೆ. ಯೋಜನಾ ನಿರ್ದೇಶಕ ಹರೀಶ್ ಚೌಹಾಣ್, ಇಬ್ಬರು ಯೋಜನಾ ವ್ಯವಸ್ಥಾಪಕರು ಸೇರಿದಂತೆ ಮಿಲನ್ ರೋಡ್ ಬಿಲ್ಡ್‌ಟೆಕ್‌ನ ನಾಲ್ವರು ಉದ್ಯೋಗಿಗಳು ಮತ್ತು ಡಿಬಿ

ಮೆಟ್ರೋ ಸ್ಲ್ಯಾಬ್‌ ಕುಸಿತ ಪ್ರಕರಣ : ಗುತ್ತಿಗೆದಾರನಿಗೆ 6 ಕೋ. ರೂ. ದಂಡ Read More »

ವಿದೇಶದಿಂದಲೇ ಯುವತಿಯರಿಗೆ ವಂಚನೆ : ಪತಿಯ ವಿರುದ್ಧ ದೂರು ನೀಡಿದ ಪತ್ನಿ

ಮದುವೆಯಾಗಿದ್ದರೂ ಬೇರೆ ಯುವತಿಯರಿಗೆ ಮೋಸ ಮಾಡುತ್ತಿದ್ದ ಬಜಪೆಯ ಯುವಕ ಮಂಗಳೂರು : ಮ್ಯಾಟ್ರಿಮೋನಿ ಸೈಟ್‌ನಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಮದುವೆಯ ನಾಟಕವಾಡಿ ಹಣ ಪಡೆದು ವಂಚಿಸುತ್ತಿದ್ದ ಯುವಕ ಮತ್ತು ಅವನ ಸಹಾಯಕನ ಮುಖವಾಡ ಬಯಲಾದ ಬೆನ್ನಿಗೆ ಮಂಗಳೂರಿನಲ್ಲಿ ಇದೇ ಮಾದರಿಯ ಇನ್ನೊಂದು ಘಟನೆ ವರದಿಯಾಗಿದೆ. ವಿದೇಶದಲ್ಲೇ ಕುಳಿತು ಯುವತಿಯರಿಗೆ ಗಾಳ ಹಾಕುತ್ತಿದ್ದ ಮತ್ತೊಬ್ಬನ ವಂಚನೆ ಬಯಲಾಗಿದ್ದು, ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಯಲು ಮಾಡಿದ್ದಾರೆ. ಬಜಪೆ ನಿವಾಸಿ ಮನೀಶ್ ಎಂಬಾತನ ವಿರುದ್ಧ ಪತ್ನಿ ಪ್ರೀತಿ

ವಿದೇಶದಿಂದಲೇ ಯುವತಿಯರಿಗೆ ವಂಚನೆ : ಪತಿಯ ವಿರುದ್ಧ ದೂರು ನೀಡಿದ ಪತ್ನಿ Read More »

ಗೂಗಲ್‌ ಮ್ಯಾಪ್‌ ನಂಬಿ ಗುಂಡಿಗೆ ಬಿದ್ದ ಕಾರು

ಹೆದ್ದಾರಿ ಬಿಟ್ಟು ಒಳ ರಸ್ತೆಗಳಲ್ಲಿ ಹೋಗಿ ಅಪಘಾತ ಉಡುಪಿ: ಗೂಗಲ್‌ ಮ್ಯಾಪ್‌ ಎಡವಟ್ಟಿನಿಂದ ಕಾರೊಂದು ಹೊಳೆಗೆ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಘಟನೆ ಶುಕ್ರವಾರ ರಾತ್ರಿ ಕೋಟ ಸಾೖಬ್ರಕಟ್ಟೆ ಮುಖ್ಯ ರಸ್ತೆಯ ಉಪ್ಲಾಡಿ ಹೊಳೆ ಬದಿಯಲ್ಲಿ ಸಂಭವಿಸಿದೆ. ಕೇರಳ ಮೂಲದ ಕುಟುಂಬವೊಂದು ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕಾಗಿ ಪ್ರಯಾಣಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುತ್ತಿದ್ದ ವೇಳೆ ಗೂಗಲ್‌ ಮ್ಯಾಪ್‌ ತೋರಿದ ಡೈವರ್ಶನ್‌ ಅನುಸರಿಸಿ ಬ್ರಹ್ಮಾವರ ಬಳಿ ಬಾರಕೂರು ಮಾರ್ಗವಾಗಿ ಸಾೖಬ್ರಕಟ್ಟೆ ಮೂಲಕ ಕೋಟದತ್ತ ಸಾಗಿತ್ತು. ಉಪ್ಲಾಡಿ ಹೊಳೆ ಸಮೀಪ ತಲುಪಿದಾಗ

ಗೂಗಲ್‌ ಮ್ಯಾಪ್‌ ನಂಬಿ ಗುಂಡಿಗೆ ಬಿದ್ದ ಕಾರು Read More »

ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶವವಾಗಿ ಪತ್ತೆ

ಕ್ಯಾಲಿಫೋರ್ನಿಯಾದಲ್ಲಿ ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ಕ್ಯಾಲಿಫೋರ್ನಿಯಾ : ಕ್ಯಾಲಿಫೋರ್ನಿಯಾದಲ್ಲಿ ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಶವವಾಗಿ ಪತ್ತೆಯಾಗಿದ್ದಾರೆ. ಭಾರತೀಯ ವಿದ್ಯಾರ್ಥಿಯ ಶವ ಪತ್ತೆಯಾಗಿರುವುದು ಅವರ ಕುಟುಂಬವನ್ನು ಮಾತ್ರವಲ್ಲದೆ ಇಡೀ ಭಾರತೀಯ ವಿದ್ಯಾರ್ಥಿ ಸಮುದಾಯವನ್ನು ಆಘಾತಗೊಳಿಸಿದೆ. ಕರ್ನಾಟಕದ 22 ವರ್ಷದ ಸಾಕೇತ್ ಶ್ರೀನಿವಾಸಯ್ಯ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಮತ್ತು ಜೈವಿಕ ಅಣು ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು. ಫೆಬ್ರವರಿ 9ರಂದು ಕ್ಯಾಂಪಸ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಅವರನ್ನು

ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶವವಾಗಿ ಪತ್ತೆ Read More »

error: Content is protected !!
Scroll to Top