ಸುದ್ದಿ

ಬಿಯರ್‌ ಬಾಟಲಿಯಿಂದ ಇರಿದು ಹೋಟೆಲ್‌ ಕಾರ್ಮಿಕನ ಹತ್ಯೆ

ಉಡುಪಿ: ಹೊಟೇಲ್ ಕಾರ್ಮಿಕನನ್ನು ಬಿಯರ್ ಬಾಟಲಿಯಿಂದ ಕುತ್ತಿಗೆಗೆ ಇರಿದು ಕೊಲೆಗೈದ ಘಟನೆ ಮಣಿಪಾಲದ ಲಕ್ಷ್ಮೀಂದ್ರ ನಗರದ ಬ್ಯಾಕಸಿನ್ ರೆಸ್ಟೊರೆಂಟ್‌ನ ಮುಂಭಾಗದ ಅನಂತ ಕಲ್ಯಾಣ ಮಾರ್ಗದಲ್ಲಿ ಇಂದು ಬೆಳಗ್ಗೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಹೊನ್ನಾವರದ ಕಾಸರಕೋಡಿನ ನಿವಾಸಿ ಶ್ರೀಧರ ನಾಯಕ್ (38)ಎಂದು ಗುರುತಿಸಲಾಗಿದೆ. ಶ್ರೀಧರ ನಾಯಕ್ ಮಣಿಪಾಲ ಈಶ್ವರ ನಗರದ ಹೊಟೇಲ್ ಒಂದರ ಕುಕ್ ಆಗಿದ್ದರು ಎಂದು ತಿಳಿದುಬಂದಿದೆ. ಬೆಳಿಗ್ಗೆ 6 ಗಂಟೆ ವೇಳೆಗೆ ರಸ್ತೆಯಲ್ಲಿ ವಾಕಿಂಗ್‌ ಹೋದವರಿಗೆ ರಸ್ತೆ ಬದಿ ಬಿದ್ದಿದ್ದ ಶವ ಕಂಡು ಪೊಲೀಸರಿಗೆ ತಿಳಿಸಿದ್ದಾರೆ. […]

ಬಿಯರ್‌ ಬಾಟಲಿಯಿಂದ ಇರಿದು ಹೋಟೆಲ್‌ ಕಾರ್ಮಿಕನ ಹತ್ಯೆ Read More »

ಮುಡಾದಲ್ಲಿ ನಡೆದಿರುವುದು ಬರೋಬ್ಬರಿ 2800 ಕೋ. ರೂ. ಭ್ರಷ್ಟಾಚಾರ

4921 ನಿವೇಶನಗಳನ್ನು ಅಕ್ರಮವಾಗಿ ಹಂಚಿರುವ ಮಾಹಿತಿ ಇ.ಡಿ.ಗೆ ಲಭ್ಯ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾದಿಂದ ಅಕ್ರಮವಾಗಿ 14 ಸೈಟ್‌ಗಳನ್ನು ಪಡೆದುಕೊಂಡ ಪ್ರಕರಣದ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ ಈಗ ಮುಡಾದ ಬ್ರಹ್ಮಾಂಡ ಭ್ರಷ್ಟಾಚಾರವನ್ನೆಲ್ಲ ಬಯಲಿಗೆಳೆದಿದೆ. ಮುಡಾದಲ್ಲಿ ಆಗಿರುವುದು ಬರೀ 14 ಸೈಟ್‌ಗಳ ಅಕ್ರಮವಲ್ಲ, ಬರೋಬ್ಬರಿ 2800 ಕೋ. ರೂ. ಬೃಹತ್‌ ಅಕ್ರಮ ಎಂಬ ಅಂಶ ಇ.ಡಿ. ತನಿಖೆಯಿಂದ ಬಯಲಿಗೆ ಬಂದಿದೆ. ಕೆಲ ದಿನಗಳ ಹಿಂದೆ 1,095 ಸೈಟ್‌ಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎನ್ನಲಾಗಿತ್ತು. ಆದರೆ ತನಿಖೆ ಮುಂದುವರಿದಂತೆ

ಮುಡಾದಲ್ಲಿ ನಡೆದಿರುವುದು ಬರೋಬ್ಬರಿ 2800 ಕೋ. ರೂ. ಭ್ರಷ್ಟಾಚಾರ Read More »

ಗೋಮಾಂಸ ಸೇವನೆ ನಿಲ್ಲಿಸಿ : ಮುಸ್ಲಿಂ ಧರ್ಮಗುರುವಿನ ಅಚ್ಚರಿಯ ಸಲಹೆ

ಇಸ್ಲಾಂನಲ್ಲಿ ಗೋಮಾಂಸ ಸೇವನೆ ಕಡ್ಡಾಯ ಅಲ್ಲ ಎಂದು ಹೇಳಿಕೆ ಲಖನೌ: ಮುಸ್ಲಿಮರು ಗೋಮಾಂಸ ಸೇವನೆ ನಿಲ್ಲಿಸಬೇಕು ಎಂದು ಕರೆ ಕೊಡುವ ಮೂಲಕ ಮುಸ್ಲಿಂ ಧರ್ಮಗುರುವೊಬ್ಬರು ಅಚ್ಚರಿಯುಂಟುಮಾಡಿದ್ದಾರೆ. ಮೌಲಾನಾ ಶಹಾಬುದ್ದೀನ್‌ ರಿಜ್ವಿ ಬರೇಲ್ವಿ ಈ ಕರೆ ನೀಡಿದವರು. ಅಸ್ಸಾಂನಲ್ಲಿ ಹೋಟೆಲ್‌ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಗೋಮಾಂಸ ನಿಷೇಧಿಸಿ ಅಸ್ಸಾಂ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಮುಸ್ಲಿಂ ಧರ್ಮಗುರು, ಮುಸ್ಲಿಮರು ಗೋಮಾಂಸ ಸೇವನೆ ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮುಸ್ಲಿಂ ವಿರೋಧಿ

ಗೋಮಾಂಸ ಸೇವನೆ ನಿಲ್ಲಿಸಿ : ಮುಸ್ಲಿಂ ಧರ್ಮಗುರುವಿನ ಅಚ್ಚರಿಯ ಸಲಹೆ Read More »

ಈಗ ಉಪ್ಪು ಕೂಡ ಅಪಾಯಕಾರಿ

ಉಪ್ಪಿನಲ್ಲಿ ರಾಸಾಯನಿಕ ಅಂಶ, ಅಯೋಡಿನ್‌ ಕೊರತೆ ಪತ್ತೆ ಬೆಂಗಳೂರು: ಪ್ರತಿಯೊಬ್ಬರೂ ನಿತ್ಯವೂ ಸೇವಿಸುವ ಉಪ್ಪು ಕೂಡ ಈಗ ಕಲಬೆರೆಕೆ ಆಗುತ್ತಿದೆ ಎಂಬ ಆಘಾತಕಾರಿ ಅಂಶ ಪತ್ತೆಯಾಗಿದೆ. ಈ ವಿಚಾರವನ್ನು ಖುದ್ದು ಆಹಾರ ಮತ್ತು ಸುರಕ್ಷತಾ ಇಲಾಖೆ ಬಹಿರಂಗಪಡಿಸಿದೆ. ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಉಪ್ಪಿನ ಮಾದರಿಗಳನ್ನು ಸಂಗ್ರಹಿಸಲು ಮುಂದಾದ ಆಹಾರ ಮತ್ತು ಸುರಕ್ಷತಾ ಇಲಾಖೆ ಉಪ್ಪಿನಲ್ಲಿ ಅಯೋಡಿನ್ ಕೊರತೆ ಇರುವುದು ಲ್ಯಾಬ್ ಟೆಸ್ಟ್‌ನಲ್ಲಿ ಪತ್ತೆಹಚ್ಚಿದೆ. ಅಷ್ಟೆ ಅಲ್ಲ ಉಪ್ಪಿನಲ್ಲಿ ಸೀಮೆಸುಣ್ಣ, ಸಿಂಥೆಟಿಕ್ ಪೊಟ್ಯಾಶಿಯಂ ಕ್ಲೋರೈಡ್‌ನಂತಹ ರಾಸಾಯನಿಕಗಳ ಅಂಶ ಇರುವುದು

ಈಗ ಉಪ್ಪು ಕೂಡ ಅಪಾಯಕಾರಿ Read More »

ಮಕ್ಕಳ ಬಾಲ್ಯ ಕಸಿದ ಮೊಬೈಲ್ ಎಂಬ ಮಾಯಾಂಗನೆ

ಮಕ್ಕಳನ್ನು ಅಡಿಕ್ಷನ್ ಮಟ್ಟದಿಂದ ಹೊರತರುವುದು ಹೇಗೆ? ಆನ್ಲೈನ್ ಕ್ಲಾಸ್ ನೆಪದಲ್ಲಿ ಮಕ್ಕಳ ಕೈಗೆ ಮೊಬೈಲ್ ಎಂಬ ಮಾಯಾಂಗನೆ ಬಂದಾಗಿದೆ. ನಮ್ಮ ಮಕ್ಕಳನ್ನು ಈ ಮಾಯಾಜಾಲದಿಂದ ಸದ್ಯಕ್ಕೆ ಹೊರತರುವುದು ಕಷ್ಟ ಎಂಬ ಪರಿಸ್ಥಿತಿ ಎದುರಾಗಿದೆ. ನನ್ನ ಅನುಭವಕ್ಕೆ ಸಾವಿರಾರು ಇಂತಹ ಘಟನೆಗಳು ಬಂದಿವೆ. ಅವುಗಳಲ್ಲಿ ಒಂದೆರಡನ್ನು ಮಾತ್ರ ಇಲ್ಲಿ ಉಲ್ಲೇಖ ಮಾಡುತ್ತೇನೆ. ಘಟನೆ 1– ಒಂದು ಮಧ್ಯಾಹ್ನದ ಹೊತ್ತಿಗೆ ನನಗೆ ನನ್ನ ಶಾಲೆಯ ಪೋಷಕರಿಂದ ಒಂದು ಕಾಲ್ ಬಂತು. ಆ ಅಮ್ಮ ತುಂಬಾ ಆತಂಕದಿಂದ ಮಾತಾಡುತ್ತಿದ್ದರು.ಸರ್, ನನ್ನ ಮಗಳು

ಮಕ್ಕಳ ಬಾಲ್ಯ ಕಸಿದ ಮೊಬೈಲ್ ಎಂಬ ಮಾಯಾಂಗನೆ Read More »

ಪ್ರವೀಣ್‌ ನೆಟ್ಟಾರು ಹತ್ಯಾ ಪ್ರಕರಣ : ಆರೋಪಿ ನೌಷಾದ್‌ ಮನೆಗೆ ಬೆಳ್ಳಂಬೆಳಗ್ಗೆ ಎನ್‌ಐಎ ದಾಳಿ

ಮಂಗಳೂರು: ಸುಳ್ಯ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯಾ ಪ್ರಕರಣದ ತನಿಖೆ ಈಗಲೂ ನಡೆಯುತ್ತಿದ್ದು, ಇಂದು ಬೆಳ್ಳಂಬೆಳಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡವೊಂದು ಪ್ರಕರಣದ ತಲೆಮರೆಸಿಕೊಂಡಿರುವ ಆರೋಪಿ ನೌಷಾದ್‌ ಎಂಬಾತನ ಮನೆಗೆ ದಾಳಿ ಮಾಡಿದೆ.ನೌಷಾದ್‌ ಬೆಳ್ತಂಗಡಿ ತಾಲೂಕಿನ ಪಡಂಗಡಿ ಎಂಬಲ್ಲಿಯವ. ಬೆಂಗಳೂರಿನಿಂದ ಬಂದ ಎನ್‌ಐಎ ತಂಡ ಬೆಳಗ್ಗೆ ಪಡಂಗಡಿಯ ಮನೆಗೆ ದಾಳಿ ಮಾಡಿ ಶೋಧ ನಡೆಸಿ ಮನೆಯವರನ್ನು ಪ್ರಶ್ನಿಸಿದೆ ಎಂದು ತಿಳಿದುಬಂದಿದೆ.ಬೆಂಗಳೂರಿನಿಂದ ಐವರು ಎನ್‌ಐಎ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ 5.30ರ ವೇಳೆಗೆ ಪಡಂಗಡಿಗೆ ಬಂದಿದೆ ಎಂಬ

ಪ್ರವೀಣ್‌ ನೆಟ್ಟಾರು ಹತ್ಯಾ ಪ್ರಕರಣ : ಆರೋಪಿ ನೌಷಾದ್‌ ಮನೆಗೆ ಬೆಳ್ಳಂಬೆಳಗ್ಗೆ ಎನ್‌ಐಎ ದಾಳಿ Read More »

ಡ್ರಗ್ಸ್‌ ಪ್ರಕರಣ : ಖ್ಯಾತ ನಟನ ಮಗ ಸೆರೆ

ಚೆನ್ನೈ : ಕನ್ನಡ, ತಮಿಳು ಸೇರಿದಂತೆ ದಕ್ಷಿಣದ ಕೆಲವು ಭಾಷೆಗಳ ಸಿನಿಮಾದಲ್ಲಿ ನಟಿಸಿರುವ ನಟ ಮನ್ಸೂರ್ ಅಲಿ ಖಾನ್‌ರ ಪುತ್ರ ತುಘಲಕ್‌ನನ್ನು ತಮಿಳುನಾಡು ಪೊಲೀಸರು ಡ್ರಗ್ಸ್‌ ಕೇಸಿನಲ್ಲಿ ಬಂಧಿಸಿದ್ದಾರೆ. ಮನ್ಸೂರ್‌ ಅಲಿ ಖಾನ್‌ ಹೆಚ್ಚಾಗಿ ವಿಲನ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಿರುಮಂಗಳಂ ಪೊಲೀಸರು ತುಘಲಕ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 10 ಜನರನ್ನು ಬಂಧಿಸಲಾಗಿತ್ತು. ತನಿಖೆ ಮುಂದುವರಿದಾಗ ಮನ್ಸೂರ್ ಅಲಿ ಖಾನ್ ಪುತ್ರ ತುಘಲಕ್ ಸಹ ಈ ಡ್ರಗ್ಸ್‌ ಜಾಲದಲ್ಲಿ ಶಾಮೀಲಾಗಿರುವುದು ತಿಳಿದುಬಂದಿದೆ. ಹೀಗಾಗಿ ಆತನನ್ನು

ಡ್ರಗ್ಸ್‌ ಪ್ರಕರಣ : ಖ್ಯಾತ ನಟನ ಮಗ ಸೆರೆ Read More »

ಹೋಟೆಲ್‌ಗಳಲ್ಲಿ ಗೋಮಾಂಸ ಖಾದ್ಯ ಮಾರಿದರೆ 8 ವರ್ಷ ಜೈಲು

ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ, ಸೇವನೆ ನಿಷೇಧ ಗುವಾಹಟಿ: ಅಸ್ಸಾಂನ ಹೋಟೆಲ್‌ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸುವುದಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.ಗೋಮಾಂಸ ಸೇವನೆಯ ಬಗ್ಗೆ ಕಾನೂನಿಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಕಾನೂನು ಉಲ್ಲಂಘಿಸಿದರೆ 3ರಿಂದ 8 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 3ರಿಂದ 5 ಲಕ್ಷ ರೂ. ವರೆಗೆ ದಂಡ ವಿಧಿಸಬಹುದು.ಸರ್ಕಾರದ ನಿರ್ಣಯಕ್ಕೆ ವಿಪಕ್ಷಗಳು ಪ್ರಬಲ ವಿರೋಧ ವ್ಯಕ್ತಪಡಿಸಿವೆ.ಅಸ್ಸಾಂನಲ್ಲಿ ಗೋಮಾಂಸ

ಹೋಟೆಲ್‌ಗಳಲ್ಲಿ ಗೋಮಾಂಸ ಖಾದ್ಯ ಮಾರಿದರೆ 8 ವರ್ಷ ಜೈಲು Read More »

ಪುಷ್ಪ-2 ಸಿನೆಮಾ ನೋಡುವಾಗ ಅಭಿಮಾನಿಗಳ ನೂಕುನುಗ್ಗಲು : ಕಾಲ್ತುಳಿತಕ್ಕೆ ಮಹಿಳೆ ಬಲಿ

ಮಗನ ಸ್ಥಿತಿ ಚಿಂತಾಜನಕ; ಅನೇಕ ಮಂದಿಗೆ ಗಾಯ ಹೈದರಾಬಾದ್:‌ ಸ್ಟಾರ್‌ ನಟ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ 2 ಸಿನೆಮಾದ ಪ್ರೀಮಿಯರ್‌ ಶೋ ವೇಳೆ ಜನರ ನೂಕುನುಗ್ಗಲು ಸಂಭವಿಸಿ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.ಹೈದರಾಬಾದ್‌ನ ಆರ್‌ಟಿಸಿ ಕ್ರಾಸ್‌ರೋಡ್ಸ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಿನ್ನೆ ರಾತ್ರಿ ಈ ದುರಂತ ಸಂಭವಿಸಿದೆ. ಮೃತ ಮಹಿಳೆಯನ್ನು ದಿಲ್‌ಸುಖ್‌ನಗರದ ರೇವತಿ ಎಂದು ಗುರುತಿಸಲಾಗಿದೆ. ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳೊಂದಿಗೆ ಸಿನೆಮಾಕ್ಕೆ ಬಂದಿದ್ದರು.ರಾತ್ರಿ 10.30ರ ಸುಮಾರಿಗೆ ಥಿಯೇಟರ್‌ನಲ್ಲಿ ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು.

ಪುಷ್ಪ-2 ಸಿನೆಮಾ ನೋಡುವಾಗ ಅಭಿಮಾನಿಗಳ ನೂಕುನುಗ್ಗಲು : ಕಾಲ್ತುಳಿತಕ್ಕೆ ಮಹಿಳೆ ಬಲಿ Read More »

ಯತ್ನಾಳ್‌ಗೆ ಹೈಕಮಾಂಡ್‌ ಶಿಸ್ತಿನ ಪಾಠ : ಪಕ್ಷದ ಚೌಕಟ್ಟಿನೊಳಗಿರಲು ಖಡಕ್‌ ಸೂಚನೆ

ಬಿಜೆಪಿಯ ಒಳಜಗಳ ಸದ್ಯಕ್ಕೆ ಶಮನ ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ದಿಲ್ಲಿಯಲ್ಲಿ ಬಿಜೆಪಿ ಹೈಕಮಾಂಡ್ ಶಿಸ್ತಿನ ಪಾಠ ಮಾಡಿದೆ. ಕೇಂದ್ರ ಶಿಸ್ತು ಸಮಿತಿ ಕೊಟ್ಟ ನೋಟಿಸ್​ಗೆ 6 ಪುಟಗಳ ಉತ್ತರ ನೀಡಿರುವ ಯತ್ನಾಳ್, ಖುದ್ದು ಹಾಜರಾಗಿ ಲಿಖಿತ ಮಾತ್ರವಲ್ಲದೆ ಮೌಖಿಕವಾಗಿಯೂ ಸ್ಪಷ್ಟನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಚೌಕಟ್ಟು ಮೀರಿ ಹೋಗದಂತೆ

ಯತ್ನಾಳ್‌ಗೆ ಹೈಕಮಾಂಡ್‌ ಶಿಸ್ತಿನ ಪಾಠ : ಪಕ್ಷದ ಚೌಕಟ್ಟಿನೊಳಗಿರಲು ಖಡಕ್‌ ಸೂಚನೆ Read More »

error: Content is protected !!
Scroll to Top