ಆರು ಸಾವಿರ ಮತದಾರರನ್ನು ಡಿಲೀಟ್ ಮಾಡಿಲ್ಲ, ಅರ್ಜಿ ತಿರಸ್ಕರಿಸಲಾಗಿದೆ : ರಾಹುಲ್ ಗಾಂಧಿ ಆರೋಪಕ್ಕೆ ಸ್ಪಷ್ಟನೆ
ಆನ್‌ಲೈನ್ ಮೂಲಕ ಮತದಾರರ ಹೆಸರು ಅಳಿಸುವುದು ಅಸಾಧ್ಯ ಎಂದ ಚುನಾವಣಾ ಆಯೋಗ ಬೆಂಗಳೂರು: ಕರ್ನಾಟಕದ ಆಳಂದದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಕುರಿತು ರಾಹುಲ್ ಗಾಂಧಿ ಮಾಡಿರುವ ಆರೋಪಗಳಿಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ನಿನ್ನೆ ದೆಹಲಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಆರು ಸಾವಿರಕ್ಕೂ ಅಧಿಕ ಮತಕಳ್ಳತನವಾಗಿದೆ. ಮತದಾರರ ಹೆಸರುಗಳನ್ನು ಆನ್‌ಲೈನ್ ಮೂಲಕ ಅಳಿಸಿ ಹಾಕಲಾಗಿದೆ ಎಂದು ಆರೋಪಿಸಿ ಇದಕ್ಕೆ ಇಬ್ಬರು ಸಾಕ್ಷಿಧಾರರನ್ನೂ ಹಾಜರುಪಡಿಸಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ […]










