ಸುದ್ದಿ

ಮಗನ ಕೊಳೆತ ಮೃತದೇಹದ ಜೊತೆ ಐದು ದಿನ ಕಳೆದ ಅಂಧ ತಂದೆ-ತಾಯಿ

ಹೈದರಾಬಾದ್: ಮಗ ಮೃತಪಟ್ಟಿರುವುದು ತಿಳಿಯದೆ ಅಂಧ ವೃದ್ಧ ದಂಪತಿ ಮೃತದೇಹದ ಜೊತೆಗೆ 5 ದಿನ ಕಳೆದ ದಾರುಣ ಘಟನೆಯೊಂದು ಹೈದರಾಬಾದ್‌ ಬ್ಲೈಂಡ್ಸ್‌ ಕಾಲೋನಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು 30 ವರ್ಷದ ಪ್ರಮೋದ್ ಎಂದು ಗುರುತಿಸಲಾಗಿದೆ.ಪತಿ ನಿವೃತ್ತ ಸರ್ಕಾರಿ ನೌಕರ ಕಾಲುವ ರಮಣ ಮತ್ತು ಅವರ ಪತ್ನಿ ಶಾಂತಿಕುಮಾರಿ ಇಬ್ಬರೂ 60 ವರ್ಷ ಮೇಲ್ಪಟ್ಟವರು ಮತ್ತು ಇಬ್ಬರೂ ಅಂಧರು. ದಂಪತಿ ತಮ್ಮ ಮಗ ಪ್ರಮೋದ್‌ನೊಂದಿಗೆ ಹೈದರಾಬಾದ್‌ನ ಬ್ಲೈಂಡ್ಸ್‌ ಕಾಲೋನಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಅಕ್ಕಪಕ್ಕದವರು ಅವರ ಮನೆಯಿಂದ ವಿಪರೀತ ದುರ್ವಾಸನೆ […]

ಮಗನ ಕೊಳೆತ ಮೃತದೇಹದ ಜೊತೆ ಐದು ದಿನ ಕಳೆದ ಅಂಧ ತಂದೆ-ತಾಯಿ Read More »

ವಕ್ಫ್‌ ನೋಟಿಸ್‌ : ರೈತರಿಂದ ಅಹೋರಾತ್ರಿ ಧರಣಿ

ಸರಕಾರ ನಮಗೆ ದೀಪಾವಳಿಯ ಕರಾಳ ಉಡುಗೊರೆ ಕೊಟ್ಟಿದೆ ಎಂದು ಆಕ್ರೋಶ ವಿಜಯಪುರ: ಎಲ್ಲೆಡೆ ಜನರು ದೀಪಾವಳಿ ಸಂಭ್ರಮಕ್ಕೆ ಅಣಿಯಾಗುತ್ತಿದ್ದರೆ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತರು ಮಾತ್ರ ವಕ್ಫ್‌ ದೆಸೆಯಿಂದಾಗಿ ತಮ್ಮ ಕೃಷಿ ಜಮೀನು ಉಳಿಸಿಕೊಳ್ಳಲು ಹಬ್ಬ ಬಿಟ್ಟು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ರೈತರ ಪಾಲಿಗೆ ಈ ವರ್ಷದ ದೀಪಾವಳಿ ಕರಾಳವಾಗುವ ಲಕ್ಷಣ ಕಾಣಿಸಿದೆ. ತಮ್ಮ ಜಮೀನನ್ನು ವಕ್ಫ್ ಮಂಡಳಿ ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ರೈತರು ಅಹೋರಾತ್ರಿ ಹೋರಾಟ ಪ್ರಾರಂಭಿಸಿದ್ದಾರೆ. ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ

ವಕ್ಫ್‌ ನೋಟಿಸ್‌ : ರೈತರಿಂದ ಅಹೋರಾತ್ರಿ ಧರಣಿ Read More »

ಮುಡಾ ಹಗರಣ : 35 ತಾಸು ಇ.ಡಿ. ಅಧಿಕಾರಿಗಳಿಂದ ಪರಿಶೋಧನೆ | ಬೆಂಗಳೂರು, ಮೈಸೂರಿನಲ್ಲಿ ದಾಳಿ; ಸಿದ್ದರಾಮಯ್ಯ ಆಪ್ತರ ವಿಚಾರಣೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಯಾಗಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮೊನ್ನೆಯಿಂದ ಪ್ರಾರಂಭಿಸಿದ ದಾಳಿ ಮತ್ತು ಶೋಧ ಕಾರ್ಯಾಚರಣೆ ಬರೋಬ್ಬರಿ 35 ತಾಸು ನಿರಂತರವಾಗಿ ನಡೆದಿದೆ. ಇ.ಡಿ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ದಾಳಿ ಮಾಡಿ ದಾಖಲೆಪತ್ರ ಮತ್ತಿತರ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ರಾಕೇಶ್ ಪಾಪಣ್ಣ ಹಾಗೂ ಮುಡಾ ಮಾಜಿ ಆಯುಕ್ತ ನಟೇಶ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಕಳೆದೆರಡು ದಿನಗಳಿಂದ ಇಡಿ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನ 9 ಕಡೆಗಳಲ್ಲಿ ದಾಳಿ ನಡೆಸಿ ಮಹತ್ವದ

ಮುಡಾ ಹಗರಣ : 35 ತಾಸು ಇ.ಡಿ. ಅಧಿಕಾರಿಗಳಿಂದ ಪರಿಶೋಧನೆ | ಬೆಂಗಳೂರು, ಮೈಸೂರಿನಲ್ಲಿ ದಾಳಿ; ಸಿದ್ದರಾಮಯ್ಯ ಆಪ್ತರ ವಿಚಾರಣೆ Read More »

ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆ ಆರಂಭ

ಹೆಸರು ಸೇರ್ಪಡೆ, ಬದಲಾವಣೆ, ತಿದ್ದುಪಡಿಗೆ ಅವಕಾಶ ಬೆಂಗಳೂರು : ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆಗೆ ರಾಜ್ಯಾದ್ಯಂತ ಮಂಗಳವಾರದಿಂದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ಅಭಿಯಾನ ಪ್ರಾರಂಭವಾಗಿದೆ. ಮತದಾರರ ಕರಡು ಪಟ್ಟಿ ಪರಿಷ್ಕರಣೆಗೆ ಹಕ್ಕುಗಳು ಮತ್ತು ಆಕ್ಷೇಪಣೆ ಸಲ್ಲಿಸಲು ಅ.29ರಿಂದ ನವೆಂಬರ್‌ 24ರ ವರೆಗೆ ಅವಕಾಶ ಇರಲಿದೆ. ಹೆಸರು ಸೇರ್ಪಡೆ, ಬದಲಾವಣೆ, ತಿದ್ದುಪಡಿಗಳಿಗೆ ನವೆಂಬರ್‌ 9-10 ಹಾಗೂ 23-24 (ಶನಿವಾರ-ರವಿವಾರ) ವಿಶೇಷ ದಿನಾಂಕ ಇರಲಿದೆ. ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು

ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆ ಆರಂಭ Read More »

13ನೇ ಶತಮಾನದ ಮಠದ ಆಸ್ತಿಯೂ ವಕ್ಫ್‌ ಪಾಲು!

ಭಕ್ತರ ತೀವ್ರ ಆಕ್ರೋಶ, ಉದ್ವಿಗ್ನ ಪರಿಸ್ಥಿತಿ ವಿಜಯಪುರ: ಸಿಂದಗಿ ಪಟ್ಟಣದಲ್ಲಿರುವ 13ನೇ ಶತಮಾನದ ಮಠದ ಆಸ್ತಿ ಕೂಡ ಈಗ ವಕ್ಫ್‌ ಬೋರ್ಡ್‌ ಆಸ್ತಿ ಎಂದು ನೋಂದಣಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ರೈತರ ನೂರಾರು ಎಕರೆ ಕೃಷಿಭೂಮಿ ವಕ್ಫ್‌ ಆಸ್ತಿ ಎಂದು ಪಹಣಿಯಾದ ಬೆನ್ನಿಗೆ ಮಠದ ಆಸ್ತಿಯೂ ವಕ್ಫ್‌ ಪಾಲಾಗಿರುವುದು ಬೆಳಕಿಗೆ ಬಂದಿದೆ. ಸರ್ವೆ ನಂಬರ್‌ 1020ರ ಆಸ್ತಿಯಲ್ಲಿ ಕಬರಸ್ಥಾನ ವಕ್ಫ್ ಬೋರ್ಡ್‌ ಎಂದು ನೋಂದಣಿಯಾಗಿದೆ. ಸಿದ್ದಲಿಂಗ ಸ್ವಾಮಿಜಿ ಈ ಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂಬರ್‌ 11 ಖಾಲಿ

13ನೇ ಶತಮಾನದ ಮಠದ ಆಸ್ತಿಯೂ ವಕ್ಫ್‌ ಪಾಲು! Read More »

ಧಗಧಗಿಸುತ್ತಿದ್ದ ಬೆಂಕಿಯ ನಡುವಿನಿಂದ ಮಗುವನ್ನು ರಕ್ಷಿಸಿದ ʼದೈವʼ!

ಕಾಸರಗೋಡು: ನೀಲೇಶ್ವರದ ಅಂಜೂತಾಂಬಲಂ ವೀರರ್ಕಾವು ದೈವಸ್ಥಾನದಲ್ಲಿ ನಿನ್ನೆ ತಡರಾತ್ರಿ ವಾರ್ಷಿಕ ಕಳಿಯಾಟ್ಟಂ ಸಂದರ್ಭದಲ್ಲಿ ಸಂಭವಿಸಿದ ಭೀಕರ ಪಟಾಕಿ ದುರಂತದಲ್ಲಿ ಜನರನ್ನು ರಕ್ಷಿಸಲು ತಮ್ಮ ಪ್ರಾಣದ ಹಂಗು ತೊರೆದು ಶ್ರಮಿಸಿದವರ ಕಥೆಗಳು ಬೆಳಕಿಗೆ ಬರುತ್ತಿವೆ. ಎಲ್ಲಕ್ಕೂ ಮಿಗಿಲಾಗಿ ದೈವ ನರ್ತಕನೇ ತನ್ನ ಪ್ರಾಣಕ್ಕೆ ಅಪಾಯವಿದ್ದರೂ ಲೆಕ್ಕಿಸದೆ ಬೆಂಕಿಯ ನಡುವೆ ಸಿಕ್ಕಿಬಿದ್ದಿದ್ದ ಮಗುವೊಂದನ್ನು ರಕ್ಷಿಸಿದ್ದು ಸುದ್ದಿಯಾಗುತ್ತಿದೆ.ರಾತ್ರಿ 12.30 ವೇಳೆಗೆ ದೈವಸ್ಥಾನದಲ್ಲಿ ಭೀಕರ ದುರಂತ ಸಂಭವಿಸಿದೆ. ಈ ವೇಳೆ ತೆಯ್ಯಂ (ದೈವ) ಆವೇಶವಾಗಿ ನರ್ತನ ನಡೆಯುತ್ತಿತ್ತು. ಕಿವಿಗಡಚಿಕ್ಕುವ ಶಬ್ದದೊಂದಿಗೆ ದೈವಸ್ಥಾನದ ಪಕ್ಕವೇ

ಧಗಧಗಿಸುತ್ತಿದ್ದ ಬೆಂಕಿಯ ನಡುವಿನಿಂದ ಮಗುವನ್ನು ರಕ್ಷಿಸಿದ ʼದೈವʼ! Read More »

ಧಾರವಾಡ, ಯಾದಗಿರಿ ಜಿಲ್ಲೆಯ ರೈತರಿಗೂ ವಕ್ಫ್‌ ಶಾಕ್‌ : ಅನ್ನದಾತ ಕಂಗಾಲು

ನೂರಾರು ಎಕರೆ ಭೂಮಿ ಸದ್ದಿಲ್ಲದೆ ವಕ್ಫ್‌ಗೆ ವರ್ಗಾವಣೆಯಾದದ್ದು ಹೇಗೆ ಎಂಬ ಪ್ರಶ್ನೆ ಬೆಂಗಳೂರು: ದೇಶಾದ್ಯಂತ ಸದ್ದು ಮಾಡುತ್ತಿರುವ ವಕ್ಫ್ ಕಾಯ್ದೆಯ ಬಿಸಿ ಇದೀಗ ಧಾರವಾಡ ಮತ್ತು ಯಾದಗಿರಿ ಜಿಲ್ಲೆಗಳಿಗೆ ವಿಸ್ತರಿಸಿದೆ. ಧಾರವಾಡ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ನೂರಾರು ರೈತರ ಕೃಷಿಭೂಮಿ ಅವರಿಗರಿವಿಲ್ಲದೆ ವಕ್ಫ್‌ ಬೋರ್ಡ್‌ಗೆ ವರ್ಗಾವಣೆಯಾಗಿದೆ. ಕಂದಾಯ ಇಲಾಖೆಯಿಂದ ನೋಟಿಸ್‌ ಬಂದ ಬಳಿಕ ಎಚ್ಚೆತ್ತಿರುವ ಇಲ್ಲಿನ ರೈತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಧಾರವಾಡದಲ್ಲಿ ಕೆಲ ರೈತರ ಜಮೀನಿನ ಪಹಣಿಯಲ್ಲಿ ಕೆಲವು ವರ್ಷಗಳ ಹಿಂದೆಯೇ ವಕ್ಫ್ ಹೆಸರು ದಾಖಲಾಗಿರುವುದು

ಧಾರವಾಡ, ಯಾದಗಿರಿ ಜಿಲ್ಲೆಯ ರೈತರಿಗೂ ವಕ್ಫ್‌ ಶಾಕ್‌ : ಅನ್ನದಾತ ಕಂಗಾಲು Read More »

ದೇವಸ್ಥಾನದ ಉತ್ಸವದಲ್ಲಿ ಭೀಕರ ಪಟಾಕಿ ಸ್ಫೋಟ : 154 ಮಂದಿಗೆ ಗಾಯ; 10 ಮಂದಿಯ ಸ್ಥಿತಿ ಚಿಂತಾಜನಕ | ಕಾಸರಗೋಡಿನ ನೀಲೇಶ್ವರದಲ್ಲಿ ಈ ವರ್ಷದ ಮೊದಲ ಉತ್ಸವದ ಮೊದಲ ದಿನವೇ ಸಂಭವಿಸಿದ ದುರಂತ

ಕಾಸರಗೋಡು: ಕಾಸರಗೋಡು ಸಮೀಪ ನೀಲೇಶ್ವರಂನಲ್ಲಿ ದೇವಸ್ಥಾನದ ಉತ್ಸವದ ವೇಳೆ ಭೀಕರ ಪಟಾಕಿ ದುರಂತ ಸಂಭವಿಸಿ, 154 ಮಂದಿ ಗಾಯಗೊಂಡಿದ್ದು 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಕಾಸರಗೋಡು, ಕಣ್ಣೂರು ಮತ್ತು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವೀರರ್ಕಾವು ದೇವಸ್ಥಾನದ ಬಳಿಯ ಪಟಾಕಿ ಸಂಗ್ರಹಾಗಾರಕ್ಕೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಮಂಗಳವಾರ ತಡರಾತ್ರಿ 12.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ

ದೇವಸ್ಥಾನದ ಉತ್ಸವದಲ್ಲಿ ಭೀಕರ ಪಟಾಕಿ ಸ್ಫೋಟ : 154 ಮಂದಿಗೆ ಗಾಯ; 10 ಮಂದಿಯ ಸ್ಥಿತಿ ಚಿಂತಾಜನಕ | ಕಾಸರಗೋಡಿನ ನೀಲೇಶ್ವರದಲ್ಲಿ ಈ ವರ್ಷದ ಮೊದಲ ಉತ್ಸವದ ಮೊದಲ ದಿನವೇ ಸಂಭವಿಸಿದ ದುರಂತ Read More »

ಸೇನಾ ವಾಹನದ ಮೇಲೆ ಭಯೋತ್ಪಾದಕರ ದಾಳಿ : ಓರ್ವ ಉಗ್ರ ಬಲಿ

ಶ್ರೀನಗರ : ಜಮ್ಮು-ಕಾಶ್ಮೀರದ ಅಕ್ನೂರ್‌ ವಲಯದಲ್ಲಿ ಸೇನೆಯ ವಾಹನದ ಮೇಲೆ ಉಗ್ರರು ದಾಳಿ ಮಾಡಿದ್ದು, ಈ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಉಗ್ರನನ್ನು ಸಾಯಿಸಲಾಗಿದೆ.ಅಕ್ನೂರ್‌ ಸಮೀಪ ಬಟಲ್‌ ಎಂಬಲ್ಲಿ ಮೂವರು ಉಗ್ರರು ಸೇನೆಯ ವಾಹನದ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಸೇನೆ ಕೂಡಲೇ ಈ ಪ್ರದೇಶವನ್ನು ಸುತ್ತುವರಿದು ಉಗ್ರರ ತಲಾಷೆ ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಬಲಿಯಾಗಿದ್ದಾನೆ.ದೀಪಾವಳಿ ಹಬ್ಬಕ್ಕಾಗಿ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಭಾರಿ ಬಂದೋಬಸ್ತು ಮಾಡಿದ್ದು, ಇದರ ನಡುವೆ

ಸೇನಾ ವಾಹನದ ಮೇಲೆ ಭಯೋತ್ಪಾದಕರ ದಾಳಿ : ಓರ್ವ ಉಗ್ರ ಬಲಿ Read More »

ಮುಂದಿನ ವರ್ಷ ಜನಗಣತಿ?

2021ರಲ್ಲಿ ಕೋವಿಡ್‌ ಕಾರಣದಿಂದ ಮುಂದೂಡಿಕೆಯಾಗಿದ್ದ ಪ್ರಕ್ರಿಯೆ ಹೊಸದಿಲ್ಲಿ: ದೇಶದ ಜನಸಂಖ್ಯೆಯ ಅಧಿಕೃತ ಸಮೀಕ್ಷೆಯಾದ ಜನಗಣತಿಯನ್ನು 2025ರಲ್ಲಿ ಆರಂಭಿಸುವ ನಿರೀಕ್ಷೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಜನಗಣತಿ ಪ್ರಕ್ರಿಯೆ 2025ರಲ್ಲಿ ಆರಂಭಗೊಂಡು 2026ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಜನಗಣತಿಯ ನಂತರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಕೆಲಸ ಆರಂಭಗೊಂಡು 2028ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಆಗಲಿದ್ದು ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ

ಮುಂದಿನ ವರ್ಷ ಜನಗಣತಿ? Read More »

error: Content is protected !!
Scroll to Top