ಸುದ್ದಿ

ಬಾರ್ಯ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಸೀಯಾಳ ಅಭಿಷೇಕ

ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ವರುಣ ಕೃಪೆಗಾಗಿ ಸಾಮೂಹಿಕ ಸೀಯಾಳ ಅಭಿಷೇಕವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಂತೆ ನಡೆಯಿತು. ಕ್ಷೇತ್ರದ ಆಡಳಿತ ಸೇವಾ ಟ್ರಸ್ಟಿನ ಉಪಾಧ್ಯಕ್ಷ ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪೈ, ಟ್ರಸ್ಟಿಗಳಾದ ರಾಮಣ್ಣಗೌಡ, ಉಮೇಶ್ ಗಿರಿಗುಡ್ಡೆ, ವಿಜಯಲಕ್ಷ್ಮಿ ರೈ, ವಿಶ್ವನಾಥ ಗೌಡ ಆಲಡ್ಕ, ಮೋನಪ್ಪ ಗೌಡ ಮತ್ತು ಭಗವದ್ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ದೇವಳದ ಪ್ರಧಾನ ಅರ್ಚಕ ಗುರುಪ್ರಸಾದ್ ನೂರಿತ್ತಾಯ ಸೀಯಾಳ ಅಭಿಷೇಕ ಸಮರ್ಪಿಸಿದರು, ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ್ ಬಾರ್ಯ […]

ಬಾರ್ಯ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಸೀಯಾಳ ಅಭಿಷೇಕ Read More »

ಹಾರ್ಮುಜ್‌ನಲ್ಲಿ ಭಾರತಕ್ಕೆ ತೊಂದರೆಯಾಗುವುದಿಲ್ಲ : ಇರಾನ್‌ ಭರವಸೆ

ವಿದೇಶಾಂಗ ಸಚಿವರಾದ ಸಚಿವ ಎಸ್ ಜೈಶಂಕರ್-ಸೈಯದ್ ಅಬ್ಬಾಸ್ ಆರಾಘ್ಚಿ ಭೇಟಿ ನವದೆಹಲಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಆರಾಘ್ಚಿ ಭರವಸೆ ನೀಡಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ರಾಷ್ಟ್ರಗಳ ವಿದೇಶಾಂಗ ಸಚಿವರ ಶೃಂಗ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿದ ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಆರಾಘ್ಚಿ ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ ಸ್ನೇಹಪರ ರಾಷ್ಟ್ರಗಳು ವ್ಯಾಪಾರ ಮತ್ತು ಸಾಗಾಣಿಕೆ

ಹಾರ್ಮುಜ್‌ನಲ್ಲಿ ಭಾರತಕ್ಕೆ ತೊಂದರೆಯಾಗುವುದಿಲ್ಲ : ಇರಾನ್‌ ಭರವಸೆ Read More »

ಬೆಳ್ತಂಗಡಿ: ಪೊಲೀಸ್‌ ಸಿಬ್ಬಂದಿ ಮನೆಯಲ್ಲಿ 14 ಲ.ರೂ. ಮೌಲ್ಯದ ನಗ-ನಗದು ಕಳ್ಳತನ

ಪೊಲೀಸ್‌ ಸಿಬ್ಬಂದಿ ಮನೆಯಲ್ಲಿರುವಾಗಲೇ ಕೈ ಚಳಕ ತೋರಿಸಿದ ಕಳ್ಳರು ಬೆಳ್ತಂಗಡಿ: ಪದ್ಮುಂಜದ ಗಾಡಕೋಡಿ ಎಂಬಲ್ಲಿ ಬೆಳ್ತಂಗಡಿ ಪೋಲೀಸ್ ಸಿಬ್ಬಂದಿ ಕರುಣಾಕರ ಗೌಡ ಎಂಬವರ ಮನೆಯಲ್ಲಿ ಮೇ 15ರಂದು ರಾತ್ರಿ ಕಳವಾಗಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಸುಮಾರು 13 ಲಕ್ಷ ರೂಪಾಯಿ ವೆಚ್ಚದ ಚಿನ್ನಾಭರಣ ಒಂದು ಲಕ್ಷ ರೂಪಾಯಿ ನಗದು ಕಳುವಾಗಿದೆ ಎಂದು ದೂರು ನೀಡಿಲಾಗಿದೆ . ಮನೆಯ ಒಡೆಯ ಕರುಣಾಕರ ಮನೆಯಲ್ಲಿ ಒಬ್ಬರೇ ಇದ್ದು ಪತ್ನಿ ಮಕ್ಕಳು ಬೆಂಗಳೂರಿನಲ್ಲಿ ಇದ್ದರು ಎಂದು ತಿಳಿದುಬಂದಿದೆ.

ಬೆಳ್ತಂಗಡಿ: ಪೊಲೀಸ್‌ ಸಿಬ್ಬಂದಿ ಮನೆಯಲ್ಲಿ 14 ಲ.ರೂ. ಮೌಲ್ಯದ ನಗ-ನಗದು ಕಳ್ಳತನ Read More »

ಇಸ್ಲಾಮಿಕ್ ಸ್ಟೇಟ್‌ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಖತಂ

ಅಮೆರಿಕ ಮತ್ತು ನೈಜೀರಿಯಾ ಪಡೆಗಳ ಜಂಟಿ ಕಾರ್ಯಾಚರಣೆ ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆಯ ಎರಡನೇ ಪ್ರಮುಖ ಕಮಾಂಡರ್‌ನನ್ನು ಅಮೆರಿಕ ಮತ್ತು ನೈಜೀರಿಯಾ ಪಡೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಪ್ರಕಟಿಸಿದ್ದಾರೆ. ಅತ್ಯಂತ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದ್ದ ಅಬು-ಬಿಲಾಲ್ ಅಲ್-ಮಿನುಕಿ ಸಾವಿನೊಂದಿಗೆ ಜಾಗತಿಕ ಮಟ್ಟದಲ್ಲಿ ಐಎಸ್ ಸಂಘಟನೆಯ ಚಟುವಟಿಕೆಗಳಿಗೆ ಭಾರಿ ಹಿನ್ನಡೆಯಾಗಿದೆ. ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಟ್ರಂಪ್, ನೈಜೀರಿಯಾದಲ್ಲಿ ನಡೆದ ಈ

ಇಸ್ಲಾಮಿಕ್ ಸ್ಟೇಟ್‌ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಖತಂ Read More »

ಉಪ ಚುನಾವಣೆ ಅಭ್ಯರ್ಥಿ ಹಾವು ಕಡಿದು ಸಾವು

ಬಹಿರ್ದೆಸೆಗೆ ಹೋದಾಗ ಕಚ್ಚಿದ ಹಾವು ಕಾರವಾರ: ಗೋವಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕೇತನ್ ಭಾಟಿಕರ್ ನಾಗರಹಾವು ಕಡಿದು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡ್ ಬಳಿ ಹಾವು ಕಡಿದು ಭಾಟಿಕರ್‌ ಮೃತಪಟ್ಟಿದ್ದಾರೆ. ಅವರು ಗೋವಾದ ಪೊಂಡಾದಿಂದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ ಬಳಿಯ ಅನಮೋಡ್ ಬಳಿ ಪಕ್ಷದ ಕಾರ್ಯ ನಿಮಿತ್ತ ಸ್ನೇಹಿತನೊಂದಿಗೆ ಬಂದಿದ್ದರು. ಮೂತ್ರ ವಿಸರ್ಜನೆಗಾಗಿ ಅನಮೋಡ್ ಘಟ್ಟ ಭಾಗದ ಕಾಡಿನಲ್ಲಿ ಕಾರು ನಿಲ್ಲಿಸಿ ತೆರಳಿದ್ದರು. ಮೂತ್ರ ವಿಸರ್ಜಿಸುವ ವೇಳೆ ನಾಗರಹಾವು

ಉಪ ಚುನಾವಣೆ ಅಭ್ಯರ್ಥಿ ಹಾವು ಕಡಿದು ಸಾವು Read More »

ಐದು ದಿನ ಮುಂಚಿತವಾಗಿ ಮುಂಗಾರು ಕೇರಳಂ ಪ್ರವೇಶ

ಈ ಮಾಸಾಂತ್ಯದೊಳಗೆ ಮಳೆಗಾಲ ಶುರುವಾಗುವ ಸಾಧ್ಯತೆ ನವದೆಹಲಿ: ಈ ವರ್ಷದ ನೈಋತ್ಯ ಮುಂಗಾರು ಮೇ 26ರಿಂದ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಪ್ರತಿವರ್ಷ ಸಾಮಾನ್ಯವಾಗಿ ಜೂನ್ 1ರಂದು ಕೇರಳಕ್ಕೆ ಮುಂಗಾರು ಆಗಮಿಸುತ್ತದೆ. ಆದರೆ ಈ ಬಾರಿ ಐದು ದಿನ ಮುಂಚಿತವಾಗಿ ಆರಂಭವಾಗುವ ನಿರೀಕ್ಷೆ ಇದೆ. ಹವಾಮಾನ ಇಲಾಖೆಯ ಪ್ರಕಾರ, ಮೇ 26ಕ್ಕೆ ನಾಲ್ಕು ದಿನಗಳ ವ್ಯತ್ಯಾಸದ ಸಾಧ್ಯತೆಯೊಂದಿಗೆ ಮುಂಗಾರು ಕೇರಳ ಪ್ರವೇಶಿಸಬಹುದು. ಕಳೆದ ವರ್ಷವೂ ಮೇ 24ರಂದು ಮುಂಗಾರು ಕೇರಳ

ಐದು ದಿನ ಮುಂಚಿತವಾಗಿ ಮುಂಗಾರು ಕೇರಳಂ ಪ್ರವೇಶ Read More »

ಟಯರ್‌ ಸ್ಫೋಟಗೊಂಡು ಬಸ್‌ ಬೆಂಕಿಗಾಹುತಿ : 36 ಪ್ರಯಾಣಿಕರು ಅದೃಷ್ಟವಶಾತ್‌ ಪಾರು

ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್‌ ಹಾಸನ : ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರ ಟಯರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡು ಇಡೀ ಬಸ್‌ ಉರಿದು ಹೋದ ಘಟನೆ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್‌ ಪಾರಾಗಿದ್ದಾರೆ. ಬಸ್‌ನಲ್ಲಿ 36 ಪ್ರಯಾಣಿಕರಿದ್ದು, ಟೈರ್ ಸ್ಫೋಟಗೊಳ್ಳುತ್ತಿದ್ದಂತೆಯೇ ಚಾಲಕ ತಕ್ಷಣ ಜಾಗರೂಕತೆಯಿಂದ ಬಸ್ ನಿಲ್ಲಿಸಿ ಎಲ್ಲರನ್ನೂ ಕೆಳಗಿಳಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಪ್ರಯಾಣಿಕರ ಲಗೇಜ್‌ಗಳು,

ಟಯರ್‌ ಸ್ಫೋಟಗೊಂಡು ಬಸ್‌ ಬೆಂಕಿಗಾಹುತಿ : 36 ಪ್ರಯಾಣಿಕರು ಅದೃಷ್ಟವಶಾತ್‌ ಪಾರು Read More »

ಜಾನುವಾರು ಅಕ್ರಮ ಸಾಗಾಟ : ಇಬ್ಬರು ಆರೋಪಿಗಳ ಬಂಧನ

ಕಾರಿನ ಹಿಂದಿನ ಸೀಟು ತೆಗೆದು ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪಿಗಳು ಮೂಡುಬಿದಿರೆ : ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಹಂಡೇಲಿನ ಮಹಮ್ಮದ್ ಆರಿಫ್ ಮತ್ತು ಆತನ ಸಹಚರ ಗಂಟಾಲಕಟ್ಟೆಯ ಇಮ್ರಾನ್ ಯಾನೆ ಇಬ್ರಾಹಿಂ ಬಂಧಿತ ಆರೋಪಿಗಳು. ಗುರುವಾರ ಬೆಳಗ್ಗೆ 7 ಗಂಟೆಗೆ ಪಿಎಸ್‌ಐ ಕೃಷ್ಣಪ್ಪ ಮತ್ತು ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳುವಾಯಿ ಕಡೆಯಿಂದ ಮಾರ್ನಾಡು ಅಳಿಯೂರು ಕಡೆಗೆ ಮಾರುತಿ ಬ್ರೀಜಾ ಕಾರಿನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ಲಭಿಸಿ

ಜಾನುವಾರು ಅಕ್ರಮ ಸಾಗಾಟ : ಇಬ್ಬರು ಆರೋಪಿಗಳ ಬಂಧನ Read More »

ಜೂ.30ರಿಂದ ಕರ್ನಾಟಕದಲ್ಲಿ ಎಸ್‌ಐಆರ್‌ ಶುರು

ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ಕಾರ್ಯ ಬೆಂಗಳೂರು: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದಿನಾಂಕ ಘೋಷಣೆ ಆಗಿದೆ. ಜೂನ್ 20ರಿಂದ ತರಬೇತಿ ಮತ್ತು ಮುದ್ರಣ ಕಾರ್ಯ ಶುರುವಾಗುತ್ತದೆ. ಜೂ.30ರಿಂದ ಜು.29ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ನಡೆಸಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಾದ ಅನ್ಬುಕುಮಾರ್ ತಿಳಿಸಿದರು. ಈಗಾಗಲೇ ಎಸ್‌ಐಆರ್ ಗಾಗಿ ಮ್ಯಾಪಿಂಗ್‌ ಕಾರ್ಯ ಮಾಡಲಾಗಿದೆ. ಎಸ್‌ಐಆರ್‌ಗೆ ಈಗಾಗಲೇ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ.

ಜೂ.30ರಿಂದ ಕರ್ನಾಟಕದಲ್ಲಿ ಎಸ್‌ಐಆರ್‌ ಶುರು Read More »

4500 ಕೋ. ರೂ. ವಂಚನೆ : ಆರೋಪಿ ಸೆರೆ

ಆನ್‌ಲೈನ್‌ ಮೂಲಕವೇ ಹೂಡಿಕೆ ಮಾಡಿಸಿಕೊಂಡು ಪಂಗನಾಮ ಹಾಕಿದ್ದ ಆರೋಪಿ ಬೆಳಗಾವಿ : 4500 ಕೋಟಿ ರೂಪಾಯಿ ವಂಚನೆ ಆರೋಪ ಪ್ರಕರಣದಲ್ಲಿ ಶಿವಂ ಅಸೋಸಿಯೇಟ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ, ದೊಡ್ಡ ಕಾರ್ಯಕ್ರಮ, ಹೆಚ್ಚಿನ ಬಡ್ಡಿ ದರದ ಭರವಸೆ ಹಾಗೂ ವಿವಾದಾತ್ಮಕ ಭಾಷಣಗಳ ಮೂಲಕ ಶಿವಂ ಅಸೋಸಿಯೇಟ್ ಎಂಬ ಸಂಸ್ಥೆ ಜನರನ್ನು ಆಕರ್ಷಿಸಿತ್ತು. ಶುಕ್ರವಾರ ಬೆಳಗಾವಿಯ ಶಿವಬಸವ ನಗರದಲ್ಲಿರುವ ಕಚೇರಿ ಸೇರಿದಂತೆ ಎರಡು ಕಡೆ ಅಧಿಕಾರಿಗಳು

4500 ಕೋ. ರೂ. ವಂಚನೆ : ಆರೋಪಿ ಸೆರೆ Read More »

error: Content is protected !!
Scroll to Top