ರಾಜ್ಯಸಭೆಯಲ್ಲಿ ಮೇಜಿನ ಮೇಲೆ ಕೃತಕ ಕಾಲುಗಳನ್ನಿಟ್ಟು ಸಿಪಿಎಂನ ಹಿಂಸಾತ್ಮಕ ರಾಜಕೀಯ ಕರಾಳತೆ ಬಿಚ್ಚಿಟ್ಟ ಸಂಸದ
ನವದೆಹಲಿ: ಸೋಮವಾರ ರಾಜ್ಯ ಸಭೆಯಲ್ಲಿ ಅತ್ಯಂತ ಭಾವುಕ ಸನ್ನಿವೇಶವೊಂದು ಕಂಡು ಬಂದಿದ್ದು, ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡನೆಯ ವೇಳೆ ಕೇರಳದ ಬಿಜೆಪಿ ಸಂಸದ ಸದಾನಂದನ್ ಮಾಸ್ಟರ್ ಅವರು ತಮ್ಮ ಕೃತಕ ಕಾಲುಗಳನ್ನು ಮೇಜಿನ ಮೇಲಿಟ್ಟು, ಸಿಪಿಎಂ ಕರಾಳತೆಯಿಂದ ತಮಗಾದ ಅನ್ಯಾಯ, ದೌರ್ಜನ್ಯವನ್ನು ವಿವರಿಸಿ, ಭಾಷಣ ಮಾಡಿದರು. ತಮ್ಮ ಮೊದಲ ಭಾಷಣದಲ್ಲಿ, ಮೂವತ್ತೊಂದು ವರ್ಷಗಳ ಹಿಂದೆ ನಡೆದ ಈ ಕರಾಳತೆಗೆ ಕಾರಣರಾದವರು ಇಂದು ಪ್ರಜಾಪ್ರಭುತ್ವದ ಬಗ್ಗೆ ಮಾತ ನೀಡುತ್ತಿದ್ದಾರೆ. ಅವರು ನನ್ನ ಮೇಲಿನ ಈ ದೌರ್ಜನ್ಯವನ್ನು ಮರೆಯಬಾರದು. […]










