ಸುದ್ದಿ

ಪಿಕಪ್ – ಸ್ಕೂಟಿ ಢಿಕ್ಕಿ: ಮಹಿಳೆ ಸಾವು

ಚಿಕ್ಕಮಗಳೂರು: ಪಿಕಪ್ ಮತ್ತು ಸ್ಕೂಟಿ ‌ನಡುವೆ ನಡೆದ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಅರಶಿನಗುಪ್ಪೆ ಗ್ರಾಮದಲ್ಲಿ ನಡೆದಿದೆ. ಚಂದ್ರಿಕಾ (40) ಎಂಬವರೇ ಮೃತ ದುರ್ದೈವಿ. ಅವರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸಂದರ್ಭ ಏಕಾಏಕಿ ಅವರ ಮೇಲೆ ಪಿಕಪ್ ಹರಿದು ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಗಮಿಸಿದ್ದು, ಈ ವೇಳೆ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಸದ್ರಿ ಅಪಘಾತ ಸಂಭವಿಸುತ್ತಿರುವ […]

ಪಿಕಪ್ – ಸ್ಕೂಟಿ ಢಿಕ್ಕಿ: ಮಹಿಳೆ ಸಾವು Read More »

ಉದ್ಯಮಿ ಸಿ.ಜೆ. ರಾಯ್‌ ಆತ್ಮಹತ್ಯೆ ಕೇಸ್‌ : ಡೈರಿಯಲ್ಲಿದೆ ಸ್ಫೊಟಕ ಮಾಹಿತಿ

ಇಡೀ ತನಿಖೆಯ ದಿಕ್ಕನ್ನೇ ಬದಲಿಸುವ ಮಾಹಿತಿ ಡೈರಿಯಲ್ಲಿ ಪತ್ತೆ ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಮಾಡಿಕೊಳ್ಳಲು ಮೊದಲೇ ನಿರ್ಧರಿಸಿದ್ದರೇ? ಅವರ ಡೈರಿಯಲ್ಲಿರುವ ಕೆಲವೊಂದು ಮಾಹಿತಿ ಸಿ.ಜೆ.ರಾಯ್‌ ಆತ್ಮಹತ್ಯೆ ಆ ಕ್ಷಣದ ನಿರ್ಧಾರವಲ್ಲ, ಬದಲಾಗಿ ಅವರು ಮೊದಲೇ ಆತ್ಮಹತ್ಯೆಗೆ ತಯಾರಿ ಮಾಡಿಕೊಂಡಿದ್ದರು ಎಂಬ ಸುಳಿವು ನೀಡುತ್ತಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಆದಾಯಕರ ಇಲಾಖೆಯ ಕಿರುಕುಳದಿಂದ ಐಟಿ ದಾಳಿ ನಡೆಯುತ್ತಿರುವಾಗಲೇ ಸಿ.ಜೆ.ರಾಯ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಡೈರಿಯಲ್ಲಿ ಅವರು ಬರೆದಿಟ್ಟಿರುವ ಕೆಲವು ವಿಚಾರಗಳು ತನಿಖೆಯ

ಉದ್ಯಮಿ ಸಿ.ಜೆ. ರಾಯ್‌ ಆತ್ಮಹತ್ಯೆ ಕೇಸ್‌ : ಡೈರಿಯಲ್ಲಿದೆ ಸ್ಫೊಟಕ ಮಾಹಿತಿ Read More »

ರಸ್ತೆ ಬದಿಯಲ್ಲಿ ನಿಂತಿದ್ದವರಿಗೆ ಡಿಕ್ಕಿ ಹೊಡೆದ ಕಾರು : ಇಬ್ಬರಿಗೆ ಗಂಭೀರ ಗಾಯ

ಬೆಳ್ತಂಗಡಿ : ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ಚಾಲಕನ ಅಜಾಗರೂಕತೆಯ ಚಾಲನೆಯ ಪರಿಣಾಮ ಕಾರೊಂದು ಢಿಕ್ಕಿಯಾಗಿ ಹೆದ್ದಾರಿ ಬದಿ ನಿಂತಿದ್ದ ಇಬ್ಬರು ಗಂಭೀರ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಸ್ಥಳೀಯ ನಿವಾಸಿಗಳಾದ ಉಮೇಶ(49) ಹಾಗೂ ಸೀನಪ್ಪ ಪೂಜಾರಿ(60) ಗಾಯಗೊಂಡಿದ್ದು, ಇಬ್ಬರೂ ಸಂಬಂಧಿಕರಾಗಿದ್ದಾರೆ. ಅವರು ಕಕ್ಕಿಂಜೆಯ ಆಯಿಲ್ ಮಿಲ್ ಬಳಿ ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಮನೆಗೆ ತೆರಳಲು ಆಟೋರಿಕ್ಷಾಕ್ಕೆ ಕಾಯುತ್ತಿದ್ದ ವೇಳೆ ಘಟನೆ ನಡೆದಿದೆ. ಚಾಲಕ ಹರ್ಷನ್ ಮನೋಜ್ ಎಂಬಾತ ಉಜಿರೆ ಕಡೆಯಿಂದ ಚಾರ್ಮಾಡಿ ಕಡೆಗೆ

ರಸ್ತೆ ಬದಿಯಲ್ಲಿ ನಿಂತಿದ್ದವರಿಗೆ ಡಿಕ್ಕಿ ಹೊಡೆದ ಕಾರು : ಇಬ್ಬರಿಗೆ ಗಂಭೀರ ಗಾಯ Read More »

ವರನಿಗೆ ಚಾಕು ಇರಿತ ಪ್ರಕರಣ : ವಧುವೇ ಹತ್ಯಾಯತ್ನದ ಸೂತ್ರಧಾರಿ!

ಮದುವೆ ತಪ್ಪಿಸಲು ಪ್ರಿಯತನೊಡನೆ ಸೇರಿ ಮರ್ಡರ್‌ ಪ್ಲಾನ್‌ ಮಾಡಿದ್ದ ಯುವತಿ ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದ ವರನಿಗೆ ಚಾಕು ಇರಿತ ಪ್ರಕರಣ ತಿರುವು ಪಡೆದುಕೊಂಡಿದ್ದು, ಅವನನ್ನು ಮದುವೆಯಾಗಬೇಕಾಗಿದ್ದ ವಧುವೇ ಈ ಹತ್ಯಾಯತ್ನದ ಹಿಂದಿನ ಸೂತ್ರಧಾರಿ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಡಿ.30ರಂದು ಕುಣಗಳ್ಳಿ ಗ್ರಾಮದ ರವೀಶ್ ಮತ್ತು ನಯನ ಮದುವೆ ನಡೆಯಬೇಕಿತ್ತು. ರವೀಶ್‌ ಹೊಸ ಜೀವನಕ್ಕೆ ಕಾಲಿಡುವ ಸಂತೋಷದಲ್ಲಿದ್ದರು. ಹಿಂದಿನ ದಿನ ರಿಸೆಪ್ಶನ್‌ಗೆ ರವೀಶ್‌ ಸೇರಿದಂತೆ ಸಂಬಂಧಿಕರು ಕಲ್ಯಾಣ ಮಂಟಪದತ್ತ ಹೊರಟಿದ್ದರು. ಕೊಳ್ಳೇಗಾಲದ

ವರನಿಗೆ ಚಾಕು ಇರಿತ ಪ್ರಕರಣ : ವಧುವೇ ಹತ್ಯಾಯತ್ನದ ಸೂತ್ರಧಾರಿ! Read More »

ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ಎಸ್‌ಐಟಿ ತನಿಖೆ ಆರಂಭ

ತೆರಿಗೆ ದಾಳಿ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿಯ ಸಾವಿನ ಸುತ್ತ ಅನುಮಾನದ ಹುತ್ತ ಬೆಂಗಳೂರು: ರಿಯಲ್ ಎಸ್ಟೇಟ್ ಸಂಸ್ಥೆ ಕಾನ್ಫಿಡೆಂಟ್‌ ಗ್ರೂಪ್‌ ಸಂಸ್ಥಾಪಕ ಹಾಗೂ ಅಧ್ಯಕ್ಷ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ತನಿಖೆ ಆರಂಭಿಸಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಭಾನುವಾರ ತಿಳಿಸಿದ್ದಾರೆ. ಜನವರಿ 30ರಂದು ಬೆಂಗಳೂರು ನಗರದ ಅಶೋಕನಗರ ವ್ಯಾಪ್ತಿಯಲ್ಲಿರುವ ಕಚೇರಿಯಲ್ಲಿ ರಾಯ್ ಅವರು ಗುಂಡಿನ ಗಾಯಗಳೊಂದಿಗೆ ಮೃತಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಘಟನೆ ನಡೆದ

ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ಎಸ್‌ಐಟಿ ತನಿಖೆ ಆರಂಭ Read More »

ಹತ್ಯೆಗೆ ಯತ್ನಿಸಿದ ಅಪರಾಧಿಗೆ 4 ವರ್ಷ ಜೈಲು ಶಿಕ್ಷೆ

ಆನ್‌ಲೈನ್‌ ಗೇಮ್‌ನಲ್ಲಿ ಸೋತ ಹಿನ್ನೆಲೆಯಲ್ಲಿ ಕೊಲೆಗೆ ಯತ್ನಿಸಿದ್ದ ಅಪರಾಧಿ ಮಂಗಳೂರು: ಮೊಬೈಲ್ ಆನ್‌ಲೈನ್ ಗೇಮ್ ಫ್ರೀ ಫೈರ್‌ನಲ್ಲಿ ಸೋತ ದ್ವೇಷದಿಂದ ಯುವಕನನ್ನು ಚೂರಿಯಿಂದ ಇರಿದು ಕೊಲ್ಲಲು ಯತ್ನಿಸಿದ ಪ್ರಕರಣದ ಅಪರಾಧಿಗೆ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಂಗಳೂರು ನಗರದ ಜಪ್ಪು ಬಪ್ಪಾಲ್ ನಿವಾಸಿ ಪ್ರತ್ಯುಶ್ ಸಾಲಿಯಾನ್ ಫ್ರೀ ಫೈರ್ ಮೊಬೈಲ್ ಗೇಮ್‌ನಲ್ಲಿ ಸಂಜಯ್ ಪೂಜಾರಿ ಎಂಬವನನ್ನು ಸೋಲಿಸಿದ್ದರು. ಈ ಕಾರಣದಿಂದಾಗಿ ಸಂಜಯ್ ಪೂಜಾರಿಗೆ ಪ್ರತ್ಯುಶ್ ಮೇಲೇ ದ್ವೇಷ ಇತ್ತು. 17-05-2023 ರಂದು ಮಧ್ಯಾಹ್ನ 3.40ರ

ಹತ್ಯೆಗೆ ಯತ್ನಿಸಿದ ಅಪರಾಧಿಗೆ 4 ವರ್ಷ ಜೈಲು ಶಿಕ್ಷೆ Read More »

ಟಿ20 ವಿಶ್ವಕಪ್‌ನಲ್ಲಿ ಭಾರತ ಜೊತೆ ಆಡವುದಿಲ್ಲ ಎಂದ ಪಾಕಿಸ್ತಾನ : ಐಸಿಸಿಗೆ ಭಾರಿ ನಷ್ಟದ ಚಿಂತೆ

ಪಾಕ್‌ ಬಹಿಷ್ಕಾರದಿಂದ ಭಾರತಕ್ಕಾಗುವ ಪರಿಣಾಮ ಏನು? ಮುಂಬಯಿ: ಬಾಂಗ್ಲಾದೇಶದ ಬಳಿಕ ಪಾಕಿಸ್ತಾನ ಟಿ20 ವಿಶ್ವಕಪ್‌ ಬಗ್ಗೆ ಖ್ಯಾತೆ ತೆಗೆದಿದೆ. ಭಾರತದಲ್ಲಿ ಆಡಲು ನಿರಾಕರಿಸಿದ ಬಾಂಗ್ಲಾದೇಶವನ್ನಿ ಈಗಾಗಲೇ ವಿಶ್ವಕಪ್‌ ಟೂರ್ನಿಯಿಂದ ಹೊರಗಿಡಲಾಗಿದೆ. ಇದರ ಬೆನ್ನಿಗೆ ಎಲ್ಲೇ ಪಂದ್ಯ ನಡೆದರೂ ಭಾರತದ ಜೊತೆ ಆಡಲಾರೆ ಎಂದು ಪಾಕಿಸ್ತಾನ ಹೇಳಿದೆ. ಕಳೆದ ಕೆಲವು ದಿನಗಳಿಂದ ಟಿ20 ವಿಶ್ವಕಪ್​ನಲ್ಲಿ ನಮ್ಮ ತಂಡ ಭಾಗವಹಿಸುವುದು ಇನ್ನು ಖಚಿತವಾಗಿಲ್ಲ ಎನ್ನುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ತಂಡ ಟಿ20 ವಿಶ್ವಕಪ್​ನಲ್ಲಿ ಆಡುವುದನ್ನು ಪಾಕಿಸ್ತಾನ ಸರ್ಕಾರ ಖಚಿತಪಡಿಸಿದೆ,

ಟಿ20 ವಿಶ್ವಕಪ್‌ನಲ್ಲಿ ಭಾರತ ಜೊತೆ ಆಡವುದಿಲ್ಲ ಎಂದ ಪಾಕಿಸ್ತಾನ : ಐಸಿಸಿಗೆ ಭಾರಿ ನಷ್ಟದ ಚಿಂತೆ Read More »

ಗ್ಯಾಸ್‌ ಸಿಲಿಂಡರ್‌ ಬೆಲೆ 49 ರೂ. ಹೆಚ್ಚಳ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 49 ರೂ. ಹೆಚ್ಚಿಸಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಬೆಲೆಯನ್ನು 1,740.50 ರೂ.ಗೆ ಪರಿಷ್ಕರಿಸಲಾಗಿದೆ. ಆದರೆ, 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಬದಲಾಗದೆ ಉಳಿದಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ವಾಣಿಜ್ಯ ಬಳಕೆದಾರರಿಗೆ ವೆಚ್ಚದ ಹೊರೆಯನ್ನು ಹೆಚ್ಚಿಸಿದೆ.‌ ಕಳೆದ ತಿಂಗಳು ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ

ಗ್ಯಾಸ್‌ ಸಿಲಿಂಡರ್‌ ಬೆಲೆ 49 ರೂ. ಹೆಚ್ಚಳ Read More »

ಬಜೆಟ್‌ 2026 : ಪ್ರಮುಖ ಘೋಷಣೆಗಳು

ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ ನವದೆಹಲಿ: ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಮಧ್ಯಂತರ ಬಜೆಟ್ ಸೇರಿದಂತೆ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆಯನ್ನು ಸ್ಥಾಪಿಸಲಿದ್ದಾರೆ. ಕಳೆದ ನಾಲ್ಕು ವರ್ಷಗಳಂತೆ, ಈ ವರ್ಷದ ಬಜೆಟ್ ಅನ್ನು ಕಾಗದರಹಿತ ಸ್ವರೂಪದಲ್ಲಿ ಮಂಡಿಸಲಾಯಿತು. 2019ರಲ್ಲಿ ಸೀತಾರಾಮನ್ ತಮ್ಮ ಮೊದಲ ಬಜೆಟ್ ಮಂಡಿಸಿದಾಗ, ಅವರು ಚರ್ಮದ ಬ್ರೀಫ್‌ಕೇಸ್ ಬದಲಿಗೆ ಕೆಂಪು ಬಟ್ಟೆಯಲ್ಲಿ ಸುತ್ತಿದ ಸಾಂಪ್ರದಾಯಿಕ ಲೆಡ್ಜರ್ ಸಂಸತ್ತಿಗೆ ತಂದಿದ್ದರು. 2017

ಬಜೆಟ್‌ 2026 : ಪ್ರಮುಖ ಘೋಷಣೆಗಳು Read More »

ವಿಟ್ಲ: ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿದ ಶಿಕ್ಷಕನ ವಿರುದ್ಧ ದೂರು ದಾಖಲು

ವಿಟ್ಲ: ಇಡ್ಕಿದು ಗ್ರಾಮದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ವಿದ್ಯಾರ್ಥಿಗೆ ಬೆತ್ತದಿಂದ ಸಿಕ್ಕಾಪಟ್ಟೆ ಥಳಿಸಿದ ಘಟನೆ ವರದಿಯಾಗಿದೆ. ಗಂಭೀರವಾಗಿ ಹಲ್ಲೆ ನಡೆಸಿದ ಶಿಕ್ಷಕ ಇಸ್ತಿಕಾರ್ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿ ಎಂದಿನಂತೆ ಶಾಲೆಗೆ ಹೋಗಿದ್ದು ಮಧ್ಯಾಹ್ನ 2 ಗಂಟೆಗೆ ನಿಮ್ಮ ಮಗು ಇತರ ಮಕ್ಕಳಿಗೆ ತೊಂದರೆ ಮಾಡಿದ್ದು ಹಾಗೂ ಈ ವಿಚಾರವಾಗಿ ಬೈದಾಗ ಅಲ್ಲಿಯೇ ಮೂತ್ರ ಮಾಡಿಕೊಂಡಿದ್ದು ನೀವು ಬಂದು ಮಗುವನ್ನು ಕರೆದುಕೊಂಡು ಹೋಗಿ ಎಂದು ಶಾಲೆಯ ಕಚೇರಿಯಿಂದ ಕರೆ ಹೆತ್ತವರಿಗೆ ಬಂದಿದೆ.

ವಿಟ್ಲ: ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿದ ಶಿಕ್ಷಕನ ವಿರುದ್ಧ ದೂರು ದಾಖಲು Read More »

error: Content is protected !!
Scroll to Top