ಸುದ್ದಿ

ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಶಾಂತಿಮೊಗರು ಕುದ್ಮಾರಿನಲ್ಲಿ ವೈಭವದ ಷಷ್ಠಿ ಮಹೋತ್ಸವ: ಅನ್ನ ಸಂತರ್ಪಣೆ

ಕಡಬ: ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಶಾಂತಿಮೊಗರು ಕುದ್ಮಾರಿನಲ್ಲಿ ಇಂದು ವೈಭವದ ಷಷ್ಠಿ ಮಹೋತ್ಸವ ನಡೆದಿದೆ. ಆ ಪ್ರಯುಕ್ತ ಬೆಳಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ದೇವರಿಗೆ ಕಲಶ ಪೂಜೆ, ಕಲಶಾಭಿಷೇಕ, ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದಿದೆ. ಶ್ರೀ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವೂ ನಡೆದಿದೆ. ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಶ್ರೀ ದೇವರ ದರ್ಶನ ಪಡೆದು ಪುನೀತರಾದರು.

ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಶಾಂತಿಮೊಗರು ಕುದ್ಮಾರಿನಲ್ಲಿ ವೈಭವದ ಷಷ್ಠಿ ಮಹೋತ್ಸವ: ಅನ್ನ ಸಂತರ್ಪಣೆ Read More »

ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಸುಮಾರು 65 ವರ್ಷದ ಮಹಿಳೆಯ ಮೃತದೇಹ ಇದಾಗಿದೆ. ಇಂದು ಬೆಳಗ್ಗೆ ನದಿಗೆ ಹಾರಿರಬಹುದು ಎಂದು ಅಂದಾಜಿಸಲಾಗಿದೆ. ಮೃತದೇಹವನ್ನು ಸ್ಥಳೀಯರು ಮೇಲಕ್ಕೆತ್ತಿದ್ದು, ಅದನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿರುವುದಾಗಿ ಬಂಟ್ವಾಳ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಬಂಧಪಟ್ಟವರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ Read More »

ಪಲ್ಟಿಯಾಗಿ ನಜ್ಜುಗುಜ್ಜಾದ ಕಾರು: ಚಾಲಕನಿಗೆ ಗಾಯ

ಪುತ್ತೂರು: ಬಡಕ್ಕೋಡಿ ಮಸೀದಿ ಸಮೀಪದ ಪುತ್ತೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಾರಿನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಚಾಲಕ ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ಚಾಲಕನನ್ನು ‌ಸವಣೂರಿನ ಯತೀಶ್‌ ಕೆಡೆಂಜಿ ಎಂದು ಗುರುತಿಸಲಾಗಿದೆ. ಅವರ ತಲೆಗೆ ಗಾಯವಾಗಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಾಗೆಯೇ ಅವರು ಚಲಾಯಿಸುತ್ತಿದ್ದ ರಿಟ್ಜ್ ಕಾರು ನಜ್ಜುಗುಜ್ಜಾಗಿದ್ದು, ದೊಡ್ಡ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಯತೀಶ್‌ ಅವರು ಪುತ್ತೂರು ಕಡೆಗೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಕಾರಿನ ಚಾಲಕ ಅಡ್ಡ ಬಂದ ಮಗುವನ್ನು

ಪಲ್ಟಿಯಾಗಿ ನಜ್ಜುಗುಜ್ಜಾದ ಕಾರು: ಚಾಲಕನಿಗೆ ಗಾಯ Read More »

ಶೇಂದಿ ಇಳಿಸಲು ಹೋದ ವ್ಯಕ್ತಿ ಮರದಲ್ಲೇ ಸಾವು

ಕಡಬ: ಶೇಂದಿ ಇಳಿಸಲು ತೆಂಗಿನ ಮರವೇರಿದ್ದ ವ್ಯಕ್ತಿಯೊಬ್ಬರು ಮರದ ಮೇಲೆಯೇ ಮೃತಪಟ್ಟ ಘಟನೆ ಕೊಲ್ಲಮೊಗ್ರು ಗ್ರಾಮದಲ್ಲಿ ನಡೆದಿದೆ. ಮೃತದೇಹವನ್ನು ‌ಸ್ಥಳೀಯರ ಸಹಕಾರದಿಂದ ಮರದಿಂದ ಕೆಳಕ್ಕೆ ಇಳಿಸಲಾಯಿತು ಎಂದು ತಿಳಿದು ಬಂದಿದೆ.

ಶೇಂದಿ ಇಳಿಸಲು ಹೋದ ವ್ಯಕ್ತಿ ಮರದಲ್ಲೇ ಸಾವು Read More »

ಹೆಣ್ಣು ಮಗುವೆಂದು 3 ದಿನದ ಕೂಸಿನ ಕತ್ತು ಹಿಸುಕಿ ‌ಕೊಂದ ಪಾಪಿ ತಾಯಿ

ಬೆಳಗಾವಿ: ಜನಿಸಿದ ಮಗು ಹೆಣ್ಣು ಎಂಬ ಕಾರಣಕ್ಕೆ ಅದರ ಕತ್ತು ಹಿಸುಕಿ ಹೆತ್ತ ತಾಯಿಯೇ ಹತ್ಯೆ ಮಾಡಿದ ಘಟನೆ ರಾಮದುರ್ಗ ತಾಲೂಕಿನ ಹಿರೇಮುಲಂಗಿ ಗ್ರಾಮದಲ್ಲಿ ನಡೆದಿದೆ. ಕೊಲೆ ಆರೋಪಿಯನ್ನು ಅಶ್ವಿನಿ ಹಳಕಟ್ಟಿ ಎಂದು ಗುರುತಿಸಲಾಗಿದೆ. ಸುರೇಬಾನ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಅಶ್ವಿನಿಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಅಶ್ವಿನಿಗೆ ನಾಲ್ಕನೇಯ ಮಗುವೂ ಹೆಣ್ಣಾಗಿದ್ದು, ಈ ಕಾರಣಕ್ಕಾಗಿ ಆ ಹಸುಗೂಸನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿದೆ. ಹತ್ಯೆ ಮಾಡಿದ ಬಳಿಕ ಮಗು ಉಸಿರಾಟ

ಹೆಣ್ಣು ಮಗುವೆಂದು 3 ದಿನದ ಕೂಸಿನ ಕತ್ತು ಹಿಸುಕಿ ‌ಕೊಂದ ಪಾಪಿ ತಾಯಿ Read More »

ಕೆಂಪುಕೋಟೆ ಕಾರು ಬಾಂಬ್‌ ಸ್ಫೋಟ ಪ್ರಕರಣ : ಇನ್ನೋರ್ವ ಆರೋಪಿ ಸೆರೆ

ಟೆರರ್‌ ಡಾಕ್ಟರ್‌ ಉಮರ್‌ ಉನ್‌ ನಬಿಗೆ ಆಶ್ರಯ ನೀಡಿದ್ದ ಆರೋಪಿ ನವದೆಹಲಿ: ದೆಹಲಿ ಕೆಂಪುಕೋಟೆ ಬಳಿ ಕಾರು ಬಾಂಬ್‌ ಸ್ಫೋಟ ಸಂಭವಿಸುವುದಕ್ಕೆ ಮುನ್ನ ಟೆರರ್‌ ಡಾಕ್ಟರ್‌ ಉಮರ್‌ ಉನ್‌ ನಬಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಫರಿದಾಬಾದ್‌ ನಿವಾಸಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ. ಬಂಧಿತ ಸೋಯಾಬ್‌ ಈ ಪ್ರಕರಣದ 7ನೇ ಆರೋಪಿ ಎಂದು ಎನ್‌ಐಎ ತಿಳಿಸಿದೆ. ಕೆಂಪುಕೋಟೆ ಸಮೀಪ ಕಾರು ಸ್ಫೋಟ ಸಂಭವಿಸುವುದಕ್ಕೆ ಮುನ್ನ ಸೋಯಾಬ್‌ ಉಗ್ರ ಉಮರ್‌ಗೆ ಆಶ್ರಯ ನೀಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ.

ಕೆಂಪುಕೋಟೆ ಕಾರು ಬಾಂಬ್‌ ಸ್ಫೋಟ ಪ್ರಕರಣ : ಇನ್ನೋರ್ವ ಆರೋಪಿ ಸೆರೆ Read More »

ಸಂವಿಧಾನ ಬಲವಾದ ಪ್ರಜಾಪ್ರಭುತ್ವದ ಅಡಿಪಾಯ : ಮೋದಿ

ಸಂವಿಧಾನ ದಿನಾಚರಣೆ ಸಂದರ್ಭದಲ್ಲಿ ದೇಶದ ಜನರಿಗೆ ಪತ್ರದ ಮೂಲಕ ಕರ್ತವ್ಯದ ಕರೆ ನವದೆಹಲಿ: ಭಾರತ ಇಂದು ಸಂವಿಧಾನ ದಿನವನ್ನು ಆಚರಿಸುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಪತ್ರ ಬರೆದು, ಸಂವಿಧಾನ ಬಲವಾದ ಪ್ರಜಾಪ್ರಭುತ್ವದ ಅಡಿಪಾಯವಾಗಿರುವುದರಿಂದ ನಾಗರಿಕರು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಪೂರೈಸಬೇಕೆಂದು ಕರೆಕೊಟ್ಟಿದ್ದಾರೆ. ಈ ಪತ್ರದಲ್ಲಿ ಪ್ರಧಾನಿ ಮೋದಿ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ಜವಾಬ್ದಾರಿಯನ್ನು ಹೇಳಿದ್ದಾರೆ. 18 ವರ್ಷ ತುಂಬಿದ ಮತ್ತು ಮೊದಲ ಬಾರಿಗೆ ಮತದಾರರಾಗುವ ಯುವಕರನ್ನು

ಸಂವಿಧಾನ ಬಲವಾದ ಪ್ರಜಾಪ್ರಭುತ್ವದ ಅಡಿಪಾಯ : ಮೋದಿ Read More »

ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಶಾಂತಿಮೊಗರು ಕುದ್ಮಾರಿನಲ್ಲಿ ವೈಭವದ ಷಷ್ಠಿ ಮಹೋತ್ಸವ

ಕಡಬ: ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಶಾಂತಿಮೊಗರು ಕುದ್ಮಾರಿನಲ್ಲಿ ಇಂದು ವೈಭವದ ಷಷ್ಠಿ ಮಹೋತ್ಸವ ನಡೆಯಲಿದೆ. ಆ ಪ್ರಯುಕ್ತ ಬೆಳಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ದೇವರಿಗೆ ಕಲಶ ಪೂಜೆ, ಕಲಶಾಭಿಷೇಕ, ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಮಹಾ ಪೂಜೆ, ದೇವರ ಬಲಿ, ಶ್ರೀ ಭೂತ ಬಲಿ ಮಹೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ಷಷ್ಠಿ

ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಶಾಂತಿಮೊಗರು ಕುದ್ಮಾರಿನಲ್ಲಿ ವೈಭವದ ಷಷ್ಠಿ ಮಹೋತ್ಸವ Read More »

ಖ್ಯಾತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನ

ಉಡುಪಿ: ಚೆಲುವೆ ಚಿತ್ರಾವತಿ, ರತಿ ರೇಖಾ, ಶೂದ್ರ ತಪಸ್ವಿನಿಯಂಥ ಸೂಪರ್‌ ಹಿಟ್‌ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದ ಪ್ರಸಂಗಕರ್ತ, ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿಯವರು ಬುಧವಾರ ಬೆಳಗ್ಗೆ (ನ.26) ನಿಧನರಾಗಿದ್ದಾರೆ. ಅವರಿಗೆ 89 ವರ್ಷ ಪ್ರಾಯವಾಗಿತ್ತು. ಕಂದಾವರ ರಘುರಾಮ ಶೆಟ್ಟಿಯವರು ತಾಳಮದ್ದಳೆ ಅರ್ಥಧಾರಿ, ಹವ್ಯಾಸಿ ವೇಷಧಾರಿಯಾಗಿ ಮತ್ತು ನಾಟಕ ಕಲಾವಿದರಾಗಿಯೂ ಪ್ರಸಿದ್ಧರಾಗಿದ್ದರು. ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಕಂದಾವರ ಅವರ ಹುಟ್ಟೂರು. ಶಿಕ್ಷಕರಾಗಿ, ಸಹಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸುಮಾರು 35 ವರ್ಷಗಳ ಅಧ್ಯಾಪನ ವೃತ್ತಿ ಮಾಡಿ ನಿವೃತ್ತರಾಗಿದ್ದರು. ಮಾದರಿ

ಖ್ಯಾತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನ Read More »

ರಾತ್ರಿ ಬೆಳಗಾಗುವುದರೊಳಗೆ ಕಾಳಿ ದೇವಿಗೆ ಮಾತೆ ಮೇರಿಯ ಅಲಂಕಾರ

ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಅರ್ಚಕನ ಬಂಧನ ಮುಂಬೈ : ಮುಂಬೈಯ ಚೆಂಬೂರಿನಲ್ಲಿರುವ ಸಣ್ಣ ದೇವಸ್ಥಾನವೊಂದರಲ್ಲಿ ಕಾಳಿದೇವಿಯ ಪ್ರತಿಮೆಯನ್ನು ಮಾತೆ ಮೇರಿಯಂತೆ ಅಲಂಕರಿಸಿ ಭಕ್ತರ ಭಾವನೆಗೆ ಧಕ್ಕೆಯುಂಟುಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಈ ದೇವಸ್ಥಾನದ ಅರ್ಚಕನನ್ನು ಬಂದಿಸಿದ್ದಾರೆ. ಚೆಂಬೂರಿನ ಅನಿಕ್‌ ಎಂಬಲ್ಲಿರುವ ಸ್ಮಶಾನದೊಳಗಿರುವ ಕಾಳಿಕಾ ಮಾತೆಯ ಗುಡಿಯ ವಿಗ್ರಹವನ್ನು ರಾತ್ರೋರಾತ್ರಿ ಕ್ರೈಸ್ತರ ಮಾತೆಮೇರಿಯಂತೆ ಅಲಂಕರಿಸಲಾಗಿತ್ತು. ವಿಗ್ರಹಕ್ಕೆ ಹೊಂಬಣ್ಣದ ಸೀರೆ ಉಡಿಸಿ, ಶಿರದ ಬಳಿ ಶಿಲುಬೆ ಇರಿಸಿ ತೋಳಿನಲ್ಲಿ ಚಿಕ್ಕ ಮಗುವೊಂದನ್ನು ಇರಿಸಲಾಗಿತ್ತು. ಇಷ್ಟು ಮಾತ್ರವಲ್ಲದೆ

ರಾತ್ರಿ ಬೆಳಗಾಗುವುದರೊಳಗೆ ಕಾಳಿ ದೇವಿಗೆ ಮಾತೆ ಮೇರಿಯ ಅಲಂಕಾರ Read More »

error: Content is protected !!
Scroll to Top