ಅಯತಪ್ಪಿ ಬಾವಿಗೆ ಬಿದ್ದ ಯುವಕನನ್ನು ಕಾಪಾಡಿದ ಅಗ್ನಿಶಾಮಕ ಸಿಬ್ಬಂದಿ
ಕಾರ್ಕಳ: ಬಾವಿ ಕಂಬ ತುಂಡಾಗಿ ನೀರು ಸೇದುತ್ತಿದ್ದ ವ್ಯಕ್ತಿ ಬಾವಿಯೊಳಗೆ ಬಿದ್ದ ಘಟನೆ ಸಾಣೂರಿನ ಕೆಂಚಬೆಟ್ಟುವಿನಲ್ಲಿ ನಡೆದಿದೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಾವಿಗೆ ಬಿದ್ದ ಯುವಕನನ್ನು ಪ್ರಶಾಂತ್ ಭಂಡಾರಿ ಎಂದು ಗುರುತಿಸಲಾಗಿದೆ. ಮನೆಯ ಸಮೀಪದಲ್ಲೇ ಈ ಘಟನೆ ನಡೆದಿದ್ದು, ಮನೆಯವರು ತಕ್ಷಣವೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಯುವಕನನ್ನು ಕಾಪಾಡಿದ್ದಾರೆ.
ಅಯತಪ್ಪಿ ಬಾವಿಗೆ ಬಿದ್ದ ಯುವಕನನ್ನು ಕಾಪಾಡಿದ ಅಗ್ನಿಶಾಮಕ ಸಿಬ್ಬಂದಿ Read More »










