ಸುದ್ದಿ

ಎರಡು ವರ್ಷದಲ್ಲಿ 40 ಬಾರಿ ದುಬೈ ಪ್ರಯಾಣ ಕೈಗೊಂಡಿದ್ದ ನಟಿ ರನ್ಯಾ

ಕನ್ನಡದ ನಟಿಯ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ ಬಗೆದಷ್ಟೂ ಆಳ ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ನಟಿ ರನ್ಯಾ ರಾವ್ ಪ್ರಕರಣ ಅಗೆದಷ್ಟು ಬಯಲಾಗುತ್ತಲೇ ಇದೆ. ಈ ನಟಿ ಒಂದೆರಡು ಬಾರಿ ಅಲ್ಲ ಬರೋಬ್ಬರಿ 40 ಬಾರಿ ದುಬೈಗೆ ಹೋಗಿ ಬಂದಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಬಂಧನವಾಗುವ 2 ವಾರಗಳ ಹಿಂದೆ ರನ್ಯಾ ದುಬೈಗೆ ಹೋಗಿ ಬಂದಿದ್ದಳು. ಆಗ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಕಸ್ಟಮ್ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡು ನಾನು ಡಿಜಿಪಿ ಮಗಳು […]

ಎರಡು ವರ್ಷದಲ್ಲಿ 40 ಬಾರಿ ದುಬೈ ಪ್ರಯಾಣ ಕೈಗೊಂಡಿದ್ದ ನಟಿ ರನ್ಯಾ Read More »

ಮೂರನೇ ಫೈನಲ್‌ ಮುಖಾಮುಖಿಗೆ ಸಜ್ಜಾದ ಭಾರತ-ನ್ಯೂಜಿಲ್ಯಾಂಡ್‌

ಭಾನುವಾರ ದುಬೈಯಲ್ಲಿ ನಡೆಯಲಿದೆ ಹೈ ವೋಲ್ಟೇಜ್‌ ಫೈನಲ್‌ ಕದನ ದುಬೈ: ನಿನ್ನೆ ನಡೆದ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದು ನ್ಯೂಜಿಲ್ಯಾಂಡ್‌ ತಂಡ ಫೈನಲ್‌ಗೆ ಪ್ರವೇಶಿಸಿರುವುದರೊಂದಿಗೆ ಭಾರತವನ್ನು ಎದುರಿಸಲು ವೇದಿಕೆ ಸಿದ್ಧವಾಗಿದೆ. ಭಾನುವಾರ ದುಬೈನ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿದೆ. ಮೊದಲ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಟೀಮ್ ಇಂಡಿಯಾ ಫೈನಲ್​ಗೇರಿದರೆ, ದ್ವಿತೀಯ ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಸೋಲುಣಿಸಿ ನ್ಯೂಝಿಲೆಂಡ್ ಫೈನಲ್

ಮೂರನೇ ಫೈನಲ್‌ ಮುಖಾಮುಖಿಗೆ ಸಜ್ಜಾದ ಭಾರತ-ನ್ಯೂಜಿಲ್ಯಾಂಡ್‌ Read More »

ವಿಷಾಹಾರದಿಂದ ನರಳಿದ ಮಂಗಳೂರು ಜೈಲಿನ 45 ಕೈದಿಗಳು

ವಾಂತಿಭೇದಿಯಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಕೈದಿಗಳು ಮಂಗಳೂರು : ಮಂಗಳೂರು ಜೈಲಿನಲ್ಲಿ ನಿನ್ನೆ ವಿಷಾಹಾರ ಸೇವನೆಯಿಂದ ಸುಮಾರು 45 ಕೈದಿಗಳು ಅಸ್ವಸ್ಥರಾಗಿದ್ದು, ಈ ಪೈಕಿ ಓರ್ವ ಕೈದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೈಲಿನಲ್ಲಿ ನೀಡಿದ ಆಹಾರದಿಂದಾಗಿ ಫುಡ್ ಪಾಯಿಸನ್ ಆಗಿ ಹೊಟ್ಟೆನೋವಿನಿಂದ 45 ಕೈದಿಗಳು ನರಳಾಡಿದ್ದಾರೆ. ಏಕಾಏಕಿ ವಾಂತಿ ಮಾಡುತ್ತಾ ಹೊಟ್ಟೆನೋವಿನಿಂದ ಕೈದಿಗಳು ನರಳಾಡಿದ್ದಾರೆ. ಬಳಿಕ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಕೈದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಅಸ್ವಸ್ಥ ಕೈದಿಗಳನ್ನ ಇತರ ಕೈದಿಗಳು ತಾವೇ ಹೊತ್ತುತಂದಿದ್ದಾರೆ. ಈ ವೇಳೆ ನಾವು ಆಸ್ಪತ್ರೆಗೆ

ವಿಷಾಹಾರದಿಂದ ನರಳಿದ ಮಂಗಳೂರು ಜೈಲಿನ 45 ಕೈದಿಗಳು Read More »

ಲಾರಿ ಅಡ್ಡಗಟ್ಟಿ ಜೀವ ಬೆದರಿಕೆ: ಪ್ರಕರಣ ದಾಖಲು

ಕಡಬ,ಮಾ.5: ಕಡಬ ಠಾಣಾ ವ್ಯಾಪ್ತಿಯ ಅಡ್ಡಗದ್ದೆ ಎಂಬಲ್ಲಿಂದ ಲಾರಿಯಲ್ಲಿ  ಮಣ್ಣು ಸಾಗಿಸಿ ದೇವಸ್ಥಾನದ ಬಳಿ  ಹಾಕಿ ರಸ್ತೆಯಲ್ಲಿ  ಹೋಗುವಾಗ ನ್ಯೂಸ್ ರಿಪೋರ್ಟರ್ ಎಂದು ಹೇಳಿಕೊಂಡು  ಗಣೇಶ್ ಇಡಾಳ ಎಂಬಾತ ಲಾರಿ ಅಡ್ಡಗಟ್ಟಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ  ಕಡಬ ಠಾಣೆಯಲ್ಲಿ ಮಂಗಳವಾರ ರಾತ್ರಿ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದ   ಚಿದ್ಗಲ್ ನಿವಾಸಿ ಪ್ರವೀಣ್ ಕುಮಾರ್ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.  ಪ್ರವೀಣ್ ಕುಮಾರ್ ಲಾರಿ ಚಾಲಕನಾಗಿ ದುಡಿಯುತ್ತಿದ್ದು, ಮಂಗಳವಾರ ರಾತ್ರಿ ಕಡಬದ  ಅಡ್ಡಗದ್ದೆ

ಲಾರಿ ಅಡ್ಡಗಟ್ಟಿ ಜೀವ ಬೆದರಿಕೆ: ಪ್ರಕರಣ ದಾಖಲು Read More »

ಮಾ.8 : ಜಿಲ್ಲಾ ಮಟ್ಟದ ಮಹಿಳಾ ದಿನಾಚರಣೆ | ವಿವಿಧತೆಯಲ್ಲಿ ಏಕತೆ ವಿಶಿಷ್ಟ ವಾಹನ ಜಾಥಾ

ಪುತ್ತೂರು: ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದೊಂದಿಗೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಪುತ್ತೂರು ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಮಾ.8 ರಂದು ಜಿಲ್ಲಾ ಮಟ್ಟದ ಮಹಿಳಾ ದಿನಾಚರಣೆ ಹಾಗೂ ವಿವಿಧತೆಯಲ್ಲಿ ಏಕತೆ ವಿಶಿಷ್ಠ ವಾಹನ ಜಾಥಾ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಚಂಚಲ ತೇಜೋಮಯ ಅವರು ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 37 ವರ್ಷಗಳಿಂದ ಮಹಿಳಾ ಒಕ್ಕೂಟ ಮಹಿಳೆಯರ ಸಮಗ್ರ ಅಭಿವೃದ್ದಿಗಾಗಿ ಕೆಲಸ ಮಾಡುತ್ತಿದೆ. ಮಹಿಳೆಯರಲ್ಲಿ ಜಾಗೃತಿ ಮೂಡಿಸುವ

ಮಾ.8 : ಜಿಲ್ಲಾ ಮಟ್ಟದ ಮಹಿಳಾ ದಿನಾಚರಣೆ | ವಿವಿಧತೆಯಲ್ಲಿ ಏಕತೆ ವಿಶಿಷ್ಟ ವಾಹನ ಜಾಥಾ Read More »

ಗೆಜ್ಜೆಗಿರಿಯಲ್ಲಿ ದೇಯಿ ಬೈದ್ಯೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ, ಬೈದರ್ಕಳ ನೇಮೋತ್ಸವ

ಪುತ್ತೂರು: ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ನಂದನಬಿತ್ತ್‌ಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿ ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ  ಮಂಗಳವಾರ ಸಂಜೆ ಮೂಲಸ್ಥಾನ ಗರಡಿಯಲ್ಲಿ ಶುದ್ದಹೋಮ ಕಲಶ ಮೂಲಸ್ಥಾನ ಗರಡಿಯಲ್ಲಿ  ಕ್ಷೇತ್ರ ತಂತ್ತಿಗಳಾದ ಶಿವಾನಂದ ಶಾಂತಿ ನೇತೃತ್ವದಲ್ಲಿ ಶುದ್ದಹೋಮ ಕಲಶ, ಧೂಮಾವತಿ ಬಲಿ ಸೇವೆ, ಸತ್ಯಧರ್ಮ ಚಾವಡಿಯಲ್ಲಿ ದೀಪಾರಾಧನೆ ಮಹಾಪೂಜಾ ಕಾರ್ಯಕ್ರಮ ನೆರವೇರಿತು. ಬಳಿಕ ಮೂಲಸ್ಥಾನ ಗರಡಿಯಿಂದ ಒಲಿಮದೆಯಿಂದ ಹೊರಟು ದೇಯಿ ಬೈದ್ಯೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ

ಗೆಜ್ಜೆಗಿರಿಯಲ್ಲಿ ದೇಯಿ ಬೈದ್ಯೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ, ಬೈದರ್ಕಳ ನೇಮೋತ್ಸವ Read More »

ನವ ವಿವಾಹಿತ ಹೃದಯಘಾತದಿಂದ ಮೃತ್ಯು

ಮಂಡ್ಯ: ನವವಿವಾಹಿತ ಹೃದಯಘಾತದಿಂದ ಮೃತಪಟ್ಟ ಘಟನೆಯೊಂದು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ. ಮೂರು ದಿನದ ಹಿಂದೆ ಮದುವೆಯಾದ ಶಶಾಂಕ್ (28 ವ.) ಹೃದಯಘಾತಕ್ಕೆ ಬಲಿಯಾದ ಯುವಕ.

ನವ ವಿವಾಹಿತ ಹೃದಯಘಾತದಿಂದ ಮೃತ್ಯು Read More »

ಬಸ್‍ – ಕಾರು ನಡುವೆ ಅಪಘಾತ | ಕಾರು ಚಾಲಕ ಗಂಭೀರ ಗಾಯ

ಬಂಟ್ವಾಳ : ಖಾಸಗಿ ಬಸ್ ಮತ್ತು ಕಾರು ನಡುವೆ ಡಿಕ್ಕಿಯಾಗಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡ್ ಬಳಿ ನಡೆದಿದೆ. ಬಿಸಿರೋಡ್ ಕಡೆಯಿಂದ ಮೆಲ್ಕಾರ್ ಕಡೆಗೆ ಹೋಗುತ್ತಿದ್ದ ವಿಶ್ವನಾಥ ಅವರ ಕಾರಿಗೆ ಮೆಲ್ಕಾರ್ ಕಡೆಯಿಂದ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.  ಕಾರು ಚಾಲಕ ಗಂಭೀರ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬಸ್‍ – ಕಾರು ನಡುವೆ ಅಪಘಾತ | ಕಾರು ಚಾಲಕ ಗಂಭೀರ ಗಾಯ Read More »

15 ದಿನದಲ್ಲಿ ನಾಲ್ಕು ಸಲ ಗಲ್ಫ್‌ಗೆ ಹೋಗಿ ಬಂದಿದ್ದ ನಟಿ ರನ್ಯಾ

ಗೋಲ್ಡ್‌ ಸ್ಮಗ್ಲಿಂಗ್‌ ಗ್ಯಾಂಗಿಗಾಗಿ ಕೆಲಸ ಮಾಡುತ್ತಿರುವ ಅನುಮಾನ ಬೆಂಗಳೂರು : ವಿದೇಶದಿಂದ ಚಿನ್ನ ಕಳ್ಳಸಾಗಾಟ ಮಾಡಿದ ಕೇಸ್‌ನಲ್ಲಿ ಸೆರೆಯಾಗಿರುವ ಕನ್ನಡದ ನಟಿ ರನ್ಯಾ ರಾವ್‌ ಹಿಂದೆ ಗೋಲ್ಡ್‌ ಸ್ಮಗ್ಲಿಂಗ್‌ನ ವ್ಯವಸ್ಥಿತ ಜಾಲವೊಂದು ಇರುವ ಬಗ್ಗೆ ಡಿಆರ್‌ಐ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ನಟಿ ಕಳೆದ 15 ದಿನಗಳಲ್ಲಿ ನಾಲ್ಕು ಬಾರಿ ಗಲ್ಫ್ ದೇಶಕ್ಕೆ ಹೋಗಿ ಬಂದಿದ್ದಳಂತೆ. ವಿಮಾನ ನಿಲ್ದಾಣದಲ್ಲಿ ಹಿರಿಯ ಅಧಿಕಾರಿಗಳು ಬಳಸುವ ಅಫಿಷಿಯಲ್ ಪ್ರೊಟೊಕಾಲ್ ಸರ್ವೀಸ್ ಬಳಸಿ ಸೆಕ್ಯುರಿಟಿ ಚೆಕ್‌ನಿಂದ ತಪ್ಪಿಸಿಕೊಳ್ಳುತ್ತಿದ್ದಳು. ಪ್ರತಿಬಾರಿ ಚಿನ್ನ ಕಳ್ಳಸಾಗಾಟಕ್ಕೆ

15 ದಿನದಲ್ಲಿ ನಾಲ್ಕು ಸಲ ಗಲ್ಫ್‌ಗೆ ಹೋಗಿ ಬಂದಿದ್ದ ನಟಿ ರನ್ಯಾ Read More »

ಇಡ್ಲಿಯ ಜನಪ್ರಿಯತೆಗೆ ಕುತ್ತು ತಂದ ಕ್ಯಾನ್ಸರ್‌ಕಾರಕ ಅಂಶ

ಹೋಟೆಲ್‌ಗಳಲ್ಲಿ ಇಡ್ಲಿಗೆ ಬೇಡಿಕೆ ಕುಸಿತ; ದೋಸೆಯತ್ತ ವಾಲಿದ ಗ್ರಾಹಕರು ಬೆಂಗಳೂರು : ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್‌ ಶೀಟ್‌ ಬಳಸಿ ಇಡ್ಲಿ ತಯಾರಿಸುವ ವಿಚಾರ ಬಯಲಾದ ಬೆನ್ನಿಗೆ ಜನರು ಇಡ್ಲಿ ತಿನ್ನಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಕೆಲವು ಹೋಟೆಲ್‌ಗಳ ಇಡ್ಲಿಯಲ್ಲಿ ಕ್ಯಾನ್ಸರ್​ಕಾರಕ ರಾಸಾಯನಿಕ ಅಂಶ ಪತ್ತೆಯಾದ ಬೆನ್ನಲ್ಲೇ ಇಡ್ಲಿಗೆ ಬೇಡಿಕೆ ಕುಸಿತ ಕಂಡುಬಂದಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಇಡ್ಲಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಬೆಂಗಳೂರಿನ ದರ್ಶಿನಿಗಳಲ್ಲಿ ಮತ್ತು ಹೋಟೆಲ್‌ಗಳಲ್ಲಿ ಜನರ

ಇಡ್ಲಿಯ ಜನಪ್ರಿಯತೆಗೆ ಕುತ್ತು ತಂದ ಕ್ಯಾನ್ಸರ್‌ಕಾರಕ ಅಂಶ Read More »

error: Content is protected !!
Scroll to Top