ಸುದ್ದಿ

ಯುವತಿಗೆ ಅಶ್ಲೀಲ ಮೆಸೇಜ್ : ಭೇಟಿಯಾಗಲು ಬಂದು ಯುವಕ  ಸ್ಥಳೀಯರ ವಶಕ್ಕೆ  

ವಿಟ್ಲ: ಯುವತಿಯರ ಮೊಬೈಲ್ ನಂಬರ್ ತೆಗೆದುಕೊಂಡು ಅಶ್ಲೀಲ ಮೆಸೇಜ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು, ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಳ್ಳಾಡು ಗ್ರಾಮದ ಕುಡ್ತಮುಗೇರು ಜಂಕ್ಷನ್ ಬಳಿ ನಡೆದಿದೆ. ಯುವತಿರೋರ್ವಳ ನಂಬರ್ ಕೇಳಿದ್ದ ಈತನಿಗೆ ಆಕೆ ಪರಿಚಯದ ಸ್ನೇಹಿತನ ನಂಬರ್‍ ಕೊಟ್ಟಿದ್ದಳು. ಯುವತಿಯ ನಂಬರ್ ಎಂದು ಬಾವಿಸಿ ಯುವಕನಿಗೆ ರಾತ್ರಿಯಿಡಿ ಅಶ್ಲೀಲವಾಗಿ ಮೆಸೆಜ್‍ ಮಾಡಿದ್ದಾನೆ. ಬಳಿಕ ಹುಡುಗಿ ಎಂದು ಭೇಟಿಯಾಗಲು ಬಂದಾಗ ಸ್ಥಳೀಯರು ಆತನನ್ನ ಹಿಡಿದು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ […]

ಯುವತಿಗೆ ಅಶ್ಲೀಲ ಮೆಸೇಜ್ : ಭೇಟಿಯಾಗಲು ಬಂದು ಯುವಕ  ಸ್ಥಳೀಯರ ವಶಕ್ಕೆ   Read More »

ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಂ 118ನೇ ಜಯಂತಿ

ಪುತ್ತೂರು: ಧೀಮಂತ ನಾಯಕ, ರಾಜಕೀಯ, ಸಾಮಾಜಿಕವಾಗಿ ಎಲ್ಲಾ ಅರ್ಹತೆಗಳನ್ನು ಹೊಂದಿ ಬದುಕಿದ ಬಾಬು ಜಗಜ್ಜೀವನ್ ರಾಮ್‍ ಅವರು ಒಂದರ್ಥದಲ್ಲಿ ಸಮಾಜ ಶಕ್ತಿಯಾಗಿದ್ದರು ಎಂದು ಪುತ್ತೂರು ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಿನ್ಸಿಪಾಲ್‍ ಸುಬ್ಬಪ್ಪ ಕೈಕಂಬ ಹೇಳಿದರು. ಅವರು ಶನಿವಾರ ಪುತ್ತೂರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ 118ನೇ ಜನ್ಮ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು. ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವ

ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಂ 118ನೇ ಜಯಂತಿ Read More »

ಪಕ್ಷ ವಿರೋಧಿ ಚಟುವಟಿಕೆ ಆರೋಪ | ಮೂವರು ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯರ ಉಚ್ಚಾಟನೆ

ವಿಟ್ಲ :  ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಬಂಟ್ವಾಳ ತಾಲೂಕಿನ ಕೊಳ್ಳಾಡು ಗ್ರಾಮ ಪಂಚಾಯತ್ ನ ಮೂವರು ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಮುಂದಿನ ಆರು ವರ್ಷದವರೆಗೆ ಉಚ್ಚಾಟನೆ ನಡೆಸಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ರವರು ಆದೇಶಿಸಿದ್ದಾರೆ. ಬಂಟ್ವಾಳ ತಾಲೂಕು ಕೊಳ್ಳಾಡು ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಮಂಚಿ, ರಾಜೇಶ್ ಬಾರಬೆಟ್ಟು, ಎ.ಬಿ.ಅಬ್ದುಲ್ಲಾ ರವರನ್ನು ಪಕ್ಷ ವಿರೋಧಿ ಚಟುವಟಿಕೆಯ ಆರೋಪದಲ್ಲಿ ಉಚ್ಚಾಟಿಸಲ್ಪಟ್ಟವರಾಗಿದ್ದಾರೆ. ಇವರು ನಿರಂತರವಾಗಿ ಪಕ್ಷದ ಹೆಸರನ್ನು ಹೇಳಿಕೊಂಡು ಗ್ರಾಮ

ಪಕ್ಷ ವಿರೋಧಿ ಚಟುವಟಿಕೆ ಆರೋಪ | ಮೂವರು ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯರ ಉಚ್ಚಾಟನೆ Read More »

ದ್ವಿಚಕ್ರ ವಾಹನ ಚಾಲಕರೋರ್ವರಿಗೆ ರಿಕ್ಷಾ ಚಾಲಕನಿಂದ ಹಲ್ಲೆ

ಬಂಟ್ವಾಳ: ದ್ವಿಚಕ್ರ ಸವಾರನೋರ್ವನ ಮೇಲೆ ರಿಕ್ಷಾ ಚಾಲಕನೋರ್ವ ಹಲ್ಲೆ ನಡೆಸಿದ್ದಲ್ಲದೆ ಜೀವಬೆದರಿಕೆ ಹಾಕಿದ ಘಟನೆ ಇಂದು ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಪಾಣೆಮಂಗಳೂರಿನಲ್ಲಿ ನಡೆದಿದೆ. ನರಿಕೊಂಬು ಗ್ರಾಮದ ನಾಯಿಲ ನಿವಾಸಿ ಸುನಿಲ್ ಎಂಬಾತನ ಮೇಲೆ ನಂದಾವರ ನಿವಾಸಿ ರಿಕ್ಷಾ ಚಾಲಕ ಅಝೀಲ್ ಹಲ್ಲೆ ನಡೆಸಿರುವುದಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ನಡೆದ ಕೆಲವೇ ಗಂಟೆಯಲ್ಲಿ ನಗರ ಪೋಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.  ಸುನಿಲ್ ಮತ್ತು ಆತನ ಸ್ನೇಹಿತ ದಯಾನಂದ ಅವರು

ದ್ವಿಚಕ್ರ ವಾಹನ ಚಾಲಕರೋರ್ವರಿಗೆ ರಿಕ್ಷಾ ಚಾಲಕನಿಂದ ಹಲ್ಲೆ Read More »

ಉಡುಪಿ ಲವ್‌ ಜಿಹಾದ್‌ ಪ್ರಕರಣಕ್ಕೆ ತಿರುವು : ಸ್ವಇಚ್ಚೆಯಿಂದ ಹೋಗಿದ್ದೇನೆ ಎಂದ ಯುವತಿ

ಎ.19ರಂದು ರಿಜಿಸ್ಟ್ರರ್‌ ಮದುವೆ ಮಾಡಿಕೊಳ್ಳುವುದಾಗಿ ಹೇಳಿಕೆ ಉಡುಪಿ: ಉಡುಪಿಯಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಲವ್‌ ಜಿಹಾದ್‌ ಪ್ರಕರಣ ಯುವತಿ ನ್ಯಾಯಾಲಯಕ್ಕೆ ಹಾಜರಾಗುವುದರೊಂದಿಗೆ ತಿರುವು ಪಡೆದುಕೊಂಡಿದೆ. ಕ್ರೈಸ್ತ ಸಮುದಾಯದ 19ರ ಹರೆಯದ ಕಾಲೇಜು ವಿದ್ಯಾರ್ಥಿನಿಯನ್ನು ಮುಹಮ್ಮದ್‌ ಅಕ್ರಮ್‌ ಎಂಬಾತ ಅಪಹರಿಸಿ ಬಲವಂತವಾಗಿ ಮದುವೆಯಾಗಲು ತಯಾರಿ ನಡೆಸಿದ್ದಾನೆ. ಈ ವಿಚಾರದಲ್ಲಿ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಯುವತಿಯ ತಾಯಿ ಕೆಲದಿನಗಳ ಹಿಂದೆ ಆರೋಪಿಸಿದ್ದರು. ಇದರ ಬೆನ್ನಿಗೆ ಹಿಂದು ಸಂಘಟನೆಗಳು ಮಧ್ಯೆ ಪ್ರವೇಶಿಸಿ ಲವ್‌ ಜಿಹಾದ್‌ ಅರೋಪ ಮಾಡಿದ್ದವು.ಅಪಹರಣ

ಉಡುಪಿ ಲವ್‌ ಜಿಹಾದ್‌ ಪ್ರಕರಣಕ್ಕೆ ತಿರುವು : ಸ್ವಇಚ್ಚೆಯಿಂದ ಹೋಗಿದ್ದೇನೆ ಎಂದ ಯುವತಿ Read More »

ಕಲಾರತ್ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಪುತ್ತೂರಿನ ರಂಗಭೂಮಿ ಕಲಾವಿದೆ  ಜ್ಯೋತಿ ಕುಲಾಲ್‍

ಪುತ್ತೂರು  : ರಂಗಭೂಮಿಯಲ್ಲಿ ಸಾಧನೆಗೈದ ಪುತ್ತೂರಿನ ರಂಗಭೂಮಿ ಕಲಾವಿದೆ  ಜ್ಯೋತಿ ಕುಲಾಲ್‍ ಕಲಾರತ್ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಆಕ್ಸಿಸ್‍ ಮ್ಯಾಕ್ಸ್ ಲೈಫ್ ಇನ್ಸುರೆನ್ಸ್‍ ವತಿಯಿಂದ  “VALUE AWARD CEREMONY “ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕಲಾರತ್ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಪುತ್ತೂರಿನ ರಂಗಭೂಮಿ ಕಲಾವಿದೆ  ಜ್ಯೋತಿ ಕುಲಾಲ್‍ Read More »

ಸುಳ್ಯ : ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ಲಾರಿ

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಟಾಟಾ 407 ಮಿನಿ ಲಾರಿ ಪಲ್ಟಿಯಾದ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಸುಳ್ಯದ ಓಡಬಾಯಿಯ ಗುಂಡ್ಯಡ್ಕ ಸಮೀಪ ನಡೆದಿದೆ. ಬೆಳ್ತಂಗಡಿಯಿಂದ ಕುಶಾಲನಗರ ಕಡೆಗೆ ಹೋಗುತ್ತಿದ್ದ ವಾಹನ ಗುಂಡ್ಯಡ್ಕ ಸಮೀಪ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆ ಬದಿಯ ಮೋರಿಗೆ ಪಲ್ಟಿಯಾಗಿ ಬಿದ್ದಿದೆ. ಅಪಘಾತದಲ್ಲಿ ಲಾರಿ ಜಖಂಗೊಂಡಿದ್ದು, ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಸುಳ್ಯ : ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ಲಾರಿ Read More »

ಕಲಾರತ್ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಪ್ರಕಾಶ್‍ ಸವಣಾಲ್‍ ಹಾಗೂ ಯಜ್ಞೇಶ್‍ ಧರ್ಮಸ್ಥಳ

ಬೆಳ್ತಂಗಡಿ : ರಂಗಭೂಮಿಯಲ್ಲಿ ಸಾಧನೆಗೈದ ಪ್ರಕಾಶ್‍ ಸವಣಾಲ್‍ ಹಾಗೂ ಯಜ್ಞೇಶ್‍ ಧರ್ಮಸ್ಥಳ ರವರು ಕಲಾರತ್ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಆಕ್ಸಿಸ್‍ ಮ್ಯಾಕ್ಸ್‍ ಲೈಫ್ ಇನ್ಸುರೆನ್ಸ್‍ ವತಿಯಿಂದ  “VALUE AWARD CEREMONY “ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ  ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾದಕರನ್ನು  ಗುರುತಿಸಿ ಕಲಾರತ್ನ ಪ್ರಶಸ್ತಿಯನ್ನು ನೀಡಲಾಗಿದೆ.

ಕಲಾರತ್ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಪ್ರಕಾಶ್‍ ಸವಣಾಲ್‍ ಹಾಗೂ ಯಜ್ಞೇಶ್‍ ಧರ್ಮಸ್ಥಳ Read More »

ವಂಚನೆ : ಕ್ರಿಪ್ಟೊ ಕರೆನ್ಸಿ ಹೂಡಿಕೆ ನೆಪದಲ್ಲಿ 70 ಲ.ರೂ. ವಂಚನೆ

ಮಂಗಳೂರು: ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುವ ನಂಬಿಕೆ ಹುಟ್ಟಿಸಿ ಸುಮಾರು 70 ಲ.ರೂ. ವಂಚಿಸಿದ ಕುರಿತು ಮಂಗಳೂರಿನ ವ್ಯಕ್ತಿಯೊಬ್ಬರು ಸೆನ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಫೇಸ್‌ಬುಕ್‌ನಲ್ಲಿ ಪರಿಚಿತನಾದ ರೈಸೆನ್‌ ಎಂಬ ವ್ಯಕ್ತಿ ದೂರುದಾರರ ವಿಶ್ವಾಸ ಸಂಪಾದಿಸಿ ಕ್ರಿಪ್ಟೊ ಕರೆನ್ಸಿ ಹೂಡಿಕೆಯ ಆಶೆ ಹುಟ್ಟಿಸಿದ್ದಾನೆ. ತಾನು ಕ್ರಿಪ್ಟೊ ಕರೆನ್ಸಿ ಟ್ರೇಡಿಂಗ್‌ ಮಾಡುತ್ತಿದ್ದು, ಅದರಲ್ಲಿ ಶೇ.30ರಷ್ಟು ಲಾಭಾಂಶವಿದೆ ಎಂದು ಹೇಳಿದ್ದ. ಅವನ ಮಾತು ನಂಬಿ ದೂರುದಾರರು ಫೆ.2ರಿಂದ 23ರ ವರೆಗೆ ಪ್ರತಿದಿನ ಹೂಡಿಕೆ ಮಾಡುತ್ತಿದ್ದರು. ಒಟ್ಟಾರೆಯಾಗಿ

ವಂಚನೆ : ಕ್ರಿಪ್ಟೊ ಕರೆನ್ಸಿ ಹೂಡಿಕೆ ನೆಪದಲ್ಲಿ 70 ಲ.ರೂ. ವಂಚನೆ Read More »

ಮೇ 29ರಿಂದ ಮುಂದಿನ ಶೈಕ್ಷಣಿಕ ವರ್ಷದ ಶಾಲಾರಂಭ

2025- 26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಇಂತಿದೆ ಬೆಂಗಳೂರು: ಈ ಬೇಸಿಗೆ ರಜೆ ಕಳೆದ ಬಳಿಕ ಮೇ 29ರಿಂದ ಮುಂದಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಪ್ರಾರಂಭಗೊಳ್ಳಲಿವೆ. ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ 2025- 26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮೇ 29ರಿಂದ ಶಾಲೆಗಳನ್ನು ಆರಂಭಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇದು ಅನ್ವಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.ಮೇ 29ರಿಂದ ಶಾಲೆಗಳು ಆರಂಭವಾಗಲಿದ್ದು,

ಮೇ 29ರಿಂದ ಮುಂದಿನ ಶೈಕ್ಷಣಿಕ ವರ್ಷದ ಶಾಲಾರಂಭ Read More »

error: Content is protected !!
Scroll to Top