ಸುದ್ದಿ

ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ವಿರುದ್ಧ ವಕೀಲರುಗಳ ‌ಪ್ರತಿಭಟನೆ

ಮದ್ದೂರು: ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವರು ನ್ಯಾಯಾಧೀಶರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರ ಹೇಳಿಕೆಯನ್ನು ಖಂಡಿಸಿ ಮದ್ದೂರಿನಲ್ಲಿ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ವಕೀಲರುಗಳು ಪ್ರತಿಭಟನೆ ನಡೆಸಿದರು. ಕಲುಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ RSS ಕಾರ್ಯಕರ್ತರು ಪಥ ಸಂಚಲನಕ್ಕೆ ಅವಕಾಶ ಮಾಡಿಕೊಡುವಂತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ. ಆರ್‌ಎಸ್‌ಎಸ್‌ ಪರವಾಗಿ ತೀರ್ಪು ನೀಡುವುದು ಸರಿಯಲ್ಲ ಎಂದು ಅವಹೇಳನಕಾರಿಯಾಗಿ ಸ್ವಾಮೀಜಿ ಮಾತನಾಡಿದ್ದಾರೆ. ಸ್ವಾಮೀಜಿ ಹೇಳಿಕೆ ಖಂಡಿಸಿ ಮದ್ದೂರು ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿರುವುದಾಗಿದೆ.<

ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ವಿರುದ್ಧ ವಕೀಲರುಗಳ ‌ಪ್ರತಿಭಟನೆ Read More »

ಬಿಜೆಪಿ ಯುವಕರ ಸಬಲೀಕರಣಕ್ಕಾಗಿ ‌ಶ್ರಮಿಸುತ್ತಿದೆ: ಪ್ರಧಾನಿ ಮೋದಿ

ನವದೆಹಲಿ: ಯುವಕರ ಸಬಲೀಕರಣಕ್ಕೆ ಬಿಜೆಪಿ ಶ್ರಮಿಸುತ್ತಿದೆ. ದೇಶದ ವಿದೇಶಾಂಗ ನೀತಿಯನ್ನು ಸಹ ಯುವಜನರ ಹಿತಾಸಕ್ತಿಗೆ ‌ಅನುಗುಣವಾಗಿ ರೂಪಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರೋಜ್‌ಗಾ‌ರ್ ಮೇಳದಲ್ಲಿ ಧ್ವನಿಮುದ್ರಿತ ಸಂದೇಶ ನೀಡಿದ ಪ್ರಧಾನಿ, ಭಾರತ ಪ್ರಪಂಚದ ಅತ್ಯಂತ ಕಿರಿಯ ರಾಷ್ಟ್ರವಾಗಿದ್ದು, ಅದರ ಯುವಶಕ್ತಿಯ ಶಕ್ತಿಯು ಒಂದು ದೊಡ್ಡ ಆಸ್ತಿಯಾಗಿದೆ ಎಂದಿದ್ದಾರೆ. ನಂಬಿಕೆ ಮತ್ತು ವಿಶ್ವಾಸದೊಂದಿಗೆ, ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದೇವೆ. ನಮ್ಮ ವಿದೇಶಾಂಗ ನೀತಿಯನ್ನು ಸಹ ಭಾರತದ ಯುವಜನರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗುತ್ತಿದೆ. ನಮ್ಮ ರಾಜತಾಂತ್ರಿಕ ತೊಡಗಿಸಿಕೊಳ್ಳುವಿಕೆಗಳು ಮತ್ತು

ಬಿಜೆಪಿ ಯುವಕರ ಸಬಲೀಕರಣಕ್ಕಾಗಿ ‌ಶ್ರಮಿಸುತ್ತಿದೆ: ಪ್ರಧಾನಿ ಮೋದಿ Read More »

ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ: ಯುವಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ವಿಟ್ಲ: ಅನಂತಾಡಿಯ ಬಾಬನಕಟ್ಟೆಯಲ್ಲಿ ಯುವಕನೊಬ್ಬ ಸಮಯ ಪ್ರಜ್ಞೆ ಮೆರೆದ ಪರಿಣಾಮ ಗ್ಯಾಸ್ ಸಿಲಿಂಡರ್ ಅವಘಡದಿಂದ ಕುಟುಂಬವೊಂದು ಪಾರಾದ ಘಟನೆ ನಡೆದಿದೆ. ಹಿರ್ತಂದ ಬೈಲು ಎಂಬಲ್ಲಿ ಅ.22ರಂದು ರಾತ್ರಿ 9.45ರ ಸುಮಾರಿಗೆ ಘಟನೆ ನಡೆದಿದೆ. ಘಟನೆಯಲ್ಲಿ ಸಮಯಪ್ರಜ್ಞೆ ಮೆರೆದ ಯುವಕ ಜಯರಾಜ್‌ನ ಮುಖ ಹಾಗೂ ಕೈಗೆ ಗಾಯಗಳಾಗಿದೆ. ಘಟನೆಯಲ್ಲಿ ದ್ವಿಚಕ್ರವಾಹನ ಸಹಿತ ಮನೆಯಲ್ಲಿದ್ದ ಹಲವು ಉಪಕರಣಗಳಿಗೆ ಹಾನಿಯಾಗಿದೆ. ತಾಯಿ ಸುಶೀಲ ಜೊತೆ ಜಯರಾಜ್ ವಾಸ್ತವ್ಯವಿರುವ ಮನೆಯಲ್ಲಿ ಅ.22ರಂದು ಗ್ಯಾಸ್ ಸಿಲಿಂಡ‌ರ್ ಮುಗಿದ ಹಿನ್ನೆಲೆಯಲ್ಲಿ ಹೊಸ ಸಿಲಿಂಡ‌ರ್ ಅಳವಡಿಸಿದ್ದು, ರೆಗ್ಯೂಲೇಟ‌ರ್

ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ: ಯುವಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ Read More »

ಅಕ್ಷಯ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ” Com- Acumen 2k25″  ಇಂಟ್ರಾ ಡಿಪಾರ್ಟ್ಮೆಂಟ್ ಕಾಮರ್ಸ್ ಫೆಸ್ಟ್ :

ಅಕ್ಷಯ ಕಾಲೇಜು ಪುತ್ತೂರು ಇಲ್ಲಿನಾ ವಾಣಿಜ್ಯ ವಿಭಾಗದ ಇನ್ವಿಕ್ತಾ ಕಾಮರ್ಸ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ  ‘ಕಾಮ್ ಅಕ್ಯೂಮನ್ 2K25  . ಇನ್ಟ್ರಾ ಡಿಪಾರ್ಟ್ಮೆಂಟ್ ವಾಣಿಜ್ಯ ಫೆಸ್ಟ್  ನಡೆಯಿತು. ಈ ಕಾರ್ಯಕ್ರಮವನ್ನು ಶ್ರೀ ಮತಿ ಕಲಾವತಿ ಜಯಂತ್ ಇವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು  ತಯಾರಿಸಿದ  ತಮ್ಮ  ಸಂಘದ ಲೋಗೋ ಮತ್ತು ರೋಲಿಂಗ್ ಟ್ರೋಫಿಯನ್ನು ಬಿಡುಗಡೆ ಮಾಡಲಾಯಿತು ಸಮರೋಪ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿಹಾಲ್ ಪಿ ಶೆಟ್ಟಿ ಉದ್ಯಮಿ ಸದಸ್ಯರು ಪುತ್ತೂರು

ಅಕ್ಷಯ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ” Com- Acumen 2k25″  ಇಂಟ್ರಾ ಡಿಪಾರ್ಟ್ಮೆಂಟ್ ಕಾಮರ್ಸ್ ಫೆಸ್ಟ್ : Read More »

ಸುರತ್ಕಲ್ ಬಾರ್‌ನಲ್ಲಿ ಗಲಾಟೆ: ಓರ್ವನಿಗೆ ಇರಿತ

ಸುರತ್ಕಲ್: ನಗರದ ಬಾರೊಂದರ ಸಮೀಪ ನಿನ್ನೆ ರಾತ್ರಿ ಸುಮಾರು 11 ಗಂಟೆ ವೇಳೆಗೆ ವ್ಯಕ್ತಿಯೊಬ್ಬರಿಗೆ ಇರಿದ ಘಟನೆ ನಡೆದಿದೆ. ಇರಿತಕ್ಕೆ ಒಳಗಾದ ವ್ಯಕ್ತಿಯನ್ನು ಮುಖೀದ್ ಎಂದು ಗುರುತಿಸಲಾಗಿದೆ. ಮುಖೀದ್ ಮತ್ತು ಇನ್ನಿಬ್ಬರು ಬಾರ್‌ನಲ್ಲಿದ್ದ ವೇಳೆ, ಅಪರಿಚಿತ ನಾಲ್ವರ ಜೊತೆ ವಾಗ್ವಾದ ಹತ್ತಿಕೊಂಡಿದೆ. ಈ ಗಲಾಟೆ ಬಾರ್ ಹೊರಗೆಯೂ ಮುಂದುವರಿದಿದ್ದು, ಒಬ್ಬ ಆರೋಪಿ ಮುಖೀದ್‌ನಿಗೆ ಇರಿದಿದ್ದಾನೆ. ಮುಖೀದ್ ಜೊತೆಗಿದ್ದ ‌ನಿಜಾಮ್ ಎಂಬವನಿಗೂ ಈ ವೇಳೆ ಗಾಯವಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರತ್ಕಲ್ ಬಾರ್‌ನಲ್ಲಿ ಗಲಾಟೆ: ಓರ್ವನಿಗೆ ಇರಿತ Read More »

ಖಾಸಗಿ ಬಸ್ಸಿಗೆ ಬೆಂಕಿ: 20 ಮಂದಿ ಸಾವು, ಹಲವರಿಗೆ ಗಾಯ

ಬೆಂಗಳೂರು: ಆಂಧ್ರ ಪ್ರದೇಶದ ಕರ್ನೂಲ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ ಹತ್ತಿಕೊಂಡು 20 ಮಂದಿ ದಹನವಾಗಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಬಸ್ಸಿನಲ್ಲಿ 42 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಖಾಸಗಿ ಬಸ್‌ಗೆ ಬೆಂಕಿ ಹತ್ತಿದ್ದು ಇದರಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಬಸ್ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೋಗುತ್ತಿತ್ತು. ಬೆಳಗ್ಗಿನ ಜಾವ 3.30 ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಬಸ್ಸಿಗೆ ದ್ವಿಚಕ್ರ ವಾಹನವೊಂದು ಢಿಕ್ಕಿಯಾಗಿದೆ ಎಂದು ಹೇಳಲಾಗುತ್ತಿದೆ. ಈ ಅಪಘಾತದ ಪರಿಣಾಮ ಬೈಕ್

ಖಾಸಗಿ ಬಸ್ಸಿಗೆ ಬೆಂಕಿ: 20 ಮಂದಿ ಸಾವು, ಹಲವರಿಗೆ ಗಾಯ Read More »

ಅಯೋಧ್ಯೆ: ಶ್ರೀ ರಾಮ ದರ್ಶನ, ಆರತಿ ಸಮಯ ಬದಲಾವಣೆ

ಲಕ್ನೋ: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ರಾಮ ಲಲ್ಲಾನ ದರ್ಶನ ಮತ್ತು ಆರತಿಯ ಸಮಯವನ್ನು ಬದಲಾವಣೆ ಮಾಡಿರುವುದಾಗಿ ದೇವಾಲಯದ ಟ್ರಸ್ಟ್ ತಿಳಿಸಿದೆ. ಶರತ್ಕಾಲದ ಹಿನ್ನೆಲೆಯಲ್ಲಿ ಮಂದಿರದ ಬಾಗಿಲು ತೆರೆಯುವ ಮತ್ತು ಮುಚ್ಚುವ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ. ಬೆಳಗ್ಗೆ 4.30 ಕ್ಕೆ ಆರತಿ, 6.30 ಕ್ಕೆ ಶೃಂಗಾರ ಆರತಿ ನಡೆಯಲಿದೆ. ಭಕ್ತರಿಗೆ 7 ಗಂಟೆಯಿಂದ ದೇವಾಲಯಕ್ಕೆ ಪ್ರವೇಶ ನೀಡಲು ಟ್ರಸ್ಟ್ ನಿರ್ಧರಿಸಿದೆ. ಉಳಿದಂತೆ ಬಾಗಿಲು ಮುಚ್ಚುವ ಸಮಯ ಹಿಂದಿನಂತೆಯೇ ಮುಂದುವರಿಯಲಿದೆ.

ಅಯೋಧ್ಯೆ: ಶ್ರೀ ರಾಮ ದರ್ಶನ, ಆರತಿ ಸಮಯ ಬದಲಾವಣೆ Read More »

ಅಸಿಯಾನ್ ಶೃಂಗಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸುತ್ತೇನೆ: ಪ್ರಧಾನಿ ಮೋದಿ

ನವದೆಹಲಿ: ಆಗ್ನೇಯ ಏಷ್ಯಾ ರಾಷ್ಟ್ರಗಳ ಶೃಂಗಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸುವುದಾಗಿ ಹೇಳುವ ಮೂಲಕ ಅಮೆರಿಕಾ ಅಧ್ಯಕ್ಷ ಟ್ರಂಪ್ ಆಸೆಗೆ ಪ್ರಧಾನಿ ಮೋದಿ ತಣ್ಣೀರೆರಚಿದ್ದಾರೆ. ಮಲೇಷ್ಯಾದಲ್ಲಿ ಅ. 26 – 28 ರ ವರೆಗೆ ಅಸಿಯಾನ್ ಶೃಂಗಸಭೆ ನಡೆಯಲಿದ್ದು, ಇದರಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಸ್ವತಃ ಪ್ರಧಾನಿ ಮೋದಿ ಅವರೇ ಟ್ವೀಟ್ ಮಾಡಿದ್ದು, ತಾನು ಈ‌ ಶೃಂಗಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ. ಕಳೆದ ವಾರವಷ್ಟೇ ಟ್ರಂಪ್ ಮುಂದಿನ ವಾರ ನಾನು ಪ್ರಧಾನಿ

ಅಸಿಯಾನ್ ಶೃಂಗಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸುತ್ತೇನೆ: ಪ್ರಧಾನಿ ಮೋದಿ Read More »

ಖಾದ್ಯ ತೈಲ ನೋಂದಣಿ ಕಡ್ಡಾಯ: ಪ್ರಲ್ಹಾದ ಜೋಶಿ

ನವದೆಹಲಿ: ಕೇಂದ್ರ ಸರ್ಕಾರವು ಖಾದ್ಯ ತೈಲ ವಲಯದಲ್ಲಿ ಪಾರದರ್ಶಕತೆ, ನಿಯಂತ್ರಣ, ಮೇಲ್ವಿಚಾರಣೆಗಾಗಿ 2011 ರ VOPPA ಆದೇಶಕ್ಕೆ ‌ತಿದ್ದುಪಡಿ ತಂದಿದೆ. ಈ ಆದೇಶ ಪಾಲನೆ ಮಾಡದವರ ‌ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನೀಡಿದ್ದಾರೆ. ಎಲ್ಲಾ ಖಾದ್ಯ ತೈಲ ತಯಾರಕರು, ಸಂಸ್ಕರಣ ಘಟಕಗಳು, ಮಿಶ್ರಣಕಾರರು, ಮರು ಪ್ಯಾಕರ್‌ಗಳು ಮೊದಲಾದ ಪಾಲುದಾರರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಹಾಗೆಯೇ ಆನ್ಲೈನ್ ಪೋರ್ಟಲ್ ಮೂಲಕ ಮಾಸಿಕ ಉತ್ಪಾದನೆ, ಸ್ಟಾಕ್ ರಿಟರ್ನ್ ಸಲ್ಲಿಕೆ ಸಹ ಮಾಡಬೇಕು ಎಂದು ಸೂಚಿಸಲಾಗಿದೆ.

ಖಾದ್ಯ ತೈಲ ನೋಂದಣಿ ಕಡ್ಡಾಯ: ಪ್ರಲ್ಹಾದ ಜೋಶಿ Read More »

ಜನಮನ ಗೆದ್ದ ಮಕ್ಕಳ ರಂಗ ನಾಟಕ ಗೊಂಬೆರಾವಣ

ಪುತ್ತೂರು: ರಾಜ್ಯ ಯುವ ಪ್ರಶಸ್ತಿ ವಿಜೇತ ರಂಗ ನಿರ್ದೇಶಕ ವಿದ್ದು ಉಚ್ಚಿಲ ರವರ ನಿರ್ದೇಶನದಲ್ಲಿ, ಡ್ಯಾನ್ಸ್ & ಬೀಟ್ಸ್ ಬೆಳ್ಳಾರೆ ನೇತೃತ್ವದಲ್ಲಿ “ಮುದ್ರಾರಂಗ” ಚಿಣ್ಣರ ನಿರಂತರ ಯಾನ- ಮಕ್ಕಳ ರಂಗ ನಾಟಕ ತಂಡ ಬೆಳ್ಳಾರೆ ಇದರ ಮೊದಲ ಮೆಗಾ ಶೋ ನಾಟಕ ಗೊಂಬೆರಾವಣ ಪೆರುವಾಜೆಯ ಜೆ.ಡಿ. ಆಡಿಟೋರಿಯಂನಲ್ಲಿ ಪ್ರದರ್ಶನಗೊಂಡಿತು. ನಾಟಕಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮ ನಡೆಯಿತು.ನಾಟಕ ರಚನೆಯ ವಿವಿಧ ರಂಗಗಳಲ್ಲಿ ದುಡಿದ ಕಲಾವಿದರನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮವನ್ನು ಕಲ್ಮಡ್ಕ ರಂಗ ಸುರಭಿಯ, ನಿನಾಸಂ ಪದವಿಧರರಾದ ಮಹಾಭಲ

ಜನಮನ ಗೆದ್ದ ಮಕ್ಕಳ ರಂಗ ನಾಟಕ ಗೊಂಬೆರಾವಣ Read More »

error: Content is protected !!
Scroll to Top