ಸುದ್ದಿ

ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  ವೀರಮಂಗಲ  ಪುತ್ತೂರು ಕಡಬ ತಾಲೂಕಿನಲ್ಲಿ ಅತ್ಯುತ್ತಮ ಶಾಲೆ ಎಂಬ ಗೌರವ | ಅತ್ಯುತ್ತಮ ಎಸ್‌ ಡಿ ಎಂ ಸಿ ಕಾರ್ಯನಿರ್ವಹಣೆ| ಪುಷ್ಠಿ ಗೌರವದೊಂದಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಒಂದು ಲಕ್ಷ ಬಹುಮಾನ

 ವೀರಮಂಗಲ : ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಾಲಾ ನಿರ್ವಹಣೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿ ಸಮೀಕ್ಷೆ ನಡೆಸಿದ್ದು . ಈ ಸಮೀಕ್ಷೆಯಲ್ಲಿ ಪುತ್ತೂರು ಕಡಬ ತಾಲೂಕಿನ  ವೀರಮಂಗಲ ಪಿಎಂಶ್ರೀ ಶಾಲೆ ಅತ್ಯುತ್ತಮ ಶಾಲೆಯಾಗಿ ಪುಷ್ಠಿ ಗೌರವದೊಂದಿಗೆ ಒಂದು ಲಕ್ಷ ನಗದು ಬಹುಮಾನವನ್ನು ಪಡೆದಿದೆ. ಪುತ್ತೂರು ಮತ್ತು ಕಡಬ ತಾಲೂಕಿನ ಎಲ್ಲಾ ಕಿರಿಯ ಪ್ರಾಥಮಿ ,ಹಿರಿಯ ಪ್ರಾಥಮಿಕ ಹಾಗೂ ಹೈಸ್ಕೂಲ್‌ ಗಳು ಇಲಾಖೆಯ ವಿದ್ಯಾವಾಹಿನಿ ಪೋರ್ಟಲ್‌ ನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದವು.  ಆಯಾ ಕ್ಲಸ್ಟರ್‌ ಸಿ […]

ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  ವೀರಮಂಗಲ  ಪುತ್ತೂರು ಕಡಬ ತಾಲೂಕಿನಲ್ಲಿ ಅತ್ಯುತ್ತಮ ಶಾಲೆ ಎಂಬ ಗೌರವ | ಅತ್ಯುತ್ತಮ ಎಸ್‌ ಡಿ ಎಂ ಸಿ ಕಾರ್ಯನಿರ್ವಹಣೆ| ಪುಷ್ಠಿ ಗೌರವದೊಂದಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಒಂದು ಲಕ್ಷ ಬಹುಮಾನ Read More »

ಪರೀಕ್ಷಾ ವಠಾರದಲ್ಲಿ ಶೂಟಿಂಗ್ | ಶೂಟಿಂಗ್‍ ತಡೆಹಿಡಿದ ಬಿಇಒ

ಪುತ್ತೂರು: ಶಾಲಾ ಪರೀಕ್ಷಾ ವಠಾರದಲ್ಲಿ ಫಿಲಂ ಶೂಟಿಂಗ್ ಇಂದು ಬೆಳಗ್ಗೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ಚರ್ಚಾ ಸೈಂಟ್ ವಿಕ್ಚರ್ಸ್ ಶಾಲಾ ವಠಾರದಲ್ಲಿ ಶೂಟಿಂಗ್‍ ನಡೆಯುತ್ತಿದ್ದು, ಎಸ್.ಎಸ್.ಎಲ್‍.ಸಿ ಪರೀಕ್ಷೆ ನಡೆಯುತ್ತಿದ್ದರಿಂದ ಪೋಷಕರು ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ದೂರಿದ್ದಾರೆ.   200 ಮೀಟ‌ರ್ ಅಂತರದಲ್ಲಿ ಸೆಕ್ಷನ್ ಜಾರಿಯಲ್ಲಿದ್ದರೂ ಶೂಟಿಂಗ್ ನಡೆದ ಮತ್ತು ಪೋಷಕರ ದೂರಿಗೆ ಸಂಬಂಧಿಸಿ ಸ್ಥಳಕ್ಕೆ ಬಿಇಒ ಆಗಮಿಸಿ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಮದ್ಯಾಹ್ನದ ಬಳಿಕ ಶೂಟಿಂಗ್ ಗೆ ಅನುಮತಿಯನ್ನು ನೀಡಲಾಗಿದೆ ಎನ್ನಲಾಗಿದೆ.

ಪರೀಕ್ಷಾ ವಠಾರದಲ್ಲಿ ಶೂಟಿಂಗ್ | ಶೂಟಿಂಗ್‍ ತಡೆಹಿಡಿದ ಬಿಇಒ Read More »

ಹನಿಟ್ರ್ಯಾಪ್‌ ತನಿಖೆಗೆ ಆಗ್ರಹಿಸಿದ್ದ ಅರ್ಜಿದಾರನಿಗೆ ಸುಪ್ರೀಂ ಕೋರ್ಟ್‌ ಹಿಗ್ಗಾಮುಗ್ಗಾ ತರಾಟೆ

ಇಷ್ಟಕ್ಕೂ ಸರ್ವೋಚ್ಚ ನ್ಯಾಯಾಲಯದಲ್ಲಿ ಇಂದು ನಡೆದದ್ದೇನು? ನವದೆಹಲಿ: ದೇಶವಿಡೀ ಸುದ್ದಿ ಮಾಡುತ್ತಿರುವ ಕರ್ನಾಟಕದ ಸಚಿವರು ಮತ್ತು ನ್ಯಾಯಾಧೀಶರ ಮೇಲೆ ನಡೆದಿದೆ ಎನ್ನಲಾದ ಹನಿಟ್ರ್ಯಾಪ್‌ ಪ್ರಕರಣದ ತನಿಖೆ ಕೋರಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರನನ್ನು ಸುಪ್ರೀಂ ಕೋರ್ಟ್‌ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆದಿದೆ.ಹನಿಟ್ರ್ಯಾಪ್‌ ಪ್ರಕರಣದ ಕುರಿತು ತನಿಖೆಗೆ ಆಗ್ರಹಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು ವಜಾಗೊಳಿಸಿ ಅರ್ಜಿದಾರನನ್ನು ತರಾಟೆಗೆತ್ತಿಕೊಂಡಿದೆ.ಸುಪ್ರೀಂ ಕೋರ್ಟ್‌ನ ನ್ಯಾ.ವಿಕ್ರಮ್‌ನಾಥ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯನ್ನು ವಿಚಾರಣೆಗೊಳಪಡಿಸಿ ವಜಾಗೊಳಿಸಿತು. ವಿಚಾರಣೆ ವೇಳೆ

ಹನಿಟ್ರ್ಯಾಪ್‌ ತನಿಖೆಗೆ ಆಗ್ರಹಿಸಿದ್ದ ಅರ್ಜಿದಾರನಿಗೆ ಸುಪ್ರೀಂ ಕೋರ್ಟ್‌ ಹಿಗ್ಗಾಮುಗ್ಗಾ ತರಾಟೆ Read More »

ಸಮಾಜದ ಒಳಿತಿಗೆ ಹಿರಿಯರ ಅನುಭವ ಬಳಕೆಯಾಗಲಿ: ಕೊಂಡೆವೂರು ಶ್ರೀಗಳು 

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರ್ ಬಂಟ್ವಾಳ  ಕೇಂದ್ರ ಸಮಿತಿಯ ಸಭೆಯು ಉಪ್ಪಳ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಜರಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಯೋಗಾಶ್ರಮದ ಶ್ರೀ ನಿತ್ಯಾನಂದ  ಸ್ವಾಮೀಜಿಯವರು ಜ್ಞಾನವೃದ್ಧರಾದ ಹಿರಿಯರ ಅನುಭವವು ನಿಂತ ನೀರಾಗದೆ ಸಮಾಜದ ಒಳಿತಿಗೆ ಬಳಕೆಯಾಗಬೇಕು. ಹಿರಿಯರ ಸೇವಾ ಪ್ರತಿಷ್ಠಾನದ ಸೇವಾ ಕಾರ್ಯಗಳು ಅನುಭವಗಳ ವಿನಿಮಯದೊಂದಿಗೆ ನಡೆಯುತ್ತಿರುವುದು ಇಂದಿನ ಸಾಮಾಜಿಕ ಪರಿಸರಕ್ಕೆ   ಅತ್ಯಂತ ಉಪಯುಕ್ತವಾಗಿದ್ದು  ಪ್ರತಿಷ್ಠಾನದ ಸೇವಾಕಾರ್ಯಗಳಿಗೆ ಆಶ್ರಮದ ಪೂರ್ಣ ಬೆಂಬಲ ನೀಡುವುದಾಗಿ  ತಿಳಿಸಿದರು.  ಸಮಾರಂಭದ ಅಧ್ಯಕ್ಷತೆಯನ್ನು

ಸಮಾಜದ ಒಳಿತಿಗೆ ಹಿರಿಯರ ಅನುಭವ ಬಳಕೆಯಾಗಲಿ: ಕೊಂಡೆವೂರು ಶ್ರೀಗಳು  Read More »

ಸರಕಾರಿ ನೌಕರರಿಗೆ ಇನ್ನು ಸೆಲ್ಫಿ ಕ್ಲಿಕ್‌ ಹಾಜರಾತಿ ವ್ಯವಸ್ಥೆ

ಎಐ ಆಧಾರಿತ ಹೊಸ ತಂತ್ರಜ್ಞಾನ ಅಳವಡಿಸಲು ಸಿದ್ಧತೆ ಬೆಂಗಳೂರು: ಸರಕಾರಿ ನೌಕರರು ತಮ್ಮ ಕಚೇರಿ ಆವರಣದಲ್ಲಿ ಮೊಬೈಲ್ ಫೋನ್‌ನಿಂದ ಸೆಲ್ಫಿ ಕ್ಲಿಕ್ ಮಾಡುವ ಮೂಲಕ ತಮ್ಮ ಹಾಜರಾತಿಯನ್ನು ಖಚಿತಪಡಿಸುವ ಈ ಎಐ ಚಾಲಿತ ಹಾಜರಾತಿ ವ್ಯವಸ್ಥೆಯನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ಸರ್ಕಾರಿ ಕಚೇರಿಯಲ್ಲಿ ಪರಿಚಯಿಸುವ ಸಿದ್ಧತೆ ನಡೆಯುತ್ತಿದೆ. ಸೆಲ್ಫಿ ತೆಗೆಯುವ ವೇಳೆ ಹಾಜರಾತಿಯನ್ನು ನೈಜ ಸಮಯದಲ್ಲಿ ಸೆರೆಹಿಡಿಯಲಾಗುತ್ತದೆ. ಈಗ ಇರುವ ಲೆಡ್ಜರ್‌ನಲ್ಲಿ ಸಹಿ ಮಾಡುವ ಅಥವಾ ಬಯೋಮೆಟ್ರಿಕ್ ಉಪಕರಣದ ಮೇಲೆ ಬೆರಳು ಇಡುವ ಮೂಲಕ

ಸರಕಾರಿ ನೌಕರರಿಗೆ ಇನ್ನು ಸೆಲ್ಫಿ ಕ್ಲಿಕ್‌ ಹಾಜರಾತಿ ವ್ಯವಸ್ಥೆ Read More »

ಏಪ್ರಿಲ್‌ನಿಂದ ಟೋಲ್‌ ಸುಂಕ ಹೆಚ್ಚಳ

ಶೇ.5ರಷ್ಟು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರ ಬೆಂಗಳೂರು : ಪೆಟ್ರೋಲು, ಡೀಸೆಲ್‌ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ವಾಹನ ಮಾಲೀಕರಿಗೆ ಈಗ ಟೋಲ್‌ ಸುಂಕ ಏರಿಕೆ ಬಿಸಿ ತಟ್ಟಲಿದೆ. ಏಪ್ರಿಲ್ 1ರಿಂದ ಕರ್ನಾಟಕಾದ್ಯಂತ ಟೋಲ್ ಸುಂಕ ಶೇ.3ರಿಂದ 5ರಷ್ಟು ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಬೆಲೆ ಏರಿಕೆ, ಹಣದುಬ್ಬರಕ್ಕೆ ಅನುಗುಣವಾಗಿ ವಾರ್ಷಿಕವಾಗಿ ಮಾಡುವ ದರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಈಗ ಟೋಲ್ ಸುಂಕ

ಏಪ್ರಿಲ್‌ನಿಂದ ಟೋಲ್‌ ಸುಂಕ ಹೆಚ್ಚಳ Read More »

ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ಕೋರ್ಟ್‌ ತಡೆ

ಸೋಷಿಯಲ್‌ ಮೀಡಿಯಾಗಳಲ್ಲಿರುವ ವೀಡಿಯೊಗಳನ್ನು ಡಿಲೀಟ್‌ ಮಾಡಲು ಆದೇಶ ಬೆಂಗಳೂರು: ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಯವರ ವಿರುದ್ಧ ನಡೆಯುತ್ತಿರುವ ಅವಹೇಳನ ಮತ್ತು ಅಪಪ್ರಚಾರಕ್ಕೆ ನ್ಯಾಯಾಲಯ ತಡೆ ನೀಡಿದೆ. ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಈ ಕುರಿತು ಜಾನ್ ಡೋ (ಅಶೋಕ ಕುಮಾರ್) ಆದೇಶ ನೀಡಿದೆ. ಜತೆಗೆ ಈವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವೀಡಿಯೊಗಳನ್ನು ಡಿಲೀಟ್‌ ಮಾಡುವಂತೆ ಸೂಚನೆ ನೀಡಿದೆ. ಇತ್ತೀಚೆಗೆ ಸೌಜನ್ಯ ಪ್ರಕರಣದ ವಿಚಾರವಾಗಿ ಧರ್ಮಸ್ಥಳ

ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ಕೋರ್ಟ್‌ ತಡೆ Read More »

ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯೋಗ ಶಿಕ್ಷಕನನ್ನು 7 ಅಡಿ ಗುಂಡಿಯಲ್ಲಿ ಜೀವಂತ ಹೂತು ಹಾಕಿದ ಗಂಡ

ಮೂರು ತಿಂಗಳ ಬಳಿಕ ಬೆಳಕಿಗೆ ಬಂದ ಆಘಾತಕಾರಿ ಕೊಲೆ ಪ್ರಕರಣ ಚಂಡೀಗಢ : ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಯೋಗ ಶಿಕ್ಷಕನನ್ನು ವ್ಯಕ್ತಿಯೊಬ್ಬ 7 ಅಡಿ ಗುಂಡಿ ಅಗೆದು ಜೀವಂತ ಹೂತು ಹಾಕಿದ ಘಟನೆಯೊಂದು ಹರ್ಯಾಣದ ಚರ್ಖಿ ದಾದ್ರಿ ಎಂಬಲ್ಲಿ ಮೂರು ತಿಂಗಳ ಬೆಳಕಿಗೆ ಬಂದಿದೆ. ರೋಹ್ಟಕ್‌ನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಯೋಗ ಉಪನ್ಯಾಸಕನಾಗಿದ್ದ ಜಗದೀಪ್‌ ಕೊಲೆಯಾದ ವ್ಯಕ್ತಿ. ಮಾ.24ರಂದು ಪೊಲೀಸರು ಅವನ ಶವವನ್ನು ಮೇಲೆತ್ತಿ ಪೋಸ್ಟ್‌ಮಾರ್ಟಂಗೆ ಕಳುಹಿಸಿದ್ದಾರೆ.ಕಳೆದ ಡಿ.24ರಂದು ಜಗದೀಪ್‌ ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ

ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯೋಗ ಶಿಕ್ಷಕನನ್ನು 7 ಅಡಿ ಗುಂಡಿಯಲ್ಲಿ ಜೀವಂತ ಹೂತು ಹಾಕಿದ ಗಂಡ Read More »

ಬೊಲಿವಿಯಾದಲ್ಲಿ 3900 ಚದರ ಕಿಲೋ ಮೀಟರ್‌ ಭೂಮಿ ಒತ್ತುವರಿ ಮಾಡಿಕೊಂಡ ನಿತ್ಯಾನಂದ ಸ್ವಾಮಿ!

ಕರ್ನಾಟಕದಿಂದ ಓಡಿಹೋಗಿ ಕೈಲಾಸ ದೇಶ ಸ್ಥಾಪಿಸಿಕೊಂಡಿರುವ ನಿತ್ಯಾನಂದ ನವದೆಹಲಿ: ಭಾರತದಿಂದ ಓಡಿಹೋಗಿ ತನ್ನದೇ ಆದ ಕೈಲಾಸ ದೇಶ ಸ್ಥಾಪಿಸಿರುವ ಬಿಡದಿಯ ನಿತ್ಯಾನಂದ ಸ್ವಾಮಿಯ ವಿರುದ್ಧ ಸುಮಾರು 3,900 ಚದರ ಕಿಲೋಮೀಟರ್‌ ಭೂಮಿ ಒತ್ತುವರಿ ಮಾಡಿಕೊಂಡ ಆರೋಪ ಕೇಳಿಬಂದಿದೆ. ದಕ್ಷಿಣ ಅಮೆರಿಕ ಖಂಡದಲ್ಲಿರುವ ಬೊಲಿವಿಯಾ ದೇಶದಲ್ಲಿ ನಿತ್ಯಾನಂದ ಸ್ವಾಮಿ ಮತ್ತು ಅವರ ಅನುಯಾಯಿಗಳು ಬುಡಕಟ್ಟು ಜನಾಂಗದವರ 3,900 ಚದರ ಕಿಲೋಮೀಟರ್ ಭೂ ಕಬಳಿಕೆ ಮಾಡಿದ್ದಾರೆ ಎನ್ನಲಾಗಿದೆ.ಬೊಲಿವಿಯಾದ ಅಮೆಜಾನ್ ಪ್ರದೇಶದ ಬುಡಕಟ್ಟು ಜನಾಂಗಕ್ಕೆ ಅಸ್ತಿತ್ವದಲ್ಲಿಲ್ಲದ ಕೈಲಾಸ ದೇಶ ವಂಚನೆ ಮಾಡಿರುವುದು

ಬೊಲಿವಿಯಾದಲ್ಲಿ 3900 ಚದರ ಕಿಲೋ ಮೀಟರ್‌ ಭೂಮಿ ಒತ್ತುವರಿ ಮಾಡಿಕೊಂಡ ನಿತ್ಯಾನಂದ ಸ್ವಾಮಿ! Read More »

ಕೆ ಎಸ್ ಎಸ್ ಕಾಲೇಜಿನಲ್ಲಿ ಕಡಬ ಮತ್ತು ಸುಳ್ಯ ವಲಯದ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ,  ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ  ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಮಾ, 25 ರಂದು  ಕಡಬ ಮತ್ತು ಸುಳ್ಯ ವಲಯದ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ.ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕಾರ್ಯಕ್ರಮವನ್ನು ಕೆ.ಎಸ್.ಎಸ್ ಕಾಲೇಜಿನ ನಿಕಟಪೂರ್ವ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸಾದ ಎನ್ ಉದ್ಘಾಟಿಸಿದರು.  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮಾಜ ಕಾರ್ಯ ಸ್ನಾತಕೋತ್ತರ

ಕೆ ಎಸ್ ಎಸ್ ಕಾಲೇಜಿನಲ್ಲಿ ಕಡಬ ಮತ್ತು ಸುಳ್ಯ ವಲಯದ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ Read More »

error: Content is protected !!
Scroll to Top