ಸುದ್ದಿ

ನಳಿನ್‌ ಕುಮಾರ್‌ ಕಟೀಲ್‌ ಪರ ಡಿಕೆಶಿ ಬ್ಯಾಟಿಂಗ್‌

ರಾಜಕೀಯದಲ್ಲಿ ಹೀರೊ ಝೀರೊ ಆಗುತ್ತಾನೆ, ಝೀರೊ ಹೀರೊ ಆಗುತ್ತಾನೆ ಎಂದು ಅಚ್ಚರಿಯ ಹೇಳಿಕೆ ಕಾಸರಗೋಡು: ರಾಜಕೀಯದಲ್ಲಿ ಯಾರು, ಯಾರಿಗೆ, ಯಾವಾಗ ಮಿತ್ರರಾಗುತ್ತಾರೆ, ಯಾವಾಗ ಶತ್ರುವಾಗುತ್ತಾರೆ ಎನ್ನುವುದನ್ನು ಊಹಿಸಿವುದು ಕೂಡ ಕಷ್ಟ. ಇದಕ್ಕೆ ತಾಜಾ ಉದಾಹರಣೆಯೆಂದರೆ ಉಪಮುಖ್ಯಮಂತ್ರಿ ಡಿ.ಕೆ.ಶೀವಕುಮಾರ್‌ ಮತ್ತು ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು. ನಿನ್ನೆ ವೇದಿಕೆಯೊಂದರಲ್ಲಿ ಕಟೀಲು ಪರವಾಗಿ ಡಿಕೆಶಿ ಭರ್ಜರಿಯಾಗಿ ಬ್ಯಾಟಿಂಗ್‌ ಮಾಡಿದ್ದು, ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗುರಿಯಾಗಿದೆ. ಕಾಸರಗೋಡಿನ ಪ್ರಸಿದ್ಧ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ […]

ನಳಿನ್‌ ಕುಮಾರ್‌ ಕಟೀಲ್‌ ಪರ ಡಿಕೆಶಿ ಬ್ಯಾಟಿಂಗ್‌ Read More »

ಕಳ್ಳತನ ಮಾಡಿದ ಬಾಲಕರನ್ನು ಮರಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ

ಬೆಂಗಳೂರು: ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ಬಾಲಕರನ್ನು ಅಡಿಕೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿ ಗುಪ್ತಾಂಗಗಳಿಗೆ ಕೆಂಪು ಇರುವೆ ಬಿಟ್ಟು ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆಯೊಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರ ಬಳಿ ಇರುವ ಅಸ್ತಾಪನಹಳ್ಳಿಯಲ್ಲಿ ಏಪ್ರಿಲ್​ 4ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಚಿತ್ರಹಿಂಸೆ ನೀಡಿರುವ ವೀಡಿಯೊ ವೈರಲ್ ಆಗಿದೆ. ಪೊಲೀಸರು 9 ಜನರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದು, ಸುಭಾಷ್​ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಹಕ್ಕಿಪಿಕ್ಕಿ

ಕಳ್ಳತನ ಮಾಡಿದ ಬಾಲಕರನ್ನು ಮರಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ Read More »

ಡೀಸೆಲ್‌ ಬೆಲೆ ಏರಿಕೆಗೆ ಪ್ರತಿಭಟನೆ : ಏ.14ರಿಂದ ಲಾರಿ ಮುಷ್ಕರ

ಗೂಡ್ಸ್ ವಾಹನಗಳು, ಟ್ಯಾಕ್ಸಿ ಸೇರಿ 6 ಲಕ್ಷಕ್ಕೂ ವಾಹನಗಳ ಸಂಚಾರ ಸ್ಥಗಿತ ಬೆಂಗಳೂರು: ರಾಜ್ಯದಲ್ಲಿ ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಏ.14ರಿಂದ ಮುಷ್ಕರ ಹೂಡಲು ಲಾರಿ ಮಾಲೀಕರು ತೀರ್ಮಾನಿಸಿದ್ದಾರೆ. ಅಗತ್ಯ ವಸ್ತುಗಳ ದರ ಏರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಮತ್ತು ಟೋಲ್ ದರ ಹೆಚ್ಚಿಸಿದ್ದು ಇದು ಲಾರಿ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಡೀಸೆಲ್ ದರ ಏರಿಕೆ ಖಂಡಿಸಿ ಏಪ್ರಿಲ್​ 14ರ ಮಧ್ಯರಾತ್ರಿಯಿಂದ ಲಾರಿ ಮಾಲೀಕರ ಸಂಘ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

ಡೀಸೆಲ್‌ ಬೆಲೆ ಏರಿಕೆಗೆ ಪ್ರತಿಭಟನೆ : ಏ.14ರಿಂದ ಲಾರಿ ಮುಷ್ಕರ Read More »

ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸೇತುವೆ ಇಂದು ಮೋದಿಯಿಂದ ಉದ್ಘಾಟನೆ

ತಮಿಳುನಾಡಿನ ರಾಮೇಶ್ವರಂನಲ್ಲಿ ನಿರ್ಮಿಸಿದ ಪಂಬನ್‌ ಸೇತುವೆ ನವದೆಹಲಿ: ರಾಮನವಮಿ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು ತಮಿಳುನಾಡಿನ ರಾಮೇಶ್ವರಂನಲ್ಲಿ ಉದ್ಘಾಟಿಸಲಿದ್ದಾರೆ. ಪಂಬನ್ ಎಂದು ಕರೆಯಲ್ಪಡುವ ಈ ರೈಲು ಸೇತುವೆಯನ್ನು 550 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.‌ಮಧ್ಯಾಹ್ನ 12 ಗಂಟೆಗೆ ಪಂಬನ್ ಮತ್ತು ರಾಮೇಶ್ವರಂ ನಡುವಿನ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು ಮೋದಿ ಉದ್ಘಾಟಿಸಲಿದ್ದಾರೆ. ಆ ಮೂಲಕ ಅವರು ರಸ್ತೆ ಸೇತುವೆಯಿಂದ ರೈಲು ಮತ್ತು ಹಡಗು ಸಂಚಾರಕ್ಕೆ

ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸೇತುವೆ ಇಂದು ಮೋದಿಯಿಂದ ಉದ್ಘಾಟನೆ Read More »

ವಕ್ಫ್‌ ಮಸೂದೆಗಿನ್ನು ಸುಪ್ರೀಂ ಕೋರ್ಟ್‌ ಅಗ್ನಿಪರೀಕ್ಷೆ

ಅಂಕಿತ ಹಾಕಿದ ರಾಷ್ಟ್ರಪತಿ ದ್ರೌಪದಿ ಮುರ್ಮು ನವದೆಹಲಿ : ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಬೀಳೂವುದರೊಂದಿಗೆ ಅದು ಈಗ ಕಾಯಿದೆಯಾಗಿ ಮಾರ್ಪಟ್ಟಿದೆ. ರಾಷ್ಟ್ರಪತಿಗಳ ಅಂಕಿತ ಪಡೆಯುವ ಮೊದಲು ವಕ್ಫ್ ಮಸೂದೆಯನ್ನು ಎರಡೂ ಸದನಗಳು ಅಂಗೀಕರಿಸಿದ್ದವು. ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಬಿಸಿ ವಾಗ್ವಾದ ನಡೆದ ಸುದೀರ್ಘ ಚರ್ಚೆಯ ನಂತರ ಶುಕ್ರವಾರ ಬೆಳಗ್ಗೆ ರಾಜ್ಯಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಯಿತು. ರಾಜ್ಯಸಭೆಯಲ್ಲಿ ಸುಮಾರು 14 ಗಂಟೆಗಳ ಕಾಲ ಈ ಮಸೂದೆಯ ಬಗ್ಗೆ ಚರ್ಚೆ

ವಕ್ಫ್‌ ಮಸೂದೆಗಿನ್ನು ಸುಪ್ರೀಂ ಕೋರ್ಟ್‌ ಅಗ್ನಿಪರೀಕ್ಷೆ Read More »

ಟಾರ್ಗೆಟ್‌ ರೀಚ್‌ ಮಾಡದ ನೌಕರನಿಗೆ ನಾಯಿಯಂತೆ ನಡೆಯುವ ಶಿಕ್ಷೆ

ಖಾಸಗಿ ಕಂಪನಿ ನೀಡಿದ ಶಿಕ್ಷೆಯ ವೀಡಿಯೊ ವೈರಲ್‌ ಕೊಚ್ಚಿ: ಟಾರ್ಗೆಟ್‌ ರೀಚ್‌ ಮಾಡಲು ಸಾಧ್ಯವಾಗದ ಉದ್ಯೋಗಿಗಳನ್ನು ಕತ್ತಿಗೆ ಸರಪಳಿ ಬಿಗಿದು ನಾಯಿಯಂತೆ ನಡೆಸಿಕೊಂಡು ಹೋದ ಘಟನೆಯೊಂದು ಕೇರಳದಲ್ಲಿ ಸಂಭವಿಸಿದ್ದು, ಕೃತ್ಯದ ವೀಡಿಯೊ ಭಾರಿ ವೈರಲ್‌ ಆಗಿ ಆಕ್ರೋಶಕ್ಕೆ ಗುರಿಯಾಗಿದೆ.ಕೊಚ್ಚಿಯಲ್ಲಿರುವ ಮಾರ್ಕೆಟಿಂಗ್‌ ಕಂಪನಿಯೊಂದು ತನ್ನ ನೌಕರರಿಗೆ ಈ ಶಿಕ್ಷೆ ನೀಡಿದೆ ಎನ್ನಲಾಗಿದೆ. ಕಂಪನಿಯ ಮಾಜಿ ಮ್ಯಾನೇಜರ್‌ ಈ ವೀಡಿಯೊವನ್ನು ಬಹಿರಂಗಪಡಿಸಿದ ಬಳಿಕ ಸರಕಾರದ ಗಮನಕ್ಕೂ ಬಂದಿದೆ. ಟಾರ್ಗೆಟ್‌ ರೀಚ್‌ ಮಾಡಲಾಗದ ನೌಕರರಿಗೆ ಈ ಕಂಪನಿಯ ಮಾಲೀಕ ಈ ರೀತಿಯ

ಟಾರ್ಗೆಟ್‌ ರೀಚ್‌ ಮಾಡದ ನೌಕರನಿಗೆ ನಾಯಿಯಂತೆ ನಡೆಯುವ ಶಿಕ್ಷೆ Read More »

ಯುವತಿ ಮೇಲೆ ಅತ್ಯಾಚಾರ ಎಸಗಿದ ಜೈನ ಮುನಿಗೆ 10 ವರ್ಷ ಜೈಲು

ಗುರು ಎಂದು ಭಾವಿಸಿದಾತನೇ ಎಸಗಿದ ಘೋರ ಕೃತ್ಯ ಅಹಮದಾಬಾದ್: ಎಂಟು ವರ್ಷದ ಹಿಂದೆ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈನ ದಿಗಂಬರ ಪಂಥದ ಸನ್ಯಾಸಿ ಶಾಂತಿಸಾಗರ್‌ ಮಹಾರಾಜ್‌ ಎಂಬಾತನಿಗೆ ಸೂರತ್‌ನ ಸೆಶನ್ಸ್ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ 25,000 ರೂ. ದಂಡ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಎ.ಕೆ. ಶಾ ಅವರು ಅತ್ಯಾಚಾರ ಎಸಗಿದ ಆರೋಪದ ಮೇಲೆ 56 ವರ್ಷದ ದಿಗಂಬರ ಜೈನಮುನಿ ತಪ್ಪಿತಸ್ಥರೆಂದು ತೀರ್ಪು

ಯುವತಿ ಮೇಲೆ ಅತ್ಯಾಚಾರ ಎಸಗಿದ ಜೈನ ಮುನಿಗೆ 10 ವರ್ಷ ಜೈಲು Read More »

ಆಟೋ – ಕಾರು ಡಿಕ್ಕಿ | ಆಟೋ ಚಾಲಕ ಗಂಭೀರ ಗಾಯ

ಬೆಳ್ತಂಗಡಿ : ಆಟೋ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ  ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ವೇಣೂರು ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ನೌಶದ್ ಗಂಭೀರವಾಗಿ ಗಾಯಗೊಂಡ ಆಟೋ ಚಾಲಕ ಎನ್ನಲಾಗಿದೆ. ಕಾರು ಚಾಲಕ ಲಾರಿಯೊಂದನ್ನು ಓವರ್ ಟೇಕ್ ಮಾಡಲು ಹೋಗಿ ಈ ದುರ್ಘಟನೆ ನಡೆದಿದೆ. ಅತಿ ವೇಗದಿಂದ ಕಾರನ್ನು ಚಲಾಯಿಸಿದ ಪರಿಣಾಮ ಎದುರಿನಿಂದ ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿ ಕಾರು ಮಗುಚಿ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿರುವ ಆಟೋ ಚಾಲಕನನ್ನು ಮಂಗಳೂರಿನ

ಆಟೋ – ಕಾರು ಡಿಕ್ಕಿ | ಆಟೋ ಚಾಲಕ ಗಂಭೀರ ಗಾಯ Read More »

7 ನೇ ವಾರ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 3:30 ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 6ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.6 ಭಾನುವಾರದಂದು ಸಂಜೆ 3:30ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

7 ನೇ ವಾರ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 3:30 ಕ್ಕೆ ಚಿತ್ರ ಪ್ರದರ್ಶನ Read More »

ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಸರಕಾರಿ ಗುತ್ತಿಗೆಯಲ್ಲಿ 4 % ಮೀಸಲಾತಿ | ರದ್ದುಪಡಿಸುವಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ರಾಜ್ಯಪಾಲರಿಗೆ ಮನವಿ

ಪುತ್ತೂರು: ಕರ್ನಾಟಕ ಸರಕಾರ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಸರಕಾರಿ ಗುತ್ತಿಗೆಯಲ್ಲಿ 4% ಮೀಸಲಾತಿ ನೀಡಿದ್ದನ್ನು ರದ್ದು ಮಾಡುವಂತೆ ಹಿಂದೂ ಜನಜಾಗೃತಿ ಸಮಿತಿ ಆಯುಕ್ತರ ಸಹಾಯಕ ಪೂವಪ್ಪ ಅವರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದೆ. ಸರಕಾರದ ಟೆಂಡರ್ ಗಳಲ್ಲಿ ಅಲ್ಪಸಂಖ್ಯಾತರಿಗೆ 4% ಮೀಸಲಾತಿ ನೀಡುವ ಮಸೂದೆಯನ್ನು ಸಹ ಮಂಡಿಸಲಾಗಿದೆ. ಭಾರತದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲದಿರುವಾಗಲೂ ಸರಕಾರ ಸಂವಿಧಾನಕ್ಕೆ ವಿರುದ್ಧವಾಗಿ ಸಂವಿಧಾನಬಾಹಿರ ಮೀಸಲಾತಿಯನ್ನು ನೀಡಿದೆ. ಇದನ್ನು ರದ್ದುಮಾಡುವಂತೆ ಮನವಿಯಲ್ಲಿ ಸಮಿತಿ ಉಲ್ಲೇಖಿಸಿದೆ. ಕರ್ನಾಟಕ ಸರಕಾರ ಇತ್ತಿಚೇಗೆ ತನ್ನ ಬಜೆಟ್

ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಸರಕಾರಿ ಗುತ್ತಿಗೆಯಲ್ಲಿ 4 % ಮೀಸಲಾತಿ | ರದ್ದುಪಡಿಸುವಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ರಾಜ್ಯಪಾಲರಿಗೆ ಮನವಿ Read More »

error: Content is protected !!
Scroll to Top