ಸುದ್ದಿ

ಜೆಸಿಬಿ ಹರಿದು 2 ವರ್ಷದ ಮಗು ಮೃತ್ಯು

ಬೆಂಗಳೂರು : ಆಟವಾಡುತ್ತಿದ್ದ ಮಗುವಿನ ಮೇಲೆ ಜೆಸಿಬಿ ಹರಿದ ಘಟನೆ ಕಾಡುಗೋಡಿ ಬಳಿಯ ಸಿಟಿ ಲೇಔಟ್​ನಲ್ಲಿ ನಡೆದಿದೆ. ಜೆಸಿಬಿ ಹರಿದು ಮೃತ ಪಟ್ಟ ಮಗು ಥವನ್ ರೆಡ್ಡಿ (2) ಎನ್ನಲಾಗಿದೆ. ಮಂಗಳವಾರ ಸಂಜೆ 6.30ಕ್ಕೆ ಘಟನೆ ನಡೆದಿದ್ದು, ಜೆಸಿಬಿ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಈ ದುರ್ಘಟನೆ ನಡೆದಿದೆ. ಮೃತ ಮಗು ಥವನ್ ರೆಡ್ಡಿ ಮನೆ ಮುಂದೆ ಆಟವಾಡುತ್ತಿದ್ದಾಗ ವೇಗವಾಗಿ ಬಂದ ಜೆಸಿಬಿ ಮಗುವಿನ ತಲೆಯ ಮೇಲೆ ಹರಿದು ಹೋಗಿದೆ.  ಗಾಯಗೊಂಡ ಮಗುವನ್ನು ವೈದೇಹಿ ಆಸ್ಪತ್ರೆಗೆ […]

ಜೆಸಿಬಿ ಹರಿದು 2 ವರ್ಷದ ಮಗು ಮೃತ್ಯು Read More »

ಲಾರಿ-ಬೈಕ್‍ ಡಿಕ್ಕಿ | ಬೈಕ್‍ ಸವಾರ ಗಂಭೀರ ಗಾಯ

ಕಾರ್ಕಳ : ಅಜೆಕ್ಕಾರು-ಕೈಕಂಬ ಸರ್ಕಲ್ ಬಳಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಬೈಕ್‍ ಸವಾರನಿಗೆ ಗಂಭೀರಗಾಯವಾಗಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಸಂಜೆ 6.30ರ ವೇಳೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರು ರಸ್ತೆಗೆಸೆಯಲ್ಪಟ್ಟು ಇಬ್ಬರ ಕೈ ಹಾಗೂ ಕಾಲುಗಳ ಮೂಳೆ ಮುರಿತಕ್ಕೊಳಗಾಗಿ ಕೋಮಾಸ್ಥಿತಿಯಲ್ಲಿ ಇದ್ದರು. ಬಿಹಾರ ಮೂಲದವರಾಗಿದ್ದು, ಅವರಲ್ಲಿ ಓರ್ವನ ಹೆಸರು ಆರಿಫ್ (20) ಎಂದು ತಿಳಿಬಂದಿದೆ.   ಈತನನ್ನು  ಅಂಬುಲೆನ್ಸ್ ಮೂಲಕ

ಲಾರಿ-ಬೈಕ್‍ ಡಿಕ್ಕಿ | ಬೈಕ್‍ ಸವಾರ ಗಂಭೀರ ಗಾಯ Read More »

ಕಾರು ಅಪಘಾತ | ಮೂವರಿಗೆ ಗಾಯ

ಪುತ್ತೂರು: ಎರಡು ಕಾರುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ಪೋಳ್ಯ ಸಮೀಪದ ಪುಳಿತ್ತಡಿಯಲ್ಲಿ  ನಡೆದಿದ್ದು, ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ. ಬಿ.ಸಿ.ರೋಡ್ ಸಾಗರ್ ಆಡಿಟೋರಿಯಂ ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ರೆಮ್ಮಾಯಿ ಸಮೀಪದ ನಿವಾಸಿಗಳಿದ್ದ ಕಾರು ಹಾಗೂ ಮಂಗಳೂರಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕಾರಿನ ಮಧ್ಯೆ ಈ ಅಪಘಾತ ಸಂಭವಿಸಿದೆ. ಮದುವೆಗೆ ತೆರಳುತ್ತಿದ್ದ ಕಾರಿನ ಮುಂಭಾಗದಲ್ಲಿ ಹೂವಿನ ಬೊಕ್ಕೆಯಿಂದ ಅಲಂಕಾರ ಮಾಡಿದ್ದು, ಗಾಳಿಗೆ ಹೂವಿನ ಬೊಕ್ಕೆ ಚಾಲಕನ ಸೈಡಿನ ಗಾಜಿಗೆ ಬಡಿದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ

ಕಾರು ಅಪಘಾತ | ಮೂವರಿಗೆ ಗಾಯ Read More »

ಮಾ.5ರಂದು ಸಂಸದ ತೇಜಸ್ವಿ ಸೂರ್ಯ ವಿವಾಹ

ಗಾಯಕಿ, ಭರತನಾಟ್ಯ ಕಲಾವಿದೆ ಶಿವಶ್ರೀಯನ್ನು ವರಿಸಲಿರುವ ತೇಜಸ್ವಿ ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾ.5ರಂದು ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರ ಜೊತೆ ಹಸೆಮಣೆ ಏರಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸಾಂಪ್ರದಾಯಿಕವಾಗಿ ವಿವಾಹ ಕಾರ್ಯಕ್ರಮ ನಡೆಯಲಿದೆ. ತಮಿಳುನಾಡು ಮೂಲದ ಶಿವಶ್ರೀ ಅವರು ಈಗಾಗಲೇ ಗಾಯಕಿಯಾಗಿ ಖ್ಯಾತರಾಗಿದ್ದಾರೆ. ಮಾರ್ಚ್‌ 5 ಮತ್ತು 6ರಂದು ಬೆಂಗಳೂರಿನಲ್ಲಿ ಇವರ ವಿವಾಹ ಸಮಾರಂಭ ನೆರವೇರಲಿದೆ. 5ರಂದು ಕನಕಪುರ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್‍ವೊಂದರಲ್ಲಿ ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ. ಮದುವೆ ಸಮಾರಂಭ

ಮಾ.5ರಂದು ಸಂಸದ ತೇಜಸ್ವಿ ಸೂರ್ಯ ವಿವಾಹ Read More »

ಅತ್ತೆಯನ್ನು ಸಾಯಿಸಲು ಡಾಕ್ಟರ್ ಬಳಿ ಮಾತ್ರೆ ಕೇಳಿದ ಸೊಸೆ

ಬೆಂಗಳೂರು : ಸೊಸೆಯೊಬ್ಬಳು ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿಯೇ ಮಾತ್ರೆ ಕೇಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅತ್ತೆಯನ್ನು ಸಾಯಿಸಬೇಕು ಎಂದು ಬೆಂಗಳೂರಿನ ಡಾಕ್ಟರ್ ಸುನೀಲ್ ಕುಮಾರ್ ಎಂಬುವವರ ಬಳಿ ಸಹಾಯ ಕೇಳಿದ್ದಾಳೆ. ನನ್ನ ಅತ್ತೆ ದಿನ ನನಗೆ ಹಿಂಸೆ ನೀಡುತ್ತಿದ್ದಾರೆ, ಅವರಿಗೆ ತುಂಬಾ ವಯಸ್ಸಾಗಿದೆ ಹೀಗಾಗಿ ಏನಾದ್ರೂ ಹೇಳುತ್ತೀರಾ ಅವರನ್ನು ಹೇಗೆ ಸಾಯಿಸೋದು ಅಂತ ಎಂದು ವೈದ್ಯರಿಗೆ ಮೆಸೇಜ್ ಮಾಡಿದ್ದಾರೆ. ಜೊತೆಗೆ ಒಂದೆರಡು ಮಾತ್ರೆ ತಗೊಂಡ್ರೆ ಸಾಯುತ್ತಾರೆ ಅಲ್ವಾ ಅದು ಹೇಳಿ ಎಂದು ಕೇಳಿಕೊಂಡಿದ್ದಾಳೆ. ಇದಕ್ಕೆ ವೈದ್ಯರು

ಅತ್ತೆಯನ್ನು ಸಾಯಿಸಲು ಡಾಕ್ಟರ್ ಬಳಿ ಮಾತ್ರೆ ಕೇಳಿದ ಸೊಸೆ Read More »

ಮಾಜಿ ಪ್ರಧಾನಿ ಅಟಲ್‍ ಬಿಹಾರಿ ವಾಜಪೇಯಿ ಜನ್ಮ ಶತಾಬ್ಧಿ | ಬಿಜೆಪಿಯಿಂದ ಜಿ.ಎಲ್‍.ಬಲರಾಮ ಆಚಾರ್ಯ, ಡಾ.ಎಂ.ಕೆ.ಪ್ರಸಾದ್, ಮುರಳೀಧರ ಅವರ ಮನೆಗೆ ತೆರಳಿ ಸನ್ಮಾನ

ಪುತ್ತೂರು: ದೇಶದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಬಿಜೆಪಿಯಿಂದ ಒಂದು ವರ್ಷಗಳ ಕಾಲ ನಿರಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಂದು ವಾಜಪೇಯಿಯವರು ಪುತ್ತೂರಿನಲ್ಲಿ ಹಲವು ಮನೆಗಳಿಗೆ ಭೇಟಿ ನೀಡಿದ ಮತ್ತು ವಾಜಪೇಯಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಮನೆಗೆ ತೆರಳಿ ಮನೆ ಮಂದಿಯನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮಕ್ಕೆ ನಡೆಯುತ್ತಿದೆ. 1991 ರಲ್ಲಿ ಪುತ್ತೂರಿನಲ್ಲಿ ವಾಜಪೇಯಿ ಬಂದಾಗ ಅವರನ್ನು ಜಿ.ಎಲ್.ಕಾಂಪ್ಲೆಕ್ಸ್‌ನಲ್ಲಿ ಮಲ್ಲಿಗೆ ಹಾರ ಹಾಕಿ ಸ್ವಾಗತಿಸಿದ ಜಿ.ಎಲ್.ಬಲರಾಮ ಅಚಾರ್ಯ ಅವರನ್ನು ಅವರ ಕೊಂಬೆಟ್ಟು ನಿವಾಸದಲ್ಲಿ,

ಮಾಜಿ ಪ್ರಧಾನಿ ಅಟಲ್‍ ಬಿಹಾರಿ ವಾಜಪೇಯಿ ಜನ್ಮ ಶತಾಬ್ಧಿ | ಬಿಜೆಪಿಯಿಂದ ಜಿ.ಎಲ್‍.ಬಲರಾಮ ಆಚಾರ್ಯ, ಡಾ.ಎಂ.ಕೆ.ಪ್ರಸಾದ್, ಮುರಳೀಧರ ಅವರ ಮನೆಗೆ ತೆರಳಿ ಸನ್ಮಾನ Read More »

ನೇಣು ಬಿಗಿದು ಬಾಲಕ ಆತ್ಮಹತ್ಯೆ

ಉಪ್ಪಿನಂಗಡಿ: 7 ನೇ ತರಗತಿಯ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉಪ್ಪಿನಂಗಡಿಯ ಖಾಸಗಿ ಶಾಲಾ ವಿದ್ಯಾರ್ಥಿ ಬೆಳ್ತಂಗಡಿ ತಾಲೂಕಿನ ತಣ್ಣೀರುವಂತ ಗ್ರಾಮದ ನಿವಾಸಿ ಶ್ರವಣ್ (13) ಮೃತ ವಿದ್ಯಾರ್ಥಿ. ನಿನ್ನೆ ರಾತ್ರಿ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ನೇಣು ಬಿಗಿದು ಬಾಲಕ ಆತ್ಮಹತ್ಯೆ Read More »

ಇಂದಿನಿಂದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಕೂಟ

ಪಾಕಿಸ್ಥಾನ-ನ್ಯೂಜಿಲ್ಯಾಂಡ್ ನಡುವೆ ಕರಾಚಿಯಲ್ಲಿ ಇಂದು ಮೊದಲ ಪಂದ್ಯ ಇಸ್ಲಾಮಾಬಾದ್‌: ಎಂಟು ರಾಷ್ಟ್ರಗಳು ಭಾಗವಹಿಸುವ ಐಸಿಸಿ ಪ್ರಾಯೋಜಿತ ಚಾಂಪಿಯನ್ಸ್ ಟ್ರೋಫಿ ಕ್ರೀಡಾಕೂಟ ಇಂದಿನಿಂದ ಶುರುವಾಗುತ್ತಿದೆ. ಮೊದಲ ಪಂದ್ಯ ಆತಿಥೇಯ ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್ ನಡುವೆ ಕರಾಚಿ ಮೈದಾನದಲ್ಲಿ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ. ಎ ಗುಂಪಿನಲ್ಲಿ ಭಾರತ, ನ್ಯೂಜಿಲ್ಯಾಂಡ್‌, ಪಾಕಿಸ್ಥಾನ, ಬಾಂಗ್ಲಾದೇಶ ಇದ್ದರೆ, ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ಥಾನ ಮತ್ತು ಇಂಗ್ಲೆಂಡ್‌ ತಂಡಗಳಿವೆ. ಭಾರತ ತನ್ನ ಮೊದಲ ಪಂದ್ಯವನ್ನು ದುಬೈನಲ್ಲಿ ಫೆ.20ರಂದು ಬಾಂಗ್ಲಾದೇಶದ ವಿರುದ್ಧ ಆಡಲಿದೆ ಮತ್ತು

ಇಂದಿನಿಂದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಕೂಟ Read More »

ಅಂಬಿಕಾ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜರಿಗೆ ಮಾತೃವಿಯೋಗ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅವರ ಮಾತೃಶ್ರೀ ಸುಶೀಲಾ ಶಿವಾನಂದ ರಾವ್ (86) ಸೋಮವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತೀರಾ ಇತ್ತೀಚೆಗಿನವರೆಗೂ ಆರೋಗ್ಯವಾಗಿದ್ದ ಅವರು ಕಳೆದ ಕೆಲ ದಿನಗಳಿಂದ ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪುತ್ರ, ಸೊಸೆ, ನಾಲ್ವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

ಅಂಬಿಕಾ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜರಿಗೆ ಮಾತೃವಿಯೋಗ Read More »

ಭಾರತೀಯ ಕುಟುಂಬ ವ್ಯವಸ್ಥೆಗೆ ತರವಾಡು ಮನೆತನಗಳಿಂದ ಶಕ್ತಿ : ಹಿರಿಯ ಚಿಂತಕ ಗೋಪಾಲಕೃಷ್ಣ ನೆಕ್ಕಿತಪುಣಿ | ನೆಕ್ಕಿತಪುಣಿ ಕರಂಬೇರ ತರವಾಡಿನಲ್ಲಿ ವಾರ್ಷಿಕ ಸಭೆ

ವಿಟ್ಲ : ತರವಾಡು ಮನೆತನಗಳಿಂದ ಭಾರತೀಯ ಕುಟುಂಬ ವ್ಯವಸ್ಥೆಗೆ ಶಕ್ತಿ ತುಂಬಿದೆ ಎಂದು ಹಿರಿಯ ಚಿಂತಕರು ಹಾಗೂ ನೆಕ್ಕಿತಪುಣಿ ತರವಾಡು ಮನೆತನದ ಮುಖ್ಯಸ್ಥರಾದ ಗೋಪಾಲಕೃಷ್ಣ ನೆಕ್ಕಿತಪುಣಿ ಹೇಳಿದರು. ವಿಟ್ಲ ಸಮೀಪದ ಅಳಿಕೆಯ ನೆಕ್ಕಿತಪುಣಿ ಕರಂಬೇರ ತರವಾಡಿನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ತರವಾಡಿನವರನ್ನುದ್ದೇಶಿಸಿ ಮಾತನಾಡಿದರು. ಕರಾವಳಿಯಲ್ಲಿರುವ ತರವಾಡು ಮನೆತನಗಳಿಂದ ಸಂಪ್ರದಾಯ ಹಾಗೂ ಪದ್ಧತಿಗಳ ರಕ್ಷಣೆಯ ಜೊತೆಗೆ ಕುಟುಂಬ ವ್ಯವಸ್ಥೆ ಗಟ್ಟಿಗೊಂಡು ಒಗ್ಗಟ್ಟು ಬೆಳೆಯಲು ಸಾಧ್ಯವಾಗಿದೆ. ಬಿಲ್ಲವರ ತರವಾಡು ಮನೆತನಗಳ ಮೂಲಕ ತಮ್ಮ ಜನಾಂಗದ ಅಸ್ಮಿತೆ ಉಳಿಸಲು ನೀಡಿದ ಕೊಡುಗೆ

ಭಾರತೀಯ ಕುಟುಂಬ ವ್ಯವಸ್ಥೆಗೆ ತರವಾಡು ಮನೆತನಗಳಿಂದ ಶಕ್ತಿ : ಹಿರಿಯ ಚಿಂತಕ ಗೋಪಾಲಕೃಷ್ಣ ನೆಕ್ಕಿತಪುಣಿ | ನೆಕ್ಕಿತಪುಣಿ ಕರಂಬೇರ ತರವಾಡಿನಲ್ಲಿ ವಾರ್ಷಿಕ ಸಭೆ Read More »

error: Content is protected !!
Scroll to Top