ಸುದ್ದಿ

ಇಂದಿನಿಂದ ಮ್ಯಾಚೆಂಸ್ಟರ್​ನಲ್ಲಿ ನಾಲ್ಕನೇ ಟೆಸ್ಟ್‌ ಪಂದ್ಯ : ಭಾರತದ ಪಾಲಿಗೆ ನಿರ್ಣಾಯಕ

ಗೆಲ್ಲುವುದು ಅಥವಾ ಡ್ರಾ ಸಾಧಿಸಿದರಷ್ಟೇ ಟೀಮ್‌ ಇಂಡಿಯಾ ಸರಣಿ ಆಸೆ ಜೀವಂತ ಲಂಡನ್‌ : ಭಾರತ-ಇಂಗ್ಲೆಂಡ್‌ ಐದು ಪಂದ್ಯಗಳ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯ ಇಂದಿನಿಂದ ಮ್ಯಾಚೆಂಸ್ಟರ್​ನಲ್ಲಿ ಪ್ರಾರಂಭವಾಗಲಿದೆ. ನಾಲ್ಕನೇ ಟೆಸ್ಟ್ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ಅತ್ಯಂತ ನಿರ್ಣಾಯಕ. ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದು, ಹೀಗಾಗಿ ಮ್ಯಾಚೆಂಸ್ಟರ್​ನಲ್ಲಿ ಭಾರತ ತಂಡ ಗೆಲ್ಲುವುದು ಅಥವಾ ಡ್ರಾ ಸಾಧಿಸುವುದು ಅನಿವಾರ್ಯ. ಮೂರನೇ ಟೆಸ್ಟ್‌ನಲ್ಲಿ ಗೆಲ್ಲುವ ಚಿನ್ನದಂಥ ಅವಕಾಶವನ್ನು ಕೈಚೆಲ್ಲಿ ಭಾರತ ಈಗ ಪೇಚಾಡುತ್ತಿದೆ. ಆದರೆ […]

ಇಂದಿನಿಂದ ಮ್ಯಾಚೆಂಸ್ಟರ್​ನಲ್ಲಿ ನಾಲ್ಕನೇ ಟೆಸ್ಟ್‌ ಪಂದ್ಯ : ಭಾರತದ ಪಾಲಿಗೆ ನಿರ್ಣಾಯಕ Read More »

ಧರ್ಮಸ್ಥಳ ಪ್ರಕರಣ : ಇಂದಿನಿಂದ ಎಸ್‌ಐಟಿ ತನಿಖೆ ಶುರು

ತನಿಖಾ ತಂಡಕ್ಕೆ ಹೆಚ್ಚುವರಿಯಾಗಿ 20 ಪೊಲೀಸ್‌ ಅಧಿಕಾರಿಗಳ ನೇಮಕ ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಡಲಾಗಿದೆ ಎಂದು ಆರೋಪಿಸಿದ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿದ ಎಸ್‌ಐಟಿ ಬುಧವಾರದಿಂದ ತನಿಖೆ ಆರಂಭಿಸಲಿದೆ. ನಾಲ್ವರು ಐಪಿಎಸ್‌ ಅಧಿಕಾರಿಗಳ ಎಸ್‌ಐಟಿ ತಂಡ ರಚಿಸಲಾಗಿದ್ದು, ಇದಕ್ಕೆ ನಿನ್ನೆ ಮತ್ತೆ 20 ಅಧಿಕಾರಿಗಳನ್ನು ನೇಮಿಸಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ ವಿಶೇಷ ತನಿಖಾ ತಂಡ ಇಂದು ಧರ್ಮಸ್ಥಳಕ್ಕೆ ತೆರಳಿ ಮೊದಲು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅನಾಮಿಕ ವ್ಯಕ್ತಿ ನೀಡಿದ ದೂರಿನ

ಧರ್ಮಸ್ಥಳ ಪ್ರಕರಣ : ಇಂದಿನಿಂದ ಎಸ್‌ಐಟಿ ತನಿಖೆ ಶುರು Read More »

ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ರಾಜೀನಾಮೆಗೆ ಕಾರಣ ಅನಾರೋಗ್ಯವಲ್ಲ!

ಹೈಕೋರ್ಟ್‌ ನ್ಯಾಯಾಧೀಶ ಯಶವಂತ್‌ ವರ್ಮಾ ಮನೆಯಲ್ಲಿ ಕೋಟಿಗಟ್ಟಲೆ ಹಣ ಪತ್ತೆಯಾದ ಪ್ರಕರಣದ ಜೊತೆಗೆ ತಳಕು ಹಾಕಿಕೊಂಡಿದೆ ಧನ್ಕರ್‌ ದಿಢೀರ್‌ ನಿರ್ಧಾರ ನಿನ್ನೆ ರಾತ್ರಿ ರಾಜಧಾನಿಯ ರಾಜಕೀಯ ಪಡಸಾಲೆಯಲ್ಲಿ ನಡೆದ್ದಾದರೂ ಏನು…? ನವದೆಹಲಿ: ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಅವರ ಹಠಾತ್‌ ರಾಜೀನಾಮೆ ನಿರ್ಧಾರ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆಡಳಿತ ಮತ್ತು ವಿಪಕ್ಷ ಎರಡೂ ಕಡೆಯವರಿಗೂ ಉಪರಾಷ್ಟ್ರಪತಿಯವರ ಈ ದಿಢೀರ್‌ ನಿರ್ಧಾರ ಅಚ್ಚರಿಗೆ ಮತ್ತು ಆಘಾತ ನೀಡಿದೆ. ಧನ್ಕರ್‌ ರಾಜೀನಾಮೆಗೆ ಅನಾರೋಗ್ಯದ ಕಾರಣ ನೀಡಿದ್ದರೂ ಒಳಗಿನ ಗುಟ್ಟು

ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ರಾಜೀನಾಮೆಗೆ ಕಾರಣ ಅನಾರೋಗ್ಯವಲ್ಲ! Read More »

ವಿಟ್ಲದಲ್ಲಿ ಕಾರಿಗೆ ಮಿನಿ ಟಿಪ್ಪರ್‌ ಡಿಕ್ಕಿ : ನವವಿವಾಹಿತ ಸಾವು

ಸಹೋದರಿ ಮತ್ತು ಮಗುವಿಗೆ ಗಂಭೀರ ಗಾಯ ವಿಟ್ಲ: ವಿಟ್ಲ ಸಮೀಪದ ವೀರಕಂಬ ಗ್ರಾಮದ ಕೆಲಿಂಜ ಜಂಕ್ಷನ್‌ನಲ್ಲಿ ಮಿನಿ ಟಿಪ್ಪರ್ ಮತ್ತು ಆಲ್ಟೊ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ, ಕಾರಿನ ಚಾಲಕ ಮೃತಪಟ್ಟು, ಅವರ ಸಹೋದರಿ ಹಾಗೂ ಮಗು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಸೋಮವಾರ ಸಂಭವಿಸಿದೆ. ಅನೀಶ್ ಅನಂತಾಡಿ (34) ಮೃತ ದುರ್ದೈವಿ. ಕಲ್ಲಡ್ಕದಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಆಲ್ಟೊ ಕಾರಿಗೆ, ವಿಟ್ಲದಿಂದ ಕಲ್ಲಡ್ಕ ಕಡೆಗೆ ಚಲಿಸುತ್ತಿದ್ದ ಮಿನಿ ಟಿಪ್ಪರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸ್ಥಳೀಯರು

ವಿಟ್ಲದಲ್ಲಿ ಕಾರಿಗೆ ಮಿನಿ ಟಿಪ್ಪರ್‌ ಡಿಕ್ಕಿ : ನವವಿವಾಹಿತ ಸಾವು Read More »

ಜಿಎಸ್‌ಟಿ ನೋಟಿಸ್‌ ವಿರೋಧಿಸಿ ಹಾಲು, ಬೇಕರಿ ಉತ್ಪನ್ನ ಮಾರಾಟ ಬಂದ್

ಜು.23ರಿಂದ ಎರಡು ದಿನ ರಾಜ್ಯವ್ಯಾಪಿ ಪ್ರತಿಭಟನೆಗೆ ನಿರ್ಧಾರ ಬೆಂಗಳೂರು : ಯುಪಿಐ ಮೂಲಕ ಮಿತಿಗಿಂತ ಹೆಚ್ಚಿನ ಹಣ ಸ್ವೀಕರಿಸಿದ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಪಾವತಿಸುವಂತೆ ನೀಡಿರುವ ನೋಟಿಸ್‌ ಮಂಗಳವಾರ ಸಂಜೆಯೊಳಗೆ ಹಿಂಪಡೆಯದಿದ್ದರೆ ಜು.23ರಿಂದ ಎರಡು ದಿನ ರಾಜ್ಯವ್ಯಾಪಿ ಹಾಲು, ಬೇಕರಿ ಉತ್ಪನ್ನ ಮಾರಾಟ ಬಂದ್ ಮಾಡಲಾಗುವುದು. ಜು.25 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಎಚ್ಚರಿಸಿದೆ. ಎಲ್ಲ ಸಣ್ಣ ವ್ಯಾಪಾರಿ, ಅಂಗಡಿಗಳ ಮಾಲೀಕರು ಜು.23, 24ರಂದು ಹಾಲು, ಬೇಕರಿ ಉತ್ಪನ್ನ,

ಜಿಎಸ್‌ಟಿ ನೋಟಿಸ್‌ ವಿರೋಧಿಸಿ ಹಾಲು, ಬೇಕರಿ ಉತ್ಪನ್ನ ಮಾರಾಟ ಬಂದ್ Read More »

ಮುಂಬಯಿಯಲ್ಲೊಂದು ದೃಶ್ಯಂ ಶೈಲಿಯ ಮರ್ಡರ್‌

ಪತಿಯನ್ನು ಕೊಂದು ಮನೆಯೊಳಗೇ ಹೂತು ಹಾಕಿ ಪತ್ನಿ ಪ್ರಿಯಕರನೊಂದಿಗೆ ಪರಾರಿ ಮುಂಬೈ : ವಿವಾಹಿತ ಮಹಿಳೆಯೊಬ್ಬಳು ಪ್ರಿಯಕರನ ಜತೆ ಸೇರಿ ಗಂಡನನ್ನು ಕೊಂದು ಮನೆಯೊಳಗೆ ಹೂತು ಹಾಕಿ ಪಲಾಯನ ಮಾಡಿದ ದೃಶ್ಯಂ ಸಿನಿಮಾ ರೀತಿಯ ಆಘಾತಕಾರಿ ಘಟನೆ ಮುಂಬೈ ಸಮೀಪದ ನಲ್ಲಸೋಪಾರದಲ್ಲಿ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಬಳಿಕ ಯಾರಿಗೂ ಅನುಮಾನ ಬಾರದಂತೆ ಮನೆಯ ನೆಲದ ಟೈಲ್ಸ್ ಅಗೆದು ಪತಿಯ ಶವವನ್ನು ಅದರಡಿಯಲ್ಲಿ ಹೂತು ಹಾಕಿದ್ದಳು. ನಂತರ ಅದರ ಮೇಲೆ ಬೇರೆ ಟೈಲ್ಸ್ ಹಾಕಿದ್ದಳು. ಕೊಲೆಯಾದ ವ್ಯಕ್ತಿಯನ್ನು

ಮುಂಬಯಿಯಲ್ಲೊಂದು ದೃಶ್ಯಂ ಶೈಲಿಯ ಮರ್ಡರ್‌ Read More »

ಬಹುಕೋಟಿ ರೂಪಾಯಿ ವಂಚಕ ರೋಶನ್‌ ಸಲ್ಡಾನನ ವಿರುದ್ಧ ಸಿಐಡಿ ತನಿಖೆ

ಮೋಸ ಹೋದ ಹಲವು ಉದ್ಯಮಿಗಳಿಂದ ದೂರು ದಾಖಲು ಮಂಗಳೂರು : ಕಂಕನಾಡಿ ಬೊಳ್ಳಗುಡ್ಡೆ ನಿವಾಸಿ ಬಹುಕೋಟಿ ರೂಪಾಯಿ ವಂಚಕ ರೋಶನ್ ಸಲ್ಡಾನನಿಂದ ವಂಚನೆಗೊಳಗಾದ ಒಬ್ಬೊಬ್ಬರೇ ಈಗ ದೂರು ನೀಡಲು ಮುಂದಾಗುತ್ತಿದ್ದಾರೆ. ಬಿಹಾರ ಮೂಲದ ಉದ್ಯಮಿಯೊಬ್ಬರಿಗೆ ಸಲ್ಡಾನ ಭೂ ಖರೀದಿಸಿಕೊಡುವುದಾಗಿ ನಂಬಿಸಿ 10 ಕೋಟಿ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಸೆನ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ವಂಚನೆಯ ಮೊತ್ತ 10 ಕೋ.ರೂ. ಅಥವಾ ಅದಕ್ಕಿಂತ ಹೆಚ್ಚಿದ್ದರೆ ಸಿಐಡಿ

ಬಹುಕೋಟಿ ರೂಪಾಯಿ ವಂಚಕ ರೋಶನ್‌ ಸಲ್ಡಾನನ ವಿರುದ್ಧ ಸಿಐಡಿ ತನಿಖೆ Read More »

ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ : ಇನ್ನೋರ್ವ ಆರೋಪಿ ಸೆರೆ

ಮಂಗಳೂರು: ಕಳೆದ ಮೇ 27ರಂದು ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಪಿಕಪ್‌ ಚಾಲಕ ಕೊಳತ್ತಮಜಲು ಅಬ್ದುಲ್ ರಹಿಮಾನ್ ಹತ್ಯೆ ಮತ್ತು ಕಲಂದರ್ ಶಾಫಿ ಮೇಲೆ ಗಂಭೀರ ಹಲ್ಲೆ ನಡೆಸಿದ ಪ್ರಕರಣದ ಓರ್ವ ಆರೋಪಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಅಮ್ಮುಂಜೆ ಗ್ರಾಮದ ನಿವಾಸಿ ಶಾಹಿತ್ ಯಾನೆ ಸಾಹಿತ್ (24) ಬಂಧಿತ ಆರೋಪಿ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 11ಕ್ಕೆ ಏರಿದೆ. ಆರೋಪಿ ಶಾಹಿತ್ ಯಾನೆ ಸಾಹಿತ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಈತನನ್ನು ಹೆಚ್ಚಿನ ತನಿಖೆಗಾಗಿ

ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ : ಇನ್ನೋರ್ವ ಆರೋಪಿ ಸೆರೆ Read More »

ಬೆಟ್ಟಿಂಗ್‌ ಆ್ಯಪ್‌ ಪ್ರಚಾರ : ನಟ ಪ್ರಕಾಶ್‌ ರಾಜ್‌ ಸಹಿತ ಸೆಲೆಬ್ರಿಟಿಗಳಿಗೆ ಇ.ಡಿ. ಸಮನ್ಸ್‌

ಜು.30ರಂದು ಪ್ರಕಾಶ್‌ ರಾಜ್‌ ವಿಚಾರಣೆ ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ ನಟ ಪ್ರಕಾಶ್‌ ರಾಜ್‌ ಸೇರಿ ಹಲವು ಸೆಲೆಬ್ರಿಟಿಗಳಿಗೆ ಇ.ಡಿ ಸಮನ್ಸ್‌ ನೀಡಿದೆ. ನಟರಾದ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ ಮತ್ತು ಮಂಚು ಲಕ್ಷ್ಮಿ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಕೊಟ್ಟಿದೆ. ಜು.23 ರಂದು ರಾಣಾ ದಗ್ಗುಬಾಟಿ, ಜು.30 ರಂದು ಪ್ರಕಾಶ್ ರಾಜ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಆ.6ರಂದು ವಿಜಯ್ ದೇವರಕೊಂಡ ಅವರನ್ನು ವಿಚಾರಣೆಗೆ

ಬೆಟ್ಟಿಂಗ್‌ ಆ್ಯಪ್‌ ಪ್ರಚಾರ : ನಟ ಪ್ರಕಾಶ್‌ ರಾಜ್‌ ಸಹಿತ ಸೆಲೆಬ್ರಿಟಿಗಳಿಗೆ ಇ.ಡಿ. ಸಮನ್ಸ್‌ Read More »

ಇಂದಿನಿಂದ ಮೂರು ದಿನ ಡಿ.ಕೆ ಶಿವಕುಮಾರ್‌ಗೆ ಪೂರ್ಣ ವಿಶ್ರಾಂತಿ

ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳೆಲ್ಲ ರದ್ದು ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಹಿನ್ನಲೆಯಲ್ಲಿ ಅವರು ಮಂಗಳವಾರದಿಂದ ಮೂರು ದಿನ ಸಂಪೂರ್ಣ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಇಂದಿನಿಂದ ಮೂರು ದಿನ ಅವರು ಯಾರನ್ನೂ ಭೇಟಿ ಆಗಲ್ಲ. ಈ ಬಗ್ಗೆ ಡಿ.ಕೆ ಶಿವಕುಮಾರ್ ತನ್ನ ಸಾಮಾಜಿಕ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದು, ನಾಳೆಯಿಂದ ಮೂರು ದಿನಗಳ ಕಾಲ ಯಾರನ್ನೂ ಭೇಟಿ ಆಗಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಯಾರನ್ನೂ ಭೇಟಿ ಆಗಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ

ಇಂದಿನಿಂದ ಮೂರು ದಿನ ಡಿ.ಕೆ ಶಿವಕುಮಾರ್‌ಗೆ ಪೂರ್ಣ ವಿಶ್ರಾಂತಿ Read More »

error: Content is protected !!
Scroll to Top