ಸುದ್ದಿ

ಪುತ್ತೂರು : ಭಾರಿ ಮಳೆ ಕಾರಣ ಇಂದು ಶಾಲೆಗಳಿಗೆ ರಜೆ

ಪುತ್ತೂರು : ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕಿನಲ್ಲೂ ಇಂದು (ಜು.24) ಶಾಲೆಗಳಿಗೆ ರಜೆ ಸಾರಲಾಗಿದ್ದು, ಇದರೊಂದಿಗೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ಶಾಲೆಗಳಿಗೆ ರಜೆ ನೀಡಿದಂತಾಗಿದೆ. ಪುತ್ತೂರು ತಾಲೂಕಿನ ಎಲ್ಲ ಅಂಗನವಾಡಿ, ಕೇಂದ್ರಗಳು, ಪ್ರಾಥಮಿಕ ಶಾಳೆಗಳು, ಪ್ರೌಢಾಲೆಗಳು, ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ನೀಡಲಾಗಿದೆ. ನೀರು ಹರಿಯುವ ತಗ್ಗು ಪ್ರದೇಶಗಳು, ಕೆರೆಮ ನದಿತೀರಗಳಿಗೆ ಮಕ್ಕಳು ಹೋಗದಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರ್‌ ಸೂಚನೆ ನೀಡಿದ್ದಾರೆ.

ಪುತ್ತೂರು : ಭಾರಿ ಮಳೆ ಕಾರಣ ಇಂದು ಶಾಲೆಗಳಿಗೆ ರಜೆ Read More »

ಧರ್ಮಸ್ಥಳ ಪ್ರಕರಣ : ಎಸ್‌ಐಟಿಯಿಂದ ಓರ್ವ ಐಪಿಎಸ್‌ ಅಧಿಕಾರಿಯನ್ನು ಕೈಬಿಡಲು ಶಿಫಾರಸು

ಇನ್ನೋರ್ವ ಐಪಿಎಸ್‌ ಅಧಿಕಾರಿಯಿಂದ ಕೈಬಿಡುವಂತೆ ಮನವಿ ಬೆಂಗಳೂರು: ಧರ್ಮಸ್ಥಳದ ಕಾಡಿನಲ್ಲಿ ಶವಗಳನ್ನು ಹೂತ ಆರೋಪದ ತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡದಿಂದ ಓರ್ವ ಐಪಿಎಸ್‌ ಅಧಿಕಾರಿಯನ್ನು ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಇನ್ನೋರ್ವ ಐಪಿಎಸ್‌ ಅಧಿಕಾರಿ ಕೂಡ ತನಿಖಾ ತಂಡದಿಂದ ತನ್ನನ್ನು ಕೈಬಿಡಲು ಮನವಿ ಮಾಡಿದ್ದಾರೆ. ತನಿಖಾ ತಂಡದಿಂದ ಕೈಬಿಡುವಂತೆ ಸಿಎಆರ್‌ ಕೇಂದ್ರಸ್ಥಾನದ ಉಪ ಪೊಲೀಸ್‌ ಆಯುಕ್ತರಾದ ಸೌಮ್ಯಲತಾ ಮನವಿ ಮಾಡಿದ್ದರು. ವೈಯಕ್ತಿಕ ಕಾರಣ ನೀಡಿ ಸೌಮ್ಯಲತಾ ಹಿಂದೆ ಸರಿದಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಎಸ್‌ಐಟಿ ಮುಖ್ಯಸ್ಥ

ಧರ್ಮಸ್ಥಳ ಪ್ರಕರಣ : ಎಸ್‌ಐಟಿಯಿಂದ ಓರ್ವ ಐಪಿಎಸ್‌ ಅಧಿಕಾರಿಯನ್ನು ಕೈಬಿಡಲು ಶಿಫಾರಸು Read More »

ಉಪ್ಪಿನಂಗಡಿ : ಸರ್ಕಾರಿ ಬಸ್‌ ಚಾಲಕ, ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ ಇಬ್ಬರು ಯುವಕರ ಬಂಧನ

ಸೈಡ್‌ ಕೊಡಲು ಹಾರ್ನ್‌ ಹಾಕಿದ್ದಕ್ಕೆ ಚಾಲಕನ ಮೇಲೆ ಹಲ್ಲೆ ಮಾಡಿದ ಯುವಕರು ಉಪ್ಪಿನಂಗಡಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ಸಿನ ಚಾಲಕ ಹಾರ್ನ್ ಹಾಕಿದ ಎಂಬ ಕಾರಣಕ್ಕೆ ಬೈಕ್ ಸವಾರರಿಬ್ಬರು ಬಸ್ಸನ್ನು ಅಡ್ಡ ಹಾಕಿ ಬಸ್ಸಿನ ಚಾಲಕನ ಮೇಲೆ ಹಲ್ಲೆ ನಡೆಸಿದ ಹಾಗೂ ಇದನ್ನು ಪ್ರಶ್ನಿಸಿದ ಪ್ರಯಾಣಿಕನ ಮೇಲೂ ಹೆಲ್ಮೆಟ್‌ನಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ಬುಧವಾರ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿನತ್ತ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ಸಿನ ಚಾಲಕ ರಿಯಾಝ್

ಉಪ್ಪಿನಂಗಡಿ : ಸರ್ಕಾರಿ ಬಸ್‌ ಚಾಲಕ, ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ ಇಬ್ಬರು ಯುವಕರ ಬಂಧನ Read More »

ಕರಾವಳಿಯಲ್ಲಿ ತೀವ್ರಗೊಂಡ ಮಳೆ : ಆರು ತಾಲೂಕುಗಳಲ್ಲಿ ಪಿಯುಸಿ ತನಕ ರಜೆ ಘೋಷಣೆ

ಬಂಟ್ವಾಳ : ಕರಾವಳಿಯಲ್ಲಿ ಮಳೆ ತೀವ್ರಗೊಂಡಿದ್ದು, ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು, ಬಂಟ್ವಾಳ, ಮೂಲ್ಕಿ, ಮೂಡುಬಿದಿರೆ, ಕಡಬ, ಉಳ್ಳಾಲ ತಾಲೂಕುಗಳಲ್ಲಿ ಶಾಲಾ ಮಕ್ಕಳಿಗೆ ರಜೆ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜು.24ರ ಗುರುವಾರ ಬಂಟ್ವಾಳ ತಾಲೂಕಿನ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಮಂಗಳೂರು, ಬಂಟ್ವಾಳ, ಮೂಲ್ಕಿ, ಮೂಡುಬಿದಿರೆ ತಾಲೂಕುಗಳಲ್ಲಿ ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ.

ಕರಾವಳಿಯಲ್ಲಿ ತೀವ್ರಗೊಂಡ ಮಳೆ : ಆರು ತಾಲೂಕುಗಳಲ್ಲಿ ಪಿಯುಸಿ ತನಕ ರಜೆ ಘೋಷಣೆ Read More »

ಕನ್ವರ್ ‌ಯಾತ್ರಾ ಮಾರ್ಗದ ಹೊಟೇಲ್‌ಗಳಿಗೆ QR ಕೋಡ್‌‌ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ‌ನೀಡಲು ಸುಪ್ರೀಂ ನಕಾರ

ಲಕ್ನೋ: ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಕನ್ವರ್ ಯಾತ್ರಿಗಳ ಅನುಕೂಲಕ್ಕಾಗಿ ಮಾರ್ಗದಲ್ಲಿರುವ ಹೊಟೇಲ್‌ಗಳಿಗೆ ಕ್ಯೂ‌ಆರ್ ಕೋಡ್ ಕಡ್ಡಾಯ ಎಂದು ಆದೇಶ ಹೊರಡಿಸಿದ್ದು, ಇದಕ್ಕೆ ತಡೆಯಾಜ್ಞೆ ಹೊರಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪನ್ನು ನೀಡಿರುವುದಾಗಿದೆ. ಈ ಅರ್ಜಿದಾರರ ಪರ ವಕೀಲರು, ಸರ್ಕಾರದ ಈ ಆದೇಶ‌ ವ್ಯಾಪಾರಿಗಳಲ್ಲಿ ಒತ್ತಡ ಉಂಟು ಮಾಡುತ್ತಿದೆ. ಗೌಪ್ಯತೆಯ ಉಲ್ಲಂಘನೆಗೂ ಕಾರಣವಾಗುತ್ತದೆ

ಕನ್ವರ್ ‌ಯಾತ್ರಾ ಮಾರ್ಗದ ಹೊಟೇಲ್‌ಗಳಿಗೆ QR ಕೋಡ್‌‌ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ‌ನೀಡಲು ಸುಪ್ರೀಂ ನಕಾರ Read More »

ತುಳು ರಂಗಭೂಮಿಯ ಹಿರಿಯ ಕಲಾವಿದ ಚಿ.ರಮೇಶ್ ಕಲ್ಲಡ್ಕ ನಿಧನ

20 ವರ್ಷಗಳಿಂದ ಕಲಾಸಂಗಮ ತಂಡದಲ್ಲಿ ಬಣ್ಣ ಹಚ್ಚುತ್ತಿದ್ದ ಕಲಾವಿದ ಬಂಟ್ವಾಳ: ತುಳು ರಂಗಭೂಮಿಯ ಹಿರಿಯ ಕಲಾವಿದ, ಚಲನಚಿತ್ರ ನಟ ಚಿ.ರಮೇಶ್ ಕಲ್ಲಡ್ಕ (68) ಹೃದಯಾಘಾತದಿಂದ ಬುಧವಾರ ಬೆಳಗ್ಗೆ ಕಲ್ಲಡ್ಕದ ಕೊಳಕೀರುವಿನಲ್ಲಿರುವ ಮನೆಯಲ್ಲಿ ನಿಧನ ಹೊಂದಿದ್ದಾರೆ. ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ರಂಗಭೂಮಿಯಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಕಲಾಸೇವೆಗೈದಿರುವ ರಮೇಶ್ ಕಲ್ಲಡ್ಕ ಕಳೆದ 20 ವರ್ಷಗಳಿಂದ ವಿಜಯಕುಮಾರ್ ಕೊಡಿಯಾಲಬೈಲ್ ಅವರ ಕಲಾಸಂಗಮ ತಂಡದಲ್ಲಿ ಕಲಾಸೇವೆ ಮಾಡುತ್ತಿದ್ದರು. ವಿಜಯಕುಮಾರ್ ಕೊಡಿಯಾಲಬೈಲ್ ಅವರಿಂದ ತರಬೇತಿ ಪಡೆದ ರಮೇಶ್ ಕಲ್ಲಡ್ಕ ಕಲಾಸಂಗಮದ

ತುಳು ರಂಗಭೂಮಿಯ ಹಿರಿಯ ಕಲಾವಿದ ಚಿ.ರಮೇಶ್ ಕಲ್ಲಡ್ಕ ನಿಧನ Read More »

ವಿವಿ ಕುಲಪತಿಯ ವಾಟ್ಸಪ್‌ ನಂಬರನ್ನೇ ಹ್ಯಾಕ್‌ ಮಾಡಿದ ಸೈಬರ್‌ ಚೋರರು

ಲಿಂಕ್‌ ಕ್ಲಿಕ್‌ ಮಾಡಿದಾಗ ಸ್ನೇಹಿತರಿಗೆ ಹಣ ಕಳುಹಿಸಲು ಮನವಿ ಸಂದೇಶ ರವಾನೆ ಮಂಗಳೂರು: ನಗರದ ಖಾಸಗಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯವೊಂದರ ಕುಲಪತಿಯ ವಾಟ್ಸಪ್ ಅಕೌಂಟನ್ನೇ ಸೈಬರ್‌ ಚೋರರು ಹ್ಯಾಕ್‌ ಮಾಡಿದ ಘಟನೆ ಸಂಭವಿಸಿದೆ. ವಾಟ್ಸಪ್‌ ಹ್ಯಾಕ್‌ ಮಾಡಿ ಅವರ ಸಂಪರ್ಕದಲ್ಲಿದ್ದವರ ಮೊಬೈಲ್ ನಂಬರ್‌ಗಳಿಗೆ ಹಣಕ್ಕಾಗಿ ಸಂದೇಶ ರವಾನೆಯಾಗಿದೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಪತಿಯ ಮೊಬೈಲ್ ಫೋನ್‌ಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಕೊರಿಯರ್ ಕಂಪನಿಯಿಂದ

ವಿವಿ ಕುಲಪತಿಯ ವಾಟ್ಸಪ್‌ ನಂಬರನ್ನೇ ಹ್ಯಾಕ್‌ ಮಾಡಿದ ಸೈಬರ್‌ ಚೋರರು Read More »

ಪುತ್ತೂರು : ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದವ ಪೊಲೀಸ್‌ ವಶ

ಬಸ್ಸಿನ ಎಮರ್ಜೆನ್ಸಿ ಬಾಗಿಲಿನಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನ ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪಿಯನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಸ್ಸಿನಲ್ಲಿ ಯುವತಿಯ ಪಕ್ಕದಲ್ಲಿ ಕುಳಿತು ಅನುಚಿತವಾಗಿ ವರ್ತಿಸಿದ ಘಟನೆ ಜುಲೈ 22ರಂದು ನಡೆದಿದ್ದು, ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಮಂಗಳೂರಿನ ಮಹಮ್ಮದ್ ತೌಹೀದ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿ ಜುಲೈ 22ರಂದು ಕಾಲೇಜು ಬಿಟ್ಟ ಬಳಿಕ ಸಂಜೆ ಮಂಗಳೂರಿನಿಂದ

ಪುತ್ತೂರು : ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದವ ಪೊಲೀಸ್‌ ವಶ Read More »

ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌ ನೀಡಿರುವುದು ರಾಜ್ಯ ಸರ್ಕಾರ : ಕೇಂದ್ರದಿಂದ ಸ್ಪಷ್ಟನೆ

ವಿಶ್ವದ ನಂಬರ್‌ ಒನ್‌ ಪೇಮೆಂಟ್‌ ವ್ಯವಸ್ಥೆ ಯುಪಿಐ ಹದಗೆಡಿಸಲು ಕಾಂಗ್ರೆಸ್‌ ಸಂಚು ನವದೆಹಲಿ: ಸಣ್ಣ ವ್ಯಾಪಾರಿಗಳಿಗೆ ಕರ್ನಾಟಕ ಸರ್ಕಾರ ನೀಡಿರುವ ತೆರಿಗೆ ನೋಟಿಸ್‌ಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಬಾಕಿ ನೋಟಿಸ್ ಕೊಟ್ಟು, ಇದೀಗ ರಾಜ್ಯ ಸರ್ಕಾರಕ್ಕೂ ಹಾಗೂ ಜಿಎಸ್‌ಟಿ ನೋಟಿಸ್‌ಗೂ ಯಾವುದೇ ಸಂಬಂಧವಿಲ್ಲ ಅಂತ ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಹೇಳಿದ್ದಾರೆ.

ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌ ನೀಡಿರುವುದು ರಾಜ್ಯ ಸರ್ಕಾರ : ಕೇಂದ್ರದಿಂದ ಸ್ಪಷ್ಟನೆ Read More »

24 ಕಳ್ಳತನ, ಕೊಲೆಯತ್ನ ಪ್ರಕರಣಗಳ ಆರೋಪಿ ಸೆರೆ

ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದವ ಸಿಸಿಬಿ ಪೊಲೀಸರ ಬಲೆಗೆ ಮಂಗಳೂರು : 24 ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಜನಾಡಿ ಕಲ್ಕಟ್ಟ ಬದ್ರಿಯ ನಗರದ ಮೊಹಮ್ಮದ್ ಅಬ್ದುಲ್ ಫಯಾನ್(27) ಸೆರೆಯಾದ ಆರೋಪಿ. ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ವಿವಿಧ ಕಳವು, ಕೊಲೆಯತ್ನ, ಕಾರಾಗೃಹದಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಪ್ರಕರಣಗಳು ಸೇರಿದಂತೆ 24 ಪ್ರಕರಣಗಳಲ್ಲಿ ಭಾಗಿಯಾಗಿರುವ ಈತ ನ್ಯಾಯಾಲಯದಿಂದ

24 ಕಳ್ಳತನ, ಕೊಲೆಯತ್ನ ಪ್ರಕರಣಗಳ ಆರೋಪಿ ಸೆರೆ Read More »

error: Content is protected !!
Scroll to Top