ಸುದ್ದಿ

ಕರಿಮಣಿಗಾಗಿ ‌ವೃದ್ಧೆಯ ಕೊಲೆ: ಆರೋಪಿ ಕುಂಬಳೆ ಪೊಲೀಸರ ಅತಿಥಿ

ಕಾಸರಗೋಡು: ತನ್ನ ಆರ್ಥಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು 72 ವರ್ಷದ ವೃದ್ಧೆಯ ಕರಿಮಣಿ ಎಗರಿಸಲು ಆಕೆಯನ್ನು ಕೊಲೆಗೈದ ಆರೋಪಿ ಕುಂಬಳೆ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ. ಮೊವ್ವಾರಿನ ಅಜಿಲದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಪುಷ್ಪಲತಾ ಶೆಟ್ಟಿ ಅವರ ಕತ್ತಿನಲ್ಲಿದ್ದ ಕರಿಮಣಿ ಸರವನ್ನು ಎಗರಿಸಲು ಅದೇ ಪ್ರದೇಶದಲ್ಲಿ ಹುಲ್ಲು ಕೀಳುವ ಕೆಲಸ ಮಾಡುತ್ತಿದ್ದ ಪೆರಡಾಲ ನಿವಾಸಿ ಪರಮೇಶ್ವರ ಯಾನೆ ರಮೇಶ್ ನಾಯಕ್ (47) ಪ್ರಯತ್ನ ನಡೆಸಿದ್ದ. ಈ ವೇಳೆ ವೃದ್ಧೆ ವಿರೋಧ ವ್ಯಕ್ತಪಡಿಸಿದ್ದು, ಆ ಸಂದರ್ಭದಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ […]

ಕರಿಮಣಿಗಾಗಿ ‌ವೃದ್ಧೆಯ ಕೊಲೆ: ಆರೋಪಿ ಕುಂಬಳೆ ಪೊಲೀಸರ ಅತಿಥಿ Read More »

ಎ.ಆರ್. ರೆಹಮಾನ್ ಮಾತೃ ಧರ್ಮಕ್ಕೆ ಮರಳಿದರೆ ಕೆಲಸ ಸಿಗಬಹುದು: ವಿಎಚ್‌ಪಿ ತಿರುಗೇಟು

ಮುಂಬೈ: ಪ್ರಖ್ಯಾತ ಸಂಗೀತಗಾರ ಎ.ಆರ್. ರೆಹಮಾನ್ ಅವರಿಗೆ ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆಯಾಗುತ್ತಿದ್ದು, ‘ಕೋಮುವಾದಿ ಮನಸ್ಥಿತಿಯಿಂದ ಬಾಲಿವುಡ್‌ನಲ್ಲಿ ಸಂಗೀತ ಅವಕಾಶಗಳು ಸಿಗುತ್ತಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ವಿಶ್ವ ಹಿಂದೂ ಪರಿಷತ್, ‘ಘರ್ ವಾಪಸಿ ಮಾಡಿದರೆ ಅವಕಾಶಗಳು ಸಿಗುತ್ತವೆ’ ಎಂದು ಸಲಹೆ ನೀಡಿದೆ. ಬಹುಶಃ ಅವರು ಒಂದು ಕೋಮಿನ ವಿಷಯದಿಂದಾಗಿ ಅವರು ಕಳೆದ ಎಂಟು ವರ್ಷಗಳಿಂದ ಹಿಂದಿ ಚಲನಚಿತ್ರೋದ್ಯಮದಲ್ಲಿ ಕೆಲಸ ಕಳೆದುಕೊಂಡಿರಬಹುದು. ಸಂಯೋಜಕರು ಒಂದು ನಿರ್ಧಿಷ್ಟ ಬಣದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.ಒಂದು ಕಾಲದಲ್ಲಿ ಈ ಸಂಗೀತ

ಎ.ಆರ್. ರೆಹಮಾನ್ ಮಾತೃ ಧರ್ಮಕ್ಕೆ ಮರಳಿದರೆ ಕೆಲಸ ಸಿಗಬಹುದು: ವಿಎಚ್‌ಪಿ ತಿರುಗೇಟು Read More »

ಬೀದಿ ದಾಸಯ್ಯನನ್ನು ‌ಸಿಎಂ ಮಾಡಿದ್ರೂ ಒಪ್ಪಿಕೊಳ್ಳಬೇಕಾಗುತ್ತದೆ: ಜಮೀರ್ ಅಹ್ಮದ್ ಹೀಗೆಂದಿದ್ಯಾಕೆ?

ಹುಬ್ಬಳ್ಳಿ: ಸಿದ್ದರಾಮಯ್ಯ ಇವರು 2028 ರ ವರೆಗೂ ಮುಖ್ಯಮಂತ್ರಿಯಾಗಿ ಇರುತ್ತಾರೆ. ಬೀದಿ ದಾಸಯ್ಯನನ್ನು ಸಿಎಂ ಎಂಬುದಾಗಿ ಹೈಕಮಾಂಡ್ ಘೋಷಣೆ ಮಾಡಿದರೂ ನಾವೆಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ‌ಸ್ಥಾನ ಸದ್ಯಕ್ಕಂತೂ ಖಾಲಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆ ಸ್ಥಾನದಲ್ಲಿ ಮುಂದುವರೆಯುತ್ತಾರೆ ಎನ್ನುವ ಅಚಲ ನಂಬಿಕೆ ನನ್ನದು. ಕೆಲವರು ನವೆಂಬರ್ ಕ್ರಾಂತಿಯಾಗುತ್ತದೆ ಎಂದು ಹೇಳಿದ್ದರು. ಆದರೆ ಯಾವ ಕ್ರಾಂತಿಯೂ ಆಗಲಿಲ್ಲ. ಮುಂದೆ ಯುಗಾದಿ ಬರುತ್ತದೆಯೇ

ಬೀದಿ ದಾಸಯ್ಯನನ್ನು ‌ಸಿಎಂ ಮಾಡಿದ್ರೂ ಒಪ್ಪಿಕೊಳ್ಳಬೇಕಾಗುತ್ತದೆ: ಜಮೀರ್ ಅಹ್ಮದ್ ಹೀಗೆಂದಿದ್ಯಾಕೆ? Read More »

ಜ.17-ಜ.25: ಶ್ರೀ ಕಪಿಲೇಶ್ವರ ದೇವಸ್ಥಾನ ಚಾರ್ವಾಕದಲ್ಲಿ ವಾರ್ಷಿಕ ಜಾತ್ರೋತ್ಸವ

ಕಡಬ: ಶ್ರೀ ಕಪಿಲೇಶ್ವರ ದೇವಸ್ಥಾನ ಚಾರ್ವಾಕ, ಇರ್ವೆರ್ ಉಳ್ಳಾಕುಲ ದೈವಗಳ ಕ್ಷೇತ್ರ ಅಮರಕಾಸ್ಪಾಡಿಯಲ್ಲಿ ಜ. 17 – ಜ.25 ರ ವರೆಗೆ ವರ್ಷಾವಧಿ ಜಾತ್ರೋತ್ಸವ, ದೈವಗಳ ನೇಮ ನಡೆಯಲಿದೆ. ಜಾತ್ರಾ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಜ.20 ರಂದು ಶ್ರೀ ದೇವರ ದರ್ಶನ ಬಲಿ ನಡೆಯಲಿದೆ. ಜ.22 ರಿಂದ ಜ. 25 ರ ವರೆಗೆ ದೈವಗಳ ನೇಮ ನಡೆಯಲಿದೆ. ಕಾರ್ಯಕ್ರಮಗಳ ವಿವರ: ಜ.16: ದೇವತಾ ಪ್ರಾರ್ಥನೆ, ಪ್ರಾಸಾದ ಶುದ್ದಿ, ವಾಸ್ತು

ಜ.17-ಜ.25: ಶ್ರೀ ಕಪಿಲೇಶ್ವರ ದೇವಸ್ಥಾನ ಚಾರ್ವಾಕದಲ್ಲಿ ವಾರ್ಷಿಕ ಜಾತ್ರೋತ್ಸವ Read More »

ಮಂಗಳೂರು ಕಾರಾಗೃಹದಲ್ಲಿ ಮೊಬೈಲ್‌ಗಳು, ಸಿಮ್, ಚಾರ್ಜರ್ ಪತ್ತೆ

ಮಂಗಳೂರು: ಬೆಂಗಳೂರಿನಲ್ಲಿ ಬಂಧೀಖಾನೆ ಡಿಜಿಪಿಯಾಗಿ ಅಲೋಕ್ ‌ಕುಮಾರ್ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ‌ಬಂಧೀಖಾನೆ ಭದ್ರತೆ ಹೆಚ್ಚಿಸಲಾಗಿದೆ. ಅವರು ಮಂಗಳೂರಿನ ಕಾರಾಗೃಹಕ್ಕೂ ‌ತೆರಳಿ ಪರಿಶೀಲನೆ ನಡೆಸಿ, ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮಂಗಳೂರು ಬಂಧೀಖಾನೆಯಲ್ಲಿ ಮೂರು ಮೊಬೈಲ್ ಫೋನ್, ಸಿಮ್ ಪತ್ತೆಯಾಗಿದೆ. ಜೈಲಧಿಕಾರಿಗಳು ಜ. 14 ರಂದು ಕಾರಾಗೃಹದಲ್ಲಿ ತಪಾಸಣೆ ನಡೆಸಿದ್ದು, ಈ ವೇಳೆ A ವಿಭಾಗದ ಮೂರನೇ ಕೊಠಡಿಯಲ್ಲಿ ಸಿಮ್ ಸಹಿತ ಮೊಬೈಲ್ ಫೋನ್, ಕೀ ಪ್ಯಾಡ್ ಫೋನ್, ಸಿನ್, ಚಾರ್ಜರ್, ಅಡಾಪ್ಟರ್, ಚಾರ್ಜರ್ ಕೇಬಲ್

ಮಂಗಳೂರು ಕಾರಾಗೃಹದಲ್ಲಿ ಮೊಬೈಲ್‌ಗಳು, ಸಿಮ್, ಚಾರ್ಜರ್ ಪತ್ತೆ Read More »

ರಂಗ ವಿಧಾತ ಭರತ್ ಎಸ್ ಕರ್ಕೇರರಿಗೆ ರಾಷ್ಟ್ರ ಮಟ್ಟದ “ಕಲಾವಿಭೂಷಣ” ಗೌರವ ಪ್ರಶಸ್ತಿ

ಮಂಗಳೂರು ತಾಲೂಕು ಕಂದಾವರ ಪದವು ನಿವಾಸಿ ಖ್ಯಾತ ನಾಟಕಕಾರರು, ಕಲಾವಿದರು, ಸಾಮಾಜಿಕ ಕಾರ್ಯಕರ್ತರಾದ ಶ್ರೀ ಭರತ್ ಎಸ್. ಕರ್ಕೇರ ಇವರು ಭಾರತದ ಅತ್ಯಂತ ಪ್ರಸಿದ್ದ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ ಜನ್ಮ ದಿನವಾದ “ರಾಷ್ಟ್ರೀಯ ಯುವ ದಿನಾಚರಣೆ”ಯ ನಿಮಿತ್ತ ಕವಿತ್ತ ಕರ್ಮಮಣಿ ಫೌಂಡೇಶನ್ (ರಿ.) ನಾಗರಮುನ್ನೋಳಿ ವತಿಯಿಂದ ಕೊಡಲ್ಪಡುವ ರಾಷ್ಟ್ರ ಮಟ್ಟದ ಗೌರವ ಪ್ರಶಸ್ತಿ”ಕಲಾ ವಿಭೂಷಣ ಪ್ರಶಸ್ತಿ – 2026 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಲಾ ಕ್ಷೇತ್ರದಲ್ಲಿ ಮತ್ತು ಸಮಾಜ ಸೇವಾ ಕಾರ್ಯದಲ್ಲಿ ತಮ್ಮದೇ ಆದ

ರಂಗ ವಿಧಾತ ಭರತ್ ಎಸ್ ಕರ್ಕೇರರಿಗೆ ರಾಷ್ಟ್ರ ಮಟ್ಟದ “ಕಲಾವಿಭೂಷಣ” ಗೌರವ ಪ್ರಶಸ್ತಿ Read More »

ಗೋವಾ : ಇಬ್ಬರು ಮಹಿಳೆಯರನ್ನು ಕತ್ತು ಸೀಳಿ ಕೊಂದ ರಷ್ಯಾ ಪ್ರವಾಸಿಗ

ಪಣಜಿ: ಗೋವಾದಲ್ಲಿ ರಷ್ಯಾದ ವ್ಯಕ್ತಿಯೊಬ್ಬ ತನ್ನದೇ ದೇಶದ ಇಬ್ಬರು ಮಹಿಳೆಯರನ್ನು ಕತ್ತು ಸೀಳಿ ಬರ್ಬರವಾಗಿ ಕೊಂದಿರುವ ಘಟನೆ ಸಂಭವಿಸಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಗೋವಾದ ಅರಾಂಬೋಲ್ ಮತ್ತು ಮೊರ್ಜಿಮ್ ಗ್ರಾಮದಲ್ಲಿ ವಾಸವಾಗಿದ್ದ ಎಲೆನಾ ವನೀವಾ (37) ಮತ್ತು ಎಲೆನಾ ಕಸ್ತನೋವಾ (37) ಅವರನ್ನು ಅಲೆಕ್ಸಿ ಲಿಯೊನೊವ್ ಎಂಬಾತ ಕೊಲೆಗೈದಿದ್ದಾನೆ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 14 ರಂದು ಆರೋಪಿ ಮೊರ್ಜಿಮ್‌ನಲ್ಲಿ ವಾಸವಾಗಿದ್ದ ಸ್ನೇಹಿತೆ ಎಲೆನಾ ವನೀವಾ ಅವರ ಕುತ್ತಿಗೆಯನ್ನು ಸೀಳಿ ಕೊಂದಿದ್ದಾನೆ. ಜನವರಿ

ಗೋವಾ : ಇಬ್ಬರು ಮಹಿಳೆಯರನ್ನು ಕತ್ತು ಸೀಳಿ ಕೊಂದ ರಷ್ಯಾ ಪ್ರವಾಸಿಗ Read More »

ಅವಧಿ ಮೀರಿದ ಬಿಯರ್‌ ಕುಡಿದು ಯುವಕರು ಅಸ್ವಸ್ಥ

ಜನಪ್ರಿಯ ಬ್ರಾಂಡ್‌ನ ಅವಧಿ ಮೀರಿದ ಬಿಯರ್‌ ಪೂರೈಸಿದ ಬಾರ್‌ನವರು ಬೆಂಗಳೂರು : ಅವಧಿ ಮೀರಿದ ಬಿಯರ್ ಕುಡಿದ ಪರಿಣಾಮ ಕೆಲವರು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿ ಆಸ್ಪತ್ರೆ ಪಾಲಾದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಳದೇನಹಳ್ಳಿಯ ವೆಂಕಟ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಗುರುವಾರ ಸಂಜೆ ಯುವಕರ ಗುಂಪೊಂದು ಒಂದು ಕೇಸ್ ಬಡ್‌ವೈಸರ್‌ ಬಿಯರ್ ಖರೀದಿಸಿ ಸೇವಿಸಿದ ನಂತರ ವಾಂತಿ ಆಗಿದ್ದು, ಅವರನ್ನು ತಕ್ಷಣ ಮಾಲೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಬ್ಯುಲೆನ್ಸ್ ಬಳಸಿದರೆ ಮುಜುಗರ ಆಗುತ್ತದೆ ಎಂಬ ಕಾರಣಕ್ಕಾಗಿ

ಅವಧಿ ಮೀರಿದ ಬಿಯರ್‌ ಕುಡಿದು ಯುವಕರು ಅಸ್ವಸ್ಥ Read More »

ಪುನೀತ್‌ ಕೆರೆಹಳ್ಳಿ ಮತ್ತೆ ಬಂಧನ

ವಲಸೆ ಕಾರ್ಮಿಕರ ದಾಖಲೆ ಪತ್ರಗಳನ್ನು ಪರಿಶೀಲಿಸಿದ ಆರೋಪ ಹೊರಿಸಿ ಬಂಧನ ಬೆಂಗಳೂರು: ವಲಸೆ ಕಾರ್ಮಿಕರ ಪೌರತ್ವ ಹಾಗೂ ಗುರುತಿನ ದಾಖಲೆಗಳನ್ನು ಪರಿಶೀಲಿಸುತ್ತಿದ್ದ ಹಿಂದೂ ಪರ ಹೋರಾಟಗಾರ ಪುನೀತ್‌ ಕೆರೆಹಳ್ಳಿಯನ್ನು ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ವಲಸಿಗರಿಗೆ ಬೆದರಿಕೆ ಹಾಗೂ ಭೀತಿಯನ್ನುಂಟುಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸ್ ಠಾಣಾ ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ನಿನ್ನೆ ರಾತ್ರಿ ಪುನೀತ್ ಕೆರೆಹಳ್ಳಿ ಮನೆಯ ಬಳಿಯೇ ಪೊಲೀಸರು ವಶಕ್ಕೆ ಪಡೆದಿದ್ದು, ಪೊಲೀಸ್​ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.

ಪುನೀತ್‌ ಕೆರೆಹಳ್ಳಿ ಮತ್ತೆ ಬಂಧನ Read More »

ಟೋಲ್‌ಗೇಟ್‌ಗಳಲ್ಲಿ ನಗದು ಪಾವತಿ ನಿಷೇಧ

ಏಪ್ರಿಲ್‌ 1ರಿಂದ ಹೊಸ ನಿಯಮ ಜಾರಿಗೆ ತರಲು ತೀರ್ಮಾನ ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ನಿಷೇಧಿಸಲು ತೀರ್ಮಾನಿಸಿದೆ. ವಾಹನ ದಟ್ಟಣೆ ಕಡಿಮೆ ಮಾಡಲು ಮತ್ತು ಪ್ರಯಾಣವನ್ನು ಸುಗಮಗೊಳಿಸುವ ಉದ್ದೇಶದಿಂದ ಪ್ರಯಾಣಿಕರು ಟೋಲ್‌ಗಳನ್ನು ಪಾವತಿಸಲು FASTag ಅಥವಾ UPI ಬಳಸಬೇಕಾಗುತ್ತದೆ. ಈ ಬಗ್ಗೆ ಯಾವುದೇ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿಲ್ಲವಾದರೂ, ಸಚಿವಾಲಯವು ಸುಗಮ ಪರಿವರ್ತನೆಗೆ ಸಿದ್ಧತೆ ನಡೆಸುತ್ತಿದೆ. ಈ ಕ್ರಮವು ದೀರ್ಘ ಸರತಿ

ಟೋಲ್‌ಗೇಟ್‌ಗಳಲ್ಲಿ ನಗದು ಪಾವತಿ ನಿಷೇಧ Read More »

error: Content is protected !!
Scroll to Top