ಸುದ್ದಿ

ಆದಾಯ ಸಾಕಾಗುತ್ತಿಲ್ಲ ಸಚಿವ ಸ್ಥಾನದಿಂದ ಕೈಬಿಡಿ ಎಂದು ಮನವಿ ಮಾಡಿದ ಸುರೇಶ್‌ ಗೋಪಿ!

ರಾಜಕೀಯ ವಲಯದಲ್ಲಿ ಅಚ್ಚರಿ ಹುಟ್ಟಿಸಿದ ಕೇರಳದ ಸಂಸದನ ಬಹಿರಂಗ ಹೇಳಿಕೆ ನವದೆಹಲಿ: ಸಚಿವ ಸ್ಥಾನಕ್ಕೆ ಇನ್ನಿಲ್ಲದಂತೆ ತಿಪ್ಪರಲಾಗ ಹಾಕುವ ರಾಜಕಾರಣಿಗಳ ನಡುವೆ ಕೇರಳದ ತ್ರಿಶ್ಶೂರಿನಿಂದ ಲೋಕಸಭೆಗೆ ಆಯ್ಕೆಯಾಗಿ ಸಚಿವರಾಗಿರುವ ಚಿತ್ರನಟ ಸುರೇಶ್‌ ಗೋಪಿ ನನಗೆ ಸಚಿವ ಸ್ಥಾನ ಬೇಡ ಎಂದು ಬಹಿರಂಗವಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಕೇರಳದಲ್ಲಿ ಬಿಜೆಪಿಯಿಂದ ಲೋಕಸಭೆ ಚುನಾವಣೆ ಗೆದ್ದಿರುವ ಮೊದಲ ಸಂಸದ ಎಂಬ ಹಿರಿಮೆಯನ್ನೂ ಹೊಂದಿರುವ ಸುರೇಶ್‌ ಗೋಪಿ ಸಚಿವ ಸ್ಥಾನ ಬೇಡ ಎಂದಿರುವುದಕ್ಕೆ ನೀಡಿರುವ ಕಾರಣ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ. ಸದ್ಯ […]

ಆದಾಯ ಸಾಕಾಗುತ್ತಿಲ್ಲ ಸಚಿವ ಸ್ಥಾನದಿಂದ ಕೈಬಿಡಿ ಎಂದು ಮನವಿ ಮಾಡಿದ ಸುರೇಶ್‌ ಗೋಪಿ! Read More »

ನಕಲಿ ಒಡವೆ ಅಡವಿಟ್ಟು ಬ್ಯಾಂಕಿಗೆ ವಂಚನೆ : ಪುತ್ತೂರಿನ ಓರ್ವನ ಸಹಿತ ಮೂವರ ಸೆರೆ

ಆರೋಪಿಗಳಿಂದ ಕಾರು ಸಹಿತ 26.5 ಲ.ರೂ. ಸೊತ್ತು ವಶ ಮಂಗಳೂರು: ನಗರದ ಕಾವೂರಿನ ಸಹಕಾರಿ ಸಂಸ್ಥೆಯೊಂದರಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 6.24 ಲಕ್ಷ ರೂ. ವಂಚಿಸಿದ್ದ ಮೂವರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಆಕಾಶಭವನದ ಆನಂದ ನಗರ ನಿವಾಸಿ ಹಾರೀಫ್ ಅಬೂಬಕ್ಕರ್ (39), ನಂತೂರು ಬಿಕರ್ನಕಟ್ಟೆಯ ನಿವಾಸಿ ಮೊಹಮ್ಮದ್ ಆಶೀಕ್ ಕಟ್ಟತ್ತಾರ್ ಹುಸೈನ್ (34) ಮತ್ತು ಪುತ್ತೂರು ತಾಲೂಕು ಬೆಳಂದೂರು ಗ್ರಾಮದ ನಿವಾಸಿ ಅಬ್ದುಲ್ ರಮೀಝ್ (33) ಎಂದು ಗುರುತಿಸಲಾಗಿದೆ. ಅಕ್ಟೋಬರ್ 9ರಂದು ಹಾರೀಫ್

ನಕಲಿ ಒಡವೆ ಅಡವಿಟ್ಟು ಬ್ಯಾಂಕಿಗೆ ವಂಚನೆ : ಪುತ್ತೂರಿನ ಓರ್ವನ ಸಹಿತ ಮೂವರ ಸೆರೆ Read More »

ಹಳೆ ಫೊಟೊ ತೋರಿಸಿ ಪ್ರಿಯಾಂಕ್‌ ಖರ್ಗೆಗೆ ತಿರುಗೇಟು ನೀಡಿದ ಬಿಜೆಪಿ

ಮಲ್ಲಿಕಾರ್ಜುನ ಖರ್ಗೆಯವರೇ ಆರ್‌ಎಸ್‌ಎಸ್‌ ಶಿಬಿರಕ್ಕೆ ಬಂದಿದ್ದ ಫೋಟೊ ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್‌ಎಸ್‌ಎಸ್) ಚಟುವಟಿಕೆಗಳಿಗೆ ನಿಷೇಧ ಹೇರಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದಿರುವ ಪತ್ರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹೊಸತೊಂದು ವಾಕ್ಸಮರಕ್ಕೆ ಕಾರಣವಾಗಿದೆ. ಈ ನಡುವೆ ಬಿಜೆಪಿ ಹಳೇ ಫೋಟೊವೊಂದನ್ನು ಮುನ್ನೆಲೆಗೆ ತಂದು ಪ್ರಿಯಾಂಕ್‌ ಖರ್ಗೆಗೆ ತಿರುಗೇಟು ನೀಡಿದೆ. ರಾಜ್ಯ ಬಿಜೆಪಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಅಪರೂಪದ ಹಾಗೂ ವಿಶೇಷವಾದಂಥ ಫೋಟೋವೊಂದನ್ನು ಹಂಚಿಕೊಂಡಿದ್ದು, ಅದು 2002ರಲ್ಲಿ ಬೆಂಗಳೂರಿನ ನಾಗವಾರದಲ್ಲಿ

ಹಳೆ ಫೊಟೊ ತೋರಿಸಿ ಪ್ರಿಯಾಂಕ್‌ ಖರ್ಗೆಗೆ ತಿರುಗೇಟು ನೀಡಿದ ಬಿಜೆಪಿ Read More »

ಇಂದು ಸಿದ್ದರಾಮಯ್ಯ ಡಿನ್ನರ್‌ ಮೀಟ್‌ : ರಾಜಕಾರಣದಲ್ಲಿ ಭಾರಿ ಕುತೂಹಲ

ರಾಜ್ಯ ರಾಜಕೀಯದ ಭವಿಷ್ಯ ನಿರ್ಧರಿಸುತ್ತಾ ಈ ಔತಣಕೂಟ? ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಡಿನ್ನರ್‌ ಮೀಟ್‌ ಇಂದು ನಡೆಯಲಿದೆ. ಸಿದ್ದರಾಮಯ್ಯನವರ ಆಪ್ತ ಸಚಿವರು ಇದರಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ರಾಜಕೀಯದ ಭವಿಷ್ಯ ಇಂದಿನ ಔತಣಕೂಟದ ಮೇಲೆ ನಿಂತಿದೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಈ ಡಿನ್ನರ್‌ ಮೀಟ್‌ ಭಾರಿ ಕುತೂಹಲ ಕೆರಳಿಸಿದೆ. ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಜೋರಾಗಿಯೇ ನಡೆಯುತ್ತಿದೆ. ಈ ನಡುವೆ ಸಿದ್ದರಾಮಯ್ಯ ಇಂದು ಸಚಿವರಿಗೆ ಔತಣಕೂಟ ಏರ್ಪಡಿಸಿದ್ದು, ಇದು ಸಂಪುಟ ಪುನಾರಚನೆಗೆ ಮುನ್ನುಡಿ

ಇಂದು ಸಿದ್ದರಾಮಯ್ಯ ಡಿನ್ನರ್‌ ಮೀಟ್‌ : ರಾಜಕಾರಣದಲ್ಲಿ ಭಾರಿ ಕುತೂಹಲ Read More »

50 ಕೋ. ರೂ. ಮೌಲ್ಯದ ಡ್ರಗ್ಸ್‌ ವಶ : ಮೂವರು ಸೆರೆ

ಬೆಂಗಳೂರು: ಬೆಂಗಳೂರಿನ ಎನ್‌ಸಿಬಿ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಅಂತಾರಾಷ್ಟ್ರೀಯ ಡ್ರಗ್ಸ್‌ ಜಾಲವೊಂದನ್ನು ಬಯಲಿಗೆಳೆದಿದ್ದಾರೆ. ಮೂವರು ಆರೋಪಿಗಳನ್ನ ಎನ್‌ಸಿಬಿ ಬಂಧಿಸಿದೆ. ಬಂಧಿತರಿಂದ ಒಟ್ಟು 45 ಕೆ ಜಿ ಹೈಡ್ರೋಗಾಂಜಾ, 6 ಕೆಜಿ ಸೈಲೋಸಿಬಿನ್ ಅಣಬೆಯನ್ನು ಜಪ್ತಿ ಮಾಡಲಾಗಿದೆ. ಥೈಲ್ಯಾಂಡ್‌ನಿಂದ ಡ್ರಗ್ಸ್‌ ಸಾಗಾಟ ಮಾಡುತ್ತಿರುವುದಾಗಿ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಕೊಲಂಬೋದಿಂದ‌ ಬರುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 31 ಕೆಜಿ

50 ಕೋ. ರೂ. ಮೌಲ್ಯದ ಡ್ರಗ್ಸ್‌ ವಶ : ಮೂವರು ಸೆರೆ Read More »

ಆರ್‌ಎಸ್‌ಎಸ್‌ ನಿಷೇಧದ ಕಿಚ್ಚು : ಸರ್ಕಾರ V/S ಬಿಜೆಪಿ ವಾಕ್ಸಮರ

ಪ್ರಿಯಾಂಕ್‌ ಖರ್ಗೆ ಪತ್ರದ ಪರಿಣಾಮದ ಮೇಲೆ ಕಣ್ಣಿಡಲು ಸಮಿತಿ ರಚಿಸಿದ ಬಿಜೆಪಿ ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ ಬರೆದಿರುವುದು ಆಕ್ರೋಶದ ಕಿಡಿ ಎಬ್ಬಿಸಿದೆ. ಮಾಜಿ ಸಚಿವ ಕಾರ್ಕಳದ ಶಾಸಕ ಸುನಿಲ್‌ ಕುಮಾರ್‌, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಹಿತ ಅನೇಕ ಬಿಜೆಪಿ ಮತು ಸಂಘ ಪರಿವಾರದ ನಾಯಕರು ತಾಕತ್‌ ಇದ್ದರೆ ಆರ್‌ಎಸ್‌ಎಸ್‌ ನಿಷೇಶ ಮಾಡಿ ಎಂದು ಪ್ರಿಯಾಂಕ್‌ ಖರ್ಗೆಗೆ ನೇರ

ಆರ್‌ಎಸ್‌ಎಸ್‌ ನಿಷೇಧದ ಕಿಚ್ಚು : ಸರ್ಕಾರ V/S ಬಿಜೆಪಿ ವಾಕ್ಸಮರ Read More »

ವಿದ್ಯಾಸಮೃದ್ಧಿ ಲೋಕಾರ್ಪಣೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಮೊದಲ Tuition App ಆಗಿರುವ Vidyasamruddhi Tuition App ಪುತ್ತೂರಿನ Rotary GL Sabhabhavanaದಲ್ಲಿ ಲೋಕಾರ್ಪಣೆಗೊಂಡಿತು. ವಿದ್ಯಾಸಮೃದ್ಧಿಯ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ SRK Laddersನ ಕೇಶವ ಅಮೈ ಕಲಾಯಿಗುತ್ತು ಅವರು ಮಾತನಾಡಿ ಇಂದು 10ನೇ ತರಗತಿಯ ಮಕ್ಕಳಿಗೆ ನೀವು ಪಾಠಗಳನ್ನು App ಮೂಲಕ ಕೊಟ್ಟಿದ್ದೀರಿ. ಮುಂದೆ ಸಾರ್ವಜನಿಕರಿಗೆ ಉಪಯೋಗವಾಗುವ Spoken English ಮತ್ತು ಇತರ ಭಾಷೆಗಳನ್ನು ಸಹ ನೀಡುವ ಕೆಲಸ ಮಾಡಿ ಎಂದು ಸಲಹೆ ನೀಡಿದರು. VIDYASAMRUDDHI ICON AWARD

ವಿದ್ಯಾಸಮೃದ್ಧಿ ಲೋಕಾರ್ಪಣೆ Read More »

ಡಿಕೆಶಿ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಮುನಿರತ್ನ ಹೈಡ್ರಾಮಾ

ಆರ್‌ಎಸ್‌ಎಸ್‌ ಸಮವಸ್ತ್ರದಲ್ಲಿ ದಿಢೀರ್‌ ಎಂದು ಕಾರ್ಯಕ್ರಮಕ್ಕೆ ಬಂದ ಮುನಿರತ್ನ ಬೆಂಗಳೂರು : ಬೆಂಗಳೂರು ನಡಿಗೆ ಕಾರ್ಯಕ್ರಮದ ಪ್ರಯುಕ್ತ ಡಿ.ಕೆ ಶಿವಕುಮಾರ್ ಇಂದು ಮತ್ತಿಕೆರೆಯ ಜೆ.ಪಿ ಪಾರ್ಕ್​ನಲ್ಲಿ ಜನರೊಂದಿಗೆ ಸಂವಾದ ನಡೆಸುವ ವೇಳೆ ಹೈಡ್ರಾಮಾ ನಡೆಯಿತು. ಆರ್​ಎಸ್​ಎಸ್​ ಡ್ರೆಸ್, ಟೋಪಿ ಧರಿಸಿ ಜೆ.ಪಿ ಪಾರ್ಕ್​ಗೆ ಬಂದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಡಿ.ಕೆ ಶಿವಕುಮಾರ್ ನಿರ್ಲಕ್ಷ್ಯಿಸಿದ್ದು, ಡಿಕೆಶಿ ವೇದಿಕೆಯಲ್ಲಿ ಕುಳಿತಾಗ ಮುನಿರತ್ನ ಕೆಳಗೆ ಜನರ ಮಧ್ಯೆ ಕುರ್ಚಿಯಲ್ಲಿ ಕುಳಿತರು. ಆಗ ಡಿಸಿಎಂ ‘ಹೇಯ್, ಕಪ್ಪು ಟೋಪಿ ಎಂಎಲ್​ಎ ಬಾರಯ್ಯ’

ಡಿಕೆಶಿ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಮುನಿರತ್ನ ಹೈಡ್ರಾಮಾ Read More »

ಟ್ಯಾಕ್ಸಿ ಚಾಲಕನನ್ನು ಮುಸ್ಲಿಂ ಟೆರರಿಸ್ಟ್‌ ಎಂದು ನಿಂದಿಸಿದ ನಟ : ಎಫ್‌ಐಆರ್‌ ದಾಖಲು

ಮಂಗಳೂರಿಗೆ ಬಂದ ವೇಳೆ ಚಾಲಕನನ್ನು ಅವಹೇಳನ ಮಾಡಿದ ಮಲಯಾಳಂ ನಟ ಮಂಗಳೂರು: ಕ್ಯಾಬ್ ಚಾಲಕನಿಗೆ ಕರೆ ಮಾಡಿ ‘ಮುಸ್ಲಿಂ ಟೆರರಿಸ್ಟ್’ ಎಂದು ಅವಹೇಳನ ಮಾಡಿದ ಬಗ್ಗೆ ಮಲಯಾಳಂ ಚಿತ್ರರಂಗದ ಜನಪ್ರಿಯ ಪೋಷಕ ನಟ ಜಯಕೃಷ್ಣನ್‌ ಮತ್ತು ಅವರ ಗೆಳೆಯರಾದ ಸಂತೋಷ್ ಅಬ್ರಾಹಂ ಹಾಗೂ ವಿಮಲ್‌ ಎಂಬವರ ವಿರುದ್ಧ ಮಂಗಳೂರಿನ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿಗೆ ಗುರುವಾರ ರಾತ್ರಿ ಬಂದಿದ್ದ ಜಯಕೃಷ್ಣ್‌ ಮತ್ತು ಸ್ನೇಹಿತರು ಉಬರ್‌ ಮತ್ತು ರಾಪಿಡೊ ಕ್ಯಾಪ್ಟನ್ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು.

ಟ್ಯಾಕ್ಸಿ ಚಾಲಕನನ್ನು ಮುಸ್ಲಿಂ ಟೆರರಿಸ್ಟ್‌ ಎಂದು ನಿಂದಿಸಿದ ನಟ : ಎಫ್‌ಐಆರ್‌ ದಾಖಲು Read More »

ಬಂಟ್ವಾಳ : ಜಾತಿ ಗಣತಿಗೆ ತೆರಳಿದ ಶಿಕ್ಷಕರ ಮೇಲೆ ಜೇನುನೊಣಗಳ ಹಿಂಡಿನಿಂದ ದಾಳಿ

ಎರಡು ಕಿ.ಮೀ. ತನಕ ಅಟ್ಟಿಸಿಕೊಂಡು ಬಂದು ದಾಳಿ ಮಾಡಿದ ಹೆಜ್ಜೇನುಗಳು ಬಂಟ್ವಾಳ : ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಗೆ ತೆರಳಿದ್ದ ಶಿಕ್ಷಕರೊಬ್ಬರ ಮೇಲೆ ಜೇನುನೊಣಗಳು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಶನಿವಾರ ಬಂಟ್ವಾಳ ಸಜೀಪದ ಶಾರದಾ ನಗರ ಭಜನಾ ಮಂದಿರದ ಬಳಿ ಸಂಭವಿಸಿದೆ. ಸಜೀಪಮೂಡ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ವೆಂಕಟರಮಣ ಗಾಯಗೊಂಡವರು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಶನಿವಾರ ಬೆಳಗ್ಗೆ 9ರ ಸುಮಾರಿಗೆ ಅವರು ಒಂದು ಮನೆಯ ಗಣತಿ ಕಾರ್ಯ ಪೂರ್ಣಗೊಳಿಸಿ ಮತ್ತೊಂದು

ಬಂಟ್ವಾಳ : ಜಾತಿ ಗಣತಿಗೆ ತೆರಳಿದ ಶಿಕ್ಷಕರ ಮೇಲೆ ಜೇನುನೊಣಗಳ ಹಿಂಡಿನಿಂದ ದಾಳಿ Read More »

error: Content is protected !!
Scroll to Top