ಸುದ್ದಿ

ಗ್ಯಾಸ್‌ ಸಿಲಿಂಡರ್‌ ಬೆಲೆ ತುಸು ಇಳಿಕೆ

ಹೊಸದಿಲ್ಲಿ : ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ತುಸು ಇಳಿಸುವ ಮೂಲಕ ತೈಲ ಕಂಪನಿಗಳು ಜನತೆಗೆ ಹೊಸ ವರ್ಷದ ಗಿಫ್ಟ್‌ ನೀಡಿವೆ. ಕಳೆದ ವರ್ಷವಿಡೀ ನಿರಂತರ ಏರಿಕೆ ಕಂಡಿದ್ದ ಎಲ್‌ಪಿಜಿ ಸಿಲಿಂಡರ್‌ ದರ ಹೊಸ ವರ್ಷದ ಮೊದಲ ದಿನವೇ ತುಸು ಇಳಿಕೆಯಾಗಿದೆ. ವಾಣಿಜ್ಯ ಬಳಕೆಯ ಎಲ್​​ಪಿಜಿ ಸಿಲಿಂಡರ್ ಬೆಲೆ 14.50 ರೂಪಾಯಿಯಷ್ಟು ಇಳಿಕೆ ಕಂಡಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ಸಿಲಿಂಡರ್‌ ಬೆಲೆ ಪರಿಷ್ಕರಣೆ ಮಾಡುತ್ತವೆ. […]

ಗ್ಯಾಸ್‌ ಸಿಲಿಂಡರ್‌ ಬೆಲೆ ತುಸು ಇಳಿಕೆ Read More »

ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ರಾಷ್ಟ್ರಪತಿ, ಪ್ರಧಾನಿ

ಹೊಸದಿಲ್ಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯರು ದೇಶದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.ಟ್ವಿಟರ್‌ನಲ್ಲಿ ಶೂಭಾಶಯ ತಿಳಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. 2025ರ ವರ್ಷವು ಎಲ್ಲರಿಗೂ ಸಂತೋಷ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರಲಿ. ಈ ಸಂದರ್ಭದಲ್ಲಿ ಭಾರತ ಮತ್ತು ವಿಶ್ವಕ್ಕೆ ಉಜ್ವಲ, ಅಂತರ್ಗತ ಮತ್ತು ಸುಸ್ಥಿರ ಭವಿಷ್ಯವನ್ನು ಸೃಷ್ಟಿಸಲು ಒಟ್ಟಾಗಿ ಕೆಲಸ ಸಂಕಲ್ಪ ಮಾಡೋಣ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ ಎಲ್ಲರಿಗೂ

ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ರಾಷ್ಟ್ರಪತಿ, ಪ್ರಧಾನಿ Read More »

ಉಡುಪಿ ಕೃಷ್ಣ ಮಠದಲ್ಲಿ ಅಯ್ಯಪ್ಪ ವ್ರತಧಾರಿಗಳ ಪುಂಡಾಟಿಕೆ : ಎಂಟು ಮಂದಿ ಬಂಧನ

ಮಠದ ಸಿಬ್ಬಂದಿ, ದಿವಾನ, ಕಾನ್‌ಸ್ಟೆಬಲ್‌ ಮೇಲೆ ಹಲ್ಲೆಗೆ ಯತ್ನ ಉಡುಪಿ : ಉಡುಪಿ ಶ್ರೀಕೃಷ್ಣ ಮಠಕ್ಕೆ ದೇವರ ದರ್ಶನಕ್ಕೆ ಬಂದು ದಾಂಧಲೆ ನಡೆಸಿ, ಮಠದ ಸಿಬ್ಬಂದಿ, ದಿವಾನರಿಗೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಎಂಟು ಮಂದಿ ಅಯ್ಯಪ್ಪ ಮಾಲಾಧಾರಿಗಳನ್ನು ಬಂಧಿಸಲಾಗಿದೆ. ಡಿ.29ರಂದು ರಾತ್ರಿ ಈ ಘಟನೆ ನಡೆದಿದ್ದು, ಹೈದರಬಾದಿನ ಶಿವಕುಮಾರ, ವಿಶಾಲ್, ರಾಜು, ನವೀನ್ ರಾಜ್, ರವಿಕಿರಣ್, ಭಾನು, ಉಮೆಂದರ್, ರವಿಕಾಂತ್ ಬಂಧಿತರು. ಶ್ರೀಕೃಷ್ಣ ಮಠದ ಒಳಗೆ ಹಾಗೂ ಹೊರಗೆ

ಉಡುಪಿ ಕೃಷ್ಣ ಮಠದಲ್ಲಿ ಅಯ್ಯಪ್ಪ ವ್ರತಧಾರಿಗಳ ಪುಂಡಾಟಿಕೆ : ಎಂಟು ಮಂದಿ ಬಂಧನ Read More »

ಪ್ರಮುಖ ಘಟನೆಗಳ ಮೆಲುಕಿನೊಂದಿಗೆ ಹೊಸ ವರ್ಷಕ್ಕೆ ಸ್ವಾಗತ

2024ರ ಟಾಪ್ 26 ಸುದ್ದಿಗಳು (ಮುಂದುವರಿದ ಭಾಗ)14) ದಿಲ್ಲಿ ಸಿಎಂ ಕೇಜ್ರಿವಾಲ್ ಅರೆಸ್ಟ್ ಭ್ರಷ್ಟಾಚಾರದ ಆರೋಪದಲ್ಲಿ ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ED ಮತ್ತು ಸಿಬಿಐ ಬಂಧಿಸಿ ವಿಚಾರಣೆ ಮಾಡಿ ಸೆರೆಮನೆಗೆ ಕಳುಹಿಸಿದ್ದು ಬಹು ದೊಡ್ಡ ಸುದ್ದಿ (ಮಾರ್ಚ್ 21). ಅವರು ಜೈಲಿನ ಒಳಗೆ ಕೂತು ಅಧಿಕಾರವನ್ನು ಚಲಾಯಿಸಿದ್ದು ಇನ್ನೂ ದೊಡ್ಡ ಸುದ್ದಿ. 15) ಇಸ್ರೇಲ್ ಕದನ ಕುತೂಹಲ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಇನ್ನೂ ಮುಂದುವರಿಯುತ್ತಿದ್ದು ಮೂರನೇ ಮಹಾಯುದ್ಧದ

ಪ್ರಮುಖ ಘಟನೆಗಳ ಮೆಲುಕಿನೊಂದಿಗೆ ಹೊಸ ವರ್ಷಕ್ಕೆ ಸ್ವಾಗತ Read More »

ಕಡಬ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ರಾಕೇಶ್ ರೈ ಕೆಡಂಜಿ, ಉಪಾಧ್ಯಕ್ಷರಾಗಿ ಸುಕುಮಾರ್ ಶಿರಾಡಿ,  ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ್, ಕೋಶಾಧಿಕಾರಿಯಾಗಿ ಜಯರಾಮ್ ಭಟ್

ಕಡಬ : ನೂತನ ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ರಾಕೇಶ್ ರೈ ಕೆಡಂಜಿ, ಉಪಾಧ್ಯಕ್ಷರಾಗಿ ಸುಕುಮಾರ್ ಶಿರಾಡಿ,  ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ್, ಕೋಶಾಧಿಕಾರಿಯಾಗಿ ಜಯರಾಮ್ ಭಟ್ ಆಯ್ಕೆಯಾಗಿದ್ದಾರೆ. ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಅಧೀನಕ್ಕೆ ಒಳಪಟ್ಟಿರುವ, ಕಡಬ ತಾಲೂಕು  ಕೃಷಿಕ ಸಮಾಜದ ನೂತನ ಪದಾಧಿಕಾರಿಗಳ  ಆಯ್ಕೆ ಕಡಬ ರೈತರ ಸಂಪರ್ಕ ಕೇಂದ್ರದಲ್ಲಿ ಇಂದು ಡಾ. ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  ಕೃಷಿ ಅಧಿಕಾರಿ  ಭರಮಣ್ಣ ಅವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು. ಜಿಲ್ಲಾ ಪ್ರತಿನಿಧಿಯಾಗಿ ಮಹೇಶ್

ಕಡಬ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ರಾಕೇಶ್ ರೈ ಕೆಡಂಜಿ, ಉಪಾಧ್ಯಕ್ಷರಾಗಿ ಸುಕುಮಾರ್ ಶಿರಾಡಿ,  ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ್, ಕೋಶಾಧಿಕಾರಿಯಾಗಿ ಜಯರಾಮ್ ಭಟ್ Read More »

 ಕೃಷಿಕ ಸಮಾಜದ  ಜಿಲ್ಲಾ ಪ್ರತಿನಿಧಿಯಾಗಿ  ಸಂಜೀವ ಮಠಂದೂರು  ಆಯ್ಕೆ

ಪುತ್ತೂರು : ಕೃಷಿಕ ಸಮಾಜದ  ಜಿಲ್ಲಾ ಪ್ರತಿನಿಧಿಯಾಗಿ  ಸಂಜೀವ ಮಠಂದೂರು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ, ಪುತ್ತೂರು ತಾಲೂಕು, ಇದರ ಕೃಷಿಕ ಸಮಾಜ ನಿರ್ದೇಶಕರ  ಚುನಾವಣೆಯಲ್ಲಿ ಅವಿರೋಧ ಸದಸ್ಯರಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ವಿಜಯ್ ಕುಮಾರ್ ರೈ ಕೋರಂಗ, ವಿನೋದ್ ಕುಮಾರ್ ರೈ, ಮೂಲಚಂದ್ರ, ಎಪಿ ಸದಾಶಿವ,  ಬಿ ಗೋವಿಂದ ಬೋರ್ಕರ್, ಎಂ ವೈ ರಾಮ ಪ್ರಸಾದ್, ಬಾಲಕೃಷ್ಣ ಕೆ, ದಯಾನಂದ ಕೆ, ಎಂ ದೇವಣ್ಣರೈ, ಡಿ.

 ಕೃಷಿಕ ಸಮಾಜದ  ಜಿಲ್ಲಾ ಪ್ರತಿನಿಧಿಯಾಗಿ  ಸಂಜೀವ ಮಠಂದೂರು  ಆಯ್ಕೆ Read More »

ಮೂರನೇ ಬಾರಿ ಹೆಣ್ಣು ಮಗುವಿಗೆ ಜನ್ಮ ನೀಡಿದಕ್ಕಾಗಿ ಪತ್ನಿಯನ್ನು ಬೆಂಕಿಹಚ್ಚಿ ಸುಟ್ಟ ಗಂಡ

ಮಹಾರಾಷ್ಟ್ರ : ಮೂರನೇ ಬಾರಿಯೂ ಹೆಣ್ಣುಮಗುವನ್ನು ಹೆತ್ತಿದ್ದಕ್ಕೆ ಪತಿಯೊಬ್ಬ ಪತ್ನಿಯನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಹೆಣ್ಣು-ಗಂಡು ಇಬ್ಬರೂ ಸಮಾನರು ಎನ್ನುವ ಈ ಕಾಲದಲ್ಲಿ ಹೆಣ್ಣುಮಗುವನ್ನು ಹೆತ್ತಿದ್ದಕ್ಕೆ ಪತ್ನಿಯನ್ನೇ ಬೆಂಕಿ ಹಚ್ಚಿ ಗಂಡ ಕೊಲೆ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಮಹಿಳೆ ಮೂರನೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು, ಕೋಪಗೊಂಡ ಪತಿ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಆಕೆ ಹೆರುವ ಮೊದಲೆ ಮುಂದೆ ಯು ಹೆಣ್ಣು ಮಗುವಿಗೆ

ಮೂರನೇ ಬಾರಿ ಹೆಣ್ಣು ಮಗುವಿಗೆ ಜನ್ಮ ನೀಡಿದಕ್ಕಾಗಿ ಪತ್ನಿಯನ್ನು ಬೆಂಕಿಹಚ್ಚಿ ಸುಟ್ಟ ಗಂಡ Read More »

ಕಾರಿಗೆ ಟಿಪ್ಪರ್ ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ

ಬೆಳ್ತಂಗಡಿ : ಉಜಿರೆ ಹಳೆಪೇಟೆಯಲ್ಲಿ ಕಾರಿಗೆ ಹಿಂದಿನಿಂದ ಟಿಪ್ಪರ್ ಡಿಕ್ಕಿ  ಹೊಡೆದ ಘಟನೆ ಇಂದು(ಡಿ.31) ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಚಾಲಕ ಬೆಳ್ತಂಗಡಿ ಕಕ್ಕೇನ ನಿವಾಸಿ ಮುನೀರ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡು ಸ್ಥಳೀಯ ಆಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ದಾಖಲಾಗಿದ್ದಾರೆ. ಅಪಘಾತದ ಸಂದರ್ಭದಲ್ಲಿ  ಕಾರಿನಲ್ಲಿದ್ದ  ಏರ್ ಬ್ಯಾಗ್ ಓಪನ್ ಆಗಿದೆ ಎಂದು ತಿಳಿದು ಬಂದಿದೆ.

ಕಾರಿಗೆ ಟಿಪ್ಪರ್ ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ Read More »

ಸಿದ್ದರಾಮಯ್ಯ ದೇಶದ 3ನೇ ಶ್ರೀಮಂತ ಮುಖ್ಯಮಂತ್ರಿ

ಕರ್ನಾಟಕದ ಸಿಎಂ ಬಳಿ ಎಷ್ಟು ಸಂಪತ್ತು ಇದೆ ಗೊತ್ತೇ? ಹೊಸದಿಲ್ಲಿ: ದೇಶದ ಅತಿ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಮೂರನೇ ಸ್ಥಾನದಲ್ಲಿದ್ದಾರೆ. ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಿರಿವಂತ ಸಿಎಂಗಳ ಸಾಲಿನಲ್ಲಿ ಮೊದಲ ಹಾಗೂ ಅರುಣಾಚಲ ಪ್ರದೇಶದ ಪೆಮಾ ಖಂಡು ಎರಡನೇ ಸ್ಥಾನದಲ್ಲಿದ್ದಾರೆ. ಚಂದ್ರಬಾಬು ನಾಯ್ಡು 931 ಕೋಟಿ ರೂ. ಹಾಗೂ ಪೆಮಾ

ಸಿದ್ದರಾಮಯ್ಯ ದೇಶದ 3ನೇ ಶ್ರೀಮಂತ ಮುಖ್ಯಮಂತ್ರಿ Read More »

ಸಚಿವ ಪ್ರಿಯಾಂಕ್‌ ಖರ್ಗೆಗೆ ಡೆತ್‌ನೋಟ್‌ ಉರುಳು

ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಬರೆದಿಟ್ಟ ಪತ್ರದಲ್ಲಿದೆ ಸ್ಫೋಟಕ ಮಾಹಿತಿ ಬೆಂಗಳೂರು : ಬೀದರ್ ಮೂಲದ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ತನ್ನ ಪಾತ್ರ ಇಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳುತ್ತಿದ್ದರೂ ಸಚಿನ್‌ ಪಾಂಚಾಲ್‌ ಬರೆದಿಟ್ಟಿದ್ದ ಆರು ಪುಟಗಳ ಡೆತ್‌ನೋಟ್‌ನಲ್ಲಿ ಹಲವು ಬಾರಿ ಪ್ರಿಯಾಂಕ್‌ ಖರ್ಗೆ ಹೆಸರು ಉಲ್ಲೇಖಿಸಲ್ಪಟ್ಟಿರುವುದು ಬೆಳಕಿಗೆ ಬಂದಿದೆ. ಪ್ರಿಯಾಂಕ್‌ ಖರ್ಗೆಯ ಆಪ್ತ ರಾಜು ಕಪನೂರ್ (ಗುತ್ತಿಗೆದಾರನಿಗೆ ಹಣಕ್ಕಾಗಿ ಬೆದರಿಕೆ ಹಾಕಿದ್ದ ಆರೋಪ ಎದುರಿಸುತ್ತಿರುವ ವ್ಯಕ್ತಿ) ಈ ಪ್ರಕರಣದ ಪ್ರಮುಖ ಆರೋಪಿ ಎನ್ನುವುದನ್ನು

ಸಚಿವ ಪ್ರಿಯಾಂಕ್‌ ಖರ್ಗೆಗೆ ಡೆತ್‌ನೋಟ್‌ ಉರುಳು Read More »

error: Content is protected !!
Scroll to Top