ಸುದ್ದಿ

ಐಟಿ ದಾಳಿ ಬೆನ್ನಲ್ಲೇ ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ. ಜೆ. ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಬೆಂಗಳೂರು: ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದ, ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ. ಜೆ. ರಾಯ್ ಅವರು ಪಿಸ್ತೂಲಿನಿಂದ ಶೂಟ್ ಮಾಡಿಕೊಂಡು, ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶವವನ್ನು ಅನೇಕಲ್‌ನ ನಾರಾಯಣ ರಾವ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಅಶೋಕನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅವರ ಕಂಪನಿಗೆ ಪದೇ ಪದೇ ಐಟಿ ಅಧಿಕಾರಿಗಳು ದಾಳಿ ಮಾಡುತ್ತಿದ್ದು, ಇದರಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇಂದು ಕೂಡ ಐಟಿ ದಾಳಿ ನಡೆದಿದ್ದು, ಈ ವೇಳೆ […]

ಐಟಿ ದಾಳಿ ಬೆನ್ನಲ್ಲೇ ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ. ಜೆ. ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ Read More »

ಚರಂಡಿಗೆ ತ್ಯಾಜ್ಯ ಎಸೆದ ಗುಜರಿ ಅಂಗಡಿ ಮಾಲೀಕನಿಗೆ 20 ಸಾವಿರ ರೂ. ದಂಡ ಹಾಕಿದ ಪುರಸಭೆ ಅಧಿಕಾರಿಗಳು

ಉಳ್ಳಾಲ: ದ.ಕ. ಜಿಲ್ಲೆಯ ಸೋಮೇಶ್ವರದ ಉಚ್ಚಿಲ ವ್ಯಾಪ್ತಿಯಲ್ಲಿ ಮಳೆ ನೀರು ಹೋಗುವ ಚರಂಡಿಗೆ ತ್ಯಾಜ್ಯ ಎಸೆದ ಗುಜರಿ ಅಂಗಡಿ ಮಾಲೀಕನಿಗೆ 20 ಸಾವಿರ ರೂ. ದಂಡ ವಿಧಿಸಿದ್ದು, ಆ ಮೂಲಕ ಪುರಸಭಾ ಅಧಿಕಾರಿಗಳು ಇಂತಹ ಕೃತ್ಯ ಎಸಗುವ ಇತರರಿಗೂ ಎಚ್ಚರಿಕೆ ನೀಡಿದ್ದಾರೆ. ಬೀರಿಯಲ್ಲಿರುವ ಎ. ಆರ್. ಟ್ರೇಡರ್ಸ್‌ನ ಮಾಲೀಕ ಸಯ್ಯದ್ ಸಂಶೀರ್ ಎಂಬವರಿಗೆ ದಂಡ ವಿಧಿಸಿರುವುದಾಗಿದೆ.ಸೋಮೇಶ್ವರ ಪುರಸಭಾ ವ್ಯಾಪ್ತಿಗೆ ಸಂಬಂಧಿಸಿದ ಹಾಗೆ ಸುಮಾರು 15 ಕಡೆಗಳಲ್ಲಿ ಈಗಾಗಲೇ ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು, ಬೇಕಾಬಿಟ್ಟಿ ತ್ಯಾಜ್ಯ ಎಸೆಯುವವರ ಮೇಲೆ

ಚರಂಡಿಗೆ ತ್ಯಾಜ್ಯ ಎಸೆದ ಗುಜರಿ ಅಂಗಡಿ ಮಾಲೀಕನಿಗೆ 20 ಸಾವಿರ ರೂ. ದಂಡ ಹಾಕಿದ ಪುರಸಭೆ ಅಧಿಕಾರಿಗಳು Read More »

ಶಬರಿಮಲೆಯ ಚಿನ್ನ ಕಳ್ಳತನ ಪ್ರಕರಣ: ಮಲೆಯಾಳಂನ ಜನಪ್ರಿಯ ನಟನ ಹೇಳಿಕೆ ದಾಖಲಿಸಿದ SIT

ತಿರುವನಂತಪುರಂ: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಲೆಯಾಳಂ‌ನ ಹೆಸರಾಂತ ನಟ ಜಯರಾಮ್ ಅವರ ಹೇಳಿಕೆಯನ್ನು ವಿಶೇಷ ತನಿಖಾ ತಂಡ ದಾಖಲಿಸಿಕೊಂಡಿದೆ. ಚೆನ್ನೈ ನಲ್ಲಿರುವ ಜಯರಾಮ್ ನಿವಾಸಕ್ಕೆ ತೆರಳಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿರುವುದಾಗಿದೆ. ಈ ಪ್ರಕರಣದ ಮುಖ್ಯ ಆರೋಪಿ ಉಣ್ಣಿಕೃಷ್ಣನ್ ಪೊಟ್ಟಿ ಜೊತೆಗೆ ಜಯರಾಮ್‌ ಅವರ ಸಂಬಂಧ ಏನು ಎಂಬುದನ್ನು SIT ಅಧಿಕಾರಿಗಳು ಪ್ರಶ್ನೆ ಮಾಡಿದ್ದು, ಪೊಟ್ಟಿ ತನ್ನ ಮನೆಯ ಪೂಜಾ ಕಾರ್ಯಕ್ರಮಗಳಿಗೆ ಆಗಾಗ ಬರುತ್ತಿದ್ದರು. ಆದರೆ ಅವರ ಮೇಲಿನ ಪ್ರಕರಣಗಳಿಗೆ ಸಂಬಂಧಿಸಿದ ಹಾಗೆ ನನಗೆ ಮಾಹಿತಿ ಇಲ್ಲ.

ಶಬರಿಮಲೆಯ ಚಿನ್ನ ಕಳ್ಳತನ ಪ್ರಕರಣ: ಮಲೆಯಾಳಂನ ಜನಪ್ರಿಯ ನಟನ ಹೇಳಿಕೆ ದಾಖಲಿಸಿದ SIT Read More »

ಸುಮಾರು 27 ಕೋಟಿ ರೂ. ಮೌಲ್ಯದ ಗಾಂಜಾ ಗಿಡಗಳನ್ನು ನಾಶ‌ ಮಾಡಿದ ಭದ್ರತಾ ಪಡೆ

ತ್ರಿಪುರಾ: ಅಕ್ರಮವಾಗಿ ಸೋನಮುರಾ ಉಪವಿಭಾಗದ ಸಂರಕ್ಷಿತ ಅರಣ್ಯ ಪ್ರದೇಶದ 65 ಎಕರೆ ಸ್ಥಳದಲ್ಲಿ ಬೆಳೆಯಲಾಗಿದ್ದ ಸುಮಾರು 1.80 ಲಕ್ಷ ಗಾಂಜಾ ಗಿಡಗಳನ್ನು ಭದ್ರತಾ ಪಡೆಗಳ ಸಿಬ್ಬಂದಿ ನಾಶ ಮಾಡಿವೆ. ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ ಮೇಲೆ ಭದ್ರತಾ ಪಡೆಗಳು ಜ. 29 ರಂದು ಸೋನಮುರಾದ ಹಲವು ಅರಣ್ಯ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಈ ವೇಳೆ ಅಕ್ರಮವಾಗಿ ಬೆಳೆಸಲಾಗಿದ್ದ ಗಾಂಜಾ ಗಿಡಗಳನ್ನು ನಾಶ ಮಾಡಲಾಗಿದೆ. ನಾಶ ಮಾಡಲಾದ ಗಾಂಜಾ ಗಿಡಗಳ ಮೌಲ್ಯ ಸುಮಾರು 27 ಕೋಟಿ ರೂ.

ಸುಮಾರು 27 ಕೋಟಿ ರೂ. ಮೌಲ್ಯದ ಗಾಂಜಾ ಗಿಡಗಳನ್ನು ನಾಶ‌ ಮಾಡಿದ ಭದ್ರತಾ ಪಡೆ Read More »

ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ವಿಟ್ಲ ತಾಲೂಕಿನ ಅಳಿಕೆ ವಲಯದ ಮುಳಿಯ ಒಕ್ಕೂಟದ ಕಲ್ಪವೃಕ್ಷ ಜ್ಞಾನವಿಕಾಸ ಕೇಂದ್ರದಲ್ಲಿ ಜ್ಞಾನವಿಕಾಸದ ಕಾರ್ಯಕ್ರಮದಡಿಯಲ್ಲಿ ಮೂರು ತಿಂಗಳ ಕಾಲ ನಡೆದ ” ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ” ಕಾರ್ಯಕ್ರಮದ ಸಮಾರೋಪ ಎರುಂಬು ವಿಷ್ಣುಮಂಗಲ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ದಕ್ಷಿಣ ಕನ್ನಡ 2 ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಅವರು ಉದ್ಘಾಟನೆ ಮಾಡಿ ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು. ಅಧ್ಯಕ್ಷತೆಯನ್ನು ಕೇಂದ್ರದ

ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ Read More »

ಕಾಂಗ್ರೆಸ್ ಜೊತೆಗೆ ಸಂಬಂಧ ಚೆನ್ನಾಗಿಲ್ಲ ಎಂಬ ಊಹಾಪೋಹಕ್ಕೆ ತೆರೆ ಎಳೆದ ಶಶಿ ತರೂರ್

ನವದೆಹಲಿ: ಕಾಂಗ್ರೆಸ್ ಜೊತೆ ಕೇರಳದ ಕೈ ನಾಯಕ ಶಶಿ ತರೂರ್ ಸಂಬಂಧ ಚೆನ್ನಾಗಿಲ್ಲ ಎನ್ನುವ ಮಾತನ್ನು ತಳ್ಳಿ ಹಾಕಿರುವ ತರೂರ್, ರಾಹುಲ್ ಗಾಂಧಿ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, ಕೋಮುವಾದವನ್ನು ವಿರೋಧಿಸುವ ಸ್ಪಷ್ಟ ರಾಜಕೀಯ ನಿಲುವು ಹೊಂದಿರುವ ನಾಯಕ ರಾಹುಲ್ ಗಾಂಧಿ ಎಂದು ಹೇಳಿದ್ದಾರೆ. ಎಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾದ ಒಂದು ದಿನದ ಬಳಿಕ ತರೂರ್ ಈ ಮಹತ್ವದ ಹೇಳಿಕೆಯನ್ನು ನೀಡಿರುವುದಾಗಿದೆ‌. ಪಕ್ಷ ತೊರೆಯುವ ಊಹಾಪೋಹದ ಬಗೆಗೂ

ಕಾಂಗ್ರೆಸ್ ಜೊತೆಗೆ ಸಂಬಂಧ ಚೆನ್ನಾಗಿಲ್ಲ ಎಂಬ ಊಹಾಪೋಹಕ್ಕೆ ತೆರೆ ಎಳೆದ ಶಶಿ ತರೂರ್ Read More »

ತಿರುಪತಿಯಲ್ಲಿ ನವಜೋಡಿ ಫೋಟೋ ಶೂಟ್: ಭಕ್ತರ ಆಕ್ರೋಶ

ತಿರುಮಲ: ತಿರುಪತಿ ತಿರುಮಲ ಶ್ರೀವಾರಿ ದೇಗುಲದ ಮುಂಭಾಗದಲ್ಲಿ ನವಜೋಡಿಯೊಂದು ನಡೆಸಿರುವ ಫೋಟೋಶೂಟ್‌ಗೆ ಭಕ್ತರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ತಮ್ಮ ಅಸಭ್ಯ ಫೋಟೋಶೂಟ್ ಮೂಲಕ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾಗಿರುವಂತೆ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಭಕ್ತರ ಕೆಂಗಣ್ಣಿಗೆ ನವ ಜೋಡಿ ಗುರಿಯಾಗಿರುವುದಾಗಿದೆ. ತಮಿಳುನಾಡು‌ ಮೂಲದ ಜೋಡಿ ಮದುವೆಯ ಬಳಿಕ ಶ್ರೀ ವೆಂಕಟೇಶ್ವರನ ದರ್ಶನ ಪಡೆದು, ಆ ಬಳಿಕ ದೇಗುಲದ ಆವರಣದ ಗೊಲ್ಲಮಂಟಪದ ಸಮೀಪ ವಿಶೇಷ ಬೆಳಕಿನಲ್ಲಿ ಪರಸ್ಪರ ಚುಂಬಿಸಿಕೊಂಡಂತೆ ಫೋಟೋ ತೆಗೆಸಿಕೊಂಡಿದ್ದಾರೆ. ಇದು ಭಕ್ತರು ಅತ್ತಿಂದಿತ್ತ ಓಡಾಡುವ ಸಂದರ್ಭದಲ್ಲಿ ಅವರುಗಳ ಕಣ್ಣಿಗೆ

ತಿರುಪತಿಯಲ್ಲಿ ನವಜೋಡಿ ಫೋಟೋ ಶೂಟ್: ಭಕ್ತರ ಆಕ್ರೋಶ Read More »

ಸುಳ್ಯ: ರಿಕ್ಷಾ ಚಾಲಕನ ಸಾವಿಗೆ ಕಾರಣವಾದ ಕಾರು ಮಡಿಕೇರಿಯಲ್ಲಿ ವಶ

ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಪಲಾಯನ ಮಾಡಿದ್ದ ಕಾರು ಸುಳ್ಯ: ಕೊಡಗು ಸಂಪಾಜೆಯಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕನ ಸಾವಿಗೆ ಕಾರಣವಾಗಿದ್ದ ಕಾರನ್ನು ಮಡಿಕೇರಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಿಕ್ಷಾಕ್ಕೆ ಹಿಂದಿನಿಂದ ಕಾರು ಗುದ್ದಿದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಚಾಲಕ ಸುಂದರ ಸಾವಿಗೀಡಾಗಿದ್ದರು. ಕಾರನ್ನು ಮಡಿಕೇರಿ ಸಮೀಪದ ಕಾಟಕೇರಿಯಲ್ಲಿ ಮಡಿಕೇರಿ ಪೋಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಲ್ಲಿದ್ದವರು ಮೈಸೂರಿನವರೆಂದು ತಿಳಿದುಬಂದಿದ್ದು ಅವರನ್ನು ಪೋಲೀಸರು ತಮ್ಮ ವಶ ಇರಿಸಿಕೊಂಡಿದ್ದಾರೆ. ರಿಕ್ಷಾ ಸಂಪಾಜೆ ಗೇಟಿನಿಂದ ಚೆಡಾವು ಕಡೆ ತೆರಳುತ್ತಿದ್ದು

ಸುಳ್ಯ: ರಿಕ್ಷಾ ಚಾಲಕನ ಸಾವಿಗೆ ಕಾರಣವಾದ ಕಾರು ಮಡಿಕೇರಿಯಲ್ಲಿ ವಶ Read More »

ದೇವರೇ ಚಿನ್ನದ ಬೆಲೆ ಇಳಿಸು…: ಮೊರೆಯಿಟ್ಟ ಭಕ್ತ!

ಸಿಕ್ಕಾಪಟ್ಟೆ ಏರಿಕೆಯಾದ ಚಿನ್ನ, ಬೆಳ್ಳಿ ಬೆಲೆಯಿಂದ ಜನ ಕಂಗಾಲು ಬೆಂಗಳೂರು: ಚಿನ್ನದ ಬೆಲೆ ಗಗನಕ್ಕೇರಿ ಬಡವರ ಪಾಲಿಗೆ ಮರೀಚಿಕೆಯಾಗಿದ್ದು, ವ್ಯಕ್ತಿಯೊಬ್ಬರು ಕೊನೆಗೆ ಚಿನ್ನದ ಬೆಲೆ ಇಳಿಸಲು ದೇವರಿಗೇ ಮೊರೆ ಹೋಗಿದ್ದಾರೆ! ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಮ್ನಳ್ಳಿ ಗ್ರಾಮದ ಪ್ರಸಿದ್ಧ ಚಿಮ್ನಳ್ಳಿ ದುರ್ಗಮ್ಮ ದೇವಿಯ ಜಾತ್ರೆಯಲ್ಲಿ ಭಕ್ತರೊಬ್ಬರು ಚಿನ್ನದ ಬೆಲೆ ಇಳಿಯಲಿ ಎಂದು ಕೋರಿ ಸಲ್ಲಿಸಿರುವ ವಿಭಿನ್ನ ಹರಕೆ ಇದೀಗ ಎಲ್ಲರ ಗಮನ ಸೆಳೆದಿದೆ. ಭಕ್ತ ಕೆ.ನಾಗರಾಜ ಉಲವತ್ತಿ ಎಂಬವರು, ಚಿನ್ನದ ದರ ಇಳಿಯಲಿ, ಬಡವರು ಹಾಗೂ

ದೇವರೇ ಚಿನ್ನದ ಬೆಲೆ ಇಳಿಸು…: ಮೊರೆಯಿಟ್ಟ ಭಕ್ತ! Read More »

ಮದುವೆ ಮಂಟಪಕ್ಕೆ ಹೋಗುತ್ತಿದ್ದಾಗಲೇ ವರನ ಮೇಲೆ ಹಲ್ಲೆ

ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆ ಸೇರಿದ ವರ ಚಾಮರಾಜನಗರ: ಮದುವೆ ಮಂಟಪಕ್ಕೆ ಹೋಗುತ್ತಿರುವಾಗಲೇ ವರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಕೊಳ್ಳೇಗಾಲ ಪಟ್ಟಣದಲ್ಲಿ ವಿವಾಹ ಆರತಕ್ಷತೆಗೆ ತೆರಳುತ್ತಿದ್ದ ವರ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಲೂಕಿನ ಕುಣಗಳ್ಳಿ ಎಲ್.ರವೀಶ್ (34) ಚಾಕು ಇರಿತಕ್ಕೊಳಗಾಗಿ ಪ್ರಾಣಾಪಾಯದಿಂದ ಪಾರಾಗಿರುವ ವರ. ಎಲ್. ರವೀಶ್​ಗೆ ಕೊಳ್ಳೇಗಾಲ ತಾಲೂಕಿನ ಹೊಸ ಅಣಗಳ್ಳಿ ಗ್ರಾಮದ ಯುವತಿಯ ಜೊತೆ ವಿವಾಹ ನಿಶ್ಚಯವಾಗಿ, ಕೊಳ್ಳೇಗಾಲ ಪಟ್ಟಣದ ವೆಂಕಟೇಶ್ವರ ಮಹಲ್​ನಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು. ಆರತಕ್ಷತೆಗೆ ತಮ್ಮ ಗ್ರಾಮದಿಂದ ಕಾರಿನಲ್ಲಿ

ಮದುವೆ ಮಂಟಪಕ್ಕೆ ಹೋಗುತ್ತಿದ್ದಾಗಲೇ ವರನ ಮೇಲೆ ಹಲ್ಲೆ Read More »

error: Content is protected !!
Scroll to Top