ಸುದ್ದಿ

ಮನೆಯೊಳಗೆ ಉಸಿರುಕಟ್ಟಿ ಒಂದೇ ಕುಟುಂಬದ ಐವರು ಸಾವು

ಚಳಿಯಿಂದ ಪಾರಾಗಲು ಬಳಸಿದ ಹೀಟರ್‌ ಮೃತ್ಯುವಾಯಿತು ಶ್ರೀನಗರ: ಮನೆಯಲ್ಲಿಯೇ ಉಸಿರುಗಟ್ಟಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದಾರುಣ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಸಂಭವಿಸಿದೆ. ಚಳಿಯಿಂದ ಪಾರಾಗಲು ಬಳಸಿದ ಎಲ್‌ಪಿಜಿ ರೂಮ್‌ ಹೀಟರ್‌ ಅವರ ಸಾವಿಗೆ ಕಾರಣ ಎನ್ನಲಾಗಿದೆ. ಬಾರಾಮುಲ್ಲಾ ಜಿಲ್ಲೆಯ ಉರಿಯಿಂದ ಬಂದಿದ್ದ ದಂಪತಿ ಹಾಗೂ ಅವರ ಮೂವರು ಮಕ್ಕಳು ಶ್ರೀನಗರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಶ್ರೀನಗರ ಜಿಲ್ಲೆಯ ಪಂದ್ರಾಥಾನ್ ಪ್ರದೇಶದಲ್ಲಿ ದಂಪತಿ ಮತ್ತು ಅವರ 3 ಮಕ್ಕಳು ಸೇರಿದಂತೆ ಒಂದೇ ಕುಟುಂಬದ 5 […]

ಮನೆಯೊಳಗೆ ಉಸಿರುಕಟ್ಟಿ ಒಂದೇ ಕುಟುಂಬದ ಐವರು ಸಾವು Read More »

ಬೆಂಗಳೂರಿನಲ್ಲಿ ಎಚ್‌ಎಂಪಿವಿ ವೈರಸ್‌ ಪತ್ತೆ

ಎಂಟು ತಿಂಗಳ ಮಗುವಿಗೆ ವೈರಸ್‌ ಸೋಂಕು ಬೆಂಗಳೂರು : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಎಚ್​ಎಂಪಿವಿ ವೈರಸ್ ದೃಢಪಟ್ಟಿದೆ. ಮಗುವಿಗೆ ಜ್ವರ ಬಂದ ಕಾರಣ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ರಕ್ತ ಪರೀಕ್ಷೆ ಮಾಡಿಸಿದಾಗ ಎಚ್​ಎಂಪಿವಿ ವೈರಸ್ ಇರುವುದು ಪತ್ತೆಯಾಗಿದೆ.ಈ ಮೂಲಕ ದೇಶದ ಮೊದಲ ಎಚ್​ಎಂಪಿವಿ ವೈರಸ್ ಪ್ರಕರಣ ಪತ್ತೆಯಾದಂತಾಗಿದೆ. ಭಾರತದಲ್ಲೂ ಎಚ್‌ಎಂಪಿ ವೈರಸ್‌ ಇದೆ. ಆದರೆ, ಅದು ಮ್ಯೂಟೆಷನ್ ಆಗಿದೆಯಾ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ಚೀನದಲ್ಲಿ ಮ್ಯುಟೇಟ್ ಆಗಿರುವ ವೈರಸ್​ ಹೇಗಿದೆ

ಬೆಂಗಳೂರಿನಲ್ಲಿ ಎಚ್‌ಎಂಪಿವಿ ವೈರಸ್‌ ಪತ್ತೆ Read More »

ಮಾರುತಿಗೆ ಟಾಟಾ ಸಡ್ಡು : ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದ ಪಂಚ್‌

ಮಾರುತಿ ಕಂಪನಿಯ 40 ವರ್ಷಗಳ ಪಾರಮ್ಯ ಬ್ರೇಕ್‌ ಹೊಸದಿಲ್ಲಿ: ಭಾರತದ ಕಾರು ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ ಕಾರುಗಳು ಹೊಸ ಕ್ರಾಂತಿಯನ್ನು ಮಾಡಿವೆ. ಮಾರುತಿ ಸುಝುಕಿ ಕಂಪನಿಯ 40 ವರ್ಷಗಳ ದಾಖಲೆಯನ್ನು ಮುರಿದು ಟಾಟಾ ಕಾರುಗಳು ಮಾರಾಟದಲ್ಲಿ ವಿಕ್ರಮ ಸಾಧಿಸಿವೆ. ಉತ್ಪನ್ನದಲ್ಲಿ ಹೊಸತನ ಇದ್ದಲ್ಲಿ ಮಾರುಕಟ್ಟೆಯಲ್ಲಿ ಯಶಸ್ವಿಯಾಗುತ್ತದೆ ಎನ್ನುವುದನ್ನು ಟಾಟಾ ಕಾರುಗಳು ಸಾಬೀತುಪಡಿಸಿವೆ. ಕಳೆದ 40 ವರ್ಷಗಳಿಂದ ಭಾರತದ ಮಾರುಕಟ್ಟೆಯಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿದ್ದ ಮಾರುತಿ ಸುಝುಕಿ ಕಂಪನಿಯನ್ನು ದೇಶೀಯ ಕಂಪನಿ ಟಾಟಾ ಮೋಟಾರ್ಸ್‌ ಹಿಂದಿಕ್ಕಿದೆ. ಇಲ್ಲಿಯವರೆಗೆ ದೇಶದಲ್ಲಿ

ಮಾರುತಿಗೆ ಟಾಟಾ ಸಡ್ಡು : ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದ ಪಂಚ್‌ Read More »

ಎಚ್‌ಎಂಪಿವಿ ಆತಂಕ : ಮಾರ್ಗಸೂಚಿ ಬಿಡುಗಡೆಗೊಳಿಸಿದ ಸರಕಾರ

ಜ್ವರ, ಶೀತ ಇದ್ದರೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ಬೆಂಗಳೂರು: ಚೀನದಲ್ಲಿ ಹ್ಯೂಮನ್ ಮೆಟಾ ನ್ಯೂಮೊ ವೈರಸ್ (ಎಚ್‌ಎಂಪಿವಿ) ಹಾವಳಿ ತೀವ್ರಗೊಂಡು ಆತಂಕ ಸೃಷ್ಟಿಸಿಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಚೀನದಲ್ಲಿ ಕಾಣಿಸಿಕೊಂಡಿರುವ ಎಚ್‌ಎಂಪಿವಿ ವೈರಸ್ ಬಗ್ಗೆ ಎಚ್ಚರಿಕೆಯಿಂದಿರುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿರುವ ಬೆನ್ನಲ್ಲೆ ರಾಜ್ಯ ಆರೋಗ್ಯ ಇಲಾಖೆ ವೈರಸ್‌ ನಿಯಂತ್ರಿಸಲು ಕೆಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನತೆ ಬಳಿ ಮನವಿ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲದ ಕಾರಣ

ಎಚ್‌ಎಂಪಿವಿ ಆತಂಕ : ಮಾರ್ಗಸೂಚಿ ಬಿಡುಗಡೆಗೊಳಿಸಿದ ಸರಕಾರ Read More »

ಮೌಲ್ಯಯುತ ಕಾದಂಬರಿಗಳ ಲೇಖಕ ನಾ.ಡಿ.ಸೋಜ

ನೂರಾರು ಶ್ರೇಷ್ಠ ಕೃತಿಗಳನ್ನು ಬರೆದ ಹಿರಿಯ ಸಾಹಿತಿ ಕನ್ನಡದ ಹಿರಿಯ ಸಾಹಿತಿ ಡಾ. ನಾ. ಡಿಸೋಜ (87) ನಿನ್ನೆ ಸಂಜೆ ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಕನ್ನಡ ಮತ್ತು ಮಾತೃಭಾಷೆಯಾದ ಕೊಂಕಣಿಯಲ್ಲಿ ನೂರರಷ್ಟು ಶ್ರೇಷ್ಠ ಕೃತಿಗಳನ್ನು ಶ್ರೀಮಂತವಾಗಿ ಬರೆದವರು ಅವರು. ಒಂದು ಸಣ್ಣ ಗ್ರಾಮದಲ್ಲಿ ಬದುಕಿನ ಉದ್ದಕ್ಕೂ ವಾಸವಾಗಿದ್ದುಕೊಂಡು ಜಾಗತಿಕ ಮಟ್ಟಕ್ಕೆ ಸಂವಾದಿಯಾಗುವ 40 ಮೌಲ್ಯಯುತ ಕಾದಂಬರಿಗಳನ್ನು ಬರೆದದ್ದು ಅವರ ಶ್ರೇಷ್ಠ ಕೊಡುಗೆ ಎಂದು ಖಂಡಿತವಾಗಿ ಹೇಳಬಹುದು. ಪ್ರಕೃತಿಯ ಹಿನ್ನೆಲೆಯ ಶಕ್ತಿಶಾಲಿ ಕಾದಂಬರಿಗಳು ವಿಶೇಷವಾಗಿ ಕಾದಂಬರಿಯ ಕ್ಷೇತ್ರ ಅವರಿಗೆ ಹೃದಯಕ್ಕೆ

ಮೌಲ್ಯಯುತ ಕಾದಂಬರಿಗಳ ಲೇಖಕ ನಾ.ಡಿ.ಸೋಜ Read More »

ಸ್ವಾಮೀಜಿಗಳ ಹತ್ಯೆಗೆ ಮಹಾರಾಷ್ಟ್ರದ ಗೂಂಡಾಗಳಿಗೆ ಸುಪಾರಿ : ವಿಜಯೇಂದ್ರ ಆರೋಪ

ಶಿವಮೊಗ್ಗ: ಕೆಲವು ಸ್ವಾಮೀಜಿಗಳು, ಬಿಜೆಪಿ ಶಾಸಕರು ಮತ್ತು ಕಲಬುರಗಿ ಬಿಜೆಪಿ ನಗರ ಘಟಕದ ಅಧ್ಯಕ್ಷರನ್ನು ಹತ್ಯೆ ಮಾಡಲು ಮಹಾರಾಷ್ಟ್ರದ ಗೂಂಡಾಗಳಿಗೆ ಸುಪಾರಿ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.ಗುತ್ತಿಗೆದಾರ ಸಚಿವ್ ಪಾಂಚಾಳ್ ಡೆತ್‌ನೋಟ್‌ನಲ್ಲಿ ಸ್ವಾಮೀಜಿಗಳು, ಬಿಜೆಪಿ ಶಾಸಕರು ಮತ್ತು ಕಲಬುರಗಿ ಬಿಜೆಪಿ ನಗರ ಘಟಕದ ಅಧ್ಯಕ್ಷರನ್ನು ಹತ್ಯೆ ಮಾಡಲು ಮಹಾರಾಷ್ಟ್ರದ ಗೂಂಡಾಗಳಿಗೆ ಸುಪಾರಿ ನೀಡಲಾಗಿದೆ ಎಂದು ಬರೆದಿದ್ದಾರೆ. ಪ್ರಭಾವಿ ರಾಜಕಾರಣಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಹೀಗಾಗಿ ಸಚಿನ್ ಅವರು ಪ್ರಕರಣನ್ನು ಕೇಂದ್ರೀಯ ತನಿಖಾ

ಸ್ವಾಮೀಜಿಗಳ ಹತ್ಯೆಗೆ ಮಹಾರಾಷ್ಟ್ರದ ಗೂಂಡಾಗಳಿಗೆ ಸುಪಾರಿ : ವಿಜಯೇಂದ್ರ ಆರೋಪ Read More »

ತಾಯಿ, ಅವಳಿ ಮಕ್ಕಳ ಕೊಲೆ : 19 ವರ್ಷಗಳ ಬಳಿಕ ಇಬ್ಬರು ಮಾಜಿ ಸೈನಿಕರ ಸೆರೆ

ಕ್ರೈಂ ಥ್ರಿಲ್ಲರ್‌ ಸಿನೆಮಾದಂತಿದೆ ಕೇರಳದಲ್ಲಿ ನಡೆದ ಈ ಹತ್ಯಾ ಪ್ರಕರಣ ತಿರುವನಂತಪುರ: ತಾಯಿ ಮತ್ತು ಆಕೆಯ ನವಜಾತ ಅವಳಿ ಮಕ್ಕಳನ್ನು ಉಸಿರು ಕಟ್ಟಿಸಿ ಕೊಂದು 19 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಇಬ್ಬರು ಮಾಜಿ ಸೈನಿಕರನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಕೇರಳದಲ್ಲಿ ನಡೆದಿರುವ ಈ ಕೊಲೆ ಮತ್ತು ಆರೋಪಿಗಳ ಪತ್ತೆ ಕಾರ್ಯ ಯಾವುದೇ ಕ್ರೈಂ ಥ್ರಿಲ್ಲರ್‌ ಸಿನೇಮಾಕ್ಕೆ ಕಡಿಮೆಯಿಲ್ಲ. ಕಳೆದ ಮೂರು ತಿಂಗಳಿನಿಂದ ಸಿಬಿಐ ಮತ್ತು ಕೇರಳ ಪೊಲೀಸರ ತನಿಖಾ ತಂಡ 10,000ಕ್ಕೂ ಅಧಿಕ

ತಾಯಿ, ಅವಳಿ ಮಕ್ಕಳ ಕೊಲೆ : 19 ವರ್ಷಗಳ ಬಳಿಕ ಇಬ್ಬರು ಮಾಜಿ ಸೈನಿಕರ ಸೆರೆ Read More »

ಅಯ್ಯಪ್ಪ ವ್ರತಧಾರಿಗಳು ಮಸೀದಿಗೆ ಹೋದರೆ ವ್ರತಭಂಗ : ಚರ್ಚೆಗೀಡಾದ ಶಾಸಕರ ಹೇಳಿಕೆ

ಅಯ್ಯಪ್ಪ ಭಕ್ತರನ್ನು ಮಸೀದಿಗೆ ಬರುವಂತೆ ಮಾಡುವುದು ಷಡ್ಯಂತ್ರ ಎಂದ ಬಿಜೆಪಿ ಎಂಎಲ್‌ಎ ಹೈದರಾಬಾದ್: ಬೆಳ್ತಂಗಡಿಯಲ್ಲಿ ಶುರುವಾದ ಅಯ್ಯಪ್ಪ ವ್ರತಧಾರಿಗಳ ಮಸೀದಿ ಭೇಟಿ ವಿವಾದ ಈಗ ತೆಲಂಗಾಣಕ್ಕೂ ಹರಡಿದೆ. ಬೆಳ್ತಂಗಡಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಉದ್ಯಮಿ ಹಾಗೂ ದಾನಿ ಶಶಿಧರ ಶೆಟ್ಟಿ ಬರೋಡ ಅಯ್ಯಪ್ಪನ ಯಕ್ಷಗಾನ ಪ್ರಸಂಗದಲ್ಲಿ ವಾವರ ಪಾತ್ರದ ಔಚಿತ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಪುರಾಣದಲ್ಲಿ ಇಲ್ಲದ ಮುಸ್ಲಿಮ್‌ ಪಾತ್ರವನ್ನು ಸೇರಿಸಿ ಹಿಂದುಗಳನ್ನು ಮೂರ್ಖರನ್ನಾಗಿ ಮಾಡಲಾಗಿದೆ ಎಂಬ ದಾಟಿಯಲ್ಲಿ ಅವರು ಮಾತನಾಡಿದ್ದು, ಅವರ ಭಾಷಣದ ಈ ವೀಡಿಯೊ

ಅಯ್ಯಪ್ಪ ವ್ರತಧಾರಿಗಳು ಮಸೀದಿಗೆ ಹೋದರೆ ವ್ರತಭಂಗ : ಚರ್ಚೆಗೀಡಾದ ಶಾಸಕರ ಹೇಳಿಕೆ Read More »

ಸಿಡ್ನಿಯಲ್ಲೂ ಸೋತ ಭಾರತ : ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾಕ್ಕೆ 3-1 ಅಂತರದ ಗೆಲುವು

ಹತ್ತು ವರ್ಷದ ಬಳಿಕ ಬಾರ್ಡರ್‌-ಗವಾಸ್ಕರ್‌ ಕಪ್‌ ಮೇಲೆ ಹಕ್ಕು ಸಾಧಿಸಿದ ಕಾಂಗರೂ ಪಡೆ ಸಿಡ್ನಿ : ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಬಾರ್ಡರ್‌-ಗವಾಸ್ಕರ್‌ ಸರಣಿಯ 5ನೇ ತಥಾ ಕೊನೆಯ ಟೆಸ್ಟ್‌ನಲ್ಲೂ ಭಾರತಕ್ಕೆ ಸೋಲಾಗಿದ್ದು, ಹತ್ತು ವರ್ಷಗಳ ಬಳಿ, ಈ ಪ್ರತಿಷ್ಠಿತ ಟೆಸ್ಟ್‌ ಸರಣಿ ಗೆದ್ದುಕೊಂಡು ಆಸ್ಟ್ರೇಲಿಯಾ ಬೀಗಿದೆ. ಈ ಜಯದೊಂದಿಗೆ ಆಸೀಸ್ ಪಡೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ 3-1 ಅಂತರದಿಂದ ಆಸ್ಟ್ರೇಲಿಯಾ ಪಾಲಾಗಿದೆ. ಭಾರತದ ವಿರುದ್ಧ 10 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆಲ್ಲುವಲ್ಲಿ ಕೊನೆಗೂ ಆಸ್ಟ್ರೇಲಿಯಾ

ಸಿಡ್ನಿಯಲ್ಲೂ ಸೋತ ಭಾರತ : ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾಕ್ಕೆ 3-1 ಅಂತರದ ಗೆಲುವು Read More »

ಇಂದಿನಿಂದ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದುಬಾರಿ

ವೇಗದೂತದಲ್ಲಿ ಮಂಗಳೂರು-ಬೆಂಗಳೂರು ನಡುವೆ 56 ರೂ. ಹೆಚ್ಚಳ ಬೆಂಗಳೂರು : ವಿರೋಧ, ಟೀಕೆಗಳನ್ನೆಲ್ಲ ಲೆಕ್ಕಿಸದೆ ಕಾಂಗ್ರೆಸ್‌ ಸರಕಾರ ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌ ದರ ಏರಿಕೆ ಮಾಡಿದ್ದು, ಶನಿವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ. ಪರಿಣಾಮವಾಗಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಪುರುಷರು ಇಂದಿನಿಂದ ಹೆಚ್ಚುವರಿ ಹಣ ಖರ್ಚು ಮಾಡುವುದು ಅನಿವಾರ್ಯ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರ ಶನಿವಾರ ಮಧ್ಯರಾತ್ರಿಯಿಂದಲೇ ಹೆಚ್ಚಳವಾಗಿದೆ. ಬಿಎಂಟಿಸಿಯ ಸಾಮಾನ್ಯ ಬಸ್ ದರ 1 ರೂ.ನಿಂದ 6

ಇಂದಿನಿಂದ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದುಬಾರಿ Read More »

error: Content is protected !!
Scroll to Top