ಸುದ್ದಿ

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳಿಗೆ ಮಸಿ : ಶಿವಸೇನೆ ಪುಂಡರಿಂದ ಚಾಲಕ, ನಿರ್ವಾಹಕರಿಗೆ ಬೆದರಿಕೆ

ಗಡಿ ವಿವಾದವಾಗಿ ಬದಲಾದ ಕಂಡಕ್ಟರ್‌ ಮೇಲಿನ ಹಲ್ಲೆ ಘಟನೆ ಬೆಳಗಾವಿ: ಮರಾಠಿ ಗೊತ್ತಿಲ್ಲ ಕನ್ನಡದಲ್ಲಿ ಮಾತನಾಡು ಎಂದ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಬೆಳಗಾವಿಯಲ್ಲಿ ಹಲ್ಲೆ ನಡೆಸಿದ ವಿಚಾರ ಈಗ ಎರಡು ರಾಜ್ಯಗಳ ನಡುವೆ ಗಡಿ ಉದ್ವಿಗ್ನತೆ ಸೃಷ್ಟಿಗೆ ಕಾರಣವಾಗಿದೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಂಚರಿಸುವ ಬಸ್‌ಗಳನ್ನು ಅಲ್ಲಿನ ಮರಾಠಿ ಪುಂಡರು ಟಾರ್ಗೆಟ್ ಮಾಡುತ್ತಿದ್ದು, ಉದ್ಧವ್ ಠಾಕ್ರೆ ಬಣದ ಶಿವಸೇನೆ ಪುಂಡರು ಕರ್ನಾಟಕ ಬಸ್ಸುಗಳಿಗೆ ಮಸಿ ಬಳಿದು ಹಾನಿ ಎಸಗಿದ್ದಾರೆ. ಪುಣೆಯ ಸ್ವಾರ್‌ಗೇಟ್‌ ಬಳಿ ಪುಂಡಾಟಿಕೆ ಮಾಡಿರುವ […]

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳಿಗೆ ಮಸಿ : ಶಿವಸೇನೆ ಪುಂಡರಿಂದ ಚಾಲಕ, ನಿರ್ವಾಹಕರಿಗೆ ಬೆದರಿಕೆ Read More »

ಭೀಕರ ಅಪಘಾತ : ಕುಂಭಮೇಳಕ್ಕೆ ಹೋಗುತ್ತಿದ್ದ ಬೆಳಗಾವಿಯ 7 ಮಂದಿ ಸಾವು

ಬೆಳಗಾವಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪುಣ್ಯಸ್ನಾನಕ್ಕೆ ತೆರಳುತ್ತಿದ್ದ ಬೆಳಗಾವಿಯ ಗೋಕಾಕ್‌ ನಗರದ 7 ಮಂದಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಧ್ಯ ಪ್ರದೇಶದ ಜಬಲಪುರ ಪೆಹರಾ ಟೋಲ್ ನಾಕಾ ಬಳಿ ಇಂದು ಬೆಳಗಿನ ಜಾವ ಕ್ರೂಸರ್‌ ವಾಹನ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. 7 ಮಂದಿ ಕನ್ನಡಿಗರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಎರಡು ದಿನಗಳ ಹಿಂದೆ ಗೋಕಾಕ್‌ ನಗರದಿಂದ 10 ಮಂದಿ ಕ್ರೂಸರ್‌ನಲ್ಲಿ ಮಹಾಕುಂಭಮೇಳಕ್ಕೆ ಹೊರಟಿದ್ದರು. ಇಂದು ಮುಂಜಾನೆ

ಭೀಕರ ಅಪಘಾತ : ಕುಂಭಮೇಳಕ್ಕೆ ಹೋಗುತ್ತಿದ್ದ ಬೆಳಗಾವಿಯ 7 ಮಂದಿ ಸಾವು Read More »

280 ಪ್ರಯಾಣಿಕರಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ : ರೋಮ್‌ನಲ್ಲಿ ತುರ್ತು ಭೂಸ್ಪರ್ಶ

ಅಮೆರಿಕದಿಂದ ದಿಲ್ಲಿಗೆ ಬರುತ್ತಿದ್ದ ಡ್ರೀಮ್‌ಲೈನರ್ ವಿಮಾನ ನವದೆಹಲಿ: ನ್ಯೂಯಾರ್ಕ್‌ನ ಜಾನ್ ಎಫ್ ಕೆ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಹೊರಟ್ಟಿದ್ದ ಅಮೆರಿಕದ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಿದ್ದರಿಂದ ವಿಮಾನವನ್ನು ರೋಮ್‌ನಲ್ಲಿ ಭಾನುವಾರ ಸಂಜೆ ತುರ್ತು ಭೂ ಸ್ಪರ್ಶ ಮಾಡಲಾಗಿದೆ. 280 ಪ್ರಯಾಣಿಕರಿದ್ದ ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನ ಕ್ಯಾಸ್ಪಿಯನ್ ಸಮುದ್ರದ ಮೇಲೆ ಪಶ್ಚಿಮಕ್ಕೆ ಹೋಗುವ ಮೊದಲು ಇಟಲಿಯ ಕಡೆಗೆ ತನ್ನ ಮಾರ್ಗವನ್ನು ತಿರುಗಿಸಿದೆ. ನ್ಯೂಯಾರ್ಕ್ ನಿಂದ ಶನಿವಾರ ರಾತ್ರಿ 8.30ರ ಸಮಯದಲ್ಲಿ ಟೇಕ್ ಆಫ್ ಆದ

280 ಪ್ರಯಾಣಿಕರಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ : ರೋಮ್‌ನಲ್ಲಿ ತುರ್ತು ಭೂಸ್ಪರ್ಶ Read More »

ದಾವಣಗೆರೆಯ ಮಠಕ್ಕೆ ನಟ ಸುನಿಲ್‌ ಶೆಟ್ಟಿಯಿಂದ ರೋಬೋಟಿಕ್‌ ಆನೆ ಕೊಡುಗೆ

ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರೆಕೆರೆಯ ಶಿಲಾಮಠಕ್ಕೆ ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ರೋಬೋಟಿಕ್​ ಆನೆಯೊಂದನ್ನು ಕೊಡುಗೆಯಾಗಿ ನೀಡಿದ್ದಾರೆ. ಭಾನುವಾರ ಶ್ರೀಮಠಕ್ಕೆ ಆಗಮಿಸಿದ ಆನೆಯನ್ನು ಸ್ವಾಮೀಜಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ರೋಬೋಟಿಕ್ ಆನೆಗೆ ಉಮಾಮಹೇಶ್ವರ ಎಂದು ನಾಮಕರಣ ಮಾಡಲಾಯಿತು. ಗ್ರಾಮಸ್ಥರೆಲ್ಲರೂ ಸೇರಿ ಆನೆಯ ಮೆರವಣಿಗೆ ಮಾಡಿ ಸಂಭ್ರಮಿಸಿದ್ದಾರೆ. ರೋಬೋಟಿಕ್ ಆನೆಯ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳಲು ಜನರು ಮುಗಿಬಿದ್ದರು.ಮುಂಬೈನ ಕುಪಾ ಆ್ಯಂಡ್ ಪೀಠಾ ಇಂಡಿಯಾ ಎಂಬ ಸಂಸ್ಥೆ ವತಿಯಿಂದ ನಟ ಸುನೀಲ್ ಶೆಟ್ಟಿ ಅವರು ರೋಬೋಟಿಕ್​ ಆನೆಯನ್ನು

ದಾವಣಗೆರೆಯ ಮಠಕ್ಕೆ ನಟ ಸುನಿಲ್‌ ಶೆಟ್ಟಿಯಿಂದ ರೋಬೋಟಿಕ್‌ ಆನೆ ಕೊಡುಗೆ Read More »

ಮೂಡೂರು-ಪಡೂರು ಬಯಲು ಕಂಬಳಕ್ಕೆ ಆಗಮಿಸಲಿದ್ದಾರೆ ಸಿದ್ದರಾಮಯ್ಯ

ಮಾ.8ರಂದು ಬಂಟ್ವಾಳದ ಕೊಡಿಬೈಲಿನಲ್ಲಿ ಜೋಡುಕರೆ ಕಂಬಳ ಬಂಟ್ವಾಳ : ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ನಡೆಯಲಿರುವ 14ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಹಲವು ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ. ಮಾರ್ಚ್ 8ರಂದು ಈ ಕಂಬಳ ನಡೆಯಲಿದ್ದು, ಅಧಿವೇಶನ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲು ಒಪ್ಪಿದ್ದಾರೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ತಿಳಿಸಿದ್ದಾರೆ. ದಿ.ಆಲ್ಬರ್ಟ್ ಪಾಯಸ್ ಕೂಡಿಬೈಲು ವೇದಿಕೆಯಲ್ಲಿ ಅಂದು ಬೆಳಗ್ಗೆ 8.45ಕ್ಕೆ ಸೋಲೂರು ಆರ್ಯ-ಈಡಿಗ ಮಹಾ ಸಂಸ್ಥಾನ

ಮೂಡೂರು-ಪಡೂರು ಬಯಲು ಕಂಬಳಕ್ಕೆ ಆಗಮಿಸಲಿದ್ದಾರೆ ಸಿದ್ದರಾಮಯ್ಯ Read More »

ಭಾರತ ಗೆದ್ದ ಬಳಿಕ ಟ್ರೋಲ್‌ ಆದ ಐಐಟಿ ಬಾಬಾ

ಕ್ರಿಕೆಟ್‌ ಬಗ್ಗೆ ಭವಿಷ್ಯ ನುಡಿದು ನಗೆಪಾಟಲಾದ ನಾಗಸಾಧು ಹೊಸದಿಲ್ಲಿ : ಚಾಂಪಿಯನ್ಸ್‌ ಟ್ರೋಫಿಯಲ್ಲಿ ನಿನ್ನೆ ನಡೆದ ಭಾರತ-ಪಾಕಿಸ್ಥಾನ ರಣರೋಚಕ ಕದನದಲ್ಲಿ ಭಾರತ ಗೆದ್ದ ಬಳಿಕ ಕುಂಭಮೇಳದ ಮೂಲಕ ಪ್ರಸಿದ್ಧಿಗೆ ಬಂದಿರುವ ಐಐಟಿ ಬಾಬಾ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಿದ್ದಾರೆ. ಐಐಟಿ ಪದವೀಧರನಾಗಿಯೂ ನಾಗಾಸಾಧು ಆದ ಕಾರಣಕ್ಕೆ ಈ ಐಐಟಿ ಬಾಬಾ ಭಾರಿ ಪ್ರಚಾರ ಪಡೆದುಕೊಂಡಿದ್ದರು. ಸೋಷಿಯಲ್‌ ಮೀಡಿಯಾದಲ್ಲೂ ಬಹಳ ಸೆನ್ಸೇಷನ್‌ ಉಂಟು ಮಾಡಿದ್ದರು. ಆದರೆ ಕ್ರಿಕೆಟ್‌ ಬಗ್ಗೆ ಭವಿಷ್ಯ ನುಡಿದು ಈಗ ಈ ಬಾಬಾ ನಗೆಪಾಟಲಾಗಿದ್ದಾರೆ.

ಭಾರತ ಗೆದ್ದ ಬಳಿಕ ಟ್ರೋಲ್‌ ಆದ ಐಐಟಿ ಬಾಬಾ Read More »

ಬಾಣಂತಿ ಹೊಟ್ಟೆಯಲ್ಲಿ ಹತ್ತಿ ಉಂಡೆ ಬಿಟ್ಟು ಹೊಲಿಗೆ ಹಾಕಿದ ವೈದ್ಯರು

ಜಿಮ್ಸ್‌ ಆಸ್ಪತ್ರೆ ವೈದ್ಯರ ಯಡವಟ್ಟು ಕಲಬುರಗಿ: ಇಲ್ಲಿನ ಜಿಮ್ಸ್‌ ಆಸ್ಪತ್ರೆಯ ವೈದ್ಯರು ಮಹಿಳೆಯೊಬ್ಬರಿಗೆ ಸಿಸೇರಿಯನ್‌ ಮಾಡುವ ವೇಳೆ ಹೊಟ್ಟೆಯಲ್ಲೇ ಬಟ್ಟೆ ಉಂಡೆ ಹಾಗೂ ಹತ್ತಿ ಬಿಟ್ಟು ಹೊಲಿಗೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಫೆ.5ರಂದು ಭಾಗ್ಯಶ್ರೀ ಎಂಬ ಮಹಿಳೆಗೆ ಸಿಸೇರಿಯನ್‌ ಆಗಿತ್ತು. ಈ ವೇಳೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಹೊಟೆಯಲ್ಲೇ ಬಟ್ಟೆ ಉಂಡೆ ಹಾಗೂ ಹತ್ತಿ ಬಿಟ್ಟು ಹೊಲಿಗೆ ಹಾಕಿದ್ದಾರೆ. ತಕ್ಷಣಕ್ಕೆ ಇದು ಮಹಿಳೆಯ ಅರಿವಿಗೆ ಬಂದಿಲ್ಲ. ಒಂದು ವಾರದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ

ಬಾಣಂತಿ ಹೊಟ್ಟೆಯಲ್ಲಿ ಹತ್ತಿ ಉಂಡೆ ಬಿಟ್ಟು ಹೊಲಿಗೆ ಹಾಕಿದ ವೈದ್ಯರು Read More »

ಟೋಲ್‌ಗೇಟ್‌ಗೆ ಸಡ್ಡು : ಪ್ರತ್ಯೇಕ ರಸ್ತೆ ನಿರ್ಮಿಸಲು ಮುಂದಾದ ಗಡಿನಾಡ ಜನ

ವಿನಾಯಿತಿ ನೀಡದ ತಲಪಾಡಿ ಟೋಲ್‌ಗೇಟ್‌ಗೆ ಗಡಿ ಭಾಗದವರಿಂದ ತಿರುಗೇಟು ಮಂಗಳೂರು: ಕೇರಳದ ಮಂಜೇಶ್ವರ ಪಂಚಾಯಿತಿ ವ್ಯಾಪ್ತಿಯ ಗಡಿನಾಡ ಕನ್ನಡಿಗರು ತಮಗೆ ವಿನಾಯಿತಿ ನೀಡದ ತಲಪಾಡಿ ಹೆದ್ದಾರಿ ಟೋಲ್‌ಗೇಟ್‌ಗೆ ಸಡ್ಡುಹೊಡೆದು ಪಕ್ಕದಲ್ಲೇ ಬೇರೆಯೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಲಪಾಡಿ ಟೋಲ್‌ಗೇಟ್‌ನಲ್ಲಿ ವಿನಾಯಿತಿ ನೀಡುವಂತೆ ಹಲವು ಸಮಯಗಳಿಂದ ಒತ್ತಾಯಿಸುದ್ದರೂ ಟೋಲ್ ಸಂಸ್ಥೆ ಸ್ಪಂದಿಸಿಲ್ಲ. ಹೀಗಾಗಿ ತಲಪಾಡಿ ಟೋಲ್‌ಗೇಟ್‌ನಲ್ಲಿ ಗಡಿ ಪ್ರದೇಶದ ಜನರಿಗೆ ಆಗುತ್ತಿರುವ ಅನ್ಯಾಯ ಪ್ರತಿಭಟಿಸಿ ಹೆದ್ದಾರಿಯ ಹತ್ತಿರದಲ್ಲೇ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಲಪಾಡಿ ಟೋಲ್‌ಗೇಟ್‌ ಸ್ಥಾಪಿಸಿದ ಆರಂಭದಲ್ಲಿ

ಟೋಲ್‌ಗೇಟ್‌ಗೆ ಸಡ್ಡು : ಪ್ರತ್ಯೇಕ ರಸ್ತೆ ನಿರ್ಮಿಸಲು ಮುಂದಾದ ಗಡಿನಾಡ ಜನ Read More »

ಧರ್ಮಸ್ಥಳಕ್ಕೆ ಬರುತ್ತಿದ್ದ ಪಾದಯಾತ್ರಿಗಳಿಗೆ ಬಸ್‌ ಡಿಕ್ಕಿ : ಇಬ್ಬರು ಸಾವು

ಹಾಸನ: ಧರ್ಮಸ್ಥಳಕ್ಕೆ ತೆರಳುತ್ತಿದ್ದ ಪಾದಯಾತ್ರಿಗಳಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಹಾಸನ ತಾಲೂಕಿನ ಕೆಂಚಟ್ಟಹಳ್ಳಿ ಬಳಿ ನಡೆದಿದೆ. ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ನಾಡಿನೆಲ್ಲೆಡೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಆಗಮಿಸುವುದು ವಾಡಿಕೆ.ಸುರೇಶ್ (60) ಮತ್ತು ಕುಮಾರ್ (55) ಬಸ್‌ ಡಿಕ್ಕಿ ಹೊಡೆದು ಮೃತಪಟ್ಟಿರುವ ದುರ್ದೈವಿಗಳು. ಮೃತರು ಮಂಡ್ಯ ಜಿಲ್ಲೆ, ಕೆ.ಆರ್ ಪೇಟೆ ತಾಲೂಕಿನ ಆನಗೋಳು ಗ್ರಾಮದವರು. ಗಂಭೀರ ಗಾಯಗೊಂಡ ದಿನೇಶ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಇಂದು ಮುಂಜಾನೆ ಧರ್ಮಸ್ಥಳಕ್ಕೆ ರಸ್ತೆ ಬದಿ

ಧರ್ಮಸ್ಥಳಕ್ಕೆ ಬರುತ್ತಿದ್ದ ಪಾದಯಾತ್ರಿಗಳಿಗೆ ಬಸ್‌ ಡಿಕ್ಕಿ : ಇಬ್ಬರು ಸಾವು Read More »

ಕೊಬ್ಬರಿ ಎಣ್ಣೆ ಬಲು ದುಬಾರಿ : ಲೀಟರ್‌ಗೆ 300 ರೂ.

ಒಂದೇ ವರ್ಷದಲ್ಲಿ ದುಪ್ಪಟ್ಟಾದ ಬೆಲೆಯಿಂದ ಜನ ಕಂಗಾಲು ಕಾರ್ಕಳ : ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಜೀವನ ದುಸ್ತರವಾಗಿದೆ. ಈಗ ಅಡುಗೆ ಎಣ್ಣೆ ಬೆಲೆಯೂ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಸೂರ್ಯಕಾಂತಿ, ನೆಲಕಡಲೆ, ಸಾಸಿವೆ, ತಾಳೆಎಣ್ಣೆ ಸೇರಿದಂತೆ ಎಲ್ಲ ರೀತಿಯ ಖಾದ್ಯತೈಲದ ಬೆಲೆ ಏರಿಕೆಯಾಗಿದೆ. ಕೊಬ್ಬರಿ ಎಣ್ಣೆ ಬೆಲೆ ಅಂಕೆಗೆ ಸಿಗದಂತೆ ಏರುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ತೆಂಗಿನಎಣ್ಣೆ ಬೆಲೆ ಲೀಟರಿಗೆ 300 ರೂ. ಸಮೀಪಿಸಿದೆ. ತೆಂಗು ಯಥೇಚ್ಚವಾಗಿ ಬೆಳೆಯುವ ಕರಾವಳಿಯಲ್ಲೂ ಲೀಟರಿಗೆ 250-260 ಆಗಿದ್ದು, ಜನರು ಕಂಗಾಲಾಗಿದ್ದಾರೆ.

ಕೊಬ್ಬರಿ ಎಣ್ಣೆ ಬಲು ದುಬಾರಿ : ಲೀಟರ್‌ಗೆ 300 ರೂ. Read More »

error: Content is protected !!
Scroll to Top