ಸುದ್ದಿ

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಚಪ್ಪರ ಮುಹೂರ್ತ

ಉಪ್ಪಿನಂಗಡಿ : ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಫೆಬ್ರವರಿ 7ರಂದು ಜರಗಲಿರುವ 5ನೇ ವಾರ್ಷಿಕ ಪ್ರತಿಷ್ಠಾ ದಿನೋತ್ಸವದ ಅಂಗವಾಗಿ  ಗೊನೆ ಮುಹೂರ್ಥ ಮತ್ತು ಚಪ್ಪರ ಮುಹೂರ್ಥ ನಡೆಯಿತು. ಆಡಳಿತ ಸೇವಾ ಟ್ರಸ್ಟ್‍ ನ ಅಧ್ಯಕ್ಷ ಭಾಸ್ಕರ ಬಾರ್ಯ ಮತ್ತು ಅರ್ಚಕರಾದ ಗುರುಪ್ರಸಾದ ನೂರಿತ್ತಾಯರು ವೈದಿಕ ವಿಧಿ ವಿಧಾನಗಳೊಂದಿಗೆ ಚಪ್ಪರ ಮುಹೂರ್ತ ನೆರವೇರಿಸಿಕೊಟ್ಟರು. ಪವಿತ್ರ ಪಾಣಿ  ಸೂರ್ಯನಾರಾಯಣ ಕುದ್ದಣ್ಣಾಯ ಆಡಳಿತ ಸೇವಾ ಟ್ರಸ್ಟ್‍ ನ  ಟ್ರಸ್ಟಿಗಳು ಮತ್ತು ಪದಾಧಿಕಾರಿಗಳಾದ ಪ್ರಶಾಂತ್ ಪೈ, ಮನೋಹರ ಶೆಟ್ಟಿ, ನಾರಾಯಣಗೌಡ, […]

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಚಪ್ಪರ ಮುಹೂರ್ತ Read More »

ಕುದ್ಮಾರು ಶಾಲೆಯಲ್ಲಿ ನಡೆದ ಹುತಾತ್ಮರ ದಿನಾಚರಣೆ

ಕಾಣಿಯೂರು: ಕುದ್ಮಾರು ನ.ಉ.ಹಿ. ಪ್ರಾ ಶಾಲೆಯಲ್ಲಿ ಹುತಾತ್ಮರ ದಿನಾಚರಣೆಯನ್ನು  ಜ.30ರಂದು ಆಚರಿಸಲಾಯಿತು. ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ಹಾಡಲಾಯಿತು. ಶಿಕ್ಷಕಿ ಪ್ರಿಯಾಂಕ ದಿನದ ಮಹತ್ವದ ಕುರಿತಾಗಿ ಮಾಹಿತಿ ನೀಡಿದರು. ಹುತಾತ್ಮರ ದಿನಾಚರಣೆಯನ್ನು ಆಚರಿಸುವುದರ ಹಿನ್ನೆಲೆ, ಗಾಂಧೀಜಿಯವರ ಜೀವನ ಚರಿತ್ರೆ ಮತ್ತು ಹುತಾತ್ಮರನ್ನು ಸ್ಮರಿಸಲಾಯಿತು. ಬಳಿಕ ಮೌನ ಪ್ರಾರ್ಥನೆಯನ್ನು ಮಾಡಿ ಹುತಾತ್ಮರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

ಕುದ್ಮಾರು ಶಾಲೆಯಲ್ಲಿ ನಡೆದ ಹುತಾತ್ಮರ ದಿನಾಚರಣೆ Read More »

ಇಂದಿನಿಂದ ಮಲೆನಾಡು ಸಂಪೂರ್ಣ ನಕ್ಸಲ್‌ ಮುಕ್ತ

ಕೊನೆಯ ನಕ್ಸಲ್‌ ರವೀಂದ್ರ ಇಂದು ಮಧ್ಯಾಹ್ನ ಶಸ್ತ್ರತ್ಯಾಗ ಬೆಂಗಳೂರು: ರಾಜ್ಯದಲ್ಲಿ ಉಳಿದಿರುವ ಕೊನೆಯ ನಕ್ಸಲ್‌ ರವೀಂದ್ರ ಇಂದು ಚಿಕ್ಕಮಗಳೂರಿನಲ್ಲಿ ಪೊಲೀಸರಿಗೆ ಶರಣಾಗಲಿದ್ದು, ಇದರೊಂದಿಗೆ ರಾಜ್ಯ ಸಂಪೂರ್ಣ ನಕ್ಸಲ್‌ ಮುಕ್ತವಾಗಲಿದೆ. ಇತ್ತೀಚೆಗೆ ಆರು ಜನ ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಶರಣಾಗಿದ್ದರು. ಅವರೀಗ ಪೊಲೀಸರ ವಶದಲ್ಲಿದ್ದು, ಕಾನೂನು ಪ್ರಕ್ರಿಯೆಗಳನ್ನು ಎದುರಿಸುತ್ತಿದ್ದಾರೆ. ಸರಕಾರ ಅವರಿಗೆ ಉತ್ತಮ ಪ್ಯಾಕೇಜ್‌ ಕೂಡ ಘೋಷಿಸಿದೆ. ಆ ಬಳಿಕ ಒಂಟಿಯಾಗಿದ್ದ ಶೃಂಗೇರಿ ತಾಲೂಕಿನ ಕಿಗ್ಗ ಸಮೀಪದ ಕೋಟಿಹೊಂಡ ಮರಾಟಿ ಕಾಲನಿಯ ರವೀಂದ್ರನ ಶರಣಾಗತಿಗೆ ಶಾಂತಿಗಾಗಿ

ಇಂದಿನಿಂದ ಮಲೆನಾಡು ಸಂಪೂರ್ಣ ನಕ್ಸಲ್‌ ಮುಕ್ತ Read More »

“ಮಕ್ಕಳಮನೆ” ವಾರ್ಷಿಕೋತ್ಸವ

ಪುತ್ತೂರು (ಜ24) : ಪುತ್ತೂರಿನ ಬೊಳುವಾರಿನಲ್ಲಿ ಹಲವು ವರ್ಷಗಳಲ್ಲಿ ಒಂದಷ್ಟು ಪುಟಾಣಿ ಮಕ್ಕಳ ಕಿಲಕಿಲ ನಗು, ಪುಟ್ಟ ಪುಟ್ಟ ಹೆಜ್ಜೆಗಳ ನಾದ, ಜೊತೆಗೆ ಒಂದಷ್ಟು ಅಳುವಿನ ನಿನಾದಗಳು ಸದಾ ಕೇಳಿಬರುತ್ತಿದ್ದವು. ಈ ವರ್ಷ ಒಂದಷ್ಟು ಹೊಸ ಹೊಸ ಚಿಂತನೆ ಯೋಚನೆ ಯೋಜನೆಯ ಜೊತೆ ಈ ಪುಟಾಣಿ ಮಕ್ಕಳ ವಾರ್ಷಿಕೋತ್ಸವವು ಟೌನ್ ಹಾಲ್ ನಲ್ಲಿ ಬಹಳ ಅದ್ದೂರಿಯಾಗಿ ಹಳೆಯ ಸಂಸ್ಕಾರ ಮತ್ತು ಆಧುನಿಕ ಚಿಂತನೆಯ ಜೊತೆ ಬಹಳ ಸುಂದರವಾಗಿ ನಡೆಯಿತು. ಸಂಸ್ಥೆಯ ಸ್ಥಾಪಕರು ಸಮಾರಂಭದ ಅದ್ಯಕ್ಷರು ಆದ ಶ್ರೀ

“ಮಕ್ಕಳಮನೆ” ವಾರ್ಷಿಕೋತ್ಸವ Read More »

ಗ್ಯಾಸ್‌ ಸಿಲಿಂಡರ್‌ ಬೆಲೆ ತುಸು ಇಳಿಕೆ

ಹೊಸದಿಲ್ಲಿ: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ತುಸು ಇಳಿಸಿ ಸರಕಾರ ಜನರಿಗೆ ಸಿಹಿ ಸುದ್ದಿ ನೀಡಿದೆ. ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ 7 ರೂ. ಇಳಿಕೆಯಾಗಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಹೊಸ ದರದ ಪ್ರಕಾರ ದಿಲ್ಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,797 ರೂಪಾಯಿ ಆಗಿದೆ. ಗೃಹ ಬಳಕೆಯ 14 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಗೃಹಬಳಕೆ ಸಿಲಿಂಡರ್ ಬೆಲೆ ಈ ವರ್ಷದ ಆಗಸ್ಟ್‌ನಿಂದ ಬದಲಾಗಿಲ್ಲ.

ಗ್ಯಾಸ್‌ ಸಿಲಿಂಡರ್‌ ಬೆಲೆ ತುಸು ಇಳಿಕೆ Read More »

ಬಿಜೆಪಿ ಆಂತರಿಕ ಕಚ್ಚಾಟ : ವಿಜಯೇಂದ್ರ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾದ ಯತ್ನಾಳ್‌ ಬಣ

ನಾಯಕರ ಜಗಳದಿಂದಾಗಿ ಅಶಿಸ್ತಿನ ಮಡುವಾದ ಶಿಸ್ತಿನ ಪಕ್ಷ ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆಗೆ ಬಿ.ವೈ.ವಿಜಯೇಂದ್ರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಸನಗೌಡ ಯತ್ನಾಳ್‌ ಬಣ ನಿರ್ಧರಿಸಿದ್ದು, ಇದರಿಂದಾಗಿ ಇದೇ ಮೊದಲ ಬಾರಿಗೆ ಚುನಾವಣೆ ಮೂಲಕ ರಾಜ್ಯಾಧ್ಯಕ್ಷರನ್ನು ಆರಿಸುವ ಸನ್ನಿವೇಶ ಸೃಷ್ಟಿಯಾಗಲಿದೆ.ಬಿಜೆಪಿಯಲ್ಲಿ ಭಿನ್ನಮತ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಬಣ ಬಡಿದಾಟದಿಂದ ಪಕ್ಷ ದುರ್ಬಲವಾಗುತ್ತಿದೆ. ಯತ್ನಾಳ್‌ ನೇತೃತ್ವದಲ್ಲಿ ಭಿನ್ನಮತೀಯರೆಲ್ಲ ಒಂದಾಗಿ ಯಡಿಯೂರಪ್ಪ ಪರಿವಾರದ ವಿರುದ್ಧವೇ ಹೋರಾಡುತ್ತಿರುವುದರಿಂದ ಶಿಸ್ತಿನ ಪಕ್ಷ ಅಶಿಸ್ತಿನ ಮಡುವಾಗಿ ಬದಲಾಗಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತರು ಈ

ಬಿಜೆಪಿ ಆಂತರಿಕ ಕಚ್ಚಾಟ : ವಿಜಯೇಂದ್ರ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾದ ಯತ್ನಾಳ್‌ ಬಣ Read More »

ಇಂದು ಕೇಂದ್ರ ಬಜೆಟ್‌ ಮಂಡನೆ : ಮಧ್ಯಮ ವರ್ಗದವರಿಗೆ ಭರಪೂರ ಕೊಡುಗೆ ಸಿಗುವ ನಿರೀಕ್ಷೆ

ಹೊಸದಿಲ್ಲಿ: ಕೇಂದ್ರದ ಬಜೆಟ್ ಅಧಿವೇಶನ ಶುಕ್ರವಾರ ಶುರುವಾಗಿದ್ದು, ಮೊದಲ ದಿನ ರಾಷ್ಟ್ರಪತಿ ದ್ರೌಪತಿ ಮುರ್ಮು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಇದಾದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಭಯ ಸದನದಲ್ಲೂ ಆರ್ಥಿಕ ಸಮೀಕ್ಷಾ ವರದಿ ಮಂಡಿಸಿದ್ದು,. 2024-25 ರ ಆರ್ಥಿಕ ಸಮೀಕ್ಷೆಯ ಪ್ರಕಾರ 2025-26 ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.6.3% ಮತ್ತು ಶೇ.6.8ರ ನಡುವೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮುಂಬರುವ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ನಿಧಾನವಾಗಬಹುದು ಎಂದು ಆರ್ಥಿಕ ಸಮೀಕ್ಷೆ ಸೂಚಿಸಿದೆ.

ಇಂದು ಕೇಂದ್ರ ಬಜೆಟ್‌ ಮಂಡನೆ : ಮಧ್ಯಮ ವರ್ಗದವರಿಗೆ ಭರಪೂರ ಕೊಡುಗೆ ಸಿಗುವ ನಿರೀಕ್ಷೆ Read More »

ಚಲಿಸುತ್ತಿರುವಾಗಲೇ ಕಳಚಿದ ಕೆಎಸ್‌ಆರ್‌ಟಿಸಿ ಬಸ್‍ ನ ಟಯರ್

ಬೆಳ್ತಂಗಡಿ: ಚಲಿಸುತ್ತಿರುವಾಗಲೇ ಕೆಎಸ್‌ಆರ್‌ಟಿಸಿ ಬಸ್ಸಿನ  ಟಯರ್ ಕಳಚಿ ಹೋದ ಘಟನೆ ಉಜಿರೆ ಸಮೀಪದ ಕಾಶಿಬೆಟ್ಟು ಟಿ.ಬಿ. ಕ್ರಾಸ್-ಕುಂಟಿನಿ ರಸ್ತೆಯಲ್ಲಿ ನಡೆದಿದೆ. ಧರ್ಮಸ್ಥಳ ಕೊಲ್ಲಿ ಮಾರ್ಗವಾಗಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‍ ಎನ್ನಲಾಗಿದೆ. ಅವಘಡದ ಬಳಿಕ ಕೆಎಸ್‌ಆರ್‌ಟಿಸಿ ಸರಿಯಾಗಿ ಬಸ್ ನೀಡದೆ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದ್ದು, ಹೆಚ್ಚುವರಿ ಬಸ್ ಹಾಗೂ ಇತರ ಬೇಡಿಕೆ ಮುಂದಿಟ್ಟು ಬುಧವಾರ ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳು ಉಜಿರೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೆ ಮತ್ತೆ ಬಸ್ ಟಯರ್ ಸಂಪೂರ್ಣ ಕಳಚಿ ಬೀಳುವ ಮೂಲಕ ಬಸ್‌ನ ಕಳಪೆ

ಚಲಿಸುತ್ತಿರುವಾಗಲೇ ಕಳಚಿದ ಕೆಎಸ್‌ಆರ್‌ಟಿಸಿ ಬಸ್‍ ನ ಟಯರ್ Read More »

ಕಾಂತಮಂಗಲ ಕುರುಂಜಿಯ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ | ದೇವರ ದರ್ಶನ ಪಡೆದ ಸಾವಿರಾರು ಭಕ್ತರು

ಸುಳ್ಯ: ಕಾಂತಮಂಗಲ ಕುರುಂಜಿಯ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಜ.31ರಂದು ನಡೆಯಿತು. ವಾರ್ಷಿಕ ಉತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಉತ್ಸವದ ಅಂಗವಾಗಿ ಜ.31 ರಂದು ಕ್ಷೇತ್ರದ ಗರ್ಭಗುಡಿ ತೆರೆದು ವಿಶೇಷ ಪೂಜೆ ನೆರವೇರಿತು. ವರ್ಷದಲ್ಲಿ ಒಂದು ದಿನ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುವುದು ಈ ಕ್ಷೇತ್ರದ ವಿಶೇಷತೆ. ಡಾ.ರೇಣುಕಾಪ್ರಸಾದ್ ಕೆ.ವಿ. ಧರ್ಮದರ್ಶಿಗಳಾಗಿರುವ ಕ್ಷೇತ್ರದಲ್ಲಿ ಪ್ರತಿ ಜ.31ರಂದು ವಾರ್ಷಿಕ ಉತ್ಸವ  ವಿಜೃಂಭಣೆಯಿಂದ ನಡೆಯುತ್ತದೆ. ದೈವಜ್ಞರಾದ

ಕಾಂತಮಂಗಲ ಕುರುಂಜಿಯ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ | ದೇವರ ದರ್ಶನ ಪಡೆದ ಸಾವಿರಾರು ಭಕ್ತರು Read More »

ಸ್ನೇಹಮಯಿ ಕೃಷ್ಣಗೆ ಶಕ್ತಿ ತುಂಬಲು ಶಕ್ತಿ ದೇವತೆಗೆ ಪ್ರಾಣಿ ಬಲಿ

ಮೊಬೈಲ್‌ನಲ್ಲಿತ್ತು ಮಂಗಳೂರಿನಲ್ಲಿ ನಡೆದ ಪ್ರಾಣಿ ಬಲಿಯ ಶಾಕಿಂಗ್‌ ವೀಡಿಯೊಗಳು ಮಂಗಳೂರು : ಕೆಲದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಮಸಾಜ್ ಪಾರ್ಲರ್ ಗಲಾಟೆ ಸಂಬಂಧ ಬಂಧನದಲ್ಲಿರುವ ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಮುಡಾ ಹಗರಣವನ್ನು ಬಯಲಿಗೆಳೆದಿರುವ ಸ್ನೇಹಮಯಿ ಕೃಷ್ಣ ಅವರ ಹೋರಾಟಕ್ಕೆ ಶಕ್ತಿ ತುಂಬಲು ಪ್ರಾಣಿ ಬಲಿ ಕೊಟ್ಟಿದ್ದಾರೆ ಎನ್ನಲಾಗಿದೆ. ಶಕ್ತಿ ದೇವತೆಯ ಮುಂದೆ ಪ್ರಾಣಿ ಬಲಿ ಕೊಟ್ಟು ಅದರ ರಕ್ತವನ್ನು ಸ್ನೇಹಮಯಿ ಕೃಷ್ಣ ಮತ್ತು ಆರ್​ಟಿಐ ಕಾರ್ಯಕರ್ತ ಗಂಗರಾಜು ಫೋಟೊಗೆ ಹಚ್ಚಿರುವ ವೀಡಿಯೊ ಪೊಲೀಸರಿಗೆ ಲಭ್ಯವಾಗಿದೆ.

ಸ್ನೇಹಮಯಿ ಕೃಷ್ಣಗೆ ಶಕ್ತಿ ತುಂಬಲು ಶಕ್ತಿ ದೇವತೆಗೆ ಪ್ರಾಣಿ ಬಲಿ Read More »

error: Content is protected !!
Scroll to Top