ಸುದ್ದಿ

ಲಾರಿ ಮತ್ತು ಬೈಕ್  ನಡುವೆ ಭೀಕರ ಅಪಘಾತ: ಬೈಕ್ ನಲ್ಲಿದ್ದ ಪುಟ್ಟ ಮಗು  ಸ್ಥಳದಲ್ಲೇ  ಮೃತ್ಯು

ಬಂಟ್ವಾಳ: ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಡಿ.28 ರಂದು ನಡೆದಿದೆ. ಘಟನೆಯಲ್ಲಿ ಒಂದು ಮಗು ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ಸಮೀಪದ ನಾವುರ ಮುರ ನಿವಾಸಿ ಸಲೀಮ್ ರವರು ಕುಟುಂಬ ಸಮೇತ ಸಂಚರಿಸುತ್ತಿದ್ದ ಬೈಕ್ ಅಪಘಾತಕ್ಕೆ ಒಳಗಾಗಿದ್ದು  ಚಾಲಕ ಸಲೀಂ ಅವರಿಗೆ ಗಂಭೀರ  ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಲಾರಿ ಮತ್ತು ಬೈಕ್  ನಡುವೆ ಭೀಕರ ಅಪಘಾತ: ಬೈಕ್ ನಲ್ಲಿದ್ದ ಪುಟ್ಟ ಮಗು  ಸ್ಥಳದಲ್ಲೇ  ಮೃತ್ಯು Read More »

ಮೇಘಾಲಯದ ಮಾಲಿನಾಂಗ್ ನ ಚರ್ಚ್ ಗೆ ಅಕ್ರಮವಾಗಿ ನುಸುಳಿ “ಜೈ ಶ್ರೀರಾಮ್‍’ ಘೋಷಣೆ | ಆರೋಪಿ ವಿರುದ್ದ ಪ್ರಕರಣ ದಾಖಲು

ಮೇಘಾಲಯ : ಈಶಾನ್ಯ ರಾಜ್ಯ ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಮಾಲಿನಾಂಗ್ ಗ್ರಾಮದ ಚರ್ಚ್ ಒಳಗೆ ಅಕ್ರಮವಾಗಿ ಪ್ರವೇಶಿಸಿ ವ್ಯಕ್ತಿಯೋರ್ವ  “ಜೈ ಶ್ರೀರಾಮ್‍’ ಎಂದು ಘೋಷಣೆ ಹಾಕಿದ ಘಟನೆ ನಡೆದಿದೆ. “ಜೈ ಶ್ರೀರಾಮ್‍’ ಎಂದು ಘೋಷಣೆ ಕೂಗಿದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಘೋಷಣೆ ಕೂಗಿದ್ದನ್ನು ಹರಿಬಿಟ್ಟಿದ್ದಾನೆ. ಎಸ್‌ಪಿ ಸಿಲ್ವೆಸ್ಟರ್ ನಾನ್‌ಟೆಂಗರ್ ಮಾತನಾಡಿ “ಕೃತ್ಯವೆಸಗಿದ ವ್ಯಕ್ತಿಯನ್ನು ಆಕಾಶ್ ಸಾಗರ್ ಎಂದು ಗುರುತಿಸಲಾಗಿದೆ. ಆತ ಇನ್‌ಸ್ಟಾಗ್ರಾಂನಲ್ಲಿ ಘಟನೆಯ ಬಗ್ಗೆ ವಿವರಗಳನ್ನು ಅಪ್ ಲೋಡ್ ಮಾಡಿದ್ದಾನೆ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ

ಮೇಘಾಲಯದ ಮಾಲಿನಾಂಗ್ ನ ಚರ್ಚ್ ಗೆ ಅಕ್ರಮವಾಗಿ ನುಸುಳಿ “ಜೈ ಶ್ರೀರಾಮ್‍’ ಘೋಷಣೆ | ಆರೋಪಿ ವಿರುದ್ದ ಪ್ರಕರಣ ದಾಖಲು Read More »

ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ನ ದಶಮಾನೋತ್ಸವದ ವತಿಯಿಂದ ನಡೆದ ಮಾದರಿ ದಂಪತಿಗಳ ಸನ್ಮಾನ ಸಮಾರಂಭದ ಸಮಾರೋಪ ಕಾರ್ಯಕ್ರಮ | 50 ವರ್ಷ ದಾಂಪತ್ಯ ಜೀವನ ನಡೆಸಿದ ಹಿರಿಯರನ್ನು ಗೌರವಿಸುವುದು ಇಡೀ ಸಮಾಜಕ್ಕೆ ಮಾದರಿಯಾಗಿದೆ : ಮಾಜಿ ಶಾಸಕ ಸಂಜೀವ ಮಠಂದೂರು

ಪುತ್ತೂರು : ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ (ರಿ) ಪುತ್ತೂರು ಇದರ ದಶಮಾನೋತ್ಸವದ ವತಿಯಿಂದ ಹಿರೇಬಂಡಾಡಿ ಗ್ರಾಮದ ಮಾದರಿ ದಂಪತಿಗಳ ಸನ್ಮಾನ ಸಮಾರಂಭದ ಸಮಾರೋಪ ಕಾರ್ಯಕ್ರಮವು ಮಾಜಿ ಶಾಸಕ ಸಂಜೀವ ಮಠಂದೂರು ಅವರ ಮನೆಯಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, 50 ವರ್ಷ ದಾಂಪತ್ಯ ಜೀವನ ನಡೆಸಿದ ಹಿರಿಯರನ್ನು ಗೌರವಿಸುವುದು ಇಡೀ ಸಮಾಜಕ್ಕೆ ಮಾದರಿಯಾಗಿದೆ. ಹಿರೇಬಂಡಾಡಿ ಗ್ರಾಮದಲ್ಲಿ ಹಲವು ಮಂದಿ ಹಿರಿಯರು, ಗೌಡ ಸಮುದಾಯಕ್ಕೋಸ್ಕರ ಹಾಗೂ ಮಾಗಣೆ ಊರ ಗೌಡರಾಗಿ ಕೆಲಸ ನಿರ್ವಹಿಸಿ,

ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ನ ದಶಮಾನೋತ್ಸವದ ವತಿಯಿಂದ ನಡೆದ ಮಾದರಿ ದಂಪತಿಗಳ ಸನ್ಮಾನ ಸಮಾರಂಭದ ಸಮಾರೋಪ ಕಾರ್ಯಕ್ರಮ | 50 ವರ್ಷ ದಾಂಪತ್ಯ ಜೀವನ ನಡೆಸಿದ ಹಿರಿಯರನ್ನು ಗೌರವಿಸುವುದು ಇಡೀ ಸಮಾಜಕ್ಕೆ ಮಾದರಿಯಾಗಿದೆ : ಮಾಜಿ ಶಾಸಕ ಸಂಜೀವ ಮಠಂದೂರು Read More »

ಬೆಳಗಾವಿಯಲ್ಲಿ ಸಿದ್ದರಾಮಯ್ಯನವರ 50 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪನೆ

ಒಂದು ಕೋಟಿ ರೂ. ವೆಚ್ಚದ ಯೋಜನೆ ಬೆಂಗಳೂರು: ಮೈಸೂರಿನ ರಸ್ತೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಡುವ ಪ್ರಸ್ತಾವ ಚರ್ಚೆಗೀಡಾದ ಬೆನ್ನಿಗೆ ಈಗ ಸಿದ್ದರಾಮಯ್ಯನವರ ಪುತ್ಥಳಿ ನಿರ್ಮಿಸುವ ವಿಚಾರ ಮುನ್ನೆಲೆಗೆ ಬಂದಿದೆ. ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 50 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಈ ಬಗ್ಗೆ ಸರ್ವೋದಯ ಮುಖಂಡ ಪಂಚಾಕ್ಷರಯ್ಯ ನೀಲಕಂಠಯ್ಯ ಗುಣಾಚಾರಿ ಎಂಬುವರು ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೊಂಡಾಡಿದ್ದಾರೆ. ಸಮಕಾಲೀನ ಸಮಾಜ

ಬೆಳಗಾವಿಯಲ್ಲಿ ಸಿದ್ದರಾಮಯ್ಯನವರ 50 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪನೆ Read More »

ಗಾಂಜಾ ಮಾರಟಕ್ಕೆ ಪ್ರಯತ್ನಿಸಿದ ಆರೋಪಿಯ ಬಂಧನ

ಕಾರ್ಕಳ : ಮೂಡುಬಿದಿರೆಯ ಮೂಡುಕೊಣಾಜೆ ಗ್ರಾಮದಲ್ಲಿ ಕೈಕಂಜಿ ಪಡ್ಡು ಸೇತುವೆ ಬಳಿ ಮಾದಕ ವಸ್ತು ಗಾಂಜಾವನ್ನು ಮಾರಾಟಕ್ಕೆ ತೆರಳಿದ ವ್ಯಕ್ತಿಯನ್ನು ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ನೇತೃತ್ವದ ಪೊಲೀಸರ ತಂಡ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಕೂವೆಟ್ಟು ಗ್ರಾಮದ ಮದ್ದಡ್ಕ ಚಿಲಿಂಬಿ ನಿವಾಸಿ ಮೊಹಮ್ಮದ್ ರಫೀಕ್( 38) ಎಂದು ಗುರುತಿಸಲಾಗಿದೆ. ಗಾಂಜಾ ವ್ಯಸನಿಗಳಿಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿ ರಫೀಕ್ ನನ್ನು ವಶಕ್ಕೆ ಪಡೆದು ಪತ್ರಾಂಕಿತ ಅಧಿಕಾರಿಯವರು ಅಂಗ ಶೋಧನೆ

ಗಾಂಜಾ ಮಾರಟಕ್ಕೆ ಪ್ರಯತ್ನಿಸಿದ ಆರೋಪಿಯ ಬಂಧನ Read More »

ಕ್ರೈಸ್ತರ 19 ಮನೆಗಳಿಗೆ ಬೆಂಕಿಹಚ್ಚಿದ ದುಷ್ಕರ್ಮಿಗಳು

ಕ್ರಿಸ್‌ಮಸ್‌ ಪ್ರಾರ್ಥನೆಗಾಗಿ ಚರ್ಚ್‌ಗೆ ಹೋದ ವೇಳೆ ದುಷ್ಕೃತ್ಯ ಢಾಕಾ: ಬಾಂಗ್ಲಾದೇಶದಲ್ಲಿ ಕ್ಷಿಪ್ರ ಕ್ರಾಂತಿ ನಡೆದು ಮಧ್ಯಂತರ ಸರ್ಕಾರ ಬಂದ ಬಳಿಕ ಅಲ್ಪಸಂಖ್ಯಾತ ಹಿಂದುಗಳ ಮೇಲೆ ದಾಳಿ ಮಾಡುತ್ತಿದ್ದ ಮುಸ್ಲಿಂ ಮೂಲಭೂತವಾದಿಗಳು ಈಗ ಕ್ರೈಸ್ತ ಸಮುದಾಯದವರನ್ನೂ ಗುರಿ ಮಾಡಿಕೊಂಡಿದ್ದಾರೆ. ಚಿತ್ತಗಾಂಗ್ ಪ್ರದೇಶದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ ವೇಳೆ ಕ್ರಿಶ್ಚಿಯನ್ ಸಮುದಾಯದ 19 ಮನೆಗಳಿಗೆ ಬೆಂಕಿ ಹಚ್ಚಿ ಲೂಟಿಗೈದಿದ್ದಾರೆ. ಬಂದರ್ಬನ್ ಜಿಲ್ಲೆಯ ನೋಟುನ್ ತೊಂಗ್‌ಹಿರಿ ತ್ರಿಪುರಾ ಪರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 17 ಮನೆಗಳು ಸಂಪೂರ್ಣ ಭಸ್ಮವಾಗಿದ್ದು, ಎರಡು ಮನೆಗಳು

ಕ್ರೈಸ್ತರ 19 ಮನೆಗಳಿಗೆ ಬೆಂಕಿಹಚ್ಚಿದ ದುಷ್ಕರ್ಮಿಗಳು Read More »

ಸವಣೂರಿನ ಅಖಿಲ ಪೂಜಾರಿ ಎಸ್.ಐ. ಹುದ್ದೆಗೆ ಆಯ್ಕೆ

ಪುತ್ತೂರು : ಸವಣೂರಿನ ಅಖಿಲ ಪೂಜಾರಿ ಅವರು ಪೊಲೀಸ್ ಇಲಾಖೆಯ ಎಸ್.ಐ. ಹುದ್ದೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ  ಎಸ್.ಐ.ಹುದ್ದೆಗೆ ಆಯ್ಕೆಯಾಗಿದ್ದಾರೆ.  ಇನ್ನೇನು ಸಧ್ಯದಲ್ಲೇ ಕೆಲಸಕ್ಕೆ ನೇಮಕಾತಿಯಾಗಬೇಕಾಗಿದೆ.   ಅಖಿಲ ಪೂಜಾರಿಯವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಗಳೂರು ಕುಲಶೇಖರದ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಕುಲಶೇಖರದ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಪ್ರೌಢ ಹಂತದ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ಸಂತ

ಸವಣೂರಿನ ಅಖಿಲ ಪೂಜಾರಿ ಎಸ್.ಐ. ಹುದ್ದೆಗೆ ಆಯ್ಕೆ Read More »

ಡಾ.ಮನಮೋಹನ್‌ ಸಿಂಗ್‌ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ

ಹೊಸದಿಲ್ಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಕ್ಯಾಬಿನೆಟ್‌ ಸಭೆಯಲ್ಲಿ ಸ್ಮಾರಕಕ್ಕೆ ಜಾಗ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯದಿಂದ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಇದನ್ನೂಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಶುಕ್ರವಾರ ಎಐಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಸಿಂಗ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ದಿಲ್ಲಿಯಲ್ಲಿ ಮನಮೋಹನ್ ಸಿಂಗ್ ಸ್ಮಾರಕ ನಿರ್ಮಾಣಕ್ಕೆ ಸ್ಥಳಾವಕಾಶ ಕೋರಲು ನಿರ್ಧರಿಸಲಾಗಿತ್ತು. ಅದರಂತೆ ಸ್ಮಾರಕಕ್ಕೆ ಸ್ಥಳ

ಡಾ.ಮನಮೋಹನ್‌ ಸಿಂಗ್‌ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ Read More »

ಇಂಟರ್‌ನೆಟ್‌ ರಹಿತ ರಿಚಾರ್ಜ್‌ ಒದಗಿಸಲು ಟ್ರಾಯ್‌ ಆದೇಶ

ಅಗತ್ಯ ಇಲ್ಲದಿದ್ದರೂ ಇಂಟರ್‌ನೆಟ್‌ ರೀಚಾರ್ಜ್‌ ಮಾಡಿಕೊಳ್ಳುವ ಅನಿವಾರ್ಯತೆಯಿಂದ ಮುಕ್ತಿ ಹೊಸದಿಲ್ಲಿ : ಭಾರತದ ಟೆಲಿಕಾಂ ನಿಯಂತ್ರಕ ಸಂಸ್ಥೆ (ಟ್ರಾಯ್‌) ಇಂಟರ್ನೆಟ್ ರಹಿತ ರಿಚಾರ್ಜ್‌ ಆಯ್ಕೆ ನೀಡಲು ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ಪ್ರಸ್ತುತ ರೀಚಾರ್ಜ್‌ ಮಾಡಬೇಕಾದರೆ ಇಂಟರ್‌ನೆಟ್‌ ಹಾಕಿಸಿಕೊಳ್ಳುವುದು ಅನಿವಾರ್ಯ ಎಂಬ ಪರಿಸ್ಥಿತಿಯಿದೆ. ಟೆಲಿಕಾಂ ಸೇವಾದಾರ ಕಂಪನಿಗಳು ಬರೀ ಕಾಲ್‌ ರೀಚಾರ್ಜ್‌ ಆಯ್ಕೆಯನ್ನು ಸ್ಥಗಿತಗೊಳಿಸಿ ಗ್ರಾಹಕರನ್ನು ಲೂಟಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಟ್ರಾಯ್‌ ಟೆಲಿಕಾಂ ಕಂಪನಿಗಳಿಗೆ ಬರೀ ಕಾಲ್‌ ಮತ್ತು ಎಸ್‌ಎಂಎಸ್‌ ರೀಚಾರ್ಜ್‌ ಆಯ್ಕೆ ಕೊಡಲು ಟೆಲಿಕಾಂ ಕಂಪನಿಗಳಿಗೆ

ಇಂಟರ್‌ನೆಟ್‌ ರಹಿತ ರಿಚಾರ್ಜ್‌ ಒದಗಿಸಲು ಟ್ರಾಯ್‌ ಆದೇಶ Read More »

ಸಿಲಿಂಡರ್‌ ಸ್ಫೋಟ : ಇನ್ನೋರ್ವ ಅಯ್ಯಪ್ಪ ವ್ರತಧಾರಿ ಸಾವು

ದೇವಸ್ಥಾನದಲ್ಲಿ ಸಂಭವಿಸಿದ ದುರಂತಕ್ಕೆ 4 ಬಲಿ, ಐವರ ಸ್ಥಿತಿ ಚಿಂತಾಜನಕ ಹುಬ್ಬಳ್ಳಿ: ದೇವಸ್ಥಾನವೊಂದರಲ್ಲಿ ಸಿಲಿಂಡರ್‌ ಸ್ಫೋಟಗೊಂಡು ಗಾಯಗೊಂಡಿದ್ದ ಶಬರಿಮಲೆ ವ್ರತಧಾರಿಗಳ ಪೈಕಿ ಇನ್ನೋರ್ವ ಕೊನೆಯುಸಿರೆಳೆಯುವುದರೊಂದಿಗೆ ಈ ದುರ್ಘಟನೆಯಲ್ಲಿ ಸಾವಿಗೀಡಾದ ವ್ರತಧಾರಿಗಳ ಸಂಖ್ಯೆ ನಾಲ್ಕಕ್ಕೇರಿದೆ. ಚಿಕಿತ್ಸೆಗೆ ಸ್ಪಂದಿಸದೆ ಮತ್ತೋರ್ವ ಯುವಕ ಸಾವನ್ನಪ್ಪಿದ್ದಾರೆ. ಮೃತ ಯುವಕನನ್ನು ಲಿಂಗರಾಜ ಬೀರನೂರ (19) ಎಂದು ಗುರುತಿಸಲಾಗಿದೆ. ಡಿ.22ರಂದು ರಾತ್ರಿ ಹುಬ್ಬಳ್ಳಿಯ ಉಣಕಲ್‌ನ ಅಚ್ಚವ್ವ ಕಾಲೊನಿಯಲ್ಲಿರುವ ಸಣ್ಣ ದೇವಸ್ಥಾನವೊಂದರಲ್ಲಿ ಸಿಲಿಂಡರ್ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ ಒಂಬತ್ತು ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಂಭೀರಗೊಂಡಿದ್ದರು. ಇವರ ಪೈಕಿ

ಸಿಲಿಂಡರ್‌ ಸ್ಫೋಟ : ಇನ್ನೋರ್ವ ಅಯ್ಯಪ್ಪ ವ್ರತಧಾರಿ ಸಾವು Read More »

error: Content is protected !!
Scroll to Top