ಸುದ್ದಿ

ದೇಶ ಬಿಟ್ಟು ಹೋಗಿ ಇಲ್ಲವೇ ಸಾಯಲು ತಯಾರಾಗಿ : 20 ಕಮಾಂಡರ್‌ಗಳಿಗೆ ಎಚ್ಚರಿಕೆ ನೀಡಿದ ಮೊಸಾದ್‌

ಸಂಬಂಧಿಕರಿಗಿಂತ ನಾವು ನಿಮಗೆ ಬಹಳ ಹತ್ತಿರದಲ್ಲಿದ್ದೇವೆ; ಜೀವ ಉಳಿಸಿಕೊಳ್ಳಲು ಕೊನೆಯ ಆಯ್ಕೆ ಎಂದು ಧಮ್ಕಿ ಟೆಹ್ರಾನ್‌: ಕದನ ವಿರಾಮ ಒಪ್ಪಂದವಾಗಿಲ್ಲ ಎಂದು ಇರಾನ್‌ ಹೇಳಿದ ಬೆನ್ನಿಗೆ 12 ಗಂಟೆಯ ಒಳಗಡೆ ಇರಾನ್‌ ತೊರೆಯಿರಿ. ಇಲ್ಲದಿದ್ದರೆ ನಿಮ್ಮನ್ನು ಹತ್ಯೆ ಮಾಡಲಾಗುವುದು ಎಂದು ಇರಾನ್‌ನ ಸೇನೆ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ 20 ಕಮಾಂಡರ್‌ಗಳಿಗೆ ಇಸ್ರೇಲ್‌ ಗುಪ್ತಚರ ಸಂಸ್ಥೆ ಮೊಸಾದ್‌ ಕರೆ ಮಾಡಿ ನೇರ ಎಚ್ಚರಿಕೆ ನೀಡಿದೆ.ಐಆರ್‌ಜಿಸಿಯ ಕಮಾಂಡರ್‌ಗೆ ಮೊಸಾದ್‌ ಅಧಿಕಾರಿ ಕರೆ ಮಾಡಿ ಬೆದರಿಕೆ ಹಾಕುತ್ತಿರುವ ಆಡಿಯೋ ಸಾಮಾಜಿಕ […]

ದೇಶ ಬಿಟ್ಟು ಹೋಗಿ ಇಲ್ಲವೇ ಸಾಯಲು ತಯಾರಾಗಿ : 20 ಕಮಾಂಡರ್‌ಗಳಿಗೆ ಎಚ್ಚರಿಕೆ ನೀಡಿದ ಮೊಸಾದ್‌ Read More »

ಕದನ ವಿರಾಮ ಒಪ್ಪಂದ ಆಗಿಲ್ಲ : ಇರಾನ್‌ ಸ್ಪಷ್ಟನೆ

ಟ್ರಂಪ್‌ ಹೇಳಿಕೆಯನ್ನು ಕೆಲವೇ ತಾಸುಗಳಲ್ಲಿ ನಿರಾಕರಿಸಿ ಉಲ್ಟಾ ಹೊಡೆದ ಇರಾನ್‌ ಟೆಹ್ರಾನ್‌ : ಇರಾನ್-ಇಸ್ರೇಲ್ ಯುದ್ಧ ಮುಂದಿನ 12 ಗಂಟೆಯಲ್ಲಿ ಸಂಪೂರ್ಣ ನಿಂತುಹೋಗುತ್ತದೆ, ಕದನ ವಿರಾಮಕ್ಕೆ ಇರಾನ್ ಹಾಗೂ ಇಸ್ರೇಲ್ ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ ಬೆನ್ನಲ್ಲೇ ಉಲ್ಟಾ ಹೊಡೆದಿರುವ ಇರಾನ್‌ ಯಾವುದೇ ಕದನ ವಿರಾಮ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್

ಕದನ ವಿರಾಮ ಒಪ್ಪಂದ ಆಗಿಲ್ಲ : ಇರಾನ್‌ ಸ್ಪಷ್ಟನೆ Read More »

ನಿವೃತ್ತರಾಗಿ 15 ವರ್ಷದ ಕಳೆದರೂ ಹುದ್ದೆಯಲ್ಲಿ ಮುಂದುವರಿದ ಅಧಿಕಾರಿ!

ಲೋಕಾಯುಕ್ತ ದಾಳಿಯಲ್ಲಿ ಬಯಲಾದ ಮಂಗಳೂರು ಮಹಾನಗರ ಪಾಲಿಕೆಯ ಭಾರಿ ಭ್ರಷ್ಟಾಚಾರ ಮಂಗಳೂರು: ಕಳೆದ ಶನಿವಾರ ಲೋಕಾಯುಕ್ತ ಅಧಿಕಾರಿಗಳು ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮೇಲೆ ದಾಳಿ ಮಾಡಿದಾಗ ಅಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅದರಲ್ಲೂ 15 ವರ್ಷದ ಹಿಂದೆ ನಿವೃತ್ತರಾಗಿದ್ದ ಆರೋಗ್ಯ ಅಧಿಕಾರಿಯೊಬ್ಬರು ಈಗಲೂ ಅದೇ ಹುದ್ದೆಯಲ್ಲಿ ಮುಂದುವರಿಯುತ್ತಿರುವುದನ್ನು ನೋಡಿ ಲೋಕಾಯುಕ್ತ ಅಧಿಕಾರಿಗಳೇ ಚಕಿತರಾಗಿದ್ದಾರೆ. ಜೂನ್‌ 21ರಂದು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ ಹಾಗೂ ಪೊಲೀಸ್

ನಿವೃತ್ತರಾಗಿ 15 ವರ್ಷದ ಕಳೆದರೂ ಹುದ್ದೆಯಲ್ಲಿ ಮುಂದುವರಿದ ಅಧಿಕಾರಿ! Read More »

ಹಲ್ಲೆ ಆರೋಪ : ಮಾಜಿ ಸಚಿವ ಅನಂತ ಕುಮಾರ್‌ ಹೆಗಡೆ ವಿರುದ್ಧ ಎಫ್‌ಐಆರ್‌

ಕಾರು ಓವರ್‌ಟೇಕ್‌ ಮಾಡಿದ ವಿಚಾರದಲ್ಲಿ ಗಲಾಟೆ ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಬಳಿ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕೇಂದ್ರದ ಮಾಜಿ ಸಚಿವ, ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಅವರ ಕಾರು ಚಾಲಕ ಹಾಗೂ ಗನ್​ಮ್ಯಾನ್ ಮೇಲೆ ಎಫ್​ಐಆರ್ ದಾಖಲಾಗಿದೆ. ಅನಂತ ಕುಮಾರ್ ಹೆಗಡೆ ಪುತ್ರ ಅಶುತೋಷ್, ಗನ್‌ಮ್ಯಾನ್‌ ಶ್ರೀಧರ್, ಚಾಲಕ ಮಹೇಶ್ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದ್ದು ಆ

ಹಲ್ಲೆ ಆರೋಪ : ಮಾಜಿ ಸಚಿವ ಅನಂತ ಕುಮಾರ್‌ ಹೆಗಡೆ ವಿರುದ್ಧ ಎಫ್‌ಐಆರ್‌ Read More »

ಕೊನೆಗೊಂಡ ಇಸ್ರೇಲ್‌ – ಇರಾನ್‌ ಯುದ್ಧ

ಟ್ರಂಪ್‌ ಮಧ್ಯಸ್ಥಿಕೆಯಲ್ಲಿ ಕದನ ವಿರಾಮಕ್ಕೆ ಒಪ್ಪಿಕೊಂಡ ಉಭಯ ದೇಶಗಳು ವಾಷಿಂಗ್ಟನ್‌ : ಇಸ್ರೇಲ್ ಮತ್ತು ಇರಾನ್‌ ನಡುವೆ ಕಳೆದ 12 ದಿನಗಳಿಂದ ನಡೆಯುತ್ತಿದ್ದ ಘನಘೋರ ಸಮರ ಕೊನೆಗೂಂಡಿದೆ. ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಇರಾನ್‌ ಸಂಪೂರ್ಣ ಕದನ ವಿರಾಮ ಘೋಷಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೊಂಡಿದ್ದಾರೆ. ಆದರೆ ಇರಾನ್‌ ಸಂಪೂರ್ಣ ಕದನ ವಿರಾಮ ಎಂಬ ವ್ಯಾಖ್ಯಾನವನ್ನು ತಿರಸ್ಕರಿಸಿದೆ. ಆದರೆ ಸೋಮವಾರ ರಾತ್ರಿ ಉಭಯ ದೇಶಗಳು ಪರಸ್ಪರರ ಮೇಲೆ ಯಾವುದೇ ಕ್ಷಿಪಣಿ ದಾಳಿ ಮಾಡಿಲ್ಲ.

ಕೊನೆಗೊಂಡ ಇಸ್ರೇಲ್‌ – ಇರಾನ್‌ ಯುದ್ಧ Read More »

ಕಚ್ಚಾತೈಲ ಬೆಲೆ ದಿಢೀರ್‌ ಏರಿಕೆ : ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಆತಂಕ

ಹಾರ್ಮುಜ್‌ ಜಲಸಂಧಿಯನ್ನು ಇರಾನ್‌ ಮುಚ್ಚಿದರೆ ಕಚ್ಚಾತೈಲ ಪೂರೈಕೆ ವ್ಯತ್ಯಯ ನವದೆಹಲಿ: ಇಸ್ರೇಲ್‌-ಇರಾನ್‌ ಯುದ್ಧದಲ್ಲಿ ಅಮೆರಿಕ ಮಧ್ಯಪ್ರವೇಶಿಸಿ ಇರಾನ್‌ ಅಣ್ವಸ್ತ್ರ ನೆಲೆಗಳ ಮೇಲೆ ದಾಳಿ ಮಾಡಿದ ಬಳಿಕ ಪರಿಸ್ಥಿತಿ ಗಂಭೀರವಾಗಿದ್ದು, ಅಮೆರಿಕದ ದಾಳಿಗೆ ಪ್ರತಿಯಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್‌ ಘೋಷಣೆ ಮಾಡಿದ ಬೆನ್ನಲ್ಲೆ ಕಚ್ಚಾತೈಲದ ದರ 5 ತಿಂಗಳ ನಂತರ ಭಾರಿ ಏರಿಕೆಯಾಗಿದೆ. ಇದರಿಂದಾಗಿ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಏರಿಕೆ ಆತಂಕ ತಲೆದೋರಿದೆ. ಸದ್ಯಕ್ಕೆ ಬೆಲೆ ಏರಿಕೆಯಗದು ಎಂದು ಕೇಂದ್ರ ಸರ್ಕಾರ

ಕಚ್ಚಾತೈಲ ಬೆಲೆ ದಿಢೀರ್‌ ಏರಿಕೆ : ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಆತಂಕ Read More »

ಮುರುಡೇಶ್ವರ ಕ್ಷೇತ್ರದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ

ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗದ ರೀತಿ ಸಭ್ಯ ಉಡುಪು ಧರಿಸಲು ಸೂಚನೆ ಮುರುಡೇಶ್ವರ : ದೇಶದೆಲ್ಲೆಡೆಯಿಂದ ನಿತ್ಯ ಸಾವಿರಾರು ಭಕ್ತರು ಆಗಮಿಸುವ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮುರುಡೇಶ್ವರದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಜರಿಗೊಳಿಸಲಾಗಿದೆ. ಪುರಾಣ ಪ್ರಸಿದ್ಧ ಸ್ಥಳವಾದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಈಗಾಗಲೇ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಭಟ್ಕಳ ತಾಲೂಕಿನ ಪ್ರಸಿದ್ಧ ಶಿವ ಕ್ಷೇತ್ರವಾದ ಮುರುಡೇಶ್ವರ ಶಿವಾಲಯದಲ್ಲೂ ಇಲ್ಲಿನ ಆಡಳಿತ ಮಂಡಳಿ ವಸ್ತ್ರ ಸಂಹಿತೆ ಜಾರಿಗೆ ತಂದಿದೆ. ಮುರುಡೇಶ್ವರ

ಮುರುಡೇಶ್ವರ ಕ್ಷೇತ್ರದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ Read More »

ಇಸ್ರೇಲ್‌-ಇರಾನ್‌ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಆ ಗೂಢಚಾರಿಣಿ ಯಾರು?

ಮೊಸಾದ್‌ನ ಲೇಡಿ ಏಜೆಂಟ್‌ ಸೌಂದರ್ಯಕ್ಕೆ ಮರುಳಾಗಿ ಗುಂಡಿಗೆ ಬಿದ್ದ ಇರಾನ್‌ ಸೇನಾಧಿಕಾರಿಗಳು ಟೆಲ್‌ ಅವಿವ್‌: ಇಸ್ರೇಲ್‌-ಇರಾನ್‌ ಯುದ್ಧ ತೀವ್ರಗೊಂಡಿದೆ. ಅಮೆರಿಕ ಯುದ್ಧರಂಗಕ್ಕೆ ಪ್ರವೇಶಿಸಿದ ಬಳಿಕ ಯುದ್ಧದ ಸ್ವರೂಪವು ಬದಲಾಗಿದೆ. ಈ ಎಲ್ಲದರ ನಡುವೆ ಗಾತ್ರ, ಸಂಪನ್ಮೂಲ, ಜನಸಂಖ್ಯೆ, ಸೇನಾಬಲ, ಶಸ್ತ್ರಾಸ್ತ್ರ… ಹೀಗೆ ಎಲ್ಲ ವಿಚಾರದಲ್ಲೂ ಇರಾನ್‌ಗಿಂತ ಬಹಳ ಹಿಂದೆ ಇರುವ ಇಸ್ರೇಲ್‌ ಈ ಪರಿಯಲ್ಲಿ ನಿಖರ ದಾಳಿ ನಡೆಸುತ್ತಿರುವುದು ಹೇಗೆ ಎಂದು ಇಡೀ ಜಗತ್ತು ನಿಬ್ಬೆರಗಾಗಿ ನೋಡುತ್ತಿದೆ. ಅದರಲ್ಲೂ ಯುದ್ಧ ಶುರುವಾದ ಆರಂಭದಲ್ಲೇ ಇರಾನಿನ ಪ್ರಮುಖ ಮಿಲಿಟರಿ

ಇಸ್ರೇಲ್‌-ಇರಾನ್‌ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಆ ಗೂಢಚಾರಿಣಿ ಯಾರು? Read More »

ಪ್ರೇರಣಾ ಕಥೆ – 46ನೇ ವಯಸ್ಸಿನಲ್ಲಿ ವಕೀಲೆಯಾದ ಅಂಬಿಕಾ…

ಅಪಹಾಸ್ಯ, ಅಪಮಾನಗಳನ್ನೆಲ್ಲ ಸಹಿಸಿ ಕನಸು ನನಸು ಮಾಡಿಕೊಂಡ ದಿಟ್ಟ ಮಹಿಳೆ ಮನಸ್ಸಿದ್ದರೆ ಮಾರ್ಗ ಇದೆ ಎಂಬ ಗಾದೆ ಮಾತಿದೆ. ಯಾರಿಗೆ ತಾನು ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಇದೆಯೋ, ಅದನ್ನು ಸಾಧಿಸಲು ಯಾರು ಕಠಿಣ ಶ್ರಮ ಹಾಕುತ್ತಾರೋ ಅವರಿಗೆ ಸಾಧನೆಯ ಹಾದಿಯಲ್ಲಿ ಗುರಿ ತಲುಪುವುದು ಸಾಧ್ಯವಾಗುತ್ತದೆ. ಇದಕ್ಕೆ ಸಾಕ್ಷಿ ಕೇರಳದ ವಕೀಲೆ ಎಂ. ಅಂಬಿಕಾ. ಅಂಬಿಕಾ ಅವರಿಗೆ ಈಗ 46 ವರ್ಷ. ಅದರಲ್ಲೇನು ವಿಶೇಷ ಎಂದಿರಾ? ಅದರಲ್ಲೇ ಇರುವುದು ವಿಶೇಷ. ತಾನು ಏನನ್ನಾದರೂ ಸಾಧಿಸಲೇ ಬೇಕು ಎಂದುಕೊಂಡವರಿಗೆ

ಪ್ರೇರಣಾ ಕಥೆ – 46ನೇ ವಯಸ್ಸಿನಲ್ಲಿ ವಕೀಲೆಯಾದ ಅಂಬಿಕಾ… Read More »

ಚರ್ಚ್‌ ಒಳಗೆ ಆತ್ಮಹತ್ಯಾ ಬಾಂಬ್‌ ದಾಳಿ : 15 ಮಂದಿ ಸಾವು

ಚರ್ಚ್‌ನಲ್ಲಿ ಪ್ರಾರ್ಥನೆ ನಡೆಯುತ್ತಿರುವಾಗಲೇ ದಾಳಿ ಡಮಾಸ್ಕಸ್:‌ ಸಿರಿಯಾ ರಾಜಧಾನಿ ಡಮಾಸ್ಕಸ್‌ನ ಹೊರವಲಯದಲ್ಲಿರುವ ಚರ್ಚ್‌ನಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಗೆ ಕನಿಷ್ಠ 15 ಜನರು ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಡಮಾಸ್ಕಸ್ ಬಳಿಯ ಡ್ವೀಲಿಯಾದಲ್ಲಿರುವ ಮಾರ್ ಎಲಿಯಾಸ್ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಈ ದಾಳಿ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಸಿರಿಯಾದ ಅಧಿಕೃತ ಸುದ್ದಿ ಸಂಸ್ಥೆ ಸನಾ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ, ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದೆ. ಯುಕೆ ಮೂಲದ ಸಿರಿಯನ್ ವೀಕ್ಷಣಾಲಯವು ಗಾಯಗೊಂಡವರು ಮತ್ತು ಸತ್ತವರ ಸಂಖ್ಯೆ

ಚರ್ಚ್‌ ಒಳಗೆ ಆತ್ಮಹತ್ಯಾ ಬಾಂಬ್‌ ದಾಳಿ : 15 ಮಂದಿ ಸಾವು Read More »

error: Content is protected !!
Scroll to Top