ಸುದ್ದಿ

ಬಸ್ ಚಾಲಕನ ನಿರ್ಲಕ್ಷ್ಯತನದಿಂದ ತಂದೆ – ಮಗ ಮೃತ್ಯು | ಚಾಲಕನ ವಿರುದ್ದ ಪ್ರಕರಣ ದಾಖಲು

ಪುತ್ತೂರು : ಕೆ ಎಸ್ ಆರ್ ಟಿ ಸಿ  ಬಸ್ಸಿನ ಚಾಲಕನ ಬೇಜವಾಬ್ದಾರಿಯಿಂದಾಗಿ ಬೈಕ್ ಸವರರಾದ ತಂದೆ ಮತ್ತು ಆತನ ಜೊತೆ ಇದ್ದ ಮಗ ಮೃತ ಪಟ್ಟ ಘಟನೆ ಪುತ್ತೂರಿನಲ್ಲಿ ಭಾನುವಾರ ನಡೆದಿದೆ. ಮೃತಪಟ್ಟವರು ಬಂಟ್ವಾಳ ತಾಲೂಕಿನ  ನರಿಕೊಂಬು ಬಳಿಯ ಬೋರುಗುಡ್ಡೆ ನಿವಾಸಿ ನರಿಕೊಂಬು ಗ್ರಾಪಂ ಸದಸ್ಯ ಹಾಗೂ ಸಮಾಜಸೇವಾ ಬ್ಯಾಂಕ್ ನಿರ್ದೇಶಕರಾದ ಅರುಣ್ ಕುಲಾಲ್ (45) ಹಾಗೂ ಅವರ ಪುತ್ರ ಧ್ಯಾನ್ (15) ಎನ್ನಲಾಗಿದ್ದು, ಈ ಘಟನೆಯಲ್ಲಿ ತಂದೆ ಅರುಣ್ ಕುಲಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗನನ್ನು […]

ಬಸ್ ಚಾಲಕನ ನಿರ್ಲಕ್ಷ್ಯತನದಿಂದ ತಂದೆ – ಮಗ ಮೃತ್ಯು | ಚಾಲಕನ ವಿರುದ್ದ ಪ್ರಕರಣ ದಾಖಲು Read More »

ಸುಹಾಸ್ ಶೆಟ್ಟಿ ಹತ್ಯೆ ಕುರಿತು ಸುಳ್ಳು ಸಂದೇಶ ರವಾನೆ | ಆರೋಪಿ ಅರೆಸ್ಟ್

ಮಂಗಳೂರು : ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಕರಾವಳಿಯನ್ನೇ ಬೆಚ್ಚಿಬೀಳಿಸಿದೆ. ಸುಹಾಸ್ ಶೆಟ್ಟಿ ಹತ್ಯೆಯ ವಿಷಯನುಸಾರವಾಗಿ ಸಾಕಷ್ಟು ವಿಚಾರಗಳು ಹಬ್ಬುತ್ತಲೇ ಇವೆ. ಇದೀಗ ಹತ್ಯೆಗೆ ಸಂಬಂಧಿಸಿದಂತೆ ಸುಳ್ಳು ಸಂದೇಶವೊಂದು ವೈರಲ್ ಆಗಿದ್ದು, ಸಂದೇಶ ರವಾನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. *ಮಂಗಳೂರು ಮುಸ್ಲಿಂ ಯುವಸೇನೆ’ ಎಂಬ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಪ್ರಚೋದನಕಾರಿ ಸಂದೇಶ ರವಾನಿಸಿದ್ದ ಆರೋಪಿ ವಿಟ್ಲದ ಅನಾಸ್ ನನ್ನು ವಿಚಾರಣೆ ನಡೆಸಲಾಗಿದ್ದು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಈ ಬಗ್ಗೆ ಮೂಡುಬಿದಿರೆ

ಸುಹಾಸ್ ಶೆಟ್ಟಿ ಹತ್ಯೆ ಕುರಿತು ಸುಳ್ಳು ಸಂದೇಶ ರವಾನೆ | ಆರೋಪಿ ಅರೆಸ್ಟ್ Read More »

ಮದುವೆ ಕಾರು ಸಹಿತ ಸರಣಿ ಅಪಘಾತ : ವ್ಯಕ್ತಿಯೋರ್ವನಿಗೆ ಗಾಯ

ಪುತ್ತೂರು: ಶ್ವಾನ ಅಡ್ಡಲಾಗಿ ಬಂದಿದರಿಂದ ಸರಣಿ ಅಪಘಾತ ಕಲ್ಲರ್ಪೆಯ ಕಾರ್ಪಾಡಿ ಬಳಿ ಭಾನುವಾರ ನಡೆದಿದೆ. ಕಟೀಲಿನಲ್ಲಿ ಮದುವೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಇದಾಗಿತ್ತು. ಇದರೊಂದಿಗೆ ಇನ್ನೆರಡು ಕಾರು ಹಾಗೂ ಬೈಕ್ ಅಪಘಾತಕ್ಕೀಡಾಗಿದೆ. ಬೈಕ್ ಸವಾರರು ಸ್ವಲ್ಪ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ವಾನವೊಂದು ಅಡ್ಡ ಬಂದ ಪರಿಣಾಮ ಬ್ರೇಕ್ ಹಾಕಿದ್ದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.

ಮದುವೆ ಕಾರು ಸಹಿತ ಸರಣಿ ಅಪಘಾತ : ವ್ಯಕ್ತಿಯೋರ್ವನಿಗೆ ಗಾಯ Read More »

ಪಾಕ್ ನಡೆಸಿದ ಶೆಲ್ ದಾಳಿಯಲ್ಲಿ ಭಾರತೀಯ ಬಿಎಸ್ಎಫ್ ಯೋಧ ಹುತಾತ್ಮ, 7 ಸೈನಿಕರಿಗೆ ಗಾಯ

ಭಾರತ – ಪಾಕಿಸ್ತಾನ ಮಧ್ಯೆ ಇದ್ದ ಕದನ ವಿರಾಮವನ್ನು ಪಾಕಿಸ್ತಾನ ಉಲ್ಲಂಘನೆ ಮಾಡಿ ಭಾರತದ ಮೇಲೆ ಜಮ್ಮುವಿನಲ್ಲಿ ದಾಳಿ ಮಾಡಿದೆ. ಈ ದಾಳಿಯಲ್ಲಿ ಓರ್ವ ಬಿಎಸ್ಎಫ್ ಯೋಧ ಹುತಾತ್ಮರಾಗಿದ್ದು, 7 ಮಂದಿ ಸೈನಿಕರಿಗೆ ಗಾಯಗಳಾಗಿವೆ ತಿಳಿದು ಬಂದಿದೆ. ಜಮ್ಮುವಿನ ಆರ್‌ಎಸ್ ಪುರದಲ್ಲಿ ನಡೆದ ಶೆಲ್ ದಾಳಿಯಲ್ಲಿ ಬಿಎಸ್‌ಎಫ್ ಎಸ್‌ಐ ಎಂಡಿ ಮೊಹಮ್ಮದ್ ಇಮ್ಮಿಯಾಜ್ ಹುತಾತ್ಮರಾಗಿದ್ದಾರೆ. ಹಾಗೂ 7 ಸೈನಿಕರಿಗೆ ಗಾಯಗಳಾಗಿವೆ. ಅನಿರೀಕ್ಷಿತವಾಗಿ ಪಾಕಿಸ್ತಾನ ಈ ದಾಳಿ ನಡೆಸಿದ್ದರಿಂದ ಭಾರತ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಕೆಲವೆಡೆ ದಾಳಿಗಳು ನಡೆದಿವೆ. ನಿಯಮ ಉಲ್ಲಂಘನೆ

ಪಾಕ್ ನಡೆಸಿದ ಶೆಲ್ ದಾಳಿಯಲ್ಲಿ ಭಾರತೀಯ ಬಿಎಸ್ಎಫ್ ಯೋಧ ಹುತಾತ್ಮ, 7 ಸೈನಿಕರಿಗೆ ಗಾಯ Read More »

ಪುತ್ತೂರು : ಇತಿಹಾಸವುಳ್ಳ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಷಡಾಧಾರ ಹಾಗೂ ನಿಧಿಕುಂಭ ಪ್ರತಿಷ್ಠೆ

ಪುತ್ತೂರು: ಸಾವಿರ ವರ್ಷ ಇತಿಹಾಸವಿರುವ ಶ್ರೀ ಮಹಾಕಾಳಿ ದೇವಸ್ಥಾನದ ಷಡಾಧಾರ ಹಾಗೂ ನಿಧಿಶುಂಭ ಪ್ರತಿಷ್ಠೆ ಭಾನುವಾರ ಬೆಳಿಗ್ಗೆ ನಡೆಯಿತು. ಷಡಾಧಾರ ಹಾಗೂ ನಿಧಿಶುಂಭ ಪ್ರತಿಷ್ಠೆ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಬನ್ನಂಜೆ ರಾಮದಾಸ್ ಭಟ್ ಅವರ ಆಚಾರ್ಯತ್ವದಲ್ಲಿ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು. ಶನಿವಾರ ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆಯಲ್ಲಿ ಆಗಮಿಸಿದ ನಿಧಿಕುಂಭವನ್ನು ಭಾನುವಾರ ಪ್ರತಿಷ್ಠಾಪಿಸಲಾಯಿತು. ಬಂಗರಸರ ಆಡಳಿತ ಕಾಲದಲ್ಲಿ ಆರಾಧ್ಯ ದೇವಿಯಾಗಿದ್ದ ಈ ಸಾನಿಧ್ಯ ಮುಂದೆ ಸಾರಸ್ವತ ಬ್ರಾಹ್ಮಣ ಮನೆತನದ ರಾಧಾಬಾಯಿ ಅವರ

ಪುತ್ತೂರು : ಇತಿಹಾಸವುಳ್ಳ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಷಡಾಧಾರ ಹಾಗೂ ನಿಧಿಕುಂಭ ಪ್ರತಿಷ್ಠೆ Read More »

IPL ಪುನರಾರಂಭಕ್ಕೆ ದಿನಾಂಕ ನಿಗದಿ | ಬಿಸಿಸಿಐ ನಿರ್ಧಾರ

ಭಾರತ ಮತ್ತು ವಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ, ಐಪಿಎಲ್ 2025 ಅನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಿದ ಅದ್ದರಿಂದ ಈ ವಾರ ನಿಗದಿಯಾಗಿದ್ದ ಎಲ್ಲಾ ಪಂದ್ಯಗಳನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಪುನರಾರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮೇ 15 ಅಥವಾ 16 ರಂದು ಟೂರ್ನಿಯನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಶನಿವಾರ ಸಂಜೆ ಭಾರತ ಮತ್ತು ಪಾಕಿಸ್ತಾನ್ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ

IPL ಪುನರಾರಂಭಕ್ಕೆ ದಿನಾಂಕ ನಿಗದಿ | ಬಿಸಿಸಿಐ ನಿರ್ಧಾರ Read More »

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ | ಭಾರತ ಘೋಷಣೆ

ಪಹಾಲ್ಗಮ್ ದಾಳಿ ಬಳಿಕ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ ಪ್ರತಿಕಾರವನ್ನು ತೀರಿಸಲು ದಾಳಿ ನಡೆಸಿತು. ಭಾರತ – ಪಾಕಿಸ್ತಾನ ನಡುವೆ ತೀವ್ರ ಸಂಧಿಘ್ನ ಉಂಟಾಗಿತ್ತು. ಈ ಹಿನ್ನಲೆ ಕಳೆದ 2 ದಿನಗಳಿಂದ ಹಗಲು ರಾತ್ರಿ ಎನ್ನದೆ ಭಾರತ ಮತ್ತು ಪಾಕಿಸ್ತಾನದ ನಡುವೆ ವೈಮಾನಿಕ ದಾಳಿ, ಶೆಲ್ ದಾಳಿ, ಗುಂಡಿನ ದಾಳಿ ನಡೆದಿತ್ತು. ಈ ದಾಳಿಯ ಮದ್ಯೆ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಕದನ ವಿರಾಮಕ್ಕೆ ಒಪ್ಪಿಸಿದಾದರೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿ ಎರಡು ದೇಶಗಳ ನಡುವಿನ

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ | ಭಾರತ ಘೋಷಣೆ Read More »

ಭಾರತ – ಪಾಕ್ ಯುದ್ಧದಲ್ಲಿ ಕದನ ವಿರಾಮ

ಕದನ ವಿರಾಮ ಎಂದರೇನು..? ಕಾಶ್ಮೀರದ ಪಹಲ್ಗಾಮ್​ನಲ್ಲಿ (Pahalgam Terror Attack) ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಹಳಸಿತ್ತು. ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಪಾಕಿಸ್ತಾನದೊಳಗೆ ನುಗ್ಗಿ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಆದರೆ, ಅದನ್ನು ವೈಯಕ್ತಿಕವಾಗಿ ಸ್ವೀಕರಿಸಿದ ಪಾಕಿಸ್ತಾನ ಭಾರತದ ಗಡಿಯಲ್ಲಿ ಅಮಾಯಕ ನಾಗರಿಕರ ಮೇಲೆ ಗುಂಡು ಹಾರಿಸಿ ಜೀವಗಳನ್ನು ಬಲಿ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಕಳೆದ 2 ದಿನಗಳಿಂದ ಹಗಲೂ ರಾತ್ರಿ ಭಾರತ ಮತ್ತು ಪಾಕಿಸ್ತಾನದ

ಭಾರತ – ಪಾಕ್ ಯುದ್ಧದಲ್ಲಿ ಕದನ ವಿರಾಮ Read More »

ಆರೋಗ್ಯ ರಕ್ಷಣೆಗೆ ಸಾವಯವ ಕೃಷಿ ಅಗತ್ಯ : ಡಾ. ನಿವೇದಿತಾ

ಪುತ್ತೂರು : ಮನೆಯ ಪರಿಸರದಲ್ಲಿ ಲಭ್ಯವಿರುವ ಸ್ಥಳದಲ್ಲಿ ಹಣ್ಣು ತರಕಾರಿಗಳನ್ನು ಬೆಳೆಸಿ ಬಳಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ವಸ್ತುಗಳು ವಿಷಕಾರಿ ಅಂಶಗಳನ್ನು ಹೊಂದಿದ್ದು ಇದರ ಬಗ್ಗೆ ಜಾಗೃತಿಯ ಅಗತ್ಯವಿದೆಯೆಂದು ಅಡ್ಯನಡ್ಕದ ವಾರಣಾಸಿ ಫಾರ್ಮ್ಸ್ ನ ಡಾ. ನಿವೇದಿತಾ ತಿಳಿಸಿದರು.  ಪುತ್ತೂರು ನಗರದ ಶ್ರೀಮಾ ನಿವಾಸದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ.ಮೆಲ್ಕಾರು  ಕೇಂದ್ರ ಸಮಿತಿಯ ಸಭೆಯಲ್ಲಿ ಅವರು ಸಾವಯವ ಕೃಷಿಯ ಬಗ್ಗೆ ಉಪನ್ಯಾಸ ನೀಡಿದರು.   ಪುತ್ತೂರು ವಿವೇಕಾನಂದ

ಆರೋಗ್ಯ ರಕ್ಷಣೆಗೆ ಸಾವಯವ ಕೃಷಿ ಅಗತ್ಯ : ಡಾ. ನಿವೇದಿತಾ Read More »

ಬಾವಿಗೆ ಬಿದ್ದು ಮೂರು ವರ್ಷದ ಮಗು ಮೃತ್ಯು  

ವಿಜಯಪುರ : ತೆರೆದ ಬಾವಿಗೆ ಮೂರು ವರ್ಷದ ಮಗುವೊಂದು ಬಿದ್ದು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ಬಾವಿಗೆ ಬಿದ್ದು ಸಾವನ್ನಪ್ಪಿರುವ ಮಗು ಮೂರು ವರ್ಷದ ಹರ್ಷಿತ್ ಪಾಟೀಲ್ ಎನ್ನಲಾಗಿದೆ.  ಶುಕ್ರವಾರ ಮಗು ಮನೆಯ ಮುಂದೆ ಆಟವಾಡುತ್ತಿತ್ತು. ಹೀಗೆ ಆಟವಾಡುತ್ತಿದ್ದ ಮಗು ನಾಪತ್ತೆಯಾಗಿತ್ತು. ಮಗು ಎಲ್ಲಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ತಕ್ಷಣ ಕುಟುಂಬಸ್ಥರು ಮಗುವಿನ ಹುಡುಕಾಟದಲ್ಲಿ ತೊಡಗಿದ್ದರು. ಆದರೆ ಇಂದು ಸ್ಥಳೀಯರು ಬಾವಿಯಲ್ಲಿ ಇಳಿದು ನೋಡಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಕುಟುಂಬಸ್ಥರು ಮಗುವನ್ನು

ಬಾವಿಗೆ ಬಿದ್ದು ಮೂರು ವರ್ಷದ ಮಗು ಮೃತ್ಯು   Read More »

error: Content is protected !!
Scroll to Top