ಸುದ್ದಿ

ಠಾಣೆಯಲ್ಲೇ ಇಸ್ಪೀಟ್‌ ಆಡಿದ ಪೊಲೀಸರು!

ಎಎಸ್‌ಐ ಸಹಿತ ಐವರು ಅಮಾನತು ಬೆಂಗಳೂರು: ಜೂಜಾಡುವವರನ್ನು ಹಿಡಿದು ತಂದು ರುಬ್ಬಿ ಪಾಠ ಕಲಿಸಬೇಕಾದ ಪೊಲೀಸರು ತಾವೇ ಠಾಣೆಯಲ್ಲಿ ಯೂನಿಫಾರ್ಮ್‌ ಧರಿಸಿಕೊಂಡು ಜೂಜಾಡಿದರೆ ಹೇಗೆ? ಇಂಥ ಒಂದು ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಪೊಲೀಸ್‌ ಠಾಣೆಯಲ್ಲಿ ಸಂಭವಿಸಿದೆ. ಜೂಜಾಡಿದ ಐವರು ಪೊಲೀಸ್‌ ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಆದೇಶ ಹೊರಡಿಸಿದ್ದಾರೆ. ಚಿತ್ತಾಪುರ ತಾಲೂಕಿನ ವಾಡಿ ಠಾಣೆಯ ಎಎಸ್​ಐ ಮಹಿಮೂದ್ ಮಿಯಾ, ಹೆಡ್​ಕಾನ್ಸ್‌ಟೆಬಲ್‌ಗಳಾದ ನಾಗರಾಜ್, ಸಾಯಿಬಣ್ಣ, ಇಮಾಮ್ ಮತ್ತು ಕಾನ್‌ಸ್ಟೆಬಲ್‌ ನಾಗಭೂಷಣ್ […]

ಠಾಣೆಯಲ್ಲೇ ಇಸ್ಪೀಟ್‌ ಆಡಿದ ಪೊಲೀಸರು! Read More »

ವಿದ್ಯಾರಶ್ಮಿಯಲ್ಲಿ 11ವರ್ಷ ಕಾಲ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ ಸೀತಾರಾಮ ಕೇವಳ |  ಸ್ವಯಂ ಸೇವಾ ನಿವೃತ್ತಿ ಪಡೆದ ಸೀತಾರಾಮ ಕೇವಳ

ಪುತ್ತೂರು : ಸವಣೂರಿನ ವಿದ್ಯಾರಶ್ಮಿಯಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಪ್ರಾಂಶುಪಾಲರಾಗಿ ಸೇವಾನಿರತರಾಗಿದ್ದ ಇಂಗ್ಲೀಷ್ ಭಾಷಾ ಉಪನ್ಯಾಸಕ ಸೀತಾರಾಮ  ಕೇವಳ ಅವರು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. 1988ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮಾಜ ಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ದ್ವಿತೀಯ rankನೊಂದಿಗೆ ತೇರ್ಗಡೆಯಾದ ಅವರು ಮುಂದೆ ಕುವೆಂಪು ವಿಶ್ವ ವಿದ್ಯಾನಿಲಯದಿಂದ ಇಂಗ್ಲೀಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು. ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿದ್ದ ಅವರು 1990ರಲ್ಲಿ  ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಸುಳ್ಯದ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಅರೆಕಾಲಿಕ

ವಿದ್ಯಾರಶ್ಮಿಯಲ್ಲಿ 11ವರ್ಷ ಕಾಲ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ ಸೀತಾರಾಮ ಕೇವಳ |  ಸ್ವಯಂ ಸೇವಾ ನಿವೃತ್ತಿ ಪಡೆದ ಸೀತಾರಾಮ ಕೇವಳ Read More »

ಸುನಿತಾ ವಿಲ್ಲಿಯಮ್ಸ್‌ ಪುನರಾಗಮನ : ಜಗತ್ತಿನಾದ್ಯಂತ ಮುಗಿಲು ಮುಟ್ಟಿದ ಹರ್ಷೋದ್ಗಾರ

45 ದಿನಗಳ ಚಿಕಿತ್ಸೆ ಬಳಿಕ ಹೊರ ಜಗತ್ತಿಗೆ ಕಾಲಿಡಲಿದ್ದಾರೆ ಗಗನಯಾತ್ರಿಗಳು ನ್ಯೂಯಾರ್ಕ್‌: ಅಂತರಿಕ್ಷದಲ್ಲಿ 9 ತಿಂಗಳು ಕಳೆದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ವಾಪಸು ಕರೆತರುವ ಕಾರ್ಯಾಚರಣೆ ಕೊನೆಗೂ ಯಶ್ವಿಯಾಗಿ ಮುಗಿದಿದೆ. ನಾಸಾದ ಗಗನಯಾನಿಗಳಾದ ನಿಕ್ ಹೇಗ್ ಮತ್ತು ರಷ್ಯಾದ ಅಲೆಕ್ಸಾಂಡರ್ ಗೊರ್ಶನೋವ್ ಜೊತೆಗೂಡಿ ಸುನಿತಾ ಮತ್ತು ವಿಲ್ಮೋರ್ ಭಾರತೀಯ ಕಾಲಮಾನದ ಪ್ರಕಾರ ಇಂದು ನಸುಕಿನ ಹೊತ್ತು ಯಶಸ್ವಿಯಾಗಿ ಭೂಮಿಗೆ ಬಂದಿದ್ದಾರೆ.ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 10.35ಕ್ಕೆ ಸರಿಯಾಗಿ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ

ಸುನಿತಾ ವಿಲ್ಲಿಯಮ್ಸ್‌ ಪುನರಾಗಮನ : ಜಗತ್ತಿನಾದ್ಯಂತ ಮುಗಿಲು ಮುಟ್ಟಿದ ಹರ್ಷೋದ್ಗಾರ Read More »

ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಮತ್ತೆ ಹನಿಟ್ರ್ಯಾಪ್‌ ಗುಸುಗುಸು

ಪ್ರಭಾವಿ ಸಚಿವರನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಲು ಇನ್ನೋರ್ವ ಸಚಿವರಿಂದ ಪ್ರಯತ್ನ ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಹನಿಟ್ರ್ಯಾಪ್‌ ಗುಸುಗುಸು ಕೇಳಿಸಲಾರಂಭಿಸಿದೆ. ಪ್ರಭಾವಿ ಸಚಿವರೊಬ್ಬರು ಹನಿಟ್ರ್ಯಾಪ್ ಖೆಡ್ಡಾದಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ತುಮಕೂರು ಕಡೆಯ ಸಚಿವರನ್ನು ಹನಿಟ್ರ್ಯಾಪ್‌ ಜಾಲಕ್ಕೆ ಬೀಳಿಸಿ ಮಟ್ಟ ಹಾಕಲು ಪ್ರಯತ್ನಿಸಲಾಗಿದೆ. ಈ ಹನಿಟ್ರ್ಯಾಪ್‌ ಜಾಲ ಹೆಣೆದಿರುವುದು ಕಾಂಗ್ರೆಸಿನವರೇ ಆದ ಇನ್ನೊಬ್ಬ ಪ್ರಭಾವಿ ಸಚಿವರು ಎಂಬ ವದಂತಿಗಳು ಕಳೆದ ಎರಡು ದಿನಗಳಿಂದ ಹರಿದಾಡುತ್ತಿವೆ. ಕೆಲ ದಿನಗಳಿಂದ ತೆರೆಮರೆಯಲ್ಲಿ ನಡೆಯುತ್ತಿದ್ದ

ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಮತ್ತೆ ಹನಿಟ್ರ್ಯಾಪ್‌ ಗುಸುಗುಸು Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಯತ್ನಾಳ್‌ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಗೋಲ್ಡ್‌ ಸ್ಮಗ್ಲಿಂಗ್‌ ಮಾಡಿ ಸಿಕ್ಕಿಬಿದ್ದರುವ ನಟಿ ರನ್ಯಾ ರಾವ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.ಅಕುಲ ಅನುರಾಧ ಎಂಬವರು ಯತ್ನಾಳ್‌ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಯತ್ನಾಳ್‌ ಅವರು ಅವಾಚ್ಯ ಪದ ಬಳಸಿ ನಟಿಯ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನನ್ವಯ ಬಿಎನ್‌ಎಸ್‌ ಸೆಕ್ಷನ್‌ 79 ಅಡಿ ಎಫ್‌ಐಆರ್‌ ದಾಖಲಾಗಿದೆ.ಆಕೆ ದೇಹದಾದ್ಯಂತ ಚಿನ್ನವನ್ನು ಹೊಂದಿದ್ದಳು, ರಂಧ್ರಗಳನ್ನು ಹೊಂದಿರುವಲ್ಲೆಲ್ಲಾ

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಯತ್ನಾಳ್‌ ವಿರುದ್ಧ ಎಫ್‌ಐಆರ್‌ Read More »

9 ತಿಂಗಳ ಅಂತರಿಕ್ಷ ವಾಸದ ಬಳಿಕ ಭೂಮಿ ತಾಯಿಯ ಮಡಿಲಿಗೆ ಸುನಿತಾ ವಿಲ್ಲಿಯಮ್ಸ್‌

ಗಗನಯಾತ್ರಿಗಳನ್ನು ಕರೆತರುವ ಮಿಷನ್‌ ಯಶಸ್ವಿ ಸಂಪನ್ನ ಫ್ಲೋರಿಡಾ: ಭಾರತೀಯ ಸಂಜಾತೆ ಗಗನಯಾತ್ರಿ ಸುನಿತಾ ವಿಲ್ಲಿಯಮ್ಸ್‌ ಬರೋಬ್ಬರಿ 9 ತಿಂಗಳ ಕಾಲ ಅಂತರಿಕ್ಷ ವಾಸ ಮುಗಿಸಿ ಇಂದು ಮುಂಜಾನೆ ವೇಳೆ ಭೂಸ್ಪರ್ಶ ಮಾಡಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 286 ದಿನ ಬಾಕಿಯಾಗಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್‌ ವಿಲ್ಮೋರ್‌ ಅವರನ್ನು ಭೂಮಿಗೆ ಕರೆತರುವ ಮಿಷನ್‌ ಯಶಸ್ವಿಯಾಗಿದೆ ಎಂದು ನಾಸಾ ಘೋಷಿಸಿದೆ. ಇಬ್ಬರನ್ನು ಸುರಕ್ಷಿತರವಾಗಿ ಭೂಮಿಗೆ ಕರೆತರಲಾಗಿದೆ. ಸುನೀತಾ ವಿಲಿಯಮ್ಸ್, ಬುಚ್‌ವಿಲ್ಮೋರ್ ಸೇರಿ ನಾಲ್ವರು ಗಗನಯಾತ್ರಿಗಳನ್ನು

9 ತಿಂಗಳ ಅಂತರಿಕ್ಷ ವಾಸದ ಬಳಿಕ ಭೂಮಿ ತಾಯಿಯ ಮಡಿಲಿಗೆ ಸುನಿತಾ ವಿಲ್ಲಿಯಮ್ಸ್‌ Read More »

ನರಿಮೊಗರಿನ ಸರಸ್ವತಿ ವಿದ್ಯಾಮಂದಿರದಲ್ಲಿ ವಿಶೇಷ ಉಪನ್ಯಾಸ

ಪುತ್ತೂರು : ನರಿಮೊಗರಿನ ಸರಸ್ವತಿ ವಿದ್ಯಾಮಂದಿರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಇದರ ಪುತ್ತೂರು ತಾಲೂಕು ಘಟಕದ ವತಿಯಿಂದ ನೂತನ ವರ್ಷದ ಕಾರ್ಯಕ್ರಮ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.  ಶಾಲಾ ಸಂಚಾಲಕ ಅವಿನಾಶ್ ಕೊಡಂಕಿರಿಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಾಹಿತ್ಯದ ಬಲಗೊಳ್ಳುವಿಕೆಯೊಂದೇ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಹೆದ್ದಾರಿ ಎಂದರು. ಇಂತಹ ಕೈಂಕರ್ಯಗಳಲ್ಲಿ ಸರಸ್ವತಿ ವಿದ್ಯಾಮಂದಿರ ಯಾವತ್ತೂ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದು ಹೇಳಿ ಸಂಘಟಕರ ಕಾರ್ಯವನ್ನು ಶ್ಲಾಘಿಸಿದರು ಶಾಂತಿಗೋಡಿನ ಖ್ಯಾತ ಚಿಂತಕರೂ, ವಿಮರ್ಶಕರೂ ಆಗಿರುವ

ನರಿಮೊಗರಿನ ಸರಸ್ವತಿ ವಿದ್ಯಾಮಂದಿರದಲ್ಲಿ ವಿಶೇಷ ಉಪನ್ಯಾಸ Read More »

ವಿಶೇಷ ಚೇತನೆಯ ಬಾಳಿಗೆ ಬೆಳಕಾದ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ | ಕೆಯ್ಯೂರಿನ ಬೇಬಿಯವರಿಗೆ ವಾತ್ಸಲ್ಯ ಮನೆ ಹಸ್ತಾಂತರ

ಪುತ್ತೂರು: ಗ್ರಾಮ ಪಂಚಾಯತ್ ಗೆ ಸೇರಿದ ಬಾಡಿಗೆ ಕೊಠಡಿಯೊಂದರಲ್ಲಿ ಕಳೆದ ಹಲವು ವಷ೯ಗಳಿಂದ ತನ್ನ ತಾಯಿಯೊಂದಿಗೆ ವಾಸ್ತವ್ಯವಿದ್ದ ವಿಶೇಷ ಚೇತನೆಯ ಬಾಳಿಗೆ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಕಾಗಿದೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡವು ನಿವಾಸಿ ಬೇಬಿ ಅವರಿಗೆ ಜ್ಞಾನವಿಕಾಸ ಕಾರ್ಯಕ್ರಮದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ರಚನೆಯಾದ “ವಾತ್ಸಲ್ಯ ಮನೆ” ಯನ್ನು ಸೋಮವಾರ ಕೇಯ್ಯೂರು ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ್ ರಾವ್ ಬೊಳಿಕ್ಕಲ ಹಸ್ತಾಂತರ ಮಾಡಿ, ಯೋಜನೆಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮ ನಡೆಯುತ್ತಿದ್ದು

ವಿಶೇಷ ಚೇತನೆಯ ಬಾಳಿಗೆ ಬೆಳಕಾದ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ | ಕೆಯ್ಯೂರಿನ ಬೇಬಿಯವರಿಗೆ ವಾತ್ಸಲ್ಯ ಮನೆ ಹಸ್ತಾಂತರ Read More »

ಜ್ಯೂಸ್‍ ಕುಡಿತಯುತ್ತಿದ್ದ ಅನ್ಯಕೋಮಿನ ಜೋಡಿ | ಪೋಲಿಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು

ಪುತ್ತೂರು: ಬಸ್ ನಿಲ್ದಾಣದ ಬಳಿಯ ಹೋಟೆಲ್ ಒಂದರಲ್ಲಿ ಅನ್ಯಕೋಮಿನ ಯುವಕನೋರ್ವ ಹಿಂದು ಯುವತಿಯೊಂದಿಗೆ ಜ್ಯೂಸ್ ಕುಡಿಯುತ್ತಿದ್ದ ಸಂದರ್ಭ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಇಬ್ಬರು ಶಿವಮೊಗ್ಗ ಮೂಲದವರು ಎಂದು ತಿಳಿದು ಬಂದಿದ್ದು, ಯುವತಿ ನಗರದಲ್ಲಿ ಪಿಜಿ ಯಿಂದ ಕಾಲೇಜಿಗೆ ತೆರಳುತ್ತಿದ್ದಳು ಎನ್ನಲಾಗಿದೆ. ಠಾಣೆಗೆ ಪುತ್ತೂರು ಬಿಜೆಪಿ ನಿಯೋಗ ಬೇಟಿ ನೀಡಿದರು. ಆದರೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಸದ್ಯ ಪೊಲೀಸರು ಇಬ್ಬರ ಮನೆಯವರಿಗೆ ಮಾಹಿತಿ ನೀಡಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಜ್ಯೂಸ್‍ ಕುಡಿತಯುತ್ತಿದ್ದ ಅನ್ಯಕೋಮಿನ ಜೋಡಿ | ಪೋಲಿಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು Read More »

ಬಿಕ್ಷಾಟನೆ ನಿರ್ಮೂಲನೆ ಹಾಗೂ ಭಿಕ್ಷುಕರ ಪುನರ್ವಸತಿ ಕುರಿತಾಗಿ ಆಗ್ರಹಿಸಿದ ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು : ಬಿಕ್ಷಾಟನೆ ನಿರ್ಮೂಲನೆ ಹಾಗೂ ಭಿಕ್ಷುಕರ ಪುನರ್ವಸತಿ ಕುರಿತಾಗಿ ಎಂ.ಎಲ್‍.ಸಿ ಕಿಶೋರ್ ಕುಮಾರ್ ಪುತ್ತೂರು ಮಾ.18(ಇಂದು) ವಿಧಾನ ಪರಿಷತ್‍ ನಲ್ಲಿ ಧ್ವನಿ ಎತ್ತಿದ್ದಾರೆ. ಮಾ. 17 2025 ರ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ “ಭಿಕ್ಷಾಟನೆ : 306 ಮಕ್ಕಳ ರಕ್ಷಣೆ” ಕೈಗೂಡದ ದಶಕಗಳ ಪ್ರಯತ್ನ ಎಂಬ ಶಿರೋನಾಮೆಯಡಿ ಬಂದಿರುವ ವರದಿಯನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ,  ಈ ವರದಿಯ ಪ್ರಕಾರ ಕಳೆದ ಏಪ್ರಿಲ್ ನಿಂದ  ಡಿಸೆಂಬರ್ ತಿಂಗಳ (2024 – 25ರ ತನಕ 206  ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ

ಬಿಕ್ಷಾಟನೆ ನಿರ್ಮೂಲನೆ ಹಾಗೂ ಭಿಕ್ಷುಕರ ಪುನರ್ವಸತಿ ಕುರಿತಾಗಿ ಆಗ್ರಹಿಸಿದ ಕಿಶೋರ್ ಕುಮಾರ್ ಪುತ್ತೂರು Read More »

error: Content is protected !!
Scroll to Top