ಸುದ್ದಿ

ನಭಕ್ಕೆ ಚಿಮ್ಮಿದ ಶುಭಾಂಶು ಶುಕ್ಲ ರಾಕೆಟ್‌ : ಮಹತ್ವಾಕಾಂಕ್ಷಿ ಆಕ್ಸಿಯಮ್-‌4 ಗಗನಯಾತ್ರೆಗೆ ಚಾಲನೆ

ಜಗತ್ತಿನಾದ್ಯಂತ ಹರ್ಷೋದ್ಗಾರ ಫ್ಲೋರಿಡಾ: ಮಹತ್ವಾಕಾಂಕ್ಷಿ ಆಕ್ಸಿಯಮ್-‌4 ಬಾಹ್ಯಾಕಾಶ ಯೋಜನೆಗೆ ಅಧಿಕೃತ ಚಾಲನೆ ದೊರೆತಿದೆ. ಭಾರತೀಯ ಗಗನಯಾತ್ರಿ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ನೇತೃತ್ವದ ಗಗನಯಾತ್ರಿಗಳ ತಂಡವು ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್-‌9 ರಾಕೆಟ್‌ನಲ್ಲಿ ನಭಕ್ಕೆ ಚಿಮ್ಮಿದೆ. ಈ ಮೂಲಕ ಭಾರತದ ಬಾಹ್ಯಾಕಾಶ ಪರಿಕ್ರಮದಲ್ಲಿ ಹೊಸದೊಂದು ಮೈಲುಗಲ್ಲು ಸ್ಥಾಪನೆಯಾಗಿದೆ. ಆರು ಸಲ ಮುಂದೂಡಿಕೆಯಾಗಿದ್ದ ಶುಭಾಂಶು ಶುಕ್ಲ ಗಗನಯಾನ ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಯಶಸ್ವಿಯಾಗಿ ನಡೆಯಿತು. ಇದನ್ನು ನೋಡಿ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಜನರು […]

ನಭಕ್ಕೆ ಚಿಮ್ಮಿದ ಶುಭಾಂಶು ಶುಕ್ಲ ರಾಕೆಟ್‌ : ಮಹತ್ವಾಕಾಂಕ್ಷಿ ಆಕ್ಸಿಯಮ್-‌4 ಗಗನಯಾತ್ರೆಗೆ ಚಾಲನೆ Read More »

ಇಸ್ರೇಲ್‌ಗೆ ನೆರವಾದ ಮೂವರನ್ನು ನೇಣಿಗೇರಿಸಿದ ಇರಾನ್‌

ಸಮರ ವಿರಾಮದ ಬೆನ್ನಿಗೆ ದೇಶದ್ರೋಹಿಗಳ ಬೇಟೆ; 700 ಮಂದಿ ಸೆರೆ ಟೆಹ್ರಾನ್‌ : ಸಮರ ವಿರಾಮ ಜಾರಿಗೆ ಬಂದ ಮರುದಿನವೇ ಇರಾನ್‌ ತನ್ನಲ್ಲಿರುವ ದೇಶದ್ರೋಹಿಗಳ ವಿರುದ್ಧ ಕಾರ್ಯಾಚರಣೆ ಶುರುಮಾಡಿದ್ದು, ಇಸ್ರೇಲ್‌ ಪರ ಬೇಹುಗಾರಿಕೆ ಮಾಡಿದ ಆರೋಪದಲ್ಲಿ ಮೂವರನ್ನು ನೇಣಿಗೇರಿಸಿದೆ. ಇಸ್ರೇಲ್‌ ಮತ್ತು ಇರಾನ್‌ ನಡುವೆ 12 ದಿನಗಳಿಂದ ನಡೆಯುತ್ತಿದ್ದ ಭೀಕರ ಯುದ್ಧ ಶಾಂತಿ ಮಾತುಕತೆಯ ಬಳಿಕ ನಿನ್ನೆ ಕೊನೆಗೊಂಡಿದೆ. ಇದರ ಬೆನ್ನಿಗೆ ಇರಾನ್‌ ಸರ್ಕಾರ ಇಸ್ರೇಲ್‌ಗೆ ನೆರವಾಗಿರುವವರ ಬೇಟೆಯಾಡಲು ಪ್ರಾರಂಭಿಸಿದೆ. ನಿನ್ನೆಯೇ ಇಸ್ರೇಲ್‌ನ ಬೇಹುಪಡೆ ಮೊಸಾದ್‌ಗೆ ನೆರವಾದ

ಇಸ್ರೇಲ್‌ಗೆ ನೆರವಾದ ಮೂವರನ್ನು ನೇಣಿಗೇರಿಸಿದ ಇರಾನ್‌ Read More »

ಭಾರತೀಯರು ಎಂದಿಗೂ ಮರೆಯದ ಕರಾಳ ದಿನ : ತುರ್ತು ಪರಿಸ್ಥಿತಿ ಬಗ್ಗೆ ಮೋದಿ ವಾಗ್ದಾಳಿ

ದಿ ಎಮರ್ಜೆನ್ಸಿ ಡೈರೀಸ್ ಪುಸ್ತಕದಲ್ಲಿ ನೆನಪುಗಳನ್ನು ಬಿಚ್ಚಿದ ಪ್ರಧಾನಿ ನವದೆಹಲಿ: ಇಂದಿರಾ ಗಾಂಧಿ ಸರ್ಕಾರ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭವನ್ನು ಭಾರತೀಯರು ಎಂದಿಗೂ ಮರೆಯದ ಕರಾಳ ದಿನ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತುರ್ತು ಪರಿಸ್ಥಿತಿ ಹೇರಿ ಇಂದಿಗೆ 50 ವರ್ಷವಾದ ಹಿನ್ನೆಲೆಯಲ್ಲಿ ಮೋದಿ ಆ ದಿನಗಳ ಕುರಿತು ಟವೀಟ್‌ ಮಾಡಿದ್ದಾರೆ. ಭಾರತದ ಪ್ರಜಾಪ್ರಭುತ್ವ ಇತಿಹಾಸದ ಕರಾಳ ಅಧ್ಯಾಯಗಳಲ್ಲಿ ಒಂದಾದ ತುರ್ತು ಪರಿಸ್ಥಿತಿ ಹೇರಿಕೆಗೆ ಇಂದು ಐವತ್ತು ವರ್ಷಗಳು ತುಂಬಿವೆ. ಭಾರತದ ಜನರು ಈ

ಭಾರತೀಯರು ಎಂದಿಗೂ ಮರೆಯದ ಕರಾಳ ದಿನ : ತುರ್ತು ಪರಿಸ್ಥಿತಿ ಬಗ್ಗೆ ಮೋದಿ ವಾಗ್ದಾಳಿ Read More »

2.5 ಕೋಟಿ ರೂ. ಕಾರಿಗೆ 50 ಲ.ರೂ. ಮೌಲ್ಯ ತೋರಿಸಿ ನೋಂದಾಯಿಸಿ ತೆರಿಗೆ ವಂಚನೆ

ಮನಪಾ ಬಳಿಕ ಮಂಗಳೂರು ಆರ್‌ಟಿಒ ಕಚೇರಿಯ ಅವ್ಯವಹಾರ ಬಯಲಿಗೆ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಲೋಕಾಯುಕ್ತ ದಾಳಿಯಾದ ಬಳಿಕ ಅಲ್ಲಿ ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದು ಬುದ್ಧಿವಂತರ ಮತ್ತು ಪ್ರಜ್ಞಾವಂತರ ಜಿಲ್ಲೆ ಎಂಬ ಖ್ಯಾತಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಹೃದಯ ಭಾಗಕ್ಕೆ ಕಳಂಕ ಅಂಟಿಕೊಂಡಿದೆ. ಈಗ ಸಾರಿಗೆ ಕಚೇರಿಯ ಸರದಿ. ಮಂಗಳೂರಿನ ಸಾರಿಗೆ ಕಚೇರಿಯಲ್ಲಿ ವಾಹನ ನೋಂದಣಿಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಹಗರಣ ಮಂಗಳೂರು ಸಾರಿಗೆ ಅಧಿಕಾರಿ

2.5 ಕೋಟಿ ರೂ. ಕಾರಿಗೆ 50 ಲ.ರೂ. ಮೌಲ್ಯ ತೋರಿಸಿ ನೋಂದಾಯಿಸಿ ತೆರಿಗೆ ವಂಚನೆ Read More »

ಇರಾನ್‌ನ ಒಂದೇ ಒಂದು ನ್ಯೂಕ್ಲಿಯರ್‌ ಬಾಂಬ್‌ ಕೂಡ ನಾಶವಾಗಿಲ್ಲ ಎಂದ ಅಮೆರಿಕ ಗುಪ್ತಚರ ವರದಿ

ದಾಳಿಯ ಯಶಸ್ಸಿನ ಬಗ್ಗೆ ಕೊಚ್ಚಿಕೊಂಡಿದ್ದ ಟ್ರಂಪ್‌ಗೆ ಭಾರಿ ಮುಖಭಂಗ ವಾಷಿಂಗ್ಟನ್: ಇರಾನ್‌ನ ಮೂರು ಅಣ್ವಸ್ತ್ರ ಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಒಂದು ನ್ಯೂಕ್ಲಿಯರ್‌ ಬಾಂಬ್‌ ಕೂಡ ನಾಶವಾಗಿಲ್ಲ ಎಂದು ಈಗ ಸ್ವತಹ ಅಮೆರಿಕದ ಗುಪ್ತಚರ ಪಡೆಯೇ ಹೇಳಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಂತೆ ಇರಾನ್‌ನ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್‌ನ ಪರಮಾಣು ಯೋಜನೆ ನಾಶವಾಗಿಲ್ಲ ಬದಲಾಗಿ ಕೆಲವು ತಿಂಗಳ ಕಾಲ ಹಿನ್ನಡೆಯಾಗಿದೆ ಎಂದು ಅಮೆರಿಕದ ಗುಪ್ತಚರ ವರದಿಗಳು ತಿಳಿಸಿವೆ. ಈ

ಇರಾನ್‌ನ ಒಂದೇ ಒಂದು ನ್ಯೂಕ್ಲಿಯರ್‌ ಬಾಂಬ್‌ ಕೂಡ ನಾಶವಾಗಿಲ್ಲ ಎಂದ ಅಮೆರಿಕ ಗುಪ್ತಚರ ವರದಿ Read More »

ಉಪ್ಪಿನಂಗಡಿ: ಮಣ್ಣಗುಂಡಿಯಲ್ಲಿ ಗುಡ್ಡ ಜರಿದು ಹೆದ್ದಾರಿಗೆ ಬಿದ್ದ ಮಣ್ಣು ರಾಶಿ

ಹಲವು ತಾಸು ವಾಹನ ಸಂಚಾರ ವ್ಯತ್ಯಯ ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯಲ್ಲಿ ನಿನ್ನೆ ಸಂಜೆ ಗುಡ್ಡ ಜರಿದು ಭಾರಿ ಪ್ರಮಾಣದಲ್ಲಿ ಕಲ್ಲು-ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರ ವ್ಯತ್ಯಯವಾಗಿತ್ತು. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್‍ನಿಂದ ಅಡ್ಡಹೊಳೆ ತನಕ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮಣ್ಣಗುಂಡಿಯಲ್ಲಿ ರಸ್ತೆ ನಿರ್ಮಾಣ ಸಂದರ್ಭ ಗುಡ್ಡ ಅಗೆಯಲಾಗಿದೆ. ಇಲ್ಲಿ ನೇರವಾಗಿ ಗುಡ್ಡ ಅಗೆದಿರುವುದರಿಂದ ಕೆಲ ದಿನಗಳಿಂದ ಮಣ್ಣು ಜರಿಯುತ್ತಿದ್ದು ಒಂದು

ಉಪ್ಪಿನಂಗಡಿ: ಮಣ್ಣಗುಂಡಿಯಲ್ಲಿ ಗುಡ್ಡ ಜರಿದು ಹೆದ್ದಾರಿಗೆ ಬಿದ್ದ ಮಣ್ಣು ರಾಶಿ Read More »

ಇಂದು ಮಧ್ಯಾಹ್ನ ಶುಭಾಂಶು ಶುಕ್ಲ ಗಗನಯಾತ್ರೆ

14 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ; 60 ವಿವಿಧ ರೀತಿಯ ಪ್ರಯೋಗ ಫ್ಲೋರಿಡಾ: ಆರು ಬಾರಿ ಮುಂದೂಡಿಕೆಯಾಗಿದ್ದ ಭಾರತೀಯ ಪ್ರಜೆ ಶುಭಾಂಶು ಶುಕ್ಲಾ ಸಹಿತ ನಾಲ್ಕು ಗಗನಯಾತ್ರಿಗಳ ಅಂತರಿಕ್ಷ ಯಾನಕ್ಕೆ ಇಂದು ಮಧ್ಯಾಹ್ನದ ಮುಹೂರ್ತ ನಿಗದಿಯಾಗಿದೆ. ಭಾರತೀಯ ಕಾಲಮಾನ ಪ್ರಕಾರ ಇಂದು ಮಧ್ಯಾಹ್ನ 12.01ಕ್ಕೆ ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಂ ನೌಕೆ ನಭಕ್ಕೇರಲಿದೆ. ಸ್ಪೇಸ್‌ಎಕ್ಸ್ ಫಾಲ್ಕನ್-9 ರಾಕೆಟ್‌ ಮೂಲಕ ಶುಭಾಂಶು ಶುಕ್ಲಾ ಅವರ ಜೊತೆಗೆ ಇತರ ಮೂವರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ

ಇಂದು ಮಧ್ಯಾಹ್ನ ಶುಭಾಂಶು ಶುಕ್ಲ ಗಗನಯಾತ್ರೆ Read More »

ಮೂವರು ಡಾಬಾ ಮಾಲೀಕರನ್ನು ಕೊಚ್ಚಿ ಕೊಂದ ಗ್ಯಾಂಗ್‌

ಬೆಂಗಳೂರು: ಡಾಬಾ ಮಾಲಕರನ್ನು ಕೊಚ್ಚಿ ಕೊಲೆ ಮಾಡಿರುವ ಭೀಕರ ಕೃತ್ಯ ಕಲಬುರಗಿ ಜಿಲ್ಲೆಯಲ್ಲಿ ಸಂಭವಿಸಿದೆ. ಕಲಬುರಗಿಯ ಹೊರವಲಯದ ಪಟ್ನಾ ಗ್ರಾಮದಲ್ಲಿರುವ ಡಾಬಾದಲ್ಲಿ ಮಂಗಳವಾರ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಮೂವರನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಹತ್ಯೆಗೀಡಾದವರನ್ನು ಸಿದ್ದಾರೂಢ (32), ಜಗದೀಶ್ (25) ಮತ್ತು ರಾಮಚಂದ್ರ (35) ಎಂದು ಗುರುತಿಸಲಾಗಿದೆ. ಮೂರು ಜನ ಸಂಬಂಧಿಕರಾಗಿದ್ದು, ಡಾಬಾ ನಡೆಸುತ್ತಿದ್ದರು. ಡಾಬಾದಲ್ಲಿ ಕೆಲಸ ಮಾಡುತ್ತಿದ್ದಾಗ ದುಷ್ಕರ್ಮಿಗಳು ಡಾಬಾಕ್ಕೆ ನುಗ್ಗಿ ಮೂವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಹಳೆಯ ವೈಷಮ್ಯದಿಂದ ಕೊಲೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ

ಮೂವರು ಡಾಬಾ ಮಾಲೀಕರನ್ನು ಕೊಚ್ಚಿ ಕೊಂದ ಗ್ಯಾಂಗ್‌ Read More »

ಐದು ಶತಕ ಸಿಡಿಸಿದರೂ ಹೀನಾಯ ಸೋಲು : ಟೀಮ್‌ ಇಂಡಿಯಾ ಅಭಿಮಾನಿಗಳಿಗೆ ಭಾರಿ ನಿರಾಶೆ

ಟೆಸ್ಟ್‌ ಕ್ರಿಕೆಟ್‌ನ 148 ವರ್ಷಗಳ ಇತಿಹಾಸದಲ್ಲೇ ಕಳಪೆ ದಾಖಲೆ ಬರೆದ ಭಾರತ ತಂಡ ಲಂಡನ್‌ : ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು ಐದು ಶತಕ ಸಿಡಿಸಿದರೂ ಇಂಗ್ಲಂಎಡ್‌ ವಿರುದ್ಧ ಭಾರತ ಸೋತಿರುವುದು ಭಾರತೀಯ ಕ್ರಿಕೆಟ್‌ ಅಭಿಮಾನಗಳಿಗೆ ಬಹಳ ನಿರಾಶೆ ಮೂಡಿಸಿದೆ. ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಐದು ವಿಕೆಟ್‌ಗಳ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ 471 ರನ್​ ಕಲೆಹಾಕಿದರೆ, ಇಂಗ್ಲೆಂಡ್ 465

ಐದು ಶತಕ ಸಿಡಿಸಿದರೂ ಹೀನಾಯ ಸೋಲು : ಟೀಮ್‌ ಇಂಡಿಯಾ ಅಭಿಮಾನಿಗಳಿಗೆ ಭಾರಿ ನಿರಾಶೆ Read More »

ಪಂಡರಾಪುರ ಭಕ್ತರ ಮೆರವಣಿಗೆ ಮೇಲೆ ಮಾಂಸ, ಮೂಳೆ ಚೂರು ಎಸೆದ ಮಹಿಳೆ

ಆಷಾಢಿ ವಾರ್ಕರಿ ಯಾತ್ರೆಯ ಸಂದರ್ಭ ನಡೆದ ಅಹಿತಕರ ಘಟನೆ ಪುಣೆ : ಪಂಡರಾಪುರದ ವಿಠ್ಠಲನ ಕ್ಷೇತ್ರಕ್ಕೆ ಸಾಗುತ್ತಿದ್ದ ವಾರ್ಕರಿಗಳ ಮೆರವಣಿಗೆಯ ಮೇಲೆ ಮುಸ್ಲಿಂ ಮಹಿಳೆಯೊಬ್ಬಳು ಮಾಂಸ ಮತ್ತು ಮೂಳೆ ಚೂರುಗಳನ್ನು ಎಸೆದು ಅಪವಿತ್ರಗೊಳಿಸಿದ ಘಟನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮಹಾರಾಷ್ಟ್ರದ ಪುಣೆಯ ಕ್ಯಾಂಪ್‌ ಏರಿಯಾದಲ್ಲಿ ಈ ಘಟನೆ ನಡೆದಿದೆ. ಮಾಂಸ ಎಸೆದ ಮಹಿಳೆಯನ್ನು ನಾಸಿಮ್‌ ಶೇಖ್‌ (57) ಎಂದು ಗುರುತಿಸಲಾಗಿದೆ. ಜೂನ್‌ 21ರಂದು ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಆಷಾಢಿ ವಾರಿ

ಪಂಡರಾಪುರ ಭಕ್ತರ ಮೆರವಣಿಗೆ ಮೇಲೆ ಮಾಂಸ, ಮೂಳೆ ಚೂರು ಎಸೆದ ಮಹಿಳೆ Read More »

error: Content is protected !!
Scroll to Top