ಸುದ್ದಿ

ಕಲ್ಲಡ್ಕ ವಲಯದ  ಮಾಮೇಶ್ವರ  ಒಕ್ಕೂಟದ  ಉಮಾಮಹೇಶ್ವರ ದೇವಸ್ಥಾನದ  ಸಮುದಾಯ ಭವನ ರಚನೆಗೆ  ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ  ಅನುದಾನ ಮಂಜೂರು

ಕಲ್ಲಡ್ಕ  : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ, ಕಲ್ಲಡ್ಕ ವಲಯದ  ಮಾಮೇಶ್ವರ ಒಕ್ಕೂಟದ ಉಮಾಮಹೇಶ್ವರ ದೇವಸ್ಥಾನದ ಸಮುದಾಯ ಭವನ ರಚನೆಗೆ  ಶ್ರೀ ಕ್ಷೇತ್ರದಿಂದ ಮಂಜೂರಾಗಿರುವ ರೂ.1,50,000/- ಅನುದಾನದ ಮಂಜೂರಾತಿ ಪತ್ರವನ್ನು ನೀಡಲಾಯಿತು. ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ರಮೇಶ್  ದೇವಸ್ಥಾನದ ಆಡಳಿತ ಸಮಿತಿಯವರಿಗೆ  ಕ್ಷೇತ್ರದಿಂದ ಮಂಜೂರಾಗಿರುವ ರೂ.1,50,000/- ಅನುದಾನದ ಮಂಜೂರಾತಿ ಪತ್ರವನ್ನು ದೇವಸ್ಥಾನದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ […]

ಕಲ್ಲಡ್ಕ ವಲಯದ  ಮಾಮೇಶ್ವರ  ಒಕ್ಕೂಟದ  ಉಮಾಮಹೇಶ್ವರ ದೇವಸ್ಥಾನದ  ಸಮುದಾಯ ಭವನ ರಚನೆಗೆ  ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ  ಅನುದಾನ ಮಂಜೂರು Read More »

ಬೈಕ್ ಮತ್ತು ಆಕ್ಟಿವಾ ನಡುವೆ ಅಪಘಾತ

ಪುತ್ತೂರು: ಬೈಕ್ ಮತ್ತು ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಸಂಟ್ಯಾರ್ ನಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನಗಳು ನುಜ್ಜು ಗುಜ್ಜಾಗಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬೈಕ್ ಮತ್ತು ಆಕ್ಟಿವಾ ನಡುವೆ ಅಪಘಾತ Read More »

ತುಳುನಾಡಿನ ರಂಗಭೂಮಿ ಹಾಗೂ ಚಲನಚಿತ್ರ ಹಾಸ್ಯ ಕಲಾವಿದ ವಿವೇಕ್‍  ಮಾಡೂರ್ ಹೃದಯಘಾತದಿಂದ ನಿಧನ

ಉಳ್ಳಾಲ: ತುಳು ಚಿತ್ರರಂಗದಲ್ಲಿ ನಟನೆಯ ಮೂಲಕ ಕುಬ್ಜ ದೇಹದಿಂದಲೇ ಕಲಾ ಪ್ರೇಮಿಗಳನ್ನು ರಂಜಿಸುತ್ತಿದ್ದ ಪ್ರಚಂಡ ಕುಳ್ಳ ಖ್ಯಾತಿಯ ವಿವೇಕ್‌ ಮಾಡೂರು (52) ಇಂದು ಬೆಳಗ್ಗೆ ಹೃದಯಾಘಾತದಿಂದ ಮಾಡೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ನಿನ್ನೆ ರಾತ್ರಿ ತಮ್ಮ ಮನೆಯ ಶೌಚಾಲಯದಲ್ಲಿ ಬಿದ್ದಿದ್ದ ವಿವೇಕ್‌,  ನಿದ್ದೆಗೆ ಜಾರಿ ವಿಶ್ರಾಂತಿ ಪಡೆದಿದ್ದಾರೆ. ಬೆಳಗ್ಗೆ ಮನೆ ಮಂದಿ ಎಬ್ಬಿಸುವಾಗ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಟೆಲಿಫೋನ್‌ ಎಸ್‌ಟಿಡಿ ಬೂತ್‌ ನಡೆಸುತ್ತಿದ್ದ ವಿವೇಕ್‌ ಅವರು ಬೂತ್‌ ಮುಚ್ಚಿದ ನಂತರ ಅಣ್ಣನ ದಿನಸಿ ಅಂಗಡಿಯಲ್ಲಿ ಪ್ಲಾಸ್ಟಿಕ್‌ ಮನೆ

ತುಳುನಾಡಿನ ರಂಗಭೂಮಿ ಹಾಗೂ ಚಲನಚಿತ್ರ ಹಾಸ್ಯ ಕಲಾವಿದ ವಿವೇಕ್‍  ಮಾಡೂರ್ ಹೃದಯಘಾತದಿಂದ ನಿಧನ Read More »

ಪೋಕ್ಸೊ ಕೇಸ್‌ : ಯಡಿಯೂರಪ್ಪಗೆ ಕೋರ್ಟ್‌ನಿಂದ ರಿಲೀಫ್‌

ಖುದ್ದು ಹಾಜರಾತಿ, ಸಮನ್ಸ್‌ಗೆ ಹೈಕೋರ್ಟಿನಿಂದ ತಡೆ ಬೆಂಗಳೂರು: ಪೋಕ್ಸೊ ಪ್ರಕರಣದ ಸಂಬಂಧ ಮಾರ್ಚ್​ 15ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂಪ್ಪರಿಗೆ 1ನೇ ತ್ವರಿತಗತಿ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್​ಗೆ ಹೈಕೋರ್ಟ್​ ತಡೆ ನೀಡಿದೆ. ಯಡಿಯೂರಪ್ಪ ಖುದ್ದು ಹಾಜರಾತಿಗೂ ವಿನಾಯಿತಿ ನೀಡಿದೆ. ಈ ಮೂಲಕ ಪ್ರಕರಣದಲ್ಲಿ ಬಿ.ಎಸ್​ ಯಡಿಯೂಪ್ಪ ಅವರಿಗೆ ರಿಲೀಫ್​ ಸಿಕ್ಕಿದೆ.2024ರ ಫೆ‌ಬ್ರವರಿ 2ರಂದು ನಡೆದಿದೆ ಎನ್ನಲಾದ ಘಟನೆ ಕುರಿತು 1 ತಿಂಗಳು 12 ದಿನ ತಡವಾಗಿ ಪೋಕ್ಸೊ ಕೇಸ್ ದಾಖಲಿಸಲಾಗಿದೆ. ಘಟನೆ

ಪೋಕ್ಸೊ ಕೇಸ್‌ : ಯಡಿಯೂರಪ್ಪಗೆ ಕೋರ್ಟ್‌ನಿಂದ ರಿಲೀಫ್‌ Read More »

ಡಿಕ್ಕಿಯ ಬಿರುಸಿಗೆ ಕಾಂಪೌಂಡ್‌ನ ಬೇಲಿಯಲ್ಲಿ ಸಿಲುಕಿ ನೇತಾಡಿದ ಮಹಿಳೆ

ಮಂಗಳೂರಿನಲ್ಲಿ ಸಂಭವಿಸಿದ ಎದೆ ಝಲ್‌ ಎನಿಸುವ ಅಪಘಾತದ ವೀಡಿಯೊ ಭಾರಿ ವೈರಲ್‌ ಮಂಗಳೂರು: ಬೈಕ್ ಸವಾರನನ್ನು ಗುದ್ದಿ ಸಾಯಿಸಲೆಂದು ಧಾವಿಸಿ ಬಂದ ಕಾರು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದು, ಈ ಮಹಿಳೆ ಪಕ್ಕದ ಕಂಪೌಂಡ್‌ಗೆ ಎಸೆಯಲ್ಪಟ್ಟು ಕಬ್ಬಿಣದ ಬೇಲಿಯಲ್ಲಿ ಸಿಲುಕಿಕೊಂಡು ನೇತಾಡಿದ ವಿಲಕ್ಷಣ ಅಪಘಾತವೊಂದು ನಿನ್ನೆ ಸಂಜೆ ಮಂಗಳೂರಿನ ಕಾಪಿಕಾಡ್‌ನಲ್ಲಿ ಸಂಭವಿಸಿದ್ದು, ಇದರ ವೀಡಿಯೊ ಎಲ್ಲೆಡೆ ಹರಿದಾಡಿ ಭಾರಿ ವೈರಲ್‌ ಆಗಿದೆ. ಕಾರು ಗುದ್ದಿದ ರಭಸಕ್ಕೆ ಮಹಿಳೆ ಕಾಂಪೌಂಡ್​ ಮೇಲೆ ನೇತಾಡಿರುವ ದೃಶ್ಯ ಎದೆ

ಡಿಕ್ಕಿಯ ಬಿರುಸಿಗೆ ಕಾಂಪೌಂಡ್‌ನ ಬೇಲಿಯಲ್ಲಿ ಸಿಲುಕಿ ನೇತಾಡಿದ ಮಹಿಳೆ Read More »

ಕರಾವಳಿ ಪ್ರತ್ಯೇಕ ರಾಜ್ಯ : ಚರ್ಚೆಗೆ ಗ್ರಾಸವಾದ ಹರೀಶ್‌ ಪೂಂಜ ಹೇಳಿಕೆ

ಬೆಂಗಳೂರು: ವಿಧಾನ ಮಂಡಲ ಕಲಾಪದಲ್ಲಿ ನಿನ್ನೆ ಕರಾವಳಿಯ ಅಭಿವೃದ್ಧಿ ಕುರಿತು ಚರ್ಚೆ ನಡೆಯುತ್ತಿರುವ ವೇಳೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಪ್ರತ್ಯೇಕ ರಾಜ್ಯದ ಕುರಿತು ಪರೋಕ್ಷವಾಗಿ ಮಾಡಿದ ಉಲ್ಲೇಖ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.ಕರವಾಳಿ ಭಾಗದ ಶಾಸಕರು ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ನಿನ್ನೆ ಕರಾವಳಿ ಜಿಲ್ಲೆಗಳು ಅಭಿವೃದ್ಧಿಯಲ್ಲಿ ಹಿಂದುಳಿದ ಕುರಿತು ಮಾತನಾಡಿದ್ದಾರೆ. ಅಭಿವೃದ್ಧಿಗೆ ಅಪಾರವಾದ ಅವಕಾಶಗಳಿದ್ದರೂ ಕರಾವಳಿ ಜಿಲ್ಲೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಶಾಸಕರು ಒಕ್ಕೂರಲಿನಿಂದ ಹೇಳಿದ್ದಾರೆ.ಸುನಿಲ್ ಕುಮಾರ್ ಮಾತನಾಡಿ, ಸದನದಲ್ಲಿ ಉತ್ತರ ಕರ್ನಾಟಕ, ಬೆಂಗಳೂರು ಬಗ್ಗೆ ಚರ್ಚೆ

ಕರಾವಳಿ ಪ್ರತ್ಯೇಕ ರಾಜ್ಯ : ಚರ್ಚೆಗೆ ಗ್ರಾಸವಾದ ಹರೀಶ್‌ ಪೂಂಜ ಹೇಳಿಕೆ Read More »

ಉಚಿತ ಕೊಡುಗೆಗಳನ್ನು ನೀಡೋದ್ರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ , ಉದ್ಯೋಗ ಸೃಷ್ಟಿಯೇ ಮುಖ್ಯ : ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ

ಉಚಿತ ಕೊಡುಗೆಗಳನ್ನು ನೀಡೋದ್ರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ, ಅವಿಷ್ಕಾರದ ಮೂಲಕ ಉದ್ಯೋಗ ಸೃಷ್ಟಿಯೇ ಮುಖ್ಯ ಎಂದು ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿಯವರು ಹೇಳಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಸನ್ ಸೆಂಟರ್‌ನಲ್ಲಿ ಮಾ.12ರಂದು ನಡೆದ ಟ್ರೈ ಕಾನ್ ಮುಂಬೈ 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಚಿತ ಕೊಡುಗೆಗಳಿಂದ ಬಡತನ ನಿವಾರಣೆಯಾಗುವುದಿಲ್ಲ ಎಂದರು. ಅವಿಷ್ಕಾರದಿಂದ ಹೆಚ್ಚು ಉದ್ಯೋಗ ಸೃಷ್ಟಿಯಾದಾಗ ಮಾತ್ರ ಬಡತನ ದೂರವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ಮಾಜಿ NASSCOM ಅಧ್ಯಕ್ಷ ಹರೀಶ್ ಮೆಹ್ರಾ ಉಪಸ್ಥಿತರಿದ್ದರು. “ಉಚಿತ ಕೊಡುಗೆಗಳಿಂದ

ಉಚಿತ ಕೊಡುಗೆಗಳನ್ನು ನೀಡೋದ್ರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ , ಉದ್ಯೋಗ ಸೃಷ್ಟಿಯೇ ಮುಖ್ಯ : ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ Read More »

ನೆಲ್ಲಿದಡಿ ಗುತ್ತು ಉಳಿಸಿ ಪಾದಯಾತ್ರೆ ತಾತ್ಕಾಲಿಕ ರದ್ದು

ದೈವಾರಾಧನೆಗೆ ಅಡ್ಡಿಪಡಿಸಿದವರ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆ ಮಂಗಳೂರು : ನೆಲ್ಲಿದಡಿ ಗುತ್ತು ಕಾಂತೇರಿ ಜುಮಾದಿ ದೈವದ ಆರಾಧನೆಗೆ ಅಡ್ಡಿಪಡಿಸಿದ ವಿಶೇಷ ಆರ್ಥಿಕ ವಲಯ (ಎಂಎಸ್‌ಇಝಡ್‌)ದ ವಿರುದ್ಧ ಮಾ.18ರಂದು ನಡೆಸುದ್ದೇಶಿಸಿದ್ದ ಬೃಹತ್‌ ಪಾದಯಾತ್ರೆ ತಾತ್ಕಾಲಿಕವಾಗಿ ರದ್ದಾಗಿದೆ. ಬಜ್ಪೆಯ ಪೇಜಾವರ ಮಾಗಣೆಯ ನೆಲ್ಲಿದಡಿ ಗುತ್ತಿನ ಪ್ರಸಿದ್ಧ ಕಾಂತೇರಿ ಜುಮಾದಿ ದೈವದ ಆರಾಧನೆಗೆ ಸರಕಾರಿ ಕಂಪನಿ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಮಾ. 18ರಂದು ಬಜಪೆ-ನೆಲ್ಲಿದಡಿಗುತ್ತು ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು. ಆದರೆ, ದೈವಸ್ಥಾನದ ಧಾರ್ಮಿಕ ವಿಧಿವಿಧಾನಗಳನ್ನು ಪಾಲಿಸುವ

ನೆಲ್ಲಿದಡಿ ಗುತ್ತು ಉಳಿಸಿ ಪಾದಯಾತ್ರೆ ತಾತ್ಕಾಲಿಕ ರದ್ದು Read More »

ನಾಪತ್ತೆಯಾದ ನಿತೇಶ್‌ ಬೆಳ್ಚಾಡ  ಪತ್ತೆ

ಮಂಗಳೂರು :  ಪ್ಯಾರಾಮೆಡಿಕಲ್ ವಿದ್ಯಾರ್ಥಿ ನಿತೇಶ್‌ ಬೆಳ್ಚಾಡ  ಸುಮಾರು  ದಿನಗಳಿಂದ ಮನೆಗೆ ಬಾರದೆ ನಾಪತ್ತೆಯಾಗಿದ್ದ. ಮೂಡುಪೆರಾರ ನಿವಾಸಿ ನಿತೇಶ್ ಗೋವಾದಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಫೆಬ್ರವರಿ 13 ಕ್ಕೆ ನಾಪತ್ತೆಯಾಗಿದ್ದ ಈತನ ಸುಳಿವಿಗೆ ಪೊಲೀಸರು ವಿಶೇಷ ತಂಡ ರಚಿಸಿ ಅನೇಕ ಕಡೆ ತನಿಖೆ ನಡೆಸಿದ್ದರು ಮಾಹಿತಿ ಲಭಿಸಿರಲಿಲ್ಲ. ಆದರೆ ನಿತೇಶ್‍ ಎಂಬವನು ಗೋವಾದಲ್ಲಿ ಸಿಕ್ಕಿದ್ದಾನೆ ಎನ್ನಲಾಗಿದೆ.

ನಾಪತ್ತೆಯಾದ ನಿತೇಶ್‌ ಬೆಳ್ಚಾಡ  ಪತ್ತೆ Read More »

ನಾಲ್ಕನೇ ವಾರಕ್ಕೆ ದಾಪುಗಾಲಿಟ್ಟ ಭಾವ ತೀರ ಯಾನ | ಇಂದು ಸಂಜೆ 7:15ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ಹಾಗೂ ಕಿರಣ್‍ ತೇಜಸ್‍ ನಿರ್ದೇಶನದಲ್ಲಿ ಮೂಡಿಬಂದ “ಭಾವ ತೀರ ಯಾನ” ಚಲನಚಿತ್ರ ಇಂದಿಗೆ ನಾಲ್ಕನೇ ವಾರಕ್ಕೆ ಕಾಲಿರಿಸಿದೆ. ಪುತ್ತೂರಿನ ಭಾರತ್ ಸಿನಿಮಾನ್ ನಲ್ಲಿ ನಿರಂತರ ಪ್ರದರ್ಶನ ಕಾಣುತ್ತಿದ್ದು ಮಾ.14 (ಇಂದು) ರಂದು ಸಂಜೆ 7.15 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. ಕೌಂಟರ್‌ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ನಾಲ್ಕನೇ ವಾರಕ್ಕೆ ದಾಪುಗಾಲಿಟ್ಟ ಭಾವ ತೀರ ಯಾನ | ಇಂದು ಸಂಜೆ 7:15ಕ್ಕೆ ಚಿತ್ರ ಪ್ರದರ್ಶನ Read More »

error: Content is protected !!
Scroll to Top