ಸುದ್ದಿ

ದಿನೇಶ್‌ ಅಮೀನ್‌ ಮಟ್ಟು ಅವರಿಗಿಲ್ಲ ವಿಧಾನ ಪರಿಷತ್‌ ಸ್ಥಾನ

ಭಾರಿ ಹಗ್ಗ ಜಗ್ಗಾಟದ ಬಳಿಕ ನಾಲ್ವರ ನಾಮನಿರ್ದೇಶನಕ್ಕೆ ಹೈಕಮಾಂಡ್‌ ಒಪ್ಪಿಗೆ ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಹಲವು ತಿಂಗಳಿಂದ ಖಾಲಿ ಇದ್ದ ನಾಲ್ಕು ಸದಸ್ಯ ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಹೈಕಮಾಂಡ್‌ ಒಪ್ಪಿಗೆ ನೀಡಿದೆ. ಈ ಹಿಂದೆ ಫೈನಲ್ ಆಗಿದ್ದ ನಾಲ್ವರ ನಾಮನಿರ್ದೇಶನ ಪಟ್ಟಿ ಬದಲಾಗಿದ್ದು, ಇಬ್ಬರನ್ನು ಕೈಬಿಟ್ಟು ಅಚ್ಚರಿಯ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿರುವ ಕರಾವಳಿಯ ದಿನೇಶ್‌ ಅಮೀನ್‌ ಮಟ್ಟು ಅವರಿಗೆ ಮೇಲ್ಮನೆ ಅವಕಾಶ ಕೈತಪ್ಪಿದೆ. ಜಕ್ಕಪ್ಪ, ಆರತಿ ಕೃಷ್ಣ, ರಮೇಶ್ ಬಾಬು ಹಾಗೂ ಪತ್ರಕರ್ತ […]

ದಿನೇಶ್‌ ಅಮೀನ್‌ ಮಟ್ಟು ಅವರಿಗಿಲ್ಲ ವಿಧಾನ ಪರಿಷತ್‌ ಸ್ಥಾನ Read More »

ಪುತ್ತೂರು ರೋಟರಿ ಮಲ್ಟಿಸ್ಪೆಷಾಲಿಟಿ ಸ್ಯಾಟಲೈಟ್ ಡೆಂಟಲ್ ಚಿಕಿತ್ಸಾಲಯ ಉದ್ಘಾಟನೆ

ಪುತ್ತೂರು: ಸುಳ್ಯದ ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯಿಂದ ನಿರ್ವಹಿಸಲ್ಪಡುವ ಪುತ್ತೂರು ರೋಟರಿ ಮಲ್ಟಿಸ್ಪೆಷಾಲಿಟಿ ಸ್ಯಾಟಲೈಟ್ ಡೆಂಟಲ್ ಚಿಕಿತ್ಸಾಲಯದ ಉದ್ಘಾಟನೆ ಪುತ್ತೂರಿನ ಮಹಾವೀರ ವೆಂಚರ್ಸ್‌ನ ಪಾಲಿಕ್ಲಿನಿಕ್ ಆವರಣದಲ್ಲಿ ನಡೆಯಿತು. “Committee B” A.O.L.E. Kurunjibhag, Sullia ಇದರ ಚೇರ್ಮನ್ ಡಾ. ರೇಣುಕಾ ಪ್ರಸಾದ್ ಕೆ.ವಿ. ಅವರು ಉದ್ಘಾಟನೆಯನ್ನು ನಿರ್ವಹಿಸಿದರು. Rtn. ಡಾ. ಶಿವಪ್ರಕಾಶ್ ಬಿ. ಅವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಾವೀರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುರೇಶ್ ಪುತ್ತೂರಾಯ, Asst. Governor Zone V, RID

ಪುತ್ತೂರು ರೋಟರಿ ಮಲ್ಟಿಸ್ಪೆಷಾಲಿಟಿ ಸ್ಯಾಟಲೈಟ್ ಡೆಂಟಲ್ ಚಿಕಿತ್ಸಾಲಯ ಉದ್ಘಾಟನೆ Read More »

ಬಾನು ಮುಷ್ತಾಕ್‌ ದಸರಾ ಉದ್ಘಾಟಿಸುವುದಕ್ಕೆ ವಿರೋಧ : ವೈರಲ್‌ ಆಗುತ್ತಿದೆ ಹಳೆಯ ವಿಡಿಯೋ

ಕನ್ನಡವನ್ನು ಭುವನೇಶ್ವರಿಯಾಗಿ ಮಾಡಿ ದೌರ್ಜನ್ಯ ಎಸಗಿದ್ದೀರಿ ಎಂಬ ಹೇಳಿಕೆಗೆ ಟೀಕೆ ಬೆಂಗಳೂರು: ಕರ್ನಾಟಕದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಬಿಜೆಪಿ ನಾಯಕರು ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಂಬಿಕೆಯ ನೆಲೆಗಟ್ಟಿನಲ್ಲಿ ಬಾನು ಮುಷ್ತಾಕ್‌ ಅವರ ಆಯ್ಕೆಯನ್ನು ಹಲವರು ಪ್ರಶ್ನಿಸಿದ್ದಾರೆ. ಮಾಜಿ ಸಂಸದ ಪ್ರತಾಪ್‌ ಸಿಂಹ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ, ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ

ಬಾನು ಮುಷ್ತಾಕ್‌ ದಸರಾ ಉದ್ಘಾಟಿಸುವುದಕ್ಕೆ ವಿರೋಧ : ವೈರಲ್‌ ಆಗುತ್ತಿದೆ ಹಳೆಯ ವಿಡಿಯೋ Read More »

ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರದಿಂದ ಆರಂಭದಲ್ಲೇ ತಪ್ಪು ನಡೆ : ಮಾಜಿ ಸಚಿವ ತೀಕ್ಷ್ಣ ಟೀಕೆ

ತಲೆಬುರುಡೆ ಕುರಿತು ಆರಂಭದಲ್ಲಿ ಯಾಕೆ ತನಿಖೆ ಮಾಡದಿರುವುದು ಲೋಪ ಎಂದ ರಾಜಣ್ಣ ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ಆರಂಭದಲ್ಲೇ ತಪ್ಪು ಹೆಜ್ಜೆಯಿಟ್ಟಿತ್ತು ಎಂದು ಮಾಜಿ ಸಹಕಾರ ಸಚಿವ ಕೆ. ಎನ್. ರಾಜಣ್ಣ ಭಾನುವಾರ ತಮ್ಮದೇ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ. ದೇವಸ್ಥಾನ ವ್ಯಾಪ್ತಿಯಲ್ಲಿ ಶವ ಹೂತಿದ್ದೇನೆ ಎಂದು ದೂರು ನೀಡಲು‌ ಬಂದ ವ್ಯಕ್ತಿಯು ತಂದಿದ್ದ ತಲೆಬುರುಡೆಯ ಪೂರ್ವಾಪರಗಳನ್ನು ವಿಚಾರಿಸದೆ ತನಿಖೆಗೆ ಆದೇಶಿಸಿದ್ದು ಸರಿಯಾದ ಕ್ರಮವಲ್ಲ. ಭೂಮಿಯಲ್ಲಿ ಹೂತ ಮೃತದೇಹವನ್ನು ಹೊರತೆಗೆಯಲು ಕಾನೂನಿನಲ್ಲಿ ನಿರ್ದಿಷ್ಟ ನಿಯಮಗಳಿವೆ. ತಾಲೂಕು ಮ್ಯಾಜಿಸ್ಟ್ರೇಟ್ ಅನುಮತಿ

ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರದಿಂದ ಆರಂಭದಲ್ಲೇ ತಪ್ಪು ನಡೆ : ಮಾಜಿ ಸಚಿವ ತೀಕ್ಷ್ಣ ಟೀಕೆ Read More »

ಭೀಕರ ಅಪಘಾತ : 8 ಯಾತ್ರಿಕರು ಸ್ಥಳದಲ್ಲೇ ಸಾವು

ಯಾತ್ರಿಕರಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಟ್ರಕ್ ಡಿಕ್ಕಿ ಲಖನೌ: ಟ್ರ್ಯಾಕ್ಟರ್ ಟ್ರಾಲಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಯಾತ್ರಿಕರು ಸಾವನ್ನಪ್ಪಿ, 43 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ನಡೆದಿದೆ. ಅರ್ನಿಯಾ ಬೈಪಾಸ್ ಬಳಿಯ ಬುಲಂದ್‌ಶಹರ್-ಅಲಿಗಢ ಗಡಿಯಲ್ಲಿ ಸೋಮವಾರ ನಸುಕಿನ ಜಾವ 2.10ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಗಾಯಗೊಂಡಿರುವ ಯಾತ್ರಿಕರ ಪೈಕಿ 12 ಮಂದಿ ಮಕ್ಕಳು. ಕ್ಯಾಂಟರ್ ಟ್ರಕ್ ಹಿಂದಿನಿಂದ ಟ್ರ‍್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದ ಪರಿಣಾಮ

ಭೀಕರ ಅಪಘಾತ : 8 ಯಾತ್ರಿಕರು ಸ್ಥಳದಲ್ಲೇ ಸಾವು Read More »

ಕೆಜಿಎಫ್‌ ಖ್ಯಾತಿಯ ನಟ ದಿನೇಶ್‌ ಮಂಗಳೂರು ನಿಧನ

ಯಶ್‌, ಪುನೀತ್‌ ರಾಜ್‌ಕುಮಾರ್‌ ಮುಂತಾದವರ ಜೊತೆ ನಟಿಸಿದ್ದ ಪ್ರತಿಭಾವಂತ ಉಡುಪಿ : ಕನ್ನಡ ಚಿತ್ರರಂಗದ ನಟ ಮತ್ತು ಕಲಾ ನಿರ್ದೇಶಕ ದಿನೇಶ್ ಮಂಗಳೂರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ, ‘ಕೆಜಿಎಫ್’ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ದಿನೇಶ್ ಮಂಗಳೂರು ನಟಿಸಿದ್ದರು. ಆಗಸ್ಟ್ 25ರಂದು ಬೆಳಗ್ಗೆ ಕುಂದಾಪುರದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉಡುಪಿ ಜಿಲ್ಲೆಯ ಕುಂದಾಪುರದ ತಮ್ಮ ಮನೆಯಲ್ಲಿ ಇಂದು ಬೆಳಗ್ಗೆ ನಿಧನ ಹೊಂದಿದರು. ಕಲಾ ನಿರ್ದೇಶಕ, ಕಲಾವಿದ, ನಿರ್ಮಾಪಕ,

ಕೆಜಿಎಫ್‌ ಖ್ಯಾತಿಯ ನಟ ದಿನೇಶ್‌ ಮಂಗಳೂರು ನಿಧನ Read More »

ಕಾಂಗ್ರೆಸ್‌ನಲ್ಲಿ ಕೋಲಾಹಲ ಎಬ್ಬಿಸಿದ ʼನಮಸ್ತೇ ಸದಾ ವತ್ಸಲೇ…ʼ

ಡಿಕೆಶಿ ಹಾಡಿದ ಆರ್‌ಎಸ್‌ಎಸ್‌ ಗೀತೆಯಿಂದ ಕೈ ಪಡೆಯಲ್ಲಿ ಕಿಡಿ ಬೆಂಗಳೂರು : ವಿಧಾನಸಭೆ ಕಲಾಪದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಡಿದ ಆರ್‌ಎಸ್‌ಎಸ್‌ನ ಧ್ಯೇಯಗೀತೆ ನಮಸ್ತೆ ಸದಾ ವತ್ಸಲೇ… ಕಾಂಗ್ರೆಸ್‌ನೊಳಗೆ ವಿವಾದದ ಕಿಡಿ ಹೊತ್ತಿಸಿದೆ. ಬಿಜೆಪಿಯವರು ಡಿಕೆಶಿ ನಡೆಯನ್ನು ವ್ಯಂಗ್ಯವಾಗಿಯಾದರೂ ಸ್ವಾಗತಿಸಿದ್ದರೆ, ಸದಾ ಆರ್‌ಎಸ್‌ಎಸ್‌ನ್ನು ದ್ವೇಷಿಸುತ್ತಿರುವ ಕಾಂಗ್ರೆಸ್‌ನ ಕೆಲವು ನಾಯಕರಿಗೆ ಮಾತ್ರ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರ್​​ಸಿಬಿ ವಿಜಯೋತ್ಸವ ಕಾಲ್ತುಳಿತ ಘಟನೆ ಚರ್ಚೆ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ನಮಸ್ತೇ ಸದಾ ವತ್ಸಲೇ… ಎಂದು ಆರ್​​ಎಸ್​ಎಸ್ ಗೀತೆ ಹಾಡಿದ್ದಾರೆ. ಅದು ಸಾಂದರ್ಭಿಕವಾಗಿ

ಕಾಂಗ್ರೆಸ್‌ನಲ್ಲಿ ಕೋಲಾಹಲ ಎಬ್ಬಿಸಿದ ʼನಮಸ್ತೇ ಸದಾ ವತ್ಸಲೇ…ʼ Read More »

ಮಂಗಳೂರು : ಸಮುದ್ರದಲ್ಲಿ ಮುಳುಗಿ ಯುವಕ ಸಾವು, ಮೂವರ ರಕ್ಷಣೆ

ಸಸಿಹಿತ್ಲು ಬೀಚ್‌ನಲ್ಲಿ ಸಂಭವಿಸಿದ ದುರಂತ ಮಂಗಳೂರು: ಇಲ್ಲಿನ ಸಸಿಹಿತ್ಲು ಮೂಂಡಾ ಬೀಚ್ ಬಳಿ ಸಮುದ್ರಕ್ಕೆ ಇಳಿದಿದ್ದ 4 ಮಂದಿಯ ಪೈಕಿ ಓರ್ವ ಮೃತಪಟ್ಟು ಮೂವರನ್ನು ಸ್ಥಳೀಯರು ರಕ್ಷಿಸಿದ ಘಟನೆ ಎಂಬಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಮೃತ ಯುವಕ ಪಡುಪಣಂಬೂರು ಕಜಕತೋಟ ನಿವಾಸಿ ದಿ.ಅನ್ವರ್ ಎಂಬವರ ಪುತ್ರ ಮುಹಮ್ಮದ್ ಸಮೀರ್ (23) ಎಂದು ತಿಳಿದು ಬಂದಿದೆ. ಪಡುಪಣಂಬೂರು ಕಜಕತೋಟ ನಿವಾಸಿ ಅಬೂಬಕರ್ ಎಂಬವರ ಪುತ್ರ ಐಮಾನ್ (23), ಕಜಕತೋಟ ನಿವಾಸಿ ರಯೀಸ್ (22), ಹಳೆಯಂಗಡಿ ಬೊಳ್ಳೂರು ನಿವಾಸಿ ಹನೀಫ್

ಮಂಗಳೂರು : ಸಮುದ್ರದಲ್ಲಿ ಮುಳುಗಿ ಯುವಕ ಸಾವು, ಮೂವರ ರಕ್ಷಣೆ Read More »

ಸುಳ್ಯ : ಕೆಂಪುಕಲ್ಲು ಅಕ್ರಮವಾಗಿ ಸಾಗಿಸುತ್ತಿದ್ದ 4 ಲಾರಿಗಳು ವಶ

ಸುಳ್ಯ : ಕೆಂಪುಕಲ್ಲು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ನಾಲ್ಕು ಲಾರಿಗಳನ್ನು ಸುಳ್ಯ ಪೊಲೀಸರು ವಶಪಡಿಸಿಕೊಂಡ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಭಾನುವಾರ ನಡೆದಿದೆ. ಮಿಂಚಪದವಿನಿಂದ ಸುಳ್ಯದ ಕಡೆ ಬರುತ್ತಿದ್ದ ಲಾರಿಗಳಲ್ಲಿ ಅಕ್ರಮವಾಗಿ ಕೆಂಪುಕಲ್ಲು ಸಾಗಾಟ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸುಳ್ಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ಲಾರಿಗಳನ್ನು ವಶಪಡಿಸಿದ್ದು ಸುಳ್ಯ ಪೊಲೀಸ್ ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಳ್ಯ : ಕೆಂಪುಕಲ್ಲು ಅಕ್ರಮವಾಗಿ ಸಾಗಿಸುತ್ತಿದ್ದ 4 ಲಾರಿಗಳು ವಶ Read More »

ಕೊಲೆ ಆರೋಪಿಯನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಪರಿಚಯಿಸಿದ ಮಟ್ಟಣ್ಣವರ್‌

ವಿಡಿಯೋ ಭಾರಿ ವೈರಲ್‌ ಧರ್ಮಸ್ಥಳ : ಧರ್ಮಸ್ಥಳ ವಿರುದ್ಧ ನಡೆಸುತ್ತಿರುವ ಹೋರಾಟದ ಮುಂಚೂಣಿಯಲ್ಲಿರುವ ಗಿರೀಶ್‌ ಮಟ್ಟಣ್ಣನವರ್‌ ಕೊಲೆ ಆರೋಪಿಯನ್ನು ತನ್ನ ಜೊತೆ ಇಟ್ಟುಕೊಂಡು ಆತನನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಎಂದು ಪರಿಚಯಿಸಿದ ವಿಡಿಯೋ ಒಂದು ನಿನ್ನೆಯಿಂದ ವೈರಲ್‌ ಆಗಿದ್ದು, ಅವರು ನಡೆಸುತ್ತಿರುವ ಹೋರಾಟದ ಸಾಚಾತನವನ್ನು ಬಯಲುಗೊಳಿಸಿದೆ. ಮಾಧ್ಯಮಗಳ ಜೊತೆಗೆ ಮಾತನಾಡುವಾಗ ರೌಡಿಶೀಟರ್‌ ಒಬ್ಬನನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಗಿರೀಶ್ ಮಟ್ಟಣ್ಣನವರ್ ಪರಿಚಯಿಸಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡುವ ವೇಳೆ ತಮ್ಮ ಪಕ್ಕದಲ್ಲಿ ನಿಂತಿದ್ದ ಮದನ ಬುಗಡಿ

ಕೊಲೆ ಆರೋಪಿಯನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಪರಿಚಯಿಸಿದ ಮಟ್ಟಣ್ಣವರ್‌ Read More »

error: Content is protected !!
Scroll to Top