ಸುದ್ದಿ

ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಮುಸ್ಲಿಂ ಸಮುದಾಯದ ಓಲೈಕೆ: ಅರವಿಂದ್ ಬೆಲ್ಲದ್ ಆಕ್ರೋಶ

ಧಾರವಾಡ: ರಾಜ್ಯ ಸರ್ಕಾರ ಮುಸ್ಲಿಂ ಓಲೈಕೆಯಲ್ಲೇ ಆಡಳಿತ ನಡೆಸುತ್ತಿದ್ದು, ಈಗ ಸರ್ಕಾರಿ ಕಾರ್ಯಕ್ರಮದಲ್ಲೇ ಕುರಾನ್ ಪಠಣಕ್ಕೆ ಅವಕಾಶ ನೀಡುವ ಮೂಲಕ ತಮ್ಮ ಧ್ಯೇಯವೇ ಮುಸ್ಲಿಂ ತುಷ್ಟೀಕರಣ ಎಂದು ಸಾರ್ವಜನಿಕರಿಗೆ ತೋರಿಸಿದ್ದಾರೆ ಎಂದು ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ಹೇಳಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಿಗೆ ಅದರದ್ದೇ ಆದ ರೀತಿ, ನೀತಿಗಳಿವೆ. ಆದರೆ ಹುಬ್ಬಳ್ಳಿಯ ವಿಶಾಲ್ ನಗರದಲ್ಲಿ ಇತ್ತೀಚೆಗೆ ಆಯೋಜನೆ ಮಾಡಿದ್ದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಒಂದು ವರ್ಗದ ಓಲೈಕೆಗಾಗಿ ನಿಯಮಗಳನ್ನು ಗಾಳಿಗೆ […]

ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಮುಸ್ಲಿಂ ಸಮುದಾಯದ ಓಲೈಕೆ: ಅರವಿಂದ್ ಬೆಲ್ಲದ್ ಆಕ್ರೋಶ Read More »

RSS ಮುಖಂಡ ಪ್ರೊ. ಕೃ. ನರಹರಿ ನಿಧನ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ, ಮಾಜಿ ಪರಿಷತ್ ಸದಸ್ಯ ಪ್ರೊ. ಕೃ. ನರಹರಿ(93) ಅವರು ನಿಧನರಾಗಿದ್ದಾರೆ‌. ಬೆಂಗಳೂರಿನಲ್ಲಿರುವ ತಮ್ಮ ಸ್ವ ಗೃಹದಲ್ಲಿ ವಯೋಸಹಜ ಸಮಸ್ಯೆಗಳಿಂದ ಅವರು ಇಹಲೋಕ ತ್ಯಜಿಸಿದ್ದಾರೆ. ಅವರು ಈ ಹಿಂದೆ RSS ನ ಕ್ಷೇತ್ರೀಯ ಕಾರ್ಯವಾಹರಾಗಿ, ರಾಷ್ಟ್ರೀಯ ಶಿಕ್ಷಕ ಮಹಾಸಂಘದ ಅಖಿಲ ಭಾರತೀಯ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು. ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟ ನಡೆಸಿ ಜೈಲು ವಾಸ ಅನುಭವಿಸಿದ್ದರು‌. ಶ್ರೀಯುತರ ನಿಧನಕ್ಕೆ

RSS ಮುಖಂಡ ಪ್ರೊ. ಕೃ. ನರಹರಿ ನಿಧನ Read More »

ಬಿಗ್‌ ಬಾಸ್‌ ಮನೆಗೆ ಬೀಗ ಜಡಿದಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ವ್ಯವಹಾರಕ್ಕೆ ಹಾನಿ ಮಾಡುವ ಉದ್ದೇಶದಿಂದ ಕ್ರಮ ಎಂದು ಆರೋಪ ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಮಾಡಿದ್ದು ಅಲ್ಲದೆ, ಪೋಲಿಸ್ ಇಲಾಖೆಯ ಅನುಮತಿ ಪಡೆಯದೆ ಕನ್ನಡ ಬಿಗ್ ಬಾಸ್ ಸೀಸನ್ 12 ರಿಯಾಲಿಟಿ ಶೋ ಆರಂಭಿಸಿದ್ದಕ್ಕಾಗಿ ನಿನ್ನೆ ರಾಮನಗರದ ಜಾಲಿವುಡ್‌ ಸ್ಟುಡಿಯೋದಲ್ಲಿದ್ದ ಬಿಗ್ ಬಾಸ್ ಮನೆಗೆ ಬೀಗ ಜಡಿಯಲಾಗಿತ್ತು. ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ದನ್ನು ಪ್ರಶ್ನಿಸಿ ಇಂದು ಕರ್ನಾಟಕ ಹೈಕೋರ್ಟಿಗೆ ಕಾರ್ಯಕ್ರಮದ ಆಯೋಜಕರು ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇಂದೇ ತುರ್ತು ವಿಚಾರಣೆ ಮಾಡುವಂತೆ

ಬಿಗ್‌ ಬಾಸ್‌ ಮನೆಗೆ ಬೀಗ ಜಡಿದಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ Read More »

ಮಮ್ಮುಟ್ಟಿ, ದುಲ್ಕರ್‌ ಸಲ್ಮಾನ್‌, ಪೃಥ್ವಿರಾಜ್‌ ಮನೆಗೆಳ ಇ.ಡಿ. ದಾಳಿ

ಬೆಳ್ಳಂಬೆಳಗ್ಗೆ ಮಲಯಾಳಂ ಸೂಪರ್‌ಸ್ಟಾರ್‌ಗಳಿಗೆ ಇ.ಡಿ. ದಾಳಿಯ ಶಾಕ್‌ ತಿರುವನಂತಪುರ: ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್‌ಗಳಾದ ಮಮ್ಮುಟ್ಟಿ, ಪೃಥ್ವಿರಾಜ್‌ ಸುಕುಮಾರನ್‌, ಮಮ್ಮುಟ್ಟಿಯವರ ಮಗ ನಟ ದುಲ್ಕರ್‌ ಸಲ್ಮಾನ್‌ ಮನೆ ಮತ್ತು ಕಚೇರಿಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. ಕೇರಳದಲ್ಲಿ ಕಳೆದ ಕೆಲ ದಿನಗಳಿಂದ ಸಿನಿಮಾ ತಾರೆಯರು ಒಳಗೊಂಡಿರುವ ಸ್ಮಗ್ಲಿಂಗ್ ಪ್ರಕರಣ ಸದ್ದು ಮಾಡುತ್ತಿದೆ. ವಿದೇಶಗಳ ಐಷಾರಾಮಿ ಕಾರುಗಳನ್ನು ಅಕ್ರಮವಾಗಿ ಖರೀದಿ ಮಾಡಲಾಗಿದೆ ಎಂಬ ಗುಮಾನಿಯ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಕೆಲ ವಾರಗಳ ಹಿಂದಷ್ಟೆ ದುಲ್ಕರ್ ಸಲ್ಮಾನ್,

ಮಮ್ಮುಟ್ಟಿ, ದುಲ್ಕರ್‌ ಸಲ್ಮಾನ್‌, ಪೃಥ್ವಿರಾಜ್‌ ಮನೆಗೆಳ ಇ.ಡಿ. ದಾಳಿ Read More »

ಮಾರಕ ಕಫ್‌ ಸಿರಪ್‌ಗೆ ಮತ್ತೆ 6 ಮಕ್ಕಳು ಬಲಿ

ಮಧ್ಯಪ್ರದೇಶವೊಂದರಲ್ಲೇ ಒಟ್ಟು 20 ಮಕ್ಕಳನ್ನು ಬಲಿತೆಗೆದುಕೊಂಡ ಕೆಮ್ಮಿನ ಕಷಾಯ ಭೋಪಾಲ್: ಮಧ್ಯಪ್ರದೇಶದಲ್ಲಿ ಮಾರಕ ಕೆಮ್ಮಿನ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮತ್ತೆ 6 ಮಕ್ಕಳು ಸಾವನ್ನಪ್ಪಿದ್ದು, ಈ ರಾಜ್ಯದಲ್ಲಿ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಈ ಮೊದಲು ಮಧ್ಯಪ್ರದೇಶದ ಛಿಂದ್ವಾಡದ 14 ಮಕ್ಕಳು ವಿಷಕಾರಿ ಕೆಮ್ಮಿನ ಸಿರಪ್ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ದೃಢಪಡಿಸಿತ್ತು. ಅದಾದ ಬಳಿಕ ಮತ್ತೆ ಮಂಗಳವಾರ ಛಿಂದ್ವಾಡದಲ್ಲಿ 4 ಹಾಗೂ ಬೇತುಲ್‌ನಲ್ಲಿ 2 ಮಕ್ಕಳು ಸಾವನ್ನಪ್ಪಿವೆ. ಇನ್ನೂ 6

ಮಾರಕ ಕಫ್‌ ಸಿರಪ್‌ಗೆ ಮತ್ತೆ 6 ಮಕ್ಕಳು ಬಲಿ Read More »

ಮಚ್ಚಿನಿಂದ ಕೊಚ್ಚಿ ಬಿಜೆಪಿ ನಾಯಕನ ಬರ್ಬರ ಹತ್ಯೆ

ಬೆಂಗಳೂರು : ಸಿನಿಮಿಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ. ವೆಂಕಟೇಶ ಕುರುಬರ (31) ವರ್ಷ ಕೊಲೆಯಾದ ಬಿಜೆಪಿ ನಾಯಕ. ಕೊಪ್ಪಳ ರಸ್ತೆಯ ಲೀಲಾವತಿ ಆಸ್ಪತ್ರೆಯ ಮುಂಭಾಗದಲ್ಲಿ ಬುಧವಾರ ನಸುಕಿನ ಜಾವ 2 ಗಂಟೆಗೆ ಕಾರಿನಲ್ಲಿ ಆಗಮಿಸಿದ್ದ ಗ್ಯಾಂಗ್ ಕೊಲೆ ಮಾಡಿದೆ. ದೇವಿಕ್ಯಾಂಪ್‌ನಿಂದ ಗಂಗಾವತಿಗೆ ವೆಂಕಟೇಶ್‌ ಅವರು ಸ್ನೇಹಿತರ ಜೊತೆ ಊಟ ಮಾಡಿ ಬೈಕಿನಲ್ಲಿ ಬರುತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಗ್ಯಾಂಗ್‌

ಮಚ್ಚಿನಿಂದ ಕೊಚ್ಚಿ ಬಿಜೆಪಿ ನಾಯಕನ ಬರ್ಬರ ಹತ್ಯೆ Read More »

ಅಧಿಕಾರ ರಾಜಕಾರಣದ ಬೆಳ್ಳಿಹಬ್ಬ ಸಂಭ್ರಮದಲ್ಲಿ ಪ್ರಧಾನಿ ಮೋದಿ

ಮುಖ್ಯಮಂತ್ರಿ, ಪ್ರಧಾನಿಯಾಗಿ ಸತತ 24 ವರ್ಷ ಪೂರೈಕೆ; ಇಷ್ಟರತನಕ ಸೋಲಿಲ್ಲದ ಸರದಾರ ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ರಾಜಕಾರಣದಲ್ಲಿ ಸತತ 24 ವರ್ಷಗಳನ್ನು ಪೂರೈಸಿ 25ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಧಿಅಕರದ ಪಡಸಾಲೆಯಲ್ಲಿ ಅವರಿಗೆ ಈಗ ಬೆಳ್ಳಿಹಬ್ಬದ ಸಂಭ್ರಮ. 2001ರಲ್ಲಿ ಅ.7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರ ಗ್ರಹಣದ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಸರ್ಕಾರಗಳ ಅಧಿನಾಯಕರಾಗಿ ಅಧಿಕಾರದಲ್ಲಿದ್ದಾರೆ. 2001ರಿಂದ 2014ರ ಮಧ್ಯಭಾಗದವರೆಗೆ 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ನಂತರ

ಅಧಿಕಾರ ರಾಜಕಾರಣದ ಬೆಳ್ಳಿಹಬ್ಬ ಸಂಭ್ರಮದಲ್ಲಿ ಪ್ರಧಾನಿ ಮೋದಿ Read More »

4 ತಿಂಗಳು ಜೀವನ್ಮರಣ ಹೋರಾಟ ನಡೆಸಿ ನಿಧನರಾದ ಅಪೂರ್ವ ಭಟ್‌ : ಕಂಬನಿ ಮಿಡಿದ ಪುತ್ತೂರಿನ ಜನ

ಮುರದಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಅಪೂರ್ವ ಭಟ್‌ ಪುತ್ತೂರು: ನಾಲ್ಕು ತಿಂಗಳ ಹಿಂದೆ ಪುತ್ತೂರು ತಾಲೂಕಿನ ಮುರ ಎಂಬಲ್ಲಿ ತಿರುವಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕೆದಿಲ‌ ನಿವಾಸಿ ಅಪೂರ್ವ ಕೆ. ಭಟ್ (32) ಚಿಕಿತ್ಸೆ ಫಲಿಸದೆ ಮಂಗಳವಾರ ರಾತ್ರಿ ನಿಧನರಾದರು. ಬರೋಬ್ಬರಿ 134 ದಿನ ಕೋಮಾದಲ್ಲಿದ್ದು ಜೀವನ್ಮರಣ ಹೋರಾಟ ನಡೆಸಿದ ಅಪೂರ್ವ ಭಟ್‌ ಅಗಲಿಕೆ ಭಾರಿ ದುಃಖ ತಂದಿದ್ದು, ಸಾವಿರಾರು ಮಂದಿ ಸೋಷಿಯಲ್‌ ಮೀಡಿಯಾದಲ್ಲಿ ಕಂಬನಿ

4 ತಿಂಗಳು ಜೀವನ್ಮರಣ ಹೋರಾಟ ನಡೆಸಿ ನಿಧನರಾದ ಅಪೂರ್ವ ಭಟ್‌ : ಕಂಬನಿ ಮಿಡಿದ ಪುತ್ತೂರಿನ ಜನ Read More »

ಮಂಗಳೂರು : 9.72 ಲ.ರೂ.ಮೌಲ್ಯದ ಇ-ಸಿಗರೇಟ್‌ ವಶ

ಅಂಗಡಿಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇ-ಸಿಗರೇಟ್‌ ಮಂಗಳೂರು : ನಗರದ ಪ್ರಮುಖ ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿಯ ಮೇಲೆ ಬರ್ಕೆ ಪೊಲೀಸರು ದಾಳಿ ನಡೆಸಿ, ಇ-ಸಿಗರೇಟ್ ಮತ್ತು ಇತರ ವಸ್ತುಗಳು ಸೇರಿದಂತೆ 9.72 ಲಕ್ಷ ಮೌಲ್ಯದ ಸೊತ್ತುಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ. ಮಂಗಳೂರಿನ ಲಾಲ್‌ಬಾಗ್ ಬಳಿಯ ಅಂಗಡಿಯೊಂದು ಯಾವುದೇ ಪರವಾನಗಿ ಪಡೆಯದೇ ಇ-ಸಿಗರೇಟ್, ಹುಕ್ಕಾ ಪರಿಕರಗಳು ಮತ್ತು ಭಾರತೀಯ ಹಾಗೂ ವಿದೇಶಿ ಸಿಗರೇಟ್‌ಗಳನ್ನು ಕಾನೂನುಬಾಹಿರವಾಗಿ ಮಾರಾಟ ಮತ್ತು ಸಂಗ್ರಹಿಸುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಈ ವಸ್ತುಗಳನ್ನು

ಮಂಗಳೂರು : 9.72 ಲ.ರೂ.ಮೌಲ್ಯದ ಇ-ಸಿಗರೇಟ್‌ ವಶ Read More »

ನಿರ್ಮಾಪಕರಿಗೆ ತಲೆನೋವಾದ ಕಾಂತಾರಾ ಪ್ರೇಕ್ಷಕರ ವರ್ತನೆ : ದೈವಾರಾಧನೆಯನ್ನು ನಕಲು ಮಾಡದಂತೆ ಮನವಿ

ಟಾಕೀಸು, ಸಾರ್ವಜನಿಕ ಸ್ಥಳಗಳಲ್ಲಿ ಆವೇಶ ಬಂದಂತೆ ವರ್ತಿಸುತ್ತಿರುವ ಪ್ರೇಕ್ಷಕರು ಬೆಂಗಳೂರು : ಕಾಂತಾರಾ ಚಾಪ್ಟರ್‌-1 ಚಿತ್ರ ನೋಡಿ ಕೆಲವು ಪ್ರೇಕ್ಷಕರು ಮಾಡುತ್ತಿರುವ ಹುಚ್ಚಾಟಗಳು ಚಿತ್ರದ ನಿರ್ಮಾಪಕರಿಗೆ ತಲೆನೋವಾಗಿ ಪರಿಣಮಿಸಿದೆ. ಚಿತ್ರಮಂದಿರದಲ್ಲೇ ದೈವ ಮೈಮೇಲೆ ಆವೇಶ ಆದಂತೆ ವರ್ತಿಸುತ್ತಿರುವ ಪ್ರೇಕ್ಷಕರು ದೈವಾರಾಧನೆಗೆ ಅಪಚಾರ ಮಡುತ್ತಿದ್ದಾರೆ. ಇಂಥ ಅನೇಕ ಹಲವು ವಿಡಿಯೋ ತುಣುಕುಗಳು ವೈರಲ್‌ ಆಗಿದ್ದು, ದೈವಾರಾಧನೆಯ ಮೂಲವಾದ ಕರಾವಳಿಯ ಜನರಿಂದ ಇಂಥ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೈವಾರಾಧನೆ ಅತ್ಯಂತ ಪವಿತ್ರವಾದ ಧಾರ್ಮಿಕ ಸಂಪ್ರದಾಯ. ಅದನ್ನು

ನಿರ್ಮಾಪಕರಿಗೆ ತಲೆನೋವಾದ ಕಾಂತಾರಾ ಪ್ರೇಕ್ಷಕರ ವರ್ತನೆ : ದೈವಾರಾಧನೆಯನ್ನು ನಕಲು ಮಾಡದಂತೆ ಮನವಿ Read More »

error: Content is protected !!
Scroll to Top