ಸುದ್ದಿ

ಪ್ರೇರಣಾ ಕಥೆ – ರಸ್ತೆ ಬದಿ ಮೊಬೈಲ್‌ ಕವರ್‌ ಮಾರುತ್ತಿದ್ದಾತ ನೀಟ್‌ ಪಾಸ್‌

ಯಶಸ್ಸಾಗಲು ಹಣವೇ ಬೇಕೆಂದಿಲ್ಲ, ಛಲ, ಪರಿಶ್ರಮ ಸಾಕು ಎನ್ನುವುದಕ್ಕೆ ಸಾಕ್ಷಿಯಾದ ರೋಹಿತ್‌ ಯಾವುದೇ ಕೋಚಿಂಗ್ ಪಡೆಯದೆ, ತನ್ನ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಹೆಗಲಾಗುವ ಬಯಕೆಯಿಂದ ರಸ್ತೆ ಬದಿಯಲ್ಲಿ ಮೊಬೈಲ್ ಕವರ್ ಮಾರುತ್ತಿದ್ದ ಹುಡುಗ ರೋಹಿತ್ ಕುಮಾರ್ ಎಂಬ ಯುವಕನೊಬ್ಬ ಈ ಸಾಲಿನ ನೀಟ್ ಪರೀಕ್ಷೆ ಪಾಸು ಮಾಡಿ ದೇಶದ ಗಮನ ಸೆಳೆದಿದ್ದಾರೆ. ಯಾರು ಈ ರೋಹಿತ್? ಜಾರ್ಖಂಡ್‌ನ ಜಮ್ಶೆಡ್‌ಪುರದ 20 ವರ್ಷದ ಯುವಕ ರೋಹಿತ್ ಕುಮಾರ್. ಇವರ ನೀಟ್ ಪರೀಕ್ಷಾ ತಯಾರಿ ಯಾವುದೋ ಕೋಚಿಂಗ್ ಸೆಂಟರ್‌ನಿಂದ ಆರಂಭವಾಗಿದ್ದಲ್ಲ. […]

ಪ್ರೇರಣಾ ಕಥೆ – ರಸ್ತೆ ಬದಿ ಮೊಬೈಲ್‌ ಕವರ್‌ ಮಾರುತ್ತಿದ್ದಾತ ನೀಟ್‌ ಪಾಸ್‌ Read More »

ಪಹಲ್ಗಾಮ್‌ ದಾಳಿ : ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರ ಬಂಧನ

ಏ.22ರಂದು 26 ಪ್ರವಾಸಿಗರನ್ನು ಸಾಯಿಸಿದ್ದ ಭೀಕರ ಕೃತ್ಯಕ್ಕೆ ಸಾಥ್‌ ನೀಡಿದವರು ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ಏ.22ರಂದು 26 ಪ್ರವಾಸಿಗರನ್ನು ಕೊಂದು ಹಾಕಿದ್ದ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಪರ್ವೈಜ್ ಅಹ್ಮದ್ ಜೋಥರ್ ಮತ್ತು ಬಶೀರ್ ಅಹ್ಮದ್ ಜೋಥರ್ ಎಂದು ಗುರುತಿಸಲಾಗಿದೆ. ಬಂಧಿತರಿಬ್ಬರು ಪಹಲ್ಗಾಮ್ ನಿವಾಸಿಗಳಾಗಿದ್ದು, ಪಾಕಿಸ್ತಾನದ ಲಷ್ಕರ್-ಎ-ತೈಬಾ ಉಗ್ರ ಸಂಘಟನೆಗೆ ಸೇರಿದ ಮೂವರು ಉಗ್ರರಿಗೆ ಆಶ್ರಯ ನೀಡಿದ್ದರು. ತನಿಖೆ ವೇಳೆ ಬಂಧಿತರು ದಾಳಿಕೋರರ ಗುರುತುಗಳನ್ನು ಬಹಿರಂಗಪಡಿಸಿದ್ದು, ಉಗ್ರರು

ಪಹಲ್ಗಾಮ್‌ ದಾಳಿ : ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರ ಬಂಧನ Read More »

ಅಮೆರಿಕ ದಾಳಿಯಿಂದ ವಿಕಿರಣ ಸೋರಿಕೆಯಾಗಿಲ್ಲ : ಇರಾನ್‌ ಸ್ಪಷ್ಟನೆ

ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಶಪಥ ಟೆಹ್ರಾನ್‌: ಅಮೆರಿಕ ಮೂರು ಪರಮಾಣು ಕೇಂದ್ರಗಳ ಮೇಲೆ ನಡೆಸಿದ ದಾಳಿಯಲ್ಲಿ ಪರಮಾಣು ವಿಕಿರಣ ಸೋರಿಕೆಯಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಈ ಮೂಲಕ ಪರಮಾಣು ಸ್ಥಾವರಗಳಿಗೆ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಪರೋಕ್ಷವಾಗಿ ತಿಳಿಸಿದೆ. ದಾಳಿ ವೇಳೆ ಪರಮಾಣು ವಿಕಿರಣ ಸೋರಿಕೆಯಾಗಿಲ್ಲ, ಮೂರು ಪರಮಾಣು ಕೇಂದ್ರಗಳನ್ನು ಮೊದಲೇ ಸ್ಥಳಾಂತರಿಸಲಾಗಿತ್ತು ಹಾಗಾಗಿ ಯಾವುದೇ ಪರಮಾಣು ಸೋರಿಕೆ ಸಂಭವಿಸಿಲ್ಲ ಎಂದು ಇರಾನ್ ಹೇಳಿದೆ. ಇಂತಹ ದಾಳಿಗಳು ವಿಶ್ವದ ಶಾಂತಿಗೆ ಅಪಾಯಕಾರಿ. ಅಮೆರಿಕ ಅಂತಾರಾಷ್ಟ್ರೀಯ ಕಾನೂನು

ಅಮೆರಿಕ ದಾಳಿಯಿಂದ ವಿಕಿರಣ ಸೋರಿಕೆಯಾಗಿಲ್ಲ : ಇರಾನ್‌ ಸ್ಪಷ್ಟನೆ Read More »

ದ್ವೇಷ ಭಾಷಣ, ನಕಲಿ ಸುದ್ದಿ ತಡೆಯಲು ಬರಲಿದೆ ಕಠಿಣ ಕಾನೂನು

ಸಂಘರ್ಷ ಉಂಟು ಮಾಡುವ ಸುದ್ದಿಗಳಿಗೆ ಕಡಿವಾಣ ಹಾಕಲು ಹೊಸ ವಿಧೇಯಕ ಮಂಡನೆಗೆ ಸಿದ್ಧತೆ ಬೆಂಗಳೂರು : ದ್ವೇಷ ಭಾಷಣ ಮತ್ತು ಸುಳ್ಳು ಸುದ್ದಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಕರಡು ಮಸೂದೆಯೊಂದನ್ನು ರಚಿಸಲಾಗಿದ್ದು, ಇದರಲ್ಲಿ ಸಂಘರ್ಷಕ್ಕೆ ಕಾರಣವಾಗುವ ದ್ವೇಷ ಭಾಷಣಕ್ಕೆ ಮತ್ತು ನಕಲಿ ಸುದ್ದಿ ಹರಡುವವರಿಗೆ 3ರಿಂದ 7 ವರ್ಷ ಜೈಲು ಶೀಕ್ಷೆ ವಿಧಿಸುವ ಪ್ರಸ್ತಾವ ಇಡಲಾಗಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ದ್ವೇಷ ಅಪರಾಧಗಳು ಮತ್ತು

ದ್ವೇಷ ಭಾಷಣ, ನಕಲಿ ಸುದ್ದಿ ತಡೆಯಲು ಬರಲಿದೆ ಕಠಿಣ ಕಾನೂನು Read More »

ಗ್ರಾಮ ಪಂಚಾಯತ್‌ ಸಭೆಯಲ್ಲಿ ತುಳುವಿಗೆ ನಿಷೇಧ ಆದೇಶ ವಾಪಸ್‌

ತುಳು ಭಾಷಿಕರ ಆಕ್ರೋಶಕ್ಕೆ ಮಣಿದು ಸುತ್ತೋಲೆ ವಾಪಸ್‌ ತೆಗೆದುಕೊಂಡ ಜಿ.ಪಂ. ಮಂಗಳೂರು: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚರ್ಚಿಸುವಾಗ ತುಳು ಭಾಷೆ ಬಳಕೆ ಮಾಡಬಾರದು ಎಂದು ನೀಡಿದ್ದ ಸುತ್ತೋಲೆಯನ್ನು ತುಳುವರ ಆಕ್ರೋಶಕ್ಕೆ ಮಣಿದು ಜಿಲ್ಲಾ ಪಂಚಾಯತ್‌ ವಾಪಾಸು ತೆಗೆದುಕೊಂಡಿದೆ. ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆಯಲ್ಲಿ ಚರ್ಚೆ ಮಾಡಬಾರದು. ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿ ಜಿಲ್ಲಾ ಪಂಚಾಯತ್‌ ಹೊರಡಿಸಿದ ಸುತ್ತೋಲೆಗೆ ತುಳುವರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಸಂಸದರಾದ

ಗ್ರಾಮ ಪಂಚಾಯತ್‌ ಸಭೆಯಲ್ಲಿ ತುಳುವಿಗೆ ನಿಷೇಧ ಆದೇಶ ವಾಪಸ್‌ Read More »

ಇರಾನ್‌ನ ಮೂರು ನ್ಯೂಕಿಯರ್‌ ಸ್ಥಾವರಗಳನ್ನು ಧ್ವಂಸ ಮಾಡಿದ ಅಮೆರಿಕ

ಇರಾನ್‌-ಇಸ್ರೇಲ್‌ ಯುದ್ಧಕ್ಕೆ ದೊಡ್ಡಣ್ಣನ ದಿಢೀರ್‌ ಎಂಟ್ರಿ ; ಬದಲಾಯಿತು ಯುದ್ಧದ ಗತಿ ಟೆಹ್ರಾನ್‌: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಅಮೆರಿಕ ದಿಢೀರ್‌ ಎಂದು ಎಂಟ್ರಿ ಕೊಟ್ಟಿದ್ದು, ಭಾನುವಾರ ನಸುಕಿನ ಹೊತ್ತು ಇರಾನ್​ನ ಮೂರು ಪರಮಾಣು ಸ್ಥಾವರಗಳನ್ನು ಧ್ವಂಸ ಮಾಡಿದೆ. ಫೋರ್ಡೋ, ನತಾಂಝ್‌ ಮತ್ತು ಎಸ್ಪಹಾನ್ ಸ್ಥಾವರಗಳ ಮೇಲೆ ಅಮೆರಿಕ ದಾಳಿ ಮಾಡಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ಬಹಿರಂಗಪಡಿಸಿದ್ದಾರೆ. ಇತ್ತ ಕೆರಳಿ ಕೆಂಡವಾಗಿರುವ ಇರಾನ್​ ನೀವು ಪ್ರಾರಂಭಿಸಿದ್ದೀರಿ, ಅದನ್ನು ನಾವು ಕೊನೆಗೊಳಿಸುತ್ತೇವೆ

ಇರಾನ್‌ನ ಮೂರು ನ್ಯೂಕಿಯರ್‌ ಸ್ಥಾವರಗಳನ್ನು ಧ್ವಂಸ ಮಾಡಿದ ಅಮೆರಿಕ Read More »

ವಸತಿ ಇಲಾಖೆ ಭ್ರಷ್ಟಾಚಾರದಿಂದ ಮುಜುಗರಕ್ಕೀಡಾದ ಸರ್ಕಾರ

ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ರಂಗಕ್ಕಿಳಿದ ಸಚಿವರು ಬೆಂಗಳೂರು: ಪದೇ ಪದೆ ಭ್ರಷ್ಟಾಚಾರ ಮತ್ತು ಅಕ್ರಮಗಳ ಆರೋಪಗಳನ್ನು ಎದುರಿಸುತ್ತಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಈಗ ವಸತಿ ಇಲಾಖೆಯಲ್ಲಿ ಕೇಳಿಬಂದಿರುವ ಭಾರಿ ಭ್ರಷ್ಟಾಚಾರದ ಆರೋಪ ಮತ್ತಷ್ಟು ಮುಜುಗರವನ್ನುಂಟುಮಾಡಿದೆ. ದಿನೇಶ್‌ ಗುಂಡೂರಾವ್‌, ಈಶ್ವರ ಖಂಡ್ರೆ ಸೇರಿದಂತೆ ಹಲವು ಸಚಿವರು ಈಗ ಡ್ಯಾಮೇಜ್‌ ಕಂಟ್ರೋಲ್‌ ಪ್ರಯತ್ನಕ್ಕೆ ಮುಂದಾಗಿದ್ದಾರೆ. ದೇಶದ ಎಲ್ಲ ಕಡೆ ಭ್ರಷ್ಟಾಚಾರ ಇದೆ. ಎಲ್ಲಿ ಭ್ರಷ್ಟಾಚಾರ ಇಲ್ಲ ಎಂದು ಎನ್ನುವುದಕ್ಕಾಗಲ್ಲ. ಇ.ಡಿ., ಐಟಿ ದಾಳಿಯಲ್ಲೂ ಭ್ರಷ್ಟಾಚಾರ ಇರುತ್ತದೆ. ಹಣ ತೆಗೆದುಕೊಂಡು ಬಿಟ್ಟುಬಿಡುತ್ತಾರೆ. ವಸತಿ

ವಸತಿ ಇಲಾಖೆ ಭ್ರಷ್ಟಾಚಾರದಿಂದ ಮುಜುಗರಕ್ಕೀಡಾದ ಸರ್ಕಾರ Read More »

ಕನಸಿನಲ್ಲಿ ಬಂದ ಆಂಜನೇಯ : ಹಿಂದೂ ಧರ್ಮಕ್ಕೆ ಮರಳಿದ ಇಡೀ ಕುಟುಂಬ

ಕೆಲ ವರ್ಷಗಳ ಹಿಂದೆ ಮತಾಂತರಗೊಂಡಿದ್ದ ಕುಟುಂಬ ಬೆಂಗಳೂರು: ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಕುಟುಂಬವೊಂದು ಕನಸಿನಲ್ಲಿ ಹನುಮಾನ್‌ ಬಂದ ಬಳಿಕ ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಗಿರಿನಗರ ಕಾಲೊನಿಯಲ್ಲಿರುವ ಬುಡ್ಡ ಜಂಗಮ ಸಮಾಜದ ವೆಂಕಟೇಶ್ ಎಂಬವರು ತಮ್ಮ ಕುಟುಂಬದ ಸಮೇತ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು. ಇದೀಗ ಮರಳಿ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಇದಕ್ಕೆ ಕಾರಣವಾಗಿದ್ದು ಆಂಜನೇಯ. ಕನಸಿನಲ್ಲಿ ಆಂಜನೇಯ ಪ್ರತ್ಯಕ್ಷನಾಗಿ ಹಿಂದೂ ಧರ್ಮಕ್ಕೆ ಮರಳಿ ಬರುವಂತೆ ಹೇಳಿದ್ದು ಇದೇ ಕಾರಣಕ್ಕೆ ಮರಳಿ ಬಂದಿದ್ದಾಗಿ

ಕನಸಿನಲ್ಲಿ ಬಂದ ಆಂಜನೇಯ : ಹಿಂದೂ ಧರ್ಮಕ್ಕೆ ಮರಳಿದ ಇಡೀ ಕುಟುಂಬ Read More »

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕಾರು ಅಪಘಾತ

ಮೂರು ಕಾರುಗಳು ಸರಣಿ ಡಿಕ್ಕಿ ; ಶಾಸಕರು ಪಾರು ಶಿವಮೊಗ್ಗ : ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೋಡೂರಿನಲ್ಲಿ ನಡೆದಿದೆ. ಶುಕ್ರವಾರ ಸಂಜೆ ಗುರುರಾಜ ಗಂಟಿಹೊಳೆ ಉಡುಪಿ ಕಡೆಗೆ ತೆರಳುವ ವೇಳೆ ಅಪಘಾತ ನಡೆದಿದೆ. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಕಾರು ಸೇರಿ ಮೂರು ಕಾರುಗಳು ಶುಕ್ರವಾರ ಸಂಜೆ ಕೋಡೂರು ಬಳಿ ಅಪಘಾತಕ್ಕೀಡಾಗಿವೆ. ಶಾಸಕರ ಕಾರಿನ ಮುಂದೆ ಚಲಿಸುತ್ತಿದ್ದ

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕಾರು ಅಪಘಾತ Read More »

ವಿಶ್ವದ ಕೋಟ್ಯಂತರ ಜೀವನ ಶೈಲಿ ಬದಲಿಸಿದ ಯೋಗ : ನರೇಂದ್ರ ಮೋದಿ

ವಿಶಾಖಪಟ್ಟಣಂನಲ್ಲಿ 3 ಲಕ್ಷ ಜನರ ಜೊತೆ ಪ್ರಧಾನಿ ಯೋಗ ವಿಶಾಖಪಟ್ಟಣಂ : ಯೋಗ ಇಂದು ವಿಶ್ವವನ್ನು ಒಗ್ಗೂಡಿಸಿದೆ. ವಿಶ್ವದ ಕೋಟ್ಯಂತರ ಜನರ ಜೀವನ ಶೈಲಿಯನ್ನು ಯೋಗ ಬದಲಿಸಿದೆ. ಯೋಗ ಅಂದರೆ ಒಬ್ಬರಿಗಾಗಿ ಅಲ್ಲ ಎಲ್ಲರಿಗಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಶೀರ್ಷಿಕೆಯಡಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಯೋಗ ವಿಶ್ವಾದ್ಯಂತ ಒಂದು ಆಂದೋಲನವಾಗಿ ಮಾರ್ಪಟ್ಟಿದೆ ಎಂದು ಹೇಳಿದರು. ಆಂಧ್ರಪ್ರದೇಶದ

ವಿಶ್ವದ ಕೋಟ್ಯಂತರ ಜೀವನ ಶೈಲಿ ಬದಲಿಸಿದ ಯೋಗ : ನರೇಂದ್ರ ಮೋದಿ Read More »

error: Content is protected !!
Scroll to Top